»   » ಬಿಗ್ ಬಾಸ್ ಮನೆಯಿಂದ ಅರ್ಮಾನ್ ಹೊರ ಬಿದ್ದಿಲ್ಲ!

ಬಿಗ್ ಬಾಸ್ ಮನೆಯಿಂದ ಅರ್ಮಾನ್ ಹೊರ ಬಿದ್ದಿಲ್ಲ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ದಿನದಿಂದ ದಿನಕ್ಕೆ ಚಿತ್ರ ವಿಚಿತ್ರ ಟಾಸ್ಕ್ ಗಳ ನಡುವೆ ಬೆಳೆಯುತ್ತಿರುವ ಪ್ರೇಮ ಕಥಾನಕಗಳ ಬಗ್ಗೆ ಸ್ಪರ್ಧಿಗಳ ಮನೆಯವರು ತೀವ್ರವಾಗಿ ತಲೆ ಕೆಡಿಸಿಕೊಂಡಿರುವ ಮಧ್ಯೆ ಬಿಗ್ ಬಾಸ್ ಮತ್ತೊಮೆಮ್ ಟ್ವಿಸ್ಟ್ ನೀಡಿದ್ದಾರೆ. ಈ ವಾರ ಎಲಿಮಿನೇಷನ್ ಇಲ್ಲದಿದ್ದರೂ ಅರ್ಮಾನ್ ಕೊಹ್ಲಿಯನ್ನು ಮನೆಯಿಂದ ಹೊರಕ್ಕೆ ಬರುವಂತೆ ಕರೆಯಲಾಗಿದೆ. ಸ್ಪರ್ಧಿಗಳಿಗೆ ಕೊಹ್ಲಿ ಇನ್ನೂ ಇಲ್ಲೇ ಎಲ್ಲೋ ಇದ್ದಾನೆ ಎಂಬುದಾಗಲಿ ಈ ವಾರ ಎಲಿಮಿನೇಷನ್ ಇಲ್ಲ ಎಂಬುದಾಗಲಿ ಗೊತ್ತಾಗದಂತೆ ಬಿಗ್ ಬಾಸ್ ಆಟವಾಡಿದ್ದಾರೆ.

ತನೀಶಾ ನೀನು ಸೇಫ್ ಅರ್ಮಾನ್ ಕೊಹ್ಲಿ ಔಟ್ ಎಂದು ಶನಿವಾರ ನಿರೂಪಕ ಸಲ್ಮಾನ್ ಖಾನ್ ಸ್ಪಷ್ಟಪಡಿಸುತ್ತಿದ್ದಂತೆ ತನೀಶಾ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಬೇರೆ ಯಾವ ಸ್ಪರ್ಧಿಗಳು ಅಷ್ಟಾಗಿ ಈ ನಿರ್ಣಯವನ್ನು ಪ್ರಶ್ನಿಸಲು ಹೋಗಲಿಲ್ಲ.

ಆದರೆ, ಅರ್ಮಾನ್ ನನ್ನು ತುಂಬಾ ನೆಚ್ಚಿಕೊಂಡಿರುವ ತನೀಶಾ ಮಾತ್ರ ಮನೆಯಿಂದ ಅರ್ಮಾನ್ ಹೋಗುವುದು ಬೇಡ ಎಂದು ಪದೇ ಪದೇ ಅರ್ಮಾನ್ ನನ್ನು ತಬ್ಬಿಕೊಂಡಳು. ಆದರೆ, ಗೌಹರ್ ನಂತೆ ಹುಚ್ಚುಹುಚ್ಚಾಗಿ ಆಡಲಿಲ್ಲ. ಅರ್ಮಾನ್ ಕೂಡಾ ಭಾರದ ಮನಸ್ಸಿನಿಂದ ಮನೆಯಿಂದ ಹೊರಬಿದ್ದ.

'Bigg Boss 7': Armaan Kohli out of the House..But?

ಕಳೆದ ಎಪಿಸೋಡ್ ನಲ್ಲಿ ಎಲ್ಲರ ಮನೆಯವರು ಮನೆಗೆ ಬಂದು ಹೋಗಿ ಮಾಡಿದರೂ ತನೀಶಾ ಕುಟುಂಬದವರು ಗೈರು ಹಾಜರಾಗಿದ್ದರು. ಅರ್ಮಾನ್ ಕೊಹ್ಲಿ ಜತೆ ಸಾಂಗತ್ಯ ಬೆಳೆಸಿಕೊಂಡು ಎಲ್ಲೆ ಮೀರಿ ವರ್ತಿಸುತ್ತಿರುವ ತನೀಶಾಳನ್ನು ಮನೆಯಿಂದ ಹೊರಕ್ಕೆ ಕರೆಸಿಕೊಳ್ಳಲು ಸಾಧ್ಯವಾಗದ ಅಕ್ಕ ಕಾಜೋಲ್ ಹಾಗೂ ಭಾವ ಅಜಯ್ ದೇವಗನ್ ಅವರು ಬಿಗ್ ಬಾಸ್ ರಿಯಾಲಿಟಿ ಶೋನ ನಿರ್ವಹಣೆ ಹೊತ್ತಿರುವ ವಯಾಕಾಂ 18 ಸಂಸ್ಥೆಗೆ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ದೇವಗನ್ ಆತಂಕಕ್ಕೆ ಬೆಲೆ ಕೊಟ್ಟಿರುವ ಬಿಗ್ ಬಾಸ್ ಪರೋಕ್ಷವಾಗಿ ಕಾಜೋಲ್ ಕುಟುಂಬದ ಮನವಿಗೆ ಸ್ಪಂದಿಸಿದಾರೆ. ತನೀಶಾ ಹಾಗೂ ಅರ್ಮಾನ್ ಜೋಡಿ ಬೇರ್ಪಟ್ಟಿದೆ. ತನೀಶಾಳನ್ನು ಹೊರ ಕಳಿಸಲು ಬಿಗ್ ಬಾಸ್ , ಸಲ್ಮಾನ್ ಖಾನ್ ಗಾಗಲಿ, ಪ್ರೇಕ್ಷಕರಿಗಾಗಲಿ ಸುತರಾಂ ಇಷ್ಟವಿಲ್ಲ. ಇಲ್ಲದಿದ್ದರೆ ವಾರಕ್ಕೆ ಏಳೂವರೆ ಲಕ್ಷ ತೆತ್ತು ತನೀಶಾಳನ್ನು ಸುಮ್ಮನೆ ಉಳಿಸಿಕೊಳ್ಳಲು ಯಾರು ಇಷ್ಟಪಡುತ್ತಾರೆ.

ಆದರೆ, ಈ ನಡುವೆ ಅರ್ಮಾನ್ ಕೊಹ್ಲಿಗೂ ಅಚ್ಚರಿಯಾಗುವಂತೆ ಆತನ ಕಣ್ಣಿಗೆ ಪಟ್ಟಿ ಕಟ್ಟಿ ಬಿಗ್ ಬಾಸ್ ಮನೆಯಿಂದ 'ಬೋನಸ್ ಮನೆ' ಗೆ ಕರೆದೊಯ್ಯಲಾಗಿದೆ. ವಾರಾಂತ್ಯದ ಎರಡು ದಿನ ಅರ್ಮಾನ್ ಕೊಹ್ಲಿ ಇದೇ ಮನೆಯಲ್ಲಿ ಕಾಲದೂಡಬೇಕಾಗುತ್ತದೆ. ಅರ್ಮಾನ್ ಇಲ್ಲದೆ ಎರಡು ದಿನ ತನೀಶಾ ಹೇಗೆ ಕಳೆಯುತ್ತಾಳೆ ಎಂಬುದು ಈಗ ಕುತೂಹಲಕಾರಿಯಾಗಿದೆ.

English summary
Bigg Boss 7 : This was supposed to be a non-elimination week in the Bigg Boss House, but the contestants were unaware of it. Armaan Kohli out of the House But, as soon as he came out of the main door, he was blindfolded and taken to a bonus room.
Please Wait while comments are loading...