For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್: ನರಕಕ್ಕೆ ನಾಟಕರಾಣಿ, ಸ್ವರ್ಗಕ್ಕೆ ಉಗ್ರಪ್ರತಾಪಿ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರನ್ನು ಯಾರನ್ನು ಮನೆಗೆ ಕಳಿಸಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ದಿನ ಸ್ವರ್ಗ ಹಾಗೂ ನರಕವಾಸಿಗಳ ಅದಲು ಬದಲು ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು. ಉಗ್ರ ಪ್ರತಾಪಿ ಅರ್ಮಾನ್ ಸ್ವರ್ಗಕ್ಕೆ ಜಿಗಿದರೆ, ನಾಟಕರಾಣಿ ಗೌಹರ್ ಸ್ವರ್ಗದಿಂದ ನರಕ ಕೂಪಕ್ಕೆ ತೂರಿ ಹೋದಳು.

  ಊಟದ ವಿಷಯ ಎರಡೂ ಕಡೆ ಸ್ಪರ್ಧಿಗಳ ಕಿತ್ತಾಟ ಇನ್ನೂ ಮುಂದುವರೆದಿದ್ದು, ನನ್ನವರೇ ನನ್ನ ಜತೆಯಲ್ಲಿಲ್ಲ ಎಂದು ಗೌಹರ್ ಕಿತ್ತಾಟವಾಡಿದ್ದು ಆಕೆಯನ್ನು ನರಕಕ್ಕೆ ಕಳಿಸುವಂತೆ ಮಾಡಿತು.

  ಎರಡು ಕಡೆ ಜನರನ್ನು ಒಟ್ಟು ಮಾಡಿದ ಬಿಗ್ ಬಾಸ್ ಒಬ್ಬರನ್ನು ಸ್ವರ್ಗದಿಂದ ನರಕ್ಕೆ ಒಬ್ಬರನ್ನು ನರಕದಿಂದ ಸ್ವರ್ಗಕ್ಕೆ ಕಳಿಸಲಾಗುವುದು ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಆಯ್ಕೆ ತಿಳಿಸಿ ಎಂದರು. ನಿರೀಕ್ಷೆಯಂತೆ ಸ್ವರ್ಗವಾಸಿಗಳು ಗೌಹರ್ ಳನ್ನು ನರಕಕ್ಕೆ ಕಳಿಸಿ ಎಂದರು.

  ಅರ್ಮಾನ್ ನನ್ನು ನರಕದಿಂದ ಸ್ವರ್ಗಕ್ಕೆ ಕರೆಸಿಕೊಳ್ಳಲಾಯಿತು. ಗೌಹರ್ ನಿರ್ಗಮನದಿಂದ ಸಂಗ್ರಾಮ್ ಸಿಂಗ್ ತುಂಬಾ ಪೇಚಾಡಿದ್ದು ದಿನದ ಹೈಲೇಟ್ ಆಗಿತ್ತು.

  ಇದಕ್ಕೂ ಮುನ್ನ ಪ್ರತ್ಯೂಷಾ ಬ್ಯಾನರ್ಜಿ, ಕಾಮ್ಯಾ ಪಂಜಾಬಿ, ಅರ್ಮಾನ್ ಭಾರಿ ಚರ್ಚೆ ನಡೆಸಿ, ವಿದೇಶಿ ಸ್ಪರ್ಧಿ ಎಲ್ಲಿ ಅವ್ರಾಮ್ ಗೆ ಬುದ್ಧಿವಾದ ಹೇಳಿದರು. ಅತ್ತ ಸ್ವರ್ಗದಲ್ಲಿ ಆಂಡಿ, ಶಿಲ್ಪಾ ತನೀಶಾ ಎಂದಿನಂತೆ ಕುಶಲ ಸಂಭಾಷಣೆ ಮೂಲಕ ರಂಜನೆ ನೀಡಿದರು.

  ಲಕ್ಸುರಿ ಬಜೆಟ್ 1200 ಅಂಕಗಳನ್ನು ಪಡೆಯಲು ರವೆ ಬದಲು ಅಕ್ಕಿ ತೆಗೆದುಕೊಳ್ಳಿ ಎಂದು ಕಾಮ್ಯಾ ಕಿರುಚಿದ್ದು ಶಿಲ್ಪಾ ಕಿವಿಗೆ ಬೀಳಲೇ ಇಲ್ಲ. ಪ್ರತ್ಯೂಷಾ ಹಾಗೂ ರತನ್ ನಡುವಿನ ಜಗಳ ವೈಯಕ್ತಿಕ ಸಂಬಂಧಗಳನ್ನು ಕೆಣಕಿದ್ದು, ಕೊನೆಗೆ ಹಾಗೂ ಹೀಗೂ ಸಂಧಾನದಲ್ಲಿ ಸಮಾಪ್ತಿಯಾಯಿತು.ಮುಂದೆ ಓದಿ...

  ಗೌಹರ್ ಗೆ ಅಚ್ಚರಿ

  ಗೌಹರ್ ಗೆ ಅಚ್ಚರಿ

  ಗೌಹರ್ ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ ಎಂದು ಬಿಗ್ ಬಾಸ್ ಹೇಳಿದ್ದು ಗೌಹರ್ ಗೆ ಅಚ್ಚರಿ ಮೂಡಿಸಿದರೂ ನಿರೀಕ್ಷಿತವಾಗಿತ್ತು. ಅಗತ್ಯಕ್ಕಿಂತ ಹೆಚ್ಚಿನ ಸಂತೋಷ ವ್ಯಕ್ತಪಡಿಸಿದ ಗೌಹರ್ ಕುಣಿಯುತ್ತಾ ಬ್ಯಾಗ್ ಪ್ಯಾಕ್ ಮಾಡಲು ಹೊರಟಿದ್ದು ಹೀಗೆ

  ಪ್ರತ್ಯೂಷಾ ಕಾಮ್ಯಾ ರತನ್

  ಪ್ರತ್ಯೂಷಾ ಕಾಮ್ಯಾ ರತನ್

  ಪ್ರತ್ಯೂಷಾ ಬ್ಯಾನರ್ಜಿ ಹಾಗೂ ರತನ್ ರಾಜಪೂತ್ ನಡುವೆ ಮಾತಿನ ಚಕಮಕಿ ನಡೆಯಿತು. ಸಂಬಂಧಗಳು ಎರಡು ವರ್ಷ ಮೇಲೆ ಇದ್ದರೆ ಅದೇ ಹೆಚ್ಚು ಎಂದು ರತನ್ ಹೇಳಿದ್ದು ಪ್ರತ್ಯೂಷಾಳನ್ನು ಕೆರಳಿಸಿತು. ನನ್ನ ವೈಯಕ್ತಿಕ ಜೀವನದ ಬಗ್ಗೆ ಹೇಳುತ್ತಿದ್ದಾಳೆ ಎಂದು ಪ್ರತ್ಯೂಷಾ ಕೂಗಾಡಿದಳು. ಕೊನೆಗೆ ಕಾಮ್ಯಾ ಹಾಗೂ ಅರ್ಮಾನ್ ಇಬ್ಬರ ನಡುವೆ ಸಂಧಾನ ಮಾಡಿದರು.

  ಸಂಗ್ರಾಮ್ ಸಿಂಗ್

  ಸಂಗ್ರಾಮ್ ಸಿಂಗ್

  ಗೌಹರ್ ಖಾನ್ ನರಕಕ್ಕೆ ಹೋಗುತ್ತಿರುವುದು ನನ್ನ ಜತೆ ಯಾರು ಇಲ್ಲ ಎಂದು ಕಣ್ಣೀರಿಟ್ಟಿದ್ದನ್ನು ಕಂಡು ಕರಗಿದ ಸಂಗ್ರಾಮ್ ಸಿಂಗ್ ನಿನ್ನ ಜತೆ ನಾನಿದ್ದೇನೆ. ನನಗೆ ಮಹಿಳೆಯರು ಅತ್ತರೆ ಆಗುವುದಿಲ್ಲ ಎಂದು ಮುಗ್ಧನಾಗಿ ಹೇಳುತ್ತಿದ್ದ. ಗೌಹರ್ ನಾಟಕ ಮಾತ್ರ ನರಕದ ಬಾಗಿಲು ದಾಟಿ ಒಳ ಬಂದ ಮೇಲೂ ಮುಂದುವರೆದಿತ್ತು.

  ನರಕವಾಸಿಗಳ ಸಂಬಂಧ

  ನರಕವಾಸಿಗಳ ಸಂಬಂಧ

  ಸ್ವರ್ಗವಾಸಿಗಳಿಗೆ ಹೋಲಿಸಿದರೆ ನರಕವಾಸಿಗಳ ಮಧ್ಯೆ ಸಂಬಂಧ ಚೆನ್ನಾಗಿದ್ದು ಎಲ್ಲರಲ್ಲೂ ಅರ್ಥ ಮಾಡಿಕೊಳ್ಳುವ ಗುಣ ಹೆಚ್ಚಾಗಿದೆ.ಇನ್ನಷ್ಟು ನಿರೀಕ್ಷಿಸಿ

  ಅರ್ಮಾನ್ ಕೊಹ್ಲಿ

  ಅರ್ಮಾನ್ ಕೊಹ್ಲಿ

  ಅರ್ಮಾನ್ ಕೊಹ್ಲಿ ನರಕವಾಸಿಗಳಿಗೆ ಒಗ್ಗಟ್ಟಾಗಿರುವಂತೆ ಸೂಚಿಸುತ್ತಿದ್ದಾರೆ. ಅಪೂರ್ವ ಅಗ್ನಿಹೋತ್ರಿ ತಲೆಯಾಡಿಸಿ ಒಪ್ಪಿಕೊಂಡಿದ್ದಾರೆ. ಸ್ವರ್ಗವಾಸಿಗಳು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸುವುದು ಬೇಡ ಎಂದು ನಿರ್ಣಯ ಕೈಗೊಂಡಿದ್ದಾರೆ.

  ಎಲ್ಲಿ ಗೆ ಬುದ್ಧಿವಾದ

  ಎಲ್ಲಿ ಗೆ ಬುದ್ಧಿವಾದ

  ಸ್ವರ್ಗವಾಸಿಗಳನ್ನು ನಂಬಬೇಡ ಎಲ್ಲಿ ಅವರೆಲ್ಲ ಸರಿಯಿಲ್ಲ ಎಂದು ಅರ್ಮಾನ್ ಬುದ್ಧಿವಾದ ಹೇಳುತ್ತಿದ್ದಾರೆ. ನರಕದಿಂದ ಸ್ವರ್ಗಕ್ಕೆ ಯಾರನ್ನು ಕಳಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದರು.

  ನಿರ್ಣಯ

  ನಿರ್ಣಯ

  ಭಾರಿ ಚರ್ಚೆಯ ನಂತರ ನರಕದಿಂದ ಅರ್ಮಾನ್ ರನ್ನು ಸ್ವರ್ಗಕ್ಕೆ ಕಳಿಸಲು ನರಕವಾಸಿಗಳು ನಿರ್ಧರಿಸಿದರು. ಮಿಕ್ಕ ಎಲ್ಲಾ ಸ್ಪರ್ಧಿಗಳಿಗಿಂತ ಅರ್ಮಾನ್ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಿದ್ದು ಅವರನ್ನು ಸ್ವರ್ಗ ಕಾಣುವಂತೆ ಮಾಡಿತು.

  ಅರ್ಮಾನ್ ಗೆ ಸ್ವಾಗತ

  ಅರ್ಮಾನ್ ಗೆ ಸ್ವಾಗತ

  ಸ್ವರ್ಗಕ್ಕೆ ಅರ್ಮಾನ್ ಗೆ ತನೀಶಾ ಹಾಗೂ ಶಿಲ್ಪಾ ಸ್ವಾಗತ ಕೋರಿದರು. ನಂತರ ಶಿಲ್ಪಾ ಮನೆಯನ್ನು ತೋರಿಸಲು ಕರೆದುಕೊಂಡು ಹೋದಳು

  ಗೌಹರ್ ಅಗಲಿಕೆ ಬಗ್ಗೆ

  ಗೌಹರ್ ಅಗಲಿಕೆ ಬಗ್ಗೆ

  ಗೌಹರ್ ನರಕಕ್ಕೆ ಹೋಗಿದ್ದು ಆಂಡಿ ಹಾಗೂ ಸಂಗ್ರಾಮ್ ಸಿಂಗ್ ಗೆ ಮಾತ್ರ ದುಃಖ ತರಿಸಿದೆ. ಆದರೆ, ನಾಮಿನೇಷನ್ ವೇಳೆ ಆಂಡಿ ಕೂಡಾ ಗೌಹರ್ ವಿರುದ್ಧ ಮತ ಹಾಕಿದ್ದು ವಿಶೇಷವಾಗಿತ್ತು.

  ನರಕದಲ್ಲಿ ಗೌಹರ್

  ನರಕದಲ್ಲಿ ಗೌಹರ್

  ನರಕಕ್ಕೆ ಪ್ರವೇಶಿಸಿದ ಕೆಲ ಸಮಯದಲ್ಲೇ ಕುಶಾಲ್ ಜತೆ ಮಾತುಕತೆ ನಡೆಸಿದ ಗೌಹರ್, ನರಕದ ದೃಶ್ಯ ನೋಡಿ ಬೆಚ್ಚಿ ಬಿದ್ದಳು

  ಮೊದಲ ಬಜೆಟ್

  ಮೊದಲ ಬಜೆಟ್

  ಬಿಗ್ ಬಾಸ್ ನೀಡಿದ ಲಕ್ಸುರಿ ಬಜೆಟ್ ಪಡೆಯಲು ಸ್ಪರ್ಧಿಗಳು ಹೆಣಗಾಡುತ್ತಿದ್ದಾರೆ.

  English summary
  Bigg Boss 7: Day 4 - Bigg Boss announces the first swap between heaven and hell; Gauhar is asked to move to hell and Arman to heaven. Arman was welcomed on the heaven side with a tikka and a garland. He is happy and excited at entering heaven and receives a warm welcome by everybody. Andy gets emotional on Gauhar's departure and waves her good bye with tears in his eyes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X