For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಸೋಫಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ

  By ಜೇಮ್ಸ್ ಮಾರ್ಟಿನ್
  |

  ಬಿಗ್ ಬಾಸ್ 7 ಮನೆಯಲ್ಲಿ ನಡೆಯುವ ಕಿತ್ತಾಟ ಎಲ್ಲವೂ ಮೊದಲೇ ಬರೆದ ಸ್ಕ್ರಿಪ್ಟ್ ನಂತೆ ಜರುಗುತ್ತದೆ. ಪ್ರತಿ ಸನ್ನಿವೇಶವೂ ಮೊದಲೇ ನಿರ್ಧರಿತವಾಗಿರುತ್ತದೆ ಎನ್ನುವರಿಗೆ ಶಾಕ್ ನೀಡುವ ಪ್ರಸಂಗವೊಂದು ನಡೆದಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬ್ರಿಟಿಷ್ ರೂಪದರ್ಶಿ ಕಮ್ ಗಾಯಕಿ ನುಡಿದಂತೆ ನಡೆದಿದ್ದಾಳೆ. ಉಗ್ರ ಪ್ರತಾಪಿ ಕೊಹ್ಲಿ ವಿರುದ್ಧ ದೂರು ನೀಡಿದ್ದಳು. ಇದಕ್ಕೆ ಪ್ರತಿಯಾಗಿ ಕೊಹ್ಲಿ ಸೀನಿಯರ್ ರಾಜಕುಮಾರ್ ಅವರು ಸೋಫಿಯಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

  ಮನೆಯಿಂದ ಹೊರಬಿದ್ದ ನಂತರ ಅರ್ಮಾನ್ ಕೊಹ್ಲಿ ವಿರುದ್ಧ ಬುಧವಾರ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಿಗ್ ಬಾಸ್ ಮನೆಯಲ್ಲಿ ಅರ್ಮಾನ್ ನಡೆದುಕೊಂಡ ರೀತಿ ನನಗೆ ಉಂಟಾದ ಮಾನಸಿಕ ಹಿಂಸೆಗೆ ಪ್ರತಿಯಾಗಿ ದೂರು ನೀಡಿ ಬಂದಿದ್ದೇನೆ ನನಗೆ ಈಗ ಮನಃಶಾಂತಿ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಳು.

  ಇದಕ್ಕೆ ವಿರುದ್ಧವಾಗಿ ಒಂದು ಕಾಲದ ಸ್ಟಾರ್ ನಿರ್ದೇಶಕ 'ನಾಗಿನ್' ಚಿತ್ರ ಖ್ಯಾತಿಯ ರಾಜಕುಮಾರ್ ಕೊಹ್ಲಿ ಅವರು ಬ್ರಿಟಿಷ್ ಮೂಲದ ನಟಿ, ಗಾಯಕಿ ಸೋಫಿಯಾ ಮೇಲೆ ಮೊಕದ್ದಮೆ ಹೂಡಿದ್ದಾರೆ. ನನ್ನ ಮಗ ಅರ್ಮಾನ್ ಕೊಹ್ಲಿ ಅವರು ಇನ್ನೂ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆಯಲ್ಲಿದ್ದಾರೆ. ಆದರೆ, ಸೋಫಿಯಾ ಸುಮ್ಮನೆ ಆರೋಪ ಮಾಡುವ ಮೂಲಕ ಮಾನನಷ್ಟ ಮಾಡಿದ್ದಾರೆ. ಈ ರೀತಿ ಚೀಪ್ ಪಬ್ಲಿಸಿಟಿ ಪಡೆಯುವುದು ಸರಿಯಲ್ಲ ಎಂದು ಕೊಹ್ಲಿ ಸೀನಿಯರ್ ಹೇಳಿದ್ದಾರೆ.

  ಅಲ್ಲದೆ, ಗೌಹರ್ ಖಾನ್ ಹಾಗೂ ಕುಶಾಲ್ ಥಂಡನ್ ಅವರ ಪರವಾಗಿ ನಾನು ಅರ್ಮಾನ್ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಸೋಫಿಯಾ ಹೇಳಿರುವುದು ಎಷ್ಟು ಸರಿ? ಅರ್ಮಾನ್ ಹಾಗೂ ಕುಶಾಲ್ ನಡುವೆ ಕದಂಕ ಉಂಟು ಮಾಡಲು ಸೋಫಿಯಾ ಏಕೆ ಪ್ರಯತ್ನಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಪ್ರಸಂಗಗಳನ್ನು ಹೊರ ಜಗತ್ತಿಗೂ ಎಳೆದು ತರುವುದು ಎಷ್ಟು ಸರಿ? ಎಂದು ಕೊಹ್ಲಿ ಪ್ರಶ್ನಿಸಿದ್ದಾರೆ.

  ಬಿಗ್ ಬಾಸ್ ರಿಯಾಲಿಟಿ ಶೋ ಇರಬಹುದು. ನನ್ನ ಮಗ ಇತರೆ ಸ್ಪರ್ಧಿಗಳಿಗಿಂತ ಒರಟ, ಸಿಡುಕು ಸ್ವಭಾವದವನಿರಬಹುದು ಆದರೆ, ಯಾರೊಬ್ಬರ ಮಾನ ಹಾನಿ ಮಾಡುವ ವ್ಯಕ್ತಿಯಲ್ಲ. ಅರ್ಮಾನ್ ಅನಾಗರಿಕ ವರ್ತನೆ ತೋರಿದ್ದರೆ ಈ ವೇಳೆಗೆ ಪ್ರೇಕ್ಷಕರೇ ಹೊರಹಾಕುತ್ತಿದ್ದರು ಅಥವಾ ಬಿಗ್ ಬಾಸ್ ತಂಡಕ್ಕೆ ಆ ಅಧಿಕಾರವಿದೆ. ಸೋಫಿಯಾ ಮಾತ್ರ ಪ್ರತಿ ಬಾರಿ ಅಪಪ್ರಚಾರ ಮಾಡುತ್ತಿದ್ದಾರೆ.

  English summary
  The recent elimination of the Bigg Boss 7 house saw Sofia Hayat coming out of the house who after coming out filed a case against Armaan Kohli. In respond to this Armaan's father Rajkumar Kohli has lodged a defamation case against Sofia Hayat

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X