»   » BB 7 : ಬಲಿ ಕಾ ಬಕ್ರಾ ಆದ ವಿಜೆ ಆಂಡಿ

BB 7 : ಬಲಿ ಕಾ ಬಕ್ರಾ ಆದ ವಿಜೆ ಆಂಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ರೂಪದರ್ಶಿ ಆಸಿಫ್ ಮನೆಯಿಂದ ಹೊರ ನಡೆದರೂ ಬಿಗ್ ಬಾಸ್ ಮನೆ ಆವರಣದಲ್ಲೇ ಬೀಡು ಬಿಡುವಂತೆ ಸೂಚಿಸಿ ಬಿಗ್ ಬಾಸ್ ಪ್ರೇಕ್ಷಕರನ್ನು ಅಚ್ಚರಿಗೆ ದೂಡಿದರು. ಇದಾದ ನಂತರ ನಾಮಿನೇಷನ್ ಬಗ್ಗೆ ಸ್ಪರ್ಧಿಗಳು ಚರ್ಚಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಗ್ ಬಾಸ್ ಗುಂಪುಗಾರಿಕೆಗೆ ಸರಿಯಾದ ಪಾಠ ಕಲಿಸಿದ್ದಾರೆ. ಇದರಿಂದ ತಾನೇ ತೋಡಿದ ಹಳ್ಳದೊಳಗೆ ತಾನೇ ಬೀಳುವಂಥ ಪರಿಸ್ಥಿತಿಯನ್ನು ಎದುರಿಸಿದ ವಿಜೆ ಆಂಡಿ ಬಲಿ ಕಾ ಬಕ್ರಾ ಆಗಿದ್ದಾರೆ.

ಅರ್ಮಾನ್ ಹಾಗೂ ತನೀಶಾ ನಡುವಿನ ಆಪ್ತತೆ ಕಂಡು ಸಹಿಸದ ಇತರೆ ಸ್ಪರ್ಧಿಗಳು ಕೋಡ್ ಭಾಷೆ ಬಳಸಿ ಅವರಿಬ್ಬರನ್ನು ಈ ಬಾರಿ ನಾಮಿನೇಟ್ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಆಂಡಿ ಹಾಗೂ ಕಾಮ್ಯಾ ಮಲಗಿದ್ದ ಜಾಗಕ್ಕೆ ಬಂದ ಪ್ರತ್ಯೂಷಾ ನಾನು ಚಹಾ ಕುಡಿಯಬೇಕು(ಮನೆಯಿಂದ ಹೊರ ಹೋಗಬೇಕು) ಎಂದು ಹೇಳುತ್ತಾಳೆ. ಅದಕ್ಕೆ ಉತ್ತರಿಸಿದ ಆಂಡಿ ಮೊದಲಿಗೆ ದಾಲ್ ಹಾಗೂ ಚಿಕನ್ ಸಂಗತಿ ನೋಡಿಕೊಳ್ಳೋಣ ಎನ್ನುತ್ತಾನೆ. ಇಲ್ಲಿ ದಾಲ್ (ತನೀಶಾ) ಹಾಗೂ ಚಿಕನ್ (ಅರ್ಮಾನ್)

ಪ್ರತ್ಯೂಷಾ ಜತೆ ಕೈ ಜೋಡಿಸಿದ ಅಪೂರ್ವ ಹಾಗೂ ಎಲ್ಲಿ ನಾವು ಚಹಾ ಕುಡಿಯಲು ಸಿದ್ಧ ಎನ್ನುತ್ತಾರೆ. ಕಾಮ್ಯಾ, ಆಂಡಿ, ಪ್ರತ್ಯೂಷಾ, ಅಪೂರ್ವ, ಗೌಹರ್, ಕುಶಾಲ್, ಎಲ್ಲಿ ಹಾಗೂ ಸಂಗ್ರಾಮ್ ಈ ಚರ್ಚೆಯಲ್ಲಿ ತೊಡಗಿರುತ್ತಾರೆ. ಬಿಗ್ ಬಾಸ್ ನಿಯಮದ ಪ್ರಕಾರ ಇದು ನಿಯಮ ಬಾಹಿರ. ಬಿಸಿ ಬಿಸಿ ಚರ್ಚೆ ನಡೆಯುವ ಸಂದರ್ಭದಲ್ಲಿ ಚಿಕನ್ ಹಾಗೂ ದಾಲ್ ಅವರು ಹೊರಗಡೆ ವಿಶ್ರಾಂತಿ ಪಡೆಯುತ್ತಿರುತ್ತಾರೆ.


ಹೇಗೆ ಶುರುವಾಯ್ತು ಚರ್ಚೆ

ಅರ್ಮಾನ್ ಕೊಹ್ಲಿ ಹಾಗೂ ತನೀಶಾ ಹೊರಗಡೆ ಇರುವುದನ್ನು ಖಾತ್ರಿ ಮಾಡಿಕೊಂಡ ಪ್ರತ್ಯೂಷಾ, ಕಾಮ್ಯಾ, ಆಂಡಿ ಇರುವ ಜಾಗಕ್ಕೆ ಬರುತ್ತಾಳೆ. ಪ್ರತ್ಯೂಷಾ ನಾಮಿನೇಷನ್ ಬಗ್ಗೆ ಚರ್ಚೆ ಆರಂಭಿಸುತ್ತಾಳೆ. ಆಂಡಿ ಹಾಗೂ ಕಾಮ್ಯ ಕೈ ಜೋಡಿಸುತ್ತಾರೆ. ನಂತರ ಗೌಹರ್, ಕುಶಾಲ್ ಕೂಡಾ ಜತೆ ಸೇರಿಕೊಂಡು ದಾಲ್, ಚಿಕನ್ ಕಥೆ ಮುಗಿಸಲು ತಂತ್ರ ರೂಪಿಸುತ್ತಾರೆ. ಸಂಗ್ರಾಮ್ ಕೂಡಾ ತಂತ್ರದ ಬಗ್ಗೆ ಅರ್ಥವಾಗದಿದ್ದರೂ ಒಪ್ಪಿಗೆ ಸೂಚಿಸುತ್ತಾನೆ

ಬಿಗ್ ಬಾಸ್ ಕೊಟ್ಟ ಆದೇಶ

ನಾಮಿನೇಷನ್ ಸಮಯದಲ್ಲಿ ಕುಶಾಲ್ ಹುಷಾರಾಗಿ ನಿಂದ ಗೌಹರ್ ಹಿಂದೆ ಬೀಳುವಂತೆ ಮಾಡುತ್ತಾನೆ. ದಾಲ್ ಚಿಕನ್ ಬಗ್ಗೆ ತಿಳಿಯದ ಅಮಾಯಕರಾದ ತನೀಶಾ ಹಾಗೂ ಅರ್ಮಾನ್ ಗೆ ಇದು ಹೊಸದಾಗಿ ಕಾಣುತ್ತದೆ. ವೋಟಿಂಗ್ ಪ್ರಕ್ರಿಯೆ ಮುಗಿದಾಗ ಆಂಡಿಗೆ ಹೆಚ್ಚು ಮತ ಬಿದ್ದಿರುತ್ತದೆ.

ಸಿಟ್ಟಿಗೆದ್ದ ಆಂಡಿ

ಬಲಿ ಕಾ ಬಕ್ರಾ ಆದ ವಿಜೆ ಆಂಡಿ ಸಿಟ್ಟಿಗೇಳುತ್ತಾನೆ. ಆದರೆ, ಬಿಗ್ ಬಾಸ್ ಆದೇಶದಂತೆ ಬಟ್ಟೆಬರೆ ಪ್ಯಾಕ್ ಮಾಡಿಕೊಂಡು ಮುಂದಿನ ಆದೇಶಕ್ಕಾಗಿ ಕಾಯುತ್ತಾ ಕೂರುತ್ತಾನೆ. ಈ ನಡುವೆ ಎದುರಿಗೆ ಸಿಕ್ಕ ಪ್ರತ್ಯೂಷಾ ಜತೆ ಜಗಳಕ್ಕಿಳಿಯುತ್ತಾನೆ. ಆ ಗುಂಪು ಈ ಗುಂಪು ಎಂದು ಎರಡು ಕಡೆ ತಿರುಗುವವಳು ಎನ್ನುತ್ತಾನೆ .thali ka baingan ಎನ್ನುತ್ತಾನೆ. ಪ್ರತ್ಯೂಷಾ ಕೂಡಾ ತಕ್ಕ ಉತ್ತರ ನೀಡಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾಳೆ

ಸಿಟ್ಟಿಗೆ ಸಿಕ್ಕಿದ ಪ್ರತ್ಯೂಷಾ

ಅಸಲಿಗೆ ಆಂಡಿಗೆ ಎಲ್ಲರ ಮೇಲೂ ಕೋಪವಿದ್ದರೂ ಎದುರಿಗೆ ಸಿಕ್ಕ ಪ್ರತ್ಯೂಷಾ ಮೇಲೆ ಎಲ್ಲಾ ಕೋಪ ತೀರಿಸಿಕೊಳ್ಳುತ್ತಾನೆ. ಬಾಲಿಕಾ ವಧು ಖ್ಯಾತಿಯ ಪ್ರತ್ಯೂಷಾಳನ್ನು ಚೈಲ್ಡ್ ಎನ್ನುತ್ತಾನೆ ಆಂಡಿ ಆದರೆ, ಆಂಡಿ ದನಿಗೆ ಪುಟ್ಟ ಸ್ವರದ ಪ್ರತ್ಯೂಷಾ ಸರಿಸಾಟಿಯಾಗದೆ ಅಲ್ಲಿಂದ ಹೊರ ಬೀಳಬೇಕಾಗುತ್ತದೆ

ಎಲ್ಲರ ಮೇಲೂ ಸಿಡುಕು

ಇಲ್ಲಿ ಎಲ್ಲರೂ ಆಟವಾಡುತ್ತಿದ್ದಾರೆ ಎಲ್ಲರೂ ಸ್ವಾರ್ಥಿಗಳು ನಂಬಿಕೆಗೆ ಅರ್ಹರು ಯಾರೂ ಇಲ್ಲ ಎಂದು ಆಂಡಿ ಮತ್ತೆ ಮತ್ತೆ ಹೇಳುತ್ತಾನೆ. ಕಾಮ್ಯಾ, ಕುಶಾಲ್ ಹಾಗೂ ಪ್ರತ್ಯೂಷಾ ವಿರುದ್ಧ ವಾಗ್ದಾಳಿ ನಡೆಸುತ್ತಾನೆ. ಗೌಹರ್ ಹಾಗೂ ಸಂಗ್ರಾಮ್ ಇಬ್ಬರೇ ನನ್ನ ಗೆಳೆತನಕ್ಕೆ ಅರ್ಹ ಎಂದು ಹೇಳುತ್ತಾನೆ

ಅಜಾಜ್ ಖಾನ್

ಕುಶಾಲ್ ಹಳೆ ಗರ್ಲ್ ಫ್ರೆಂಡ್ ಕ್ಯಾಂಡಿ ಬ್ರಾರ್ ಹಾಗೂ ಅಜಾಜ್ ಖಾನ್ ಅವರು ಮನೆಯ ಇನ್ನೊಂದು ಭಾಗದಲ್ಲಿ ನೆಲೆಸಿದ್ದಾರೆ. ಇಬ್ಬರು ಮನೆಯ ಆಗು ಹೋಗಿನ ಬಗ್ಗೆ ಇವರಿಗೂ ಕಾಲ ಕಾಲಕ್ಕೆ ತಿಳಿಯುತ್ತಿರುತ್ತದೆ.

ಮನೆಯಲ್ಲಿ ಕೂತು ಬೋರ್ ಹೊಡೆಯುತ್ತಿದ್ದರಿಂದ ಅಜಾಜ್ ಖಾನ್ ಈಗ ಕ್ಯಾಂಡಿ ಬ್ರಾರ್ ಜತೆ ಫ್ಲರ್ಟ್ ಮಾಡ ತೊಡಗಿದ್ದಾನೆ.

ಆಂಡಿ ಮನೆಯಲ್ಲೇ ಇದ್ದಾನೆ

ನಾಮಿನೇಟ್ ಆಗಿ ಮನೆಯಿಂದ ಹೊರ ಬಿದ್ದರೂ ಬಿಗ್ ಬಾಸ್ ನಿಂದ ಮುಂದಿನ ಆದೇಶ ಹೊರ ಬೀಳುವ ತನಕ ಆಂಡಿ ಇನ್ನೂ ಮನೆಯಲ್ಲೆ ನೆಲೆಸಬೇಕಿದೆ.

ಬಜೆಟ್ ಟಾಸ್ಕ್ ನಲ್ಲಿ ಆಂಡಿ ಭಾಗವಹಿಸಿ ಪೂರ್ಣ ಪ್ರಮಾಣವಾಗಿ ಸದ್ಬಳಕೆ ಮಾಡಿಕೊಳ್ಳಲಿದ್ದಾನೆ. ಇತರೆ ಸ್ಪರ್ಧಿಗಲಿಗೆ ಟಾಸ್ಕ್ ನಲ್ಲಿ ಕಾಟ ಕೊಡಲು ಆಂಡಿ ಮುಂದಾಗಿದ್ದಾರೆ.

ತನೀಶಾ, ಅರ್ಮಾನ್ ಬಳಿ ಹೋಗಿ ದಾಲ್ ಚಿಕನ್ ಎಂದರೆ ಏನು ಹೇಗೆ ತನ್ನನ್ನು ಎಲ್ಲರೂ ಮಂಗ ಮಾಡಿದರು ಎಂಬುದನ್ನು ವಿವರಿಸುತ್ತಾನೆ. ಏಕಾಂಗಿಯಾದ ಮೇಲೆ ಮತ್ತೊಮ್ಮೆ ಕಥಕ್ ಸ್ಟೆಪ್ಸ್ ಹಾಕಿ ಕುಣಿದಾಡಿದ್ದಾನೆ.

ಎಲ್ಲಿಗೆ ಗಿಫ್ಟ್

ಎಲ್ಲಿ ನಟಿಸಿರುವ ಮಿಕ್ಕಿ ವೈರಸ್ ಚಿತ್ರ ಬಿಡುಗಡೆಗೊಂಡಿದೆ ಆದರೆ, ಎಲ್ಲಿ ಮನೆಯಲ್ಲೇ ಉಳಿದಿದ್ದಾಳೆ. ಸ್ವಲ್ಪ ಮಂಕಾದಿದ್ದ ಎಲ್ಲಿಗೆ ಬಿಗ್ ಬಾಸ್ ಒಳ್ಳೆ ಗಿಫ್ಟ್ ಕೊಟ್ಟಿದ್ದಾರೆ. ಎಲ್ಲಿ ಅವ್ರಾಮ್ ಅವರ ತಂದೆ ತಾಯಿ ಬಿಗ್ ಬಾಸ್ ಮನೆಯಲ್ಲಿರುವ ಪುತ್ರಿಯನ್ನು ಭೇಟಿ ಮಾಡಿದ್ದಾರೆ. ಹಿಂದಿಯಲ್ಲಿ ತನ್ನ ಅಪ್ಪ ಅಮ್ಮನಿಗೆ ಐ ಲವ್ ಯೂ ಎಂದು ಎಲ್ಲಿ ಹೇಳಿದಳು

English summary
Bigg Boss 7 saw all the inmates who plotted and planned nominations taken under task. Everyone who were involved in the planning of this weeks nominations were asked to nominate one contestant who was most involved and he/she will be evicted immediately. As usual everyone escaped somehow making Andy the scape goat. Read who this happened.
Please Wait while comments are loading...