»   » ಏಜಾಜ್ -ಅರ್ಮಾನ್ ಸಮರ ಶುರು, ತನೀಶಾ ಖುಷ್

ಏಜಾಜ್ -ಅರ್ಮಾನ್ ಸಮರ ಶುರು, ತನೀಶಾ ಖುಷ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಎಪಿಸೋಡಿನಿಂದ ಎಪಿಸೋಡಿಗೆ ಚಿತ್ರ ವಿಚಿತ್ರ ಟ್ವಿಸ್ಟ್ ನೀಡುತ್ತಾ ಬಂದಿರುವ ಬಿಗ್ ಬಾಸ್ ಕಳೆದ ವಾರ ಎಲಿಮಿನೇಷನ್ ಇಲ್ಲದಿದ್ದರೂ ಅರ್ಮಾನ್ ಕೊಹ್ಲಿಯನ್ನು ಮನೆಯಿಂದ ಹೊರಕ್ಕೆ ಬರುವಂತೆ ಕರೆಸಿಕೊಂಡು ಪಕ್ಕದ ಮನೆಯೊಂದರಲ್ಲಿ ಇಟ್ಟಿದ್ದರು. ವೀಕೆಂಡ್ ಎಪಿಸೋಡಿನಲ್ಲಿ ಅರ್ಮಾನ್ ಕೊಹ್ಲಿ ಮತ್ತೆ ಮನೆಗೆ ವಾಪಸ್ ಆಗಿದ್ದು, ಏಜಾಜ್ ವಿರುದ್ಧ ನೇರ ವಾಕ್ಸಮರಕ್ಕೆ ಇಳಿಸಿದ್ದಾನೆ. ಈ ನಡುವೆ ಅರ್ಮಾನ್ ಮತ್ತೆ ಮನೆ ಪ್ರವೇಶದಿಂದ ತನೀಶಾ ದಿಲ್ ಖುಷ್ ಆಗಿದ್ದಾಳೆ.

ತನೀಶಾ ನೀನು ಸೇಫ್ ಅರ್ಮಾನ್ ಕೊಹ್ಲಿ ಔಟ್ ಎಂದು ಶನಿವಾರ ನಿರೂಪಕ ಸಲ್ಮಾನ್ ಖಾನ್ ಸ್ಪಷ್ಟಪಡಿಸುತ್ತಿದ್ದಂತೆ ತನೀಶಾ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಬೇರೆ ಯಾವ ಸ್ಪರ್ಧಿಗಳು ಅಷ್ಟಾಗಿ ಈ ನಿರ್ಣಯವನ್ನು ಪ್ರಶ್ನಿಸಲು ಹೋಗಿರಲಿಲ್ಲ. ನಂತರದ ಎಪಿಸೋಡ್ ನಲ್ಲಿ ಜಾಣ್ಮೆಯ ಆಟ ಪ್ರದರ್ಶಿಸಿದ ತನೀಶಾ ಮೊದಲಿಗೆ ಕಾಮ್ಯಾ ಹಾಗೂ ವಿಜೆ ಆಂಡಿ ಜತೆಗಿನ ವೈಮನಸ್ಯವನ್ನು ಕಳೆದುಕೊಂಡು ಮತ್ತೊಮ್ಮೆ ಮನೆಯಲ್ಲಿ ತನ್ನ ಸ್ಥಾನ ಗಟ್ಟಿ ಪಡಿಸಿಕೊಂಡಳು.

Bigg Boss 7: Armaan Out Of Exile; Back To Tanisha, Clear About Friends And Foes!

ಅರ್ಮಾನ್ ನನ್ನು ತುಂಬಾ ನೆಚ್ಚಿಕೊಂಡಿರುವ ತನೀಶಾ ಮಾತ್ರ ಮನೆಯಿಂದ ಅರ್ಮಾನ್ ಹೋಗುವುದು ಬೇಡ ಎಂದು ಪದೇ ಪದೇ ಅರ್ಮಾನ್ ನನ್ನು ತಬ್ಬಿಕೊಂಡ ಸೀನ್ ಮತ್ತೊಮ್ಮೆ ರಿಪೀಟ್ ಆಯಿತು. ಅರ್ಮಾನ್ ವಾಪಸ್ ಬಂದ ಮೇಲೆ ಇಬ್ಬರು ಗಾಢವಾದ ಆಲಿಂಗನದಲ್ಲಿ ಮುಳುಗಿಬಿಟ್ಟರು.

ನಿರೀಕ್ಷೆಯಂತೆ ತನೀಶಾ ಜತೆಗೆ ಆಂಡಿ, ಸಂಗ್ರಾಮ್ ಅವರು ಅರ್ಮಾನ್ ಹಿಂತಿರುಗಿದ್ದಕ್ಕೆ ಸಂತಸಪಟ್ಟರು, ಗೌಹರ್, ಏಜಾಜ್ ಹಾಗೂ ಕುಶಾಲ್ ಮುಖ ಸಿಂಡರಿಸಿದರು. ಯಾರ ಯಾರ ಬಣ್ಣ ಹೇಗೆ ಹೇಗೆ ಬದಲಾಗುತ್ತಿದೆ ಎಂಬುದನ್ನು ನಾನು ನೋಡಿ ಬಂದಿದ್ದೇನೆ. ಮುಂದಿದೆ ಮಾರಿ ಹಬ್ಬ ಎಂದು ಹೇಳಿದ ಅರ್ಮಾನ್ ನೇರವಾಗಿ ಏಜಾಜ್ ಗೆ ಚಾಲೆಂಜ್ ಹಾಕಿದ. ಅಪ್ಪನ ಹೆಸರಿನಲ್ಲಿ ಚಿತ್ರರಂಗಕ್ಕೆ ಬಂದರೂ ಫ್ಲಾಪ್ ಆದ ಹೀರೋ ಅರ್ಮಾನ್ ಎಂದು ಹೇಳಿದ್ದ ಏಜಾಜ್ ಈಗ ನಾಲಗೆ ಕಚ್ಚಿಕೊಳ್ಳುವಂತಾಗಿದೆ.

Armaan Out Of Exile

ಅರ್ಮಾನ್ ಹಾಗೂ ತನೀಶಾ ಹೊರ ಹಾಕುವ ಉತ್ಸಾಹದಲ್ಲಿ ನಾಮಿನೇಷನ್ ಬಗ್ಗೆ ಮಾತನಾಡಿದ ಕ್ಯಾಪ್ಟನ್ ಗೌಹರ್ ಕೂಡಾ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗುವ ಆತಂಕದಲ್ಲಿದ್ದಾಳೆ. ಒಟ್ಟಾರೆ, ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸಮರ ಶುರುವಾಗಲಿದೆ. ಅರ್ಮಾನ್ ಇಲ್ಲದ ಸಮಯ ತನೀಶಾ ಒಂಟಿಯಾಗಿ ಕುಳಿತು ಅರ್ಮಾನ್ ನೆನಪಿಸಿಕೊಂಡ ರೀತಿ ಕಂಡು ಪ್ರೇಕ್ಷಕರು ವಾಹ್ ಎಂದಿದ್ದು ಸುಳ್ಳಲ್ಲ

English summary
Bigg Boss 7: Armaan who had watched the reactions and behaviour of each one of the contestants on live TV has now returned with a clear picture about who is who and what their actual colors are.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada