»   » ಬಿಗ್ ಬಾಸ್ 7 : ಗೌಹರ್ -ಕಾಮ್ಯಾ ಜಗಳ, ರತನ್ ಸ್ನಾನ

ಬಿಗ್ ಬಾಸ್ 7 : ಗೌಹರ್ -ಕಾಮ್ಯಾ ಜಗಳ, ರತನ್ ಸ್ನಾನ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 7 ರಲ್ಲಿ ರಜತ್ ಅನುಪಸ್ಥಿತಿ ನಂತರ ಕುಶಾಲ್ ಹಾಗೂ ಗೌಹರ್ ಜೊತೆ ಜೊತೆಯಲ್ಲಿ ಎಂದು ಹಾಡುವುದೇ ಪ್ರೇಕ್ಷಕರಿಗೆ ರಸದೌತಣವಾಗಿದೆ. ಅದರೆ, ಕಾಮ್ಯಾ ಜತೆ ಮೊದಲಿನಿಂದಲೂ ಜಗಳವಾಡುತ್ತಾ ಬಂದಿರುವ ನಾಟಕರಾಣಿ ಗೌಹರ್ ಕಣ್ಣೀರಿಟ್ಟಿದ್ದಾಳೆ. ಈ ನಡುವೆ 'ಸ್ವಯಂವರ' ಸುಂದರಿ ರತನ್ ಗೆ ವಿಶಿಷ್ಟ ಸ್ನಾನ ಮಾಡುವ ಅವಕಾಶ ಬಿಗ್ ಬಾಸ್ ಒದಗಿಸಿದ್ದಾರೆ.

ನರಕವಾಸಿಗಳಿಗೆ ಇಂದು ಟಾಸ್ಕ್ ಮಾಡುತ್ತಿರುವಾಗ ನಡುವೆ ರತನ್ ಕರೆಸಿಕೊಂಡ ಬಿಗ್ ಬಾಸ್ ಕೊಟ್ಟ ಆದೇಶ ಕೇಳಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಹುಬ್ಬೇರಿತು. ಹಸು ಸಗಣಿ ತುಂಬಿದ ಬಾತ್ ಟಬ್ ನಲ್ಲಿ ಮಲಗುವಂತೆ ರತನ್ ಗೆ ಬಿಗ್ ಬಾಸ್ ಆದೇಶಿಸಿದ್ದಾರೆ. ವಿವರ ಮಂಗಳವಾರದ ಎಪಿಸೋಡ್ ನಲ್ಲಿ ಸಿಗಲಿದೆ.

ಈಗ 15ನೇ ದಿನಕ್ಕೆ ವಾಪಸ್ ಬಂದರೆ ಕಾಮ್ಯಾ ತನ್ನ ಅಸಮಾಧಾನವನ್ನು ಸಲ್ಮಾನ್ ಖಾನ್ ಜತೆ ಹಂಚಿಕೊಂಡಿದ್ದು ಈಗ ಬಹಿರಂಗವಾಗಿದೆ. ನರಕದಿಂದ ಸ್ವರ್ಗಕ್ಕೆ ಅದಲು ಬದಲು ಆದಾಗ ಅಪೂರ್ವ ಕಳಿಸಬೇಕಿತ್ತು. ಬದಲಿಗೆ ಕುಶಾಲ್ ಸಂಗ ಬಯಸಿದ ಗೌಹರ್ ಸ್ವಾರ್ಥದಿಂದ ತಾನೇ ಹೋದಳು ಎಂದು ಕಾಮ್ಯಾ ಆರೋಪಿಸಿದ್ದಾಳೆ.

ಜಗಳ ಇಷ್ಟಕ್ಕೆ ನಿಲ್ಲದೆ ಗೌಹರ್ ಮಾಡಿಕೊಟ್ಟ ಟೀ ಕುಡಿಯದ ಕಾಮ್ಯಾ, ಶಿಲ್ಪಾ ಮಾಡಿಕೊಟ್ಟರೆ ಮಾತ್ರ ಚಹಾ ಕುಡಿಯುವುದಾಗಿ ಹೇಳಿದ್ದು ಗೌಹರ್ ಗೆ ಸರಿಯಾಗಿ ತಟ್ಟಿದೆ. ಈ ಬಗ್ಗೆ ತಿಳಿದ ಗೌಹರ್ ಬಾತ್ ರೂಮಿಗೆ ಹೋಗಿ ಕಣ್ಣೀರಿಡುತ್ತಿದ್ದರೆ ಸಂತೈಸುವ ಕಾರ್ಯ ನಿರೀಕ್ಷೆಯಂತೆ ಕುಶಾಲ್ ಮಾಡುತ್ತಿದ್ದ. ಮುಂದೆ ಆಂಡಿ ಪುರುಷ-ಸ್ತ್ರೀ ಪ್ರೇಮದ ಬಗ್ಗೆ ಹೇಳಿದ್ದು, ಕುಶಾಲ್-ಗೌಹತ್ ಪ್ರೇಮ್ ಕಹಾನಿ ಹಾಗೂ ನಾಮಿನೇಷನ್ ನ ಅಚ್ಚರಿ ಬೆಳವಣಿಗೆ ಬಗ್ಗೆ ಓದಿ..

ಸಗಣಿ ಸ್ನಾನ

ನರಕವಾಸಿಗಳಿಗೆ ಇಂದು ಟಾಸ್ಕ್ ಮಾಡುತ್ತಿರುವಾಗ ನಡುವೆ ರತನ್ ಕರೆಸಿಕೊಂಡ ಬಿಗ್ ಬಾಸ್ ಕೊಟ್ಟ ಆದೇಶ ಕೇಳಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಹುಬ್ಬೇರಿತು. ಹಸು ಸಗಣಿ ತುಂಬಿದ ಬಾತ್ ಟಬ್ ನಲ್ಲಿ ಮಲಗುವಂತೆ ರತನ್ ಗೆ ಬಿಗ್ ಬಾಸ್ ಆದೇಶಿಸಿದ್ದಾರೆ. ವಿವರ ಮಂಗಳವಾರದ ಎಪಿಸೋಡ್ ನಲ್ಲಿ ಸಿಗಲಿದೆ.

ಆಂಡಿ ಪ್ರೇಮ ಕಹಾನಿ

ಮುಂದೆ ಆಂಡಿ ತಾನು ಯಾರನ್ನು ಪ್ರೀತಿಸುತ್ತೇನೆ ಎಂಬುದರ ಬಗ್ಗೆ ಹೇಳುತ್ತಿದ್ದ ಆಂಡಿ ನನಗೆ ಹೆಣ್ಣು ಗಂಡು ಬೇಧವಿಲ್ಲ ಎಲ್ಲರೂ ಒಂದೇ ಎಂದಾಗ ಸಂಗ್ರಾಮ್ ಗೆ ಅಚ್ಚರಿಯಾಯಿತು. ಆದರೆ, ವಿದೇಶಿ ಸುಂದರಿ ಎಲ್ಲಿ ಗೆ ಆಂಡಿ ಹೇಳಿದ್ದು ಅರ್ಥವಾಯಿತು

ದಿನ ಪೂರ್ತಿ ಚರ್ಚೆ, ಚರ್ಚೆ

ಇತ್ತ ಸ್ವರ್ಗದಲ್ಲಿ ಅನಿತಾ, ತನೀಶಾ, ಅರ್ಮಾನ್ ಹಾಗೂ ಶಿಲ್ಪಾ ಎಲ್ಲರೂ ಸೇರಿ ಅರ್ಮಾನ್ ಜೀವನದ ಬಗ್ಗೆ ಮಾತನಾಡಿದ್ದು ಮುದನೀಡಿತ್ತು. ನಂತರ ಪ್ರತ್ಯೂಷಾ, ತನೀಶಾ ಹಾಗೂ ಅರ್ಮಾನ್ ಸೇರಿ ಕುಶಾಲ್-ಗೌಹತ್ ಪ್ರೇಮ್ ಕಹಾನಿ ಬಗ್ಗೆ ಚರ್ಚಿಸಿದರು. ಇಬ್ಬರಿಂದ ಇತರರಿಗೆ ಎಷ್ಟು ಮುಜುಗರವಾಗುತ್ತಿದೆ ಎಂದು ದುಃಖ ತೋಡಿಕೊಂಡರು,

ನಾಮಿನೇಷನ್

ಈ ಬಾರಿ ಸ್ವರ್ಗ ಹಾಗೂ ನರಕವಾಸಿಗಳಿಬ್ಬರಿಗೂ ನಾಮಿನೇಟ್ ಮಾಡುವ ಅವಕಾಶ ಸಿಕ್ಕಿತ್ತು. ಇಬ್ಬರ ಹೆಸರನ್ನು ಎಲಿಮಿನೇಷನ್ ಗೆ ನಾಮಿನೇಟ್ ಮಾಡುವ ಬದಲು ಉಳಿಸಲು ಬಯಸುವ ಇಬ್ಬರ ಹೆಸರನ್ನು ಸೂಚಿಸಲು ಬಿಗ್ ಬಾಸ್ ಹೇಳಿದರು. ಅತಿ ಕಡಿಮೆ ವೋಟ್ ಪಡೆದವರು ಮುಂದಿನ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗುತ್ತಾರೆ ಎಂದು ಬಿಗ್ ಬಾಸ್ ಹೇಳಿದರು.

ದಿನದ ಕೊನೆಯಲ್ಲಿ ಹಾಡು

ದಿನದ ಕೊನೆಯಲ್ಲಿ ಆಂಡಿ ಹಾಗೂ ರತನ್ ಇಬ್ಬರು ಅಜೀಬ್ ದಾಸ್ತಾನ್ ಹೇ ಯೆ ಹಾಡು ಹಾಡಿ ನರ್ತಿಸಿದ್ದು ಪ್ರೇಕ್ಷಕರಿಗೆ ರಂಜನೆ ನೀಡಿತು. ಯಾರು ಯಾರಿಗೆ ಮತ ಹಾಕಿದರು ಮನೆಯಿಂದ ಯಾರು ಹೊರ ಹೋಗಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು.

ಲವ್ ಕಥೆ ಕುತೂಹಲ

ಗೌಹರ್ ನಂಬಿಕೊಂಡು ಹಿಂದೆ ಬಿದ್ದಿರುವ ಕುಶಾಲ್ ಗೆ ಗೌಹರ್ ನಾಟಕರಾಣಿ ಎಂಬುದು ಅರಿವಿಲ್ಲ. ಆದರೆ, ಇಬ್ಬರೂ ನಿಜವಾಗಿಯೂ ಆಪ್ತ ಗೆಳೆಯರಂತೆ ವರ್ತಿಸುತ್ತಿದ್ದಾರೆ. ಇದರಿಂದ ಇತರರಿಗೆ ಮುಜುಗರವಾದರೂ ಪ್ರೇಕ್ಷಕರಿಗೆ ಒಂದಷ್ಟು ಮಜಾ ಸಿಗುತ್ತಿದೆ. ನಾಟಕೀಯತೆ, ಜಗಳಗಳ ನಡುವೆ ಬಿಗ್ ಬಾಸ್ ಸದ್ಯಕ್ಕಂತೂ ಸಹ್ಯವಾಗಿದೆ.

English summary
Bigg Boss 7: The fight between Kamya and Gauhar has intensified and some tear shedding and consoling was seen in the Bigg Boss house, whilst, the love story between Gauhar and Kushal intensifying with both becoming constant companions.
Please Wait while comments are loading...