For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ : ಪ್ರಣಯ ಚೇಷ್ಟೆಗೆ ಸಚಿವಾಲಯದಿಂದ ಬ್ರೇಕ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಅತಿಯಾಗಿ ವರ್ತಿಸುತ್ತಿದ್ದಾರೆ. ಪರಸ್ಪರ ಮುತ್ತಿಡುವುದು, ತಬ್ಬಿಕೊಳ್ಳುವುದು ಎಲ್ಲವೂ ಸಭ್ಯತೆ ಎಲ್ಲೆ ಮೀರುತ್ತಿದೆ ಎಂದು ದೂರು ಕೇಳಿ ಬಂದಿದೆ. ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಲರ್ಸ್ ವಾಹಿನಿಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ ಬಿಗ್ ಬ್ರದರ್ ರಿಯಾಲಿಟಿ ಶೋ ಹಿಂದಿಗೆ ಬಿಗ್ ಬಾಸ್ ಆಗಿ ತಂದಿದ್ದು ಎಂಡೆಮೊಲ್ ಕಂಪನಿ. ಸೆ.15 ರಿಂದ ಆರಂಭಗೊಂಡ ಸಲ್ಮಾನ್ ಖಾನ್ ನಿರೂಪಣೆವುಳ್ಳ ಬಿಗ್ ಬಾಸ್ 7 ರಿಯಾಲಿಟಿ ಶೋನಲ್ಲಿನ ದೃಶ್ಯಗಳು ಸಂಸಾರಸ್ಥರು ನೋಡುವಂತಿಲ್ಲ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

  ಬಿಗ್ ಬಾಸ್ 7 ಕಾರ್ಯಕ್ರಮದ ಎರಡು ಎಪಿಸೋಡ್ ಗಳನ್ನು ನೋಡಿ ಸಚಿವಾಲಯ ಈ ತೀರ್ಮಾನಕ್ಕೆ ಬಂದಿದೆ. ಬಿಗ್ ಬಾಸ್ ಎರಡು ಎಪಿಸೋಡ್ ಗಳಲ್ಲೆ ಅನೇಕ ಆಕ್ಷೇಪಾರ್ಹ ಸಂಗತಿಗಳು ಕಂಡು ಬಂದಿದೆ. ಪರಸ್ಪರ ಆತ್ಮೀಯತೆ ತೋರುವುದು ಒಂದು ಕಡೆಯಾದರೆ ಇನೊಂದೆಡೆ ಸ್ಪರ್ಧಿಗಳ ಭಾಷೆ ಬಳಕೆ ಬಗ್ಗೆ ಕೂಡಾ ದೂರುಗಳು ಬಂದಿವೆ.

  ಇದರ ಜತೆಗೆ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡುವ ಸ್ಪರ್ಧೆಗಳು ಅಮಾನವೀಯವಾಗಿದೆ. ಕುರ್ಚಿಯಲ್ಲಿ ಕುಳಿತು ಎಲೆಕ್ಟ್ರಿಕ್ ಶಾಕ್ ನೀಡುವುದು, ಸಗಣಿಯಲಿ ಸ್ನಾನ ಮಾಡುವುದು, 12 ಗಂಟೆ ಕುಳಿತ ಕಡೆ ಕುಳಿತಿರುವ ಶಿಕ್ಷೆ, ಸ್ಪರ್ಧಿಗಳಿಗೆ ವಿಚಿತ್ರ ಕೇಶ ವಿನ್ಯಾಸ ನೀಡುವುದು, ಸ್ಪರ್ಧಿಗಳನ್ನು ಉಪವಾಸ ಕೂರಿಸುವುದು ಇವೆ ಮುಂತಾದ ಶಿಕ್ಷೆಗಳು ಆಕ್ಷೇಪಾರ್ಹ ಎನ್ನಲಾಗಿದೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲರ್ಸ್ ವಾಹಿನಿ, ಬಿಗ್ ಬಾಸ್ ನ ಶೋನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನೋಟಿಸ್ ಬಂದಿದೆ. ಇದಕ್ಕೆ ಸೂಕ್ತ ವಿವರಣೆ ನೀಡಿ ಉತ್ತರ ಕಳಿಸುತ್ತೇವೆ.

  ಆದರೆ, ಬಿಗ್ ಬಾಸ್ ಕಾರ್ಯಕ್ರಮ 7 ವರ್ಷ ವಯಸ್ಕರಿಂದ 70 ವರ್ಷ ವಯಸ್ಕರು ನೋಡುವಂತೆ ರೂಪಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ, Broadcasting Content Complaints Council ನಿರ್ದೇಶನದಂತೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕುಟುಂಬಸ್ಥರು ಕುಳಿತು ನೋಡುವಂತೆ ಕಾರ್ಯಕ್ರಮವನ್ನು ಕಾಯ್ದುಕೊಳ್ಳಲಾಗಿದೆ.

  ಇತ್ತೀಚೆಗೆ ತನೀಶಾ ಹಾಗೂ ಅರ್ಮಾನ್ ಅವರಿಗೆ ಸಭ್ಯತೆಯ ಎಲ್ಲೆ ಮೀರದಂತೆ ಸಲ್ಮಾನ್ ಖಾನ್ ಅವರು ಎಚ್ಚರಿಕೆ ನೀಡಿದ್ದರು. ನಂತರ ಅರ್ಮಾನ್ ನಿಂದ ತನೀಶಾ ದೂರ ಉಳಿದಿದ್ದರು. ಕುಶಾಲ್ ಹಾಗೂ ಗೌಹರ್ ಪ್ರೇಮಿಗಳಂತೆ ವರ್ತಿಸಿದ್ದು ಅನೇಕರ ಹುಬ್ಬೇರಿಸಿತ್ತು.

  English summary
  Popular reality TV show ‘Bigg Boss’ has been issued a show cause notice by the Information and Broadcasting (I&B) Ministry. The notice was issued because the ministry felt that some of the content on the show was unsuitable for "unrestricted public exhibition".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X