For Quick Alerts
ALLOW NOTIFICATIONS  
For Daily Alerts

ಬಿಗ್ ಬಾಸ್ ಮನೆಗೆ ಹೊಸ ಅತಿಥಿ, ಗುರು ಕಣ್ಣೀರು

By ಜೇಮ್ಸ್ ಮಾರ್ಟಿನ್
|

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಎಲ್ಲರ ನಿರೀಕ್ಷೆ ಮೀರಿ ಪ್ರಬಲ ಸ್ಪರ್ಧಿ ಎನ್ನಲಾಗಿದ್ದ ಶಿಲ್ಪಾ ಅಗ್ನಿಹೋತ್ರಿ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ. ಮನೆಗೆ ಹೊಸ ಅತಿಥಿಯಾಗಿ ನಾಯಿಯೊಂದು ಎಂಟ್ರಿ ಕೊಟ್ಟಿದೆ.

ಭಾನುವಾರ ಸಲ್ಮಾನ್ ಖಾನ್ ಜತೆ ನಿಂತ ಪತ್ನಿ ಶಿಲ್ಪಾ ಅಪೂರ್ವನನ್ನು ಕಂಡು ಬೇಬಿ ಬೇಬಿ ಎಂದು ಕರೆಯುತ್ತಿದ್ದದ್ದು ಸಲ್ಲೂ ಹಾಸ್ಯ ಮಾಡಿದ್ದು ಒಂದೆಡೆಯಾದರೆ, ಶಿಲ್ಪಾ ಈ ವಾರದ ನೇರ ನಾಮಿನೇಷನ್ ಗೆ ಅರ್ಮಾನ್ ಹೆಸರು ಶಿಲ್ಪಾ ಸೂಚಿಸಿದ್ದು ನಿರೀಕ್ಷಿತ ಎನಿಸಿತು.

ಈ ನಡುವೆ ಕ್ಯಾಪ್ಟನ್ ಆಗಿ ಅಪೂರ್ವ ಕಾರ್ಯನಿರ್ವಹಿಸುವ ಆರಂಭದ ದಿನಗಳು ಕಷ್ಟಕರ ಎನಿಸುತ್ತಿದೆ. ಮನೆಯಲ್ಲಿ ಮತ್ತೆ ತು ತು ಮೈ ಮೈ ಜಗಳ ಶುರುವಾಗಿದೆ. ಗೃಹಕೃತ್ಯಗಳನ್ನು ಎಲ್ಲರಿಗೂ ಹಂಚಿಕೆ ಮಾಡಿದ್ದರೂ ಮನೆಯಲ್ಲಿ ಗೊಂದಲದ ವಾತಾವರಣ, ಮೈಗಳ್ಳರು ಹೆಚ್ಚಾಗಿದ್ದಾರೆ.

ಅಪೂರ್ವ ಎಲ್ಲರಿಗೂ ಮನೆ ಕೆಲಸದ ಜವಾಬ್ದಾರಿ ವಹಿಸಿದ್ದರೂ ಅರ್ಮಾನ್ ನಿಯಂತ್ರಣಕ್ಕೆ ಸಿಗುತ್ತಿಲ್ಲ.

ಅಪೂರ್ವ ಎಲ್ಲರಿಗೂ ಮನೆ ಕೆಲಸದ ಜವಾಬ್ದಾರಿ ವಹಿಸಿದ್ದರೂ ಅರ್ಮಾನ್ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ನಾನು ಏನು ಮಾಡುವುದಿಲ್ಲ ಕೈ ಕೊಡವಿಕೊಂಡು ಹೊರಟ್ಟಿದ್ದಾನೆ. ಕುಶಾಲ್ ಅಡುಗೆ ಮನೆ ಕ್ಲೀನಿಂಗ್ ಮಾಡದೆ ಅಡ್ಡಾಡುತ್ತಿದ್ದಾನೆ ಯಾರೂ ಪ್ರಶ್ನಿಸುತ್ತಿಲ್ಲ ಅರ್ಮಾನ್ ಆರೋಪಿಸುತ್ತಾನೆ. ಅರ್ಮಾನ್ ಬೆಂಬಲಕ್ಕೆ ಎಂದಿನಂತೆ ತನೀಶಾ ಬರುತ್ತಾಳೆ.

ಇನ್ನೊಂದೆಡೆ ವಿವೇಕ್ ಹಾಗೂ ಕುಶಾಲ್ ಜಗಳವಾಡುತ್ತಾರೆ. ಸಿಂಕ್ ನಲ್ಲಿ ನೀರು ನಿಲ್ಲದಂತೆ ಪಾತ್ರೆ ತೊಳಿ ರಾಜ ಎಂದು ವಿವೇಕ್ ಹೇಳಿದ್ದು ಕುಶಾಲ್ ನನ್ನು ಕೆರಳಿಸುತ್ತದೆ. ಪ್ರತ್ಯೂಷಾ, ಕಾಮ್ಯಾ ಹಾಗೂ ಆಂಡಿ ಮುಂದೆ ಅಪಮಾನಕ್ಕೊಳಗಾಗಿ ವಿವೇಕ್ ಕಣ್ಣೀರಿಟ್ಟುತ್ತಾನೆ.

ಕಣ್ಣೀರಿಟ್ಟ ಯೋಗ ಗುರು

ಕಣ್ಣೀರಿಟ್ಟ ಯೋಗ ಗುರು

ನಗ್ನ ಯೋಗ ಗುರು ವಿವೇಕ್ ವಿರುದ್ಧ ಕುಶಾಲ್ ತಿರುಗಿ ಬಿದ್ದು ಕಿಚಾಯಿಸುತ್ತಾನೆ. ವಿವೇಕ್ ಇದರಿಂದ ತೀವ್ರವಾಗಿ ನೊಂದುಕೊಳ್ಳುತ್ತಾನೆ. ಪ್ರತ್ಯೂಷಾ ಕೂಡಾ ಕುಶಾಲ್ ಪರ ನಿಲ್ಲುತ್ತಾಳೆ. ಇದರಿಂದ ಕೆರಳಿದ ವಿವೇಕ್ ವೈಯಕ್ತಿಕ ನಿಂದನೆಗೆ ಇಳಿಯುತ್ತಾನೆ. ಮನೆ ಮಂದಿ ಎಲ್ಲಾ ಒಟ್ಟುಗೂಡಿ ಮಜಾ ತೆಗೆದುಕೊಳ್ಳುತ್ತಾರೆ. ವಿವೇಕ್ ಅಕಾರಣವಾಗಿ ಬೆಸ್ತು ಬಿದ್ದು ಕಣ್ಣೀರಿಡುತ್ತಾನೆ.

ಹುಷಾರಾದ ತನೀಶಾ

ಹುಷಾರಾದ ತನೀಶಾ

ಒಂದು ಕಾಲದಲ್ಲಿ ಮನೆಯ ನಾಯಕಿಯಾಗಿ ಮೆರೆದಿದ್ದ ತನೀಶಾ ಈಗ ಅರ್ಮಾನ್ ಜತೆ ಸಹವಾಸದಿಂದ ಡೇಂಜರ್ ಜೋನ್ ಗೆ ಬಂದಿದ್ದಾಳೆ. ತನೀಶಾ ಜತೆಗೆ ಶಿಲ್ಪಾ, ಕಾಮ್ಯಾ, ಆಂಡಿ ಹಾಗೂ ಅರ್ಮಾನ್ ಇದ್ದಾರೆ.

ಹೀಗಾಗಿ ತನೀಶಾ ಈಗ ಹುಷಾರಾಗಿ ಆಟವಾಡುತ್ತಿದ್ದಾಳೆ. ನಾಯಕ ಅಪೂರ್ವ ಹಾಗೂ ತನೀಶಾ ದುಃಖತಪ್ತ ವಿವೇಕ್ ಗೆ ಸಾಂತ್ವನ ಹೇಳಿದರು.

ಮನೆ ಕೆಲಸ ಕಷ್ಟ

ಮನೆ ಕೆಲಸ ಕಷ್ಟ

ನರಕವಾಸಿಗಳಾಗಿದ್ದಾಗ ಸ್ಪರ್ಧಿಗಳು ಕಠಿಣ ಟಾಸ್ಕ್ ಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು ಆದರೆ, ಸ್ವರ್ಗಕ್ಕೆ ಬಂದ ಮೇಲೆ ಮೈಮೇಲೆ ಆಲಸ್ಯ ಬಂದವರಂತೆ ಎಲ್ಲರೂ ಮೈಗಳ್ಳರಾಗುತ್ತಿದ್ದಾರೆ. ಹರಟೆಗೆ ಹೆಚ್ಚು ಸಮಯ ನೀಡುತ್ತಿದ್ದಾರೆ. ಹೀಗಾಗಿ ನಾಯಕ ಅಪೂರ್ವಗೂ ಎಲ್ಲರನ್ನು ಸಂಭಾಳಿಸುವುದು ಚಾಲೆಂಜಿಂಗ್ ಆಗಿದೆ.

ಕುಹಕಿ ಕುಶಾಲ್

ಕುಹಕಿ ಕುಶಾಲ್

ಗೌಹರ್ ಹಿಂದೆ ಮುಂದೆ ಸುತ್ತುತ್ತಾ ಸುದ್ದಿಯಾಗಿದ್ದ ಕುಶಾಲ್ ಈಗ ವಿವೇಕ್ ಟಾರ್ಗೆಟ್ ಮಾಡಿಕೊಂಡಿದ್ದಾನೆ. ಸಂಗ್ರಾಮ್ ಕೂಡಾ ವಿವೇಕ್ ಎಂಟ್ರಿ ನಂತರ ಒಂದು ರೀತಿ ಆಡುತ್ತಿದ್ದಾನೆ. ಅರ್ಮಾನ್ ಎಂದಿನಂತೆ ಎಲ್ಲರಿಂದ ದೂರವೇ ಇದ್ದಾನೆ. ಆಂಡಿ ಹುಚ್ಚಾಟ ಮುಂದುವರೆದರೂ ಸಹ್ಯವಾಗಿದೆ. ಪ್ರತ್ಯೂಷಾ, ಕಾಮ್ಯಾ ಕೂಡಾ ಕುಶಾಲ್ ಪರ ವಹಿಸುತ್ತಿದ್ದು ಮುಂದಿನ ಟಾರ್ಗೆಟ್ ವಿವೇಕ್ ಹಾಗೂ ಅರ್ಮಾನ್ ಎಂಬುದು ಗುಟ್ಟಾಗಿ ಉಳಿದಿಲ್ಲ.

ನಾಯಿ ಸ್ವರ್ಗ(ಹೆವೆನ್) ಜತೆ

ನಾಯಿ ಸ್ವರ್ಗ(ಹೆವೆನ್) ಜತೆ

ಹೊಸ ಅತಿಥಿ ಹೆವೆನ್(ನಾಯಿ) ಜತೆ ಆಟವಾಡಿ ನಲಿದ ಬಿಗ್ ಬಾಸ್ ಕ್ಯಾಪ್ಟನ್ ಅಪೂರ್ವ

ನಾಯಿ ಸ್ವರ್ಗ(ಹೆವೆನ್) ಜತೆ

ನಾಯಿ ಸ್ವರ್ಗ(ಹೆವೆನ್) ಜತೆ

ಹೊಸ ಅತಿಥಿ ಹೆವೆನ್(ನಾಯಿ) ಜತೆ ಆಟವಾಡಿ ನಲಿದ ಬಿಗ್ ಬಾಸ್ ಸ್ಪರ್ಧಿ ಕ್ಯಾಪ್ಟನ್ ಅಪೂರ್ವ ಹಾಗೂ ತನೀಶಾ

ನಾಯಿ ಸ್ವರ್ಗ(ಹೆವೆನ್) ಜತೆ

ನಾಯಿ ಸ್ವರ್ಗ(ಹೆವೆನ್) ಜತೆ

ಹೊಸ ಅತಿಥಿ ಹೆವೆನ್(ನಾಯಿ) ಜತೆ ಆಟವಾಡಿ ನಲಿದ ಬಿಗ್ ಬಾಸ್ ಸ್ಪರ್ಧಿಗಳು

ನಾಯಿ ಸ್ವರ್ಗ(ಹೆವೆನ್) ಜತೆ

ನಾಯಿ ಸ್ವರ್ಗ(ಹೆವೆನ್) ಜತೆ

ಹೊಸ ಅತಿಥಿ ಹೆವೆನ್(ನಾಯಿ) ಜತೆ ಆಟವಾಡಿ ನಲಿದ ಬಿಗ್ ಬಾಸ್ ಸ್ಪರ್ಧಿ ನಾಯಕ ಅಪೂರ್ವ

ನಾಯಿ ಸ್ವರ್ಗ(ಹೆವೆನ್) ಜತೆ

ನಾಯಿ ಸ್ವರ್ಗ(ಹೆವೆನ್) ಜತೆ

ಹೊಸ ಅತಿಥಿ ಹೆವೆನ್(ನಾಯಿ) ಜತೆ ಆಟವಾಡಿ ನಲಿದ ಬಿಗ್ ಬಾಸ್ ಸ್ಪರ್ಧಿ ಆಸೀಫ್ ಹೆಚ್ಚು ಖುಷಿಯಾಗಿದ್ದ

ನಾಯಿ ಸ್ವರ್ಗ(ಹೆವೆನ್) ಜತೆ

ನಾಯಿ ಸ್ವರ್ಗ(ಹೆವೆನ್) ಜತೆ

ಹೊಸ ಅತಿಥಿ ಹೆವೆನ್(ನಾಯಿ) ಜತೆ ಆಟವಾಡಿ ನಲಿದ ಬಿಗ್ ಬಾಸ್ ಸ್ಪರ್ಧಿಗಳು ಹೆವೆನ್ ನಿತ್ಯ ಕರ್ಮಗಳನ್ನು ನೋಡಿಕೊಳ್ಳುತ್ತಿದ್ದಾರೆ

ನಾಯಿ ಸ್ವರ್ಗ(ಹೆವೆನ್) ಜತೆ

ನಾಯಿ ಸ್ವರ್ಗ(ಹೆವೆನ್) ಜತೆ

ಹೊಸ ಅತಿಥಿ ಹೆವೆನ್(ನಾಯಿ) ಜತೆ ಆಟವಾಡಿ ನಲಿದ ಬಿಗ್ ಬಾಸ್ ಸ್ಪರ್ಧಿ ಅರ್ಮಾನ್

ಪ್ರತ್ಯೂಷಾ ಜತೆ

ಪ್ರತ್ಯೂಷಾ ಜತೆ

ಕುಶಾಲ್ ಹಾಗೂ ವಿವೇಕ್ ಜಗಳಕ್ಕು ಮುನ್ನ ಚರ್ಚೆ

ಕಾಮ್ಯಾ ಎಚ್ಚರಿಕೆ ಆಟ

ಕಾಮ್ಯಾ ಎಚ್ಚರಿಕೆ ಆಟ

ಒಂದು ಕಡೆ ವಿವೇಕ್ ಗೆ ಬುದ್ಧಿವಾದ ಇನ್ನೊಂದೆಡೆ ಕುಶಾಲ್ ಮಾಡಿದ್ದೆ ಸರಿ ಎಂದ ಕಾಮ್ಯಾ ಪರಿಸ್ಥಿತಿಯಲ್ಲಿ ಎರಡು ಕಡೆ ನಿಂತು ಆಟವಾಡಿದಳು

ಕುಶಾಲ್ ಬಗ್ಗೆ ಚರ್ಚೆ

ಕುಶಾಲ್ ಬಗ್ಗೆ ಚರ್ಚೆ

ಕುಶಾಲ್ ಜತೆ ಕುಳಿತು ವಿವೇಕ್ ಕಿಚಾಯಿಸಿದ ಆಂಡಿ ನಂತರ ಈ ಬಗ್ಗೆ ಎಲ್ಲರೊಂದಿಗೆ ಚರ್ಚೆ ನಡೆಸಿದ

ಸ್ಪರ್ಧಿಗಳ ಕಿತ್ತಾಟ

ಸ್ಪರ್ಧಿಗಳ ಕಿತ್ತಾಟ

ಮನೆ ಕೆಲಸ ಮಾಡಲು ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗುವುದ್ದಕ್ಕೂ ಮುನ್ನ ಬಿಗ್ ಬಾಸ್ ನಿಂದ ಟಾಸ್ಕ್ ಬಗ್ಗೆ

ಹೊಸ ಅತಿಥಿಯ ಆರೈಕೆ

ಹೊಸ ಅತಿಥಿಯ ಆರೈಕೆ

ಹೊಸ ಅತಿಥಿ ಹೆವೆನ್ ಜತೆ ಸ್ಪರ್ಧಿಗಳ ಆಟ

ಸ್ಪರ್ಧಿಗಳ ಕಿತ್ತಾಟ

ಸ್ಪರ್ಧಿಗಳ ಕಿತ್ತಾಟ

ವಿವೇಕ್ ಹಾಗೂ ಕುಶಾಲ್ ಜಗಳ ತಣ್ಣಗೆ ಮಾಡಿದ ಕಾಮ್ಯಾ, ಅಳುವುದನ್ನು ಬಿಡುವಂತೆ ಹೇಳುತ್ತಾಳೆ. ನೀವು ಯಾರೊಬ್ಬರ ವೈಯಕ್ತಿಕ ವಿಷಯ ಎತ್ತಬೇಡಿ ಎಂದು ಎಚ್ಚರಿಸುತ್ತಾಳೆ.

ಆದರೆ, ವಿವೇಕ್ ಮತ್ತೆ ಮತ್ತೆ 'ನನ್ನ ಜತೆ ಮಾತನಾಡಬೇಡ ಎಂದು ಕುಶಾಲ್ ಗೆ ಹೇಳಿದರು ಕುಶಾಲ್ ಮತ್ತೆ ಮತ್ತೆ ಬಂದು ರೇಗಿಸುತ್ತಲೇ ಇರುತ್ತಾನೆ. ವಿವೇಕ್ ಮಾಡಿದ್ದು ಸರಿಯಿಲ್ಲ ಎಂದು ಕಾಮ್ಯಾ ಪ್ರತ್ಯೂಷಾ ಚರ್ಚೆ ನಡೆಸುತ್ತಾರೆ

English summary
It’s been almost a month in the Bigg Boss House but the fight over household work seems to be endless within the inmates. While a few of them act responsible and take an initiative towards the maintenance of the house, the rest just find a reason to shed work every time.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more