»   » ಬಿಗ್ ಬಾಸ್ 7: ಸಲ್ಲೂ ಫೇವರೀಟ್ ಎಲ್ಲಿ ಎಲಿಮಿನೇಟೆಡ್

ಬಿಗ್ ಬಾಸ್ 7: ಸಲ್ಲೂ ಫೇವರೀಟ್ ಎಲ್ಲಿ ಎಲಿಮಿನೇಟೆಡ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೊಮ್ಮೆ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ನಿರೂಪಕ ಸಲ್ಮಾನ್ ಖಾನ್ ಆಪ್ತವರ್ಗಕ್ಕೆ ಸೇರಿರುವ ವಿದೇಶಿ ಸ್ಪರ್ಧಿ ಎಲ್ಲಿ ಅವ್ರಾಯ್ ಮನೆಯಿಂದ ಹೊರ ಬಿದ್ದಿದ್ದಾಳೆ. ಎಲ್ಲರ ನಿರೀಕ್ಷೆ ಸೋಫಿಯಾ ಮೇಲಿದ್ದರೆ ಎಲ್ಲಿ ಹೊರ ಬರುವಂತೆ ಸಲ್ಲೂನಿಂದ ಬುಲಾವ್ ಬಂತು. ಬಿಗ್ ಬಾಸ್ ನಿರ್ಣಯ ಸರಿಯಿಲ್ಲ ನಾನೇ ಹೊರಕ್ಕೆ ಹೋಗುತ್ತೇನೆ ಎಂದು ಸೋಫಿಯಾ ಕಣ್ಣೀರಿಟ್ಟರೆ, ಸೀರೆಯುಟ್ಟ ಎಲ್ಲಿ ನಗುನಗುತ್ತಲೇ ಮನೆ ಬಾಗಿಲ ಬಳಿ ಬಳಕುತ್ತಾ ಸಾಗಿದಳು.

ಮಿಕ್ಕಿ ವೈರಸ್ ಎಂಬ ಚಿತ್ರದ ಮೂಲಕ ಭಾರತಕ್ಕೆ ಬಂದ ಸ್ವೀಡನ್ ಚೆಲುವೆ ಎಲ್ಲಿ ಅವ್ರಾಮ್ ಸುಮಾರು ಎರಡು ತಿಂಗಳುಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಹರಕು ಮುರುಕು ಹಿಂದಿ ಭಾಷೆ ಜತೆಗೆ ಇತರೆ ಸ್ಪರ್ಧಿಗಳ ತಂತ್ರ ಪ್ರತಿತಂತ್ರಗಳನ್ನು ಅಚ್ಚರಿಯಿಂದಲೇ ಕಾಣುತ್ತಾ ಹೊಸ ಪಾಠ ಕಲಿತಳು. ಬಿಗ್ ಬಾಸ್ ಮನೆಯ ಚೆಲುವೆ ಎನಿಸಿಕೊಂಡಿದ್ದ ಎಲ್ಲಿಯನ್ನು ವೋಟೌಟ್ ಮಾಡಿದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಪ್ರೇಕ್ಷಕರ ನಿರ್ಣಯ ಬಿಗ್ ಬಾಸ್ ತಂಡವಾಗಲಿ ನಾನಾಗಲಿ ಏನು ಮಾಡುವಂತಿಲ್ಲ ಎಂದು ಸಲ್ಮಾನ್ ಸಾರಿದ.

Bigg Boss 7 : Elli Avram Gets Eliminated

ಸಂಗ್ರಾಮ್ ಹಾಗೂ ಆಂಡಿ ಜತ್ತೆ ಉತ್ತಮ ಗೆಳೆತನ ಹೊಂದಿದ್ದ ಎಲ್ಲಿ ಎಲ್ಲರ ಮೆಚ್ಚುಗೆಯ ಸ್ಪರ್ಧಿ ಎನಿಸಿದ್ದಳು. ವಿದೇಶಿ ಸ್ಪರ್ಧಿ ಎಂಬ ಭಾವನೆ ಬರದಂತೆ ನೋಡಿಕೊಂಡಿದ್ದರು. ಇತ್ತೀಚಿನ ಕಂಬದ ಟಾಸ್ಕ್ ನಲ್ಲಿ ಎಲ್ಲಿಯನ್ನು ಉಳಿಸಲು ಸಂಗ್ರಾಮ್ ಪಂದ್ಯ ಸೋತಿದ್ದ. ಅದರೆ, ಪ್ರೇಕ್ಷಕರ ಮನಸ್ಸಿನಲ್ಲಿ ಎಲ್ಲಿಯನ್ನು ಮನೆಯಿಂದ ಹೊರಗಿಟ್ಟಿದ್ದಾರೆ. ಬಹುಶಃ ಕಳೆದ ವಾರದ ಕ್ಯಾಪ್ಟನ್ ಕಮಾಂಡೋ ಹಾಗೂ ಕಳ್ಳ ಪೊಲೀಸ್ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಎಲ್ಲಿಯನ್ನು ಮನೆಯಿಂದ ಹೊರ ಬರುವಂತೆ ಮಾಡಿದೆ ಎನ್ನಲಾಗಿದೆ.

ಎಲ್ಲಿ ಉಳಿಸಿದ ತ್ಯಾಗಮಯಿ ಸಂಗ್ರಾಮ್ ನಾಮಿನೇಟೆಡ್ ಆಗಿರಲಿಲ್ಲ. ಜಗಳ ಹುಟ್ಟುಹಾಕುವ ಸೋಫಿಯಾ ಅಥವಾ ಏಜಾಜ್ ಮನೆಯಿಂದ ಹೊರ ಬೀಳುವ ಸಾಧ್ಯತೆಯಿತ್ತು. ತನೀಶಾ ಕೂಡಾ ಎಲಿಮಿನೇಷನ್ ಭೀತಿ ಎದುರಿಸಿದರೂ ಪ್ರೇಕ್ಷಕರ ಕೃಪೆಯಿಂದ ಸೇಫ್ ಆದಳು.

English summary
Bigg Boss 7's November 23rd elimination surprises viewers by eliminating Elli Avram. Salman Khan called out his favourite white-beauty from the house in lastday(Nov.23)'s eliminations.
Please Wait while comments are loading...