For Quick Alerts
  ALLOW NOTIFICATIONS  
  For Daily Alerts

  'ತೆಲುಗು ಬಿಗ್ ಬಾಸ್-5' ಸಂಭಾವ್ಯ ಪಟ್ಟಿ ಔಟ್: ಲಿಸ್ಟ್ ನಲ್ಲಿ ಇದ್ದಾರೆ ಕನ್ನಡದ ನಟಿ

  By ಫಿಲ್ಮಿಬೀಟ್ ಡೆಸ್ಕ್
  |

  ಕೊರೊನಾ ನಡುವೆಯೂ ಹಿಂದಿ ಮತ್ತು ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ಮುಗಿಸಿರುವ ಆಯೋಜಕರು ಆಗಲೇ ಮತ್ತೊಂದು ಸೀಸನ್‌ಗೆ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹಿಂದಿ ಬಿಗ್ ಬಾಸ್‌ನ ಟೀಸರ್ ಕೂಡ ರಿಲೀಸ್ ಆಗಿದೆ. ಎಂದಿನಂತೆ ನಟ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ಒಟಿಟಿಯಲ್ಲೂ ಹಿಂದಿ ಬಿಗ್ ಬಾಸ್ ಪ್ರಸಾರವಾಗುತ್ತಿದ್ದು, ಒಟಿಟಿಯಲ್ಲಿ ಕರಣ್ ಜೋಹರ್ ಹೋಸ್ಟ್ ಮಾಡುತ್ತಿದ್ದಾರೆ.

  ಹಿಂದಿ ಬಿಗ್ ಬಾಸ್ ಬೆನ್ನಲ್ಲೇ ತೆಲುಗು ಬಿಗ್ ಬಾಸ್ ಸಹ ಪ್ರಾರಂಭವಾಗುತ್ತಿದೆ. ತೆಲುಗು 5ನೇ ಸೀಸನ್ ಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ಲೋಗೋ ಬಿಡುಗಡೆ ಮಾಡಲಾಗಿದೆ. ಬಿಗ್ ಬಾಸ್ ಲೋಗೋ ಔಟ್ ಆಗುತ್ತಿದ್ದಂತೆ ಸಂಭಾವ್ಯ ಪಟ್ಟಿ ಕೂಡ ಔಟ್ ಆಗಿದೆ. ಈ ಬಾರಿ ತೆಲುಗು ಬಿಗ್ ಬಾಸ್‌ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಕುತೂಹಲಕ್ಕೆ ಈ ಸಂಭಾವ್ಯ ಪಟ್ಟಿ ಉತ್ತರ ನೀಡಿದೆ.

  ಸದ್ಯ ಹರಿದಾಡುತ್ತಿರುವ ಪಟ್ಟಿಯಲ್ಲಿ ಕನ್ನಡದ ನಟಿಯ ಹೆಸರು ಕೂಡ ಇರುವುದು ವಿಶೇಷ. ಅಂದಹಾಗೆ ಈ ಬಾರಿ ತೆಲುಗು ಬಿಗ್ ಬಾಸ್ ಅನ್ನು ಯಾರು ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ. ಕಳೆದ ಎರಡು ಸೀಸನ್ ಅನ್ನು ನಟ ನಾಗಾರ್ಜುನ ನಡೆಸಿಕೊಟ್ಟಿದ್ದರು. ಈ ಬಾರಿ ಹೋಸ್ಟ್ ಮಾಡುವ ಜವಾಬ್ದಾರಿ ಯಾರ ಹೆಗಲಮೇಲಿದೆ ಎನ್ನುವ ಕುತೂಹಲವನ್ನು ಹಾಗೆ ಕಾಯ್ದಿರಿಸಿದೆ ಬಿಗ್ ಬಾಸ್. ಆದರೆ ಈಗಾಗಲೇ ಸ್ಪರ್ಧಿಗಳ ಹೆಸರು ವೈರಲ್ ಆಗಿದೆ.

  ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ನವ್ಯಾ ಸ್ವಾಮಿ

  ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ನವ್ಯಾ ಸ್ವಾಮಿ

  ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನವ್ಯಾ ಸದ್ಯ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರು ಮೂಲದವರಾದ ನವ್ಯಾ ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ಕಿರಿತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಕೂಡ ಮಾಡಿದ್ದರು. ಬಳಿಕ ಅವಕಾಶಕ್ಕಾಗಿ ತೆಲುಗು ಕಿರುತೆರೆ ಪ್ರವೇಶಿಸಿದ್ದರು. ತೆಲುಗಿನಲ್ಲಿ ನಾ ಪೇರು ಮೀನಾಕ್ಷಿ ಧಾರಾವಾಹಿ ಮೂಲಕ ಪ್ರೇಕ್ಷಕರ ಮನೆಮಾತಾಗಿದ್ದಾರೆ. 'ವಾಣಿ ರಾಣಿ', 'ಅರಣ್ಮಣೈ ಕಿಲಿ', 'ರನ್' ಮತ್ತು ಆಮೆ ಕಥಾ ಮುಂತಾದ ಧಾರಾವಾಹಿಗಳಲ್ಲಿ ನವ್ಯಾ ನಟಿಸಿದ್ದಾರೆ.

  ನಟಿ ಇಶಾ ಚಾವ್ಲಾ

  ನಟಿ ಇಶಾ ಚಾವ್ಲಾ

  ತೆಲುಗು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ದೆಹಲಿ ಮೂಲದ ನಟಿ ಇಶಾ ಚಾವ್ಲಾ ಈ ಬಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಟಿ ಇಶಾ ಚಾವ್ಲಾ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ದರ್ಶನ್ ನಟನೆಯ ವಿರಾಟ್ ಸಿನಿಮಾದಲ್ಲಿ ಇಶಾ ಬಣ್ಣ ಹಚ್ಚಿದ್ದಾರೆ. ಸದ್ಯ ಸಿನಿಮಾರಂಗದಿಂದ ದೂರ ಇರುವ ಇಷಾ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

  ನಟಿ ವರ್ಷಿಣಿ

  ನಟಿ ವರ್ಷಿಣಿ

  ತೆಲುಗು ನಟಿ ವರ್ಷಿಣಿ ಸೌಂದೇರಾಜನ್ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ತೆಲುಗು ಸಿನಿಮಾ ಮತ್ತು ವೆಬ್ ಸೀರಿಸ್‌ಗಳಲ್ಲಿ ನಟಿಸಿರುವ ವರ್ಷಿಣಿ ಬಿಗ್ ಬಾಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ನಿರೂಪಕ ಶಿವ

  ನಿರೂಪಕ ಶಿವ

  ಟಿವಿ ನಿರೂಪಕ ಶಿವ ಹೆಸರು ಕೂಡ ಈ ಬಾರಿಯ ಬಿಗ್ ಬಾಸ್ ಸಂಭಾವ್ಯರ ಪಟ್ಟಿಯಲ್ಲಿದೆ. ಸುದ್ದಿ ವಾಹಿನಿ ಮೂಲಕ ವೃತ್ತಿ ಜೀವನ ಪ್ರಾರಂಭ ಮಾಡಿದ ಶಿವ ಬಳಿಕ ತನ್ನದೆ ಆದ ಯೂಟ್ಯೂಬ್ ಪ್ರಾರಂಭ ಮಾಡಿ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಗಳಿಸಿರುವ ಶಿವ ಈ ಬಾರಿಯ ಬಿಗ್ ಬಾಸ್‌ನಲ್ಲಿ ಇರ್ತಾರಾ ಎಂದು ಕಾದು ನೋಡಬೇಕು.

  ಕಾಮಿಡಿಯನ್ ಲೋಬೊ

  ಕಾಮಿಡಿಯನ್ ಲೋಬೊ

  ಲೋಬೋ ಎಂದೇ ಖ್ಯಾತಿಗಳಿಸಿರುವ ನಿರೂಪಕ, ಕಾಮಿಡಿಯನ್ ಮತ್ತು ಟ್ಯಾಟೂ ಆರ್ಟಿಸ್ಟ್ ಮಹಮ್ಮೊದ್ ಖಯೂಮ್ ಈ ಬಾರಿಯ ಬಿಗ್ ಬಾಸ್‌ನಲ್ಲಿ ಇರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಮೊದಲು ಟ್ಯಾಟೂ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಖಯೂಮ್ ಗೆ ಅದರ ಮಾಲಿಕ ಲೋಬೋ ಎನ್ನುವ ಹೆಸರನ್ನು ಇಟ್ಟಿದ್ದರು. ಬಳಿಕ ಅದೇ ಹೆಸರಿನಲ್ಲಿ ಖ್ಯಾತಿಗಳಸಿರುವ ಲೋಬೋ ಈ ಬಾರಿ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

  ನಿರೂಪಕ ರವಿ

  ನಿರೂಪಕ ರವಿ

  ತೆಲುಗು ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ನಿರೂಪಕ ರವಿ ಹೆಸರು ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲಿದೆ. ತೆಲುಗಿನಲ್ಲಿ ಅನೇಕ ಶೋಗಳನ್ನು ಹೋಸ್ಟ್ ಮಾಡಿರುವ ರವಿ ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ನಟಿ, ನಿರೂಪಕಿ ಸುರೇಖಾ ವಾಣಿ

  ನಟಿ, ನಿರೂಪಕಿ ಸುರೇಖಾ ವಾಣಿ

  ತೆಲುಗು ನಟಿ, ನಿರೂಪಕಿ ಸುರೇಖಾ ವಾಣಿ ಈ ಬಾರಿಯ ಬಿಗ್ ಬಾಸ್ ನಲ್ಲಿರಲಿದ್ದಾರೆ ಎನ್ನಲಾಗುತ್ತಿದೆೆ. ಪೋಷಕ ನಟಿಯಾಗಿ ಖ್ಯಾತಿಗಳಿಸಿರುವ ಸುರೇಖಾ ವಾಣಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

  ಆರ್ ಜೆ ಕಾಜಲ್

  ಆರ್ ಜೆ ಕಾಜಲ್

  ತೆಲುಗಿನಲ್ಲಿ ಆರ್ ಜೆಯಾಗಿ ಖ್ಯಾತಿಗಳಿಸಿರುವ ಕಾಜಲ್ ಈ ಬಾರಿಯ ಬಿಗ್ ಬಾಸ್‌ಗೆ ಹೋಗುವ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ. ಆರ್ ಜೆ ಜೊತೆಗೆ ಟಿವಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಡಬ್ಬಿಂಗ್ ಕಲಾವಿದೆಯಾಗಿಯೂ ಕೆಲಸ ಮಾಡುತ್ತಿದ್ದಾರೆ. ನಟನೆಯಲ್ಲೂ ಆಸಕ್ತಿಹೊಂದಿರುವ ಕಾಜಲ್ ತೆರೆಮೇಲೆ ಮಿಂಚಲು ಕಾಯುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಸಿರಿ ಹನುಮಂತ್

  ಸಿರಿ ಹನುಮಂತ್

  ಸಿರಿ ಅಂತಾನೆ ಖ್ಯಾತಿಗಳಿಸಿರುವ ನಟಿ, ನಿರೂಪಕಿ ಸಿರಿಶಾ ಈ ಬಾರಿಯ ಬಿಗ್ ಬಾಸ್ ಸೀಸನ್5 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸುದ್ದಿ ವಾಹಿನಿಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿದ ಸಿರಿ ಬಳಿಕ ಧಾರಾವಾಹಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಧಾರಾವಾಹಿಯಲ್ಲಿ ನಟಿಸಿರುವ ಸಿರಿ ಈಗ ಬಿಗ್ ಬಾಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ನಿಲ್ಲಲಿದ್ದಾರೆ.

  ನಟ ಸಿದ್ಧಾರ್ಥ್ ವರ್ಮಾ

  ನಟ ಸಿದ್ಧಾರ್ಥ್ ವರ್ಮಾ

  ತೆಲುಗು ನಟ ಸಿದ್ಧಾರ್ಥ್ ವರ್ಮಾ ಹೆಸರು ಕೂಡ ಸಂಭಾವ್ಯ ಪಟ್ಟಿಯಲ್ಲಿದೆ. 'ಅಬ್ಬಾಯಿತೊ ಅಮ್ಮಾಯಿ' ಸಿನಿಮಾದಲ್ಲಿ ನಟಿಸಿರುವ ಸಿದ್ಧಾರ್ಥ್ ಈ ಬಾರಿಯ ಬಿಗ್ ಬಾಸ್ ನಲ್ಲಿ ಇರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಗಾಯಕಿ ಮಂಗ್ಲಿ

  ಗಾಯಕಿ ಮಂಗ್ಲಿ

  ಈ ಬಾರಿಯ ತೆಲುಗು ಬಿಗ್ ಬಾಸ್‌ಗೆ ಹೋಗುವ ಸಂಭಾವ್ಯ ಪಟ್ಟಿಯಲ್ಲಿ ಗಾಯಕಿ ಮಂಗ್ಲಿ ಹೆಸರು ಕೂಡ ಇದೆ. ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ ಹಾಡಿನ ಮೂಲಕ ಕನ್ನಡಿಗರ ಮನಗೆದ್ದಿದ್ದ ಮಂಗ್ಲಿ ಇದೀಗ ಬಿಗ್ ಬಾಸ್‌ಗೆ ಹೋಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ನಿರೂಪಕಿ ಪ್ರತ್ಯೂಷ, ರಘು, ಟಿಕ್ ಟಾಕ್ ಸ್ಟಾರ್

  ನಿರೂಪಕಿ ಪ್ರತ್ಯೂಷ, ರಘು, ಟಿಕ್ ಟಾಕ್ ಸ್ಟಾರ್

  ಸುದ್ದಿ ವಾಹಿನಿಯ ನಿರೂಪಕಿ ಪ್ರತ್ಯೂಷಾ ಹೆಸರು ಕೂಡ ಕೇಳಿಬರುತ್ತಿದೆ. ಇನ್ನು ನೃತ್ಯ ನಿರ್ದೇಶಕ ರಘು ಮತ್ತು ಟಿಕ್ ಟಾಕ್ ಸ್ಟಾರ್ ಒಬ್ಬರ ಹೆಸರು ಕೂಡ ಇದೆ. ಬಿಗ್ ಬಾಸ್ ಪ್ರಾರಂಭವಾಗುವ ಮೊದಲೇ ಇವರೆಲ್ಲ ಹೆಸರು ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇವರಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಬಿಗ್ ಬಾಸ್ ಪ್ರಾರಂಭವಾದಾಗ ಬಹಿರಂಗವಾಗಲಿದೆ.

  English summary
  Bigg Boss 5 Telugu Contestants: Here are the list of contestants participating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X