For Quick Alerts
ALLOW NOTIFICATIONS  
For Daily Alerts

  ಬಿಗ್ ಬಾಸ್ ನಿಂದ ಕುಶಾಲ್ ಔಟ್, ನಿಷೇಧ ಭೀತಿ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ 'ಬಿಗ್ ಬಾಸ್ 7' ರಿಯಾಲಿಟಿ ಶೋನಲ್ಲಿ ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ಮೇಲೆ ಹಲ್ಲೆ ಮಾಡಿದ ಆರೋಪದ ಹೊತ್ತು ಬಂಧನಕ್ಕೊಳಗಾಗಿದ್ದ ನಟ ಅರ್ಮಾನ್ ಕೊಹ್ಲಿ ಮತ್ತೆ ಬಿಗ್ ಬಾಸ್ ಮನೆಗೆ ರೀ ಎಂಟ್ರಿ
  ಕೊಡುತ್ತಿದ್ದಂತೆ ಮತ್ತೊಬ್ಬ ವಿವಾದಿತ ಸ್ಪರ್ಧಿ ಹೊರ ಬಿದ್ದಿರುವ ಸುದ್ದಿ ಸ್ಫೋಟಗೊಂಡಿದೆ

  ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಕುಶಾಲ್ ಥಂಡನ್ ಮನೆಯಿಂದ ಹೊರ ಬಿದ್ದಿದ್ದಾನೆ. ಕುಶಾಲ್ ಪರ ವಿರೋಧ ಪ್ರತಿಕ್ರಿಯೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ನಡುವೆ ಪ್ರೇಯಸಿ ಗೌಹರ್ ಬಿಟ್ಟು ಮನೆಯಿಂದ ಹೊರ ಬಿದ್ದಿರುವ ನೋವಿನಲ್ಲಿರುವ ಕುಶಾಲ್ ಗೆ ಮತ್ತೊಂದು ಆತಂಕ ಎದುರಾಗಿದೆ.

  ಕಲರ್ಸ್ ವಾಹಿನಿಯ ರಿಯಾಲಿಟಿ ಶೋನ ರೀಲ್ ಬದುಕಿನ ಆಟದಿಂದಾಗಿ ರಿಯಲ್ ಲೈಫ್ ಗೆ ತೊಂದರೆಯಾಗುತ್ತಿದೆ. ಅರ್ಮಾನ್ ಹಾಗೂ ಸೋಫಿಯಾ ಪ್ರಕರಣದಿಂದಾಗಿ ಕುಶಾಲ್ ಸಿನಿಮಾ ಕೆರಿಯರ್ ಗೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆ ಕಂಡು ಬಂದಿದೆ.

  ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ರನ್ನು ಅರ್ಮಾನ್ ವಿರುದ್ಧ ತಿರುಗಿ ಬೀಳುವಂತೆ ಮಾಡಿರುವ ಕುಶಾಲ್ ಮೇಲೆ ನಿಷೇಧ ಹೇರಲು ಬಾಲಿವುಡ್ ಚಿತ್ರರಂಗದ ದೊಡ್ಡ ತಲೆಗಳು ಚಿಂತನೆ ನಡೆಸಿರುವ ಸುದ್ದಿ ಹೊರ ಬಿದ್ದಿದೆ. ಅರ್ಮಾನ್ ಕೊಹ್ಲಿ ಅವರ ಅಪ್ಪ ರಾಜಕುಮಾರ್ ಕೊಹ್ಲಿ ಒಂದು ಕಾಲದ ಸೂಪರ್ ನಿರ್ದೇಶಕರಾಗಿದ್ದು, ಈಗಲೂ ಚಿತ್ರರಂಗದಲ್ಲಿ ಸಾಕಷ್ಟು ಒಳ್ಳೆ ಹೆಸರು ಉಳಿಸಿಕೊಂಡಿದ್ದಾರೆ. ಹೀಗಾಗಿ ಕುಶಾಲ್ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

  ಅರ್ಮಾನ್ ಗಿಂತ ಮಹಿಳೆ ಹಾಗೂ ಸಹ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಬಿದ್ದಿದ್ದು ಇದೇ ಕುಶಾಲ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

  ಬಚಾವಾದ ಏಜಾಜ್

  ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಗೌಹರ್ ಖಾನ್, ಕುಶಾಲ್ ಥಂಡನ್ ಹಾಗೂ ಏಜಾಜ್ ಖಾನ್ ಮನೆಯಿಂದ ಹೊರಬೀಳುವ ಭೀತಿ ಎದುರಿಸಿದ್ದರು. ಈ ಪೈಕಿ ಏಜಾಜ್ ಗೆ ಹೆಚ್ಚಿನ ಮತಗಳು ಸಿಕ್ಕಿ ಬಚಾವಾಗಿದ್ದಾನೆ. 'ಜಿಂದಾಗಿ ನಾ ಮಿಲೇಗಿ ದುಬಾರಾ'ಟಾಸ್ಕ್ ಗೆದ್ದ ಗೌಹರ್ ಕೂಡಾ ಸೇಫ್ ಆಗಿದ್ದಾಳೆ. ಆದರೆ, ಈ ಬಾರಿ ಏಜಾಜ್ ಮನೆಯಿಂದ ಹೊರ ಹಾಕಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.

  ಸಲ್ಮಾನ್ ಕೂಡಾ ಗರಂ

  ಅರ್ಮಾನ್ ಹಾಗೂ ಸೋಫಿಯಾ ಪ್ರಕರಣದ ಮೂಕ ಪ್ರೇಕ್ಷಕರಾಗಿದ್ದ ಕುಶಾಲ್ ಹಾಗೂ ಗೌಹರ್ ಮೇಲೆ ಸಲ್ಮಾನ್ ಖಾನ್ ಕೂಡಾ ಗರಂ ಆಗಿದ್ದಾನೆ ಎಂದು ತಿಳಿದು ಬಂದಿದೆ.

  ಉತ್ತಮ PR ಸಂಸ್ಥೆಗಳ ಸಹಾಯ ಪಡೆದು ಸಲ್ಮಾನ್ ಅವರನ್ನು ನಿಂದಿಸುತ್ತಾ ಹಾಗೂ ಸಲ್ಮಾನ್ ನನಗೆ ಸ್ಸಾರಿ ಕೇಳಿದರೂ ಎನ್ನುವ ಮೂಲಕ ಕುಶಾಲ್ ತನಗೆ ಬೇಕಾದ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದ. ಅದನ್ನೆಲ್ಲ ಮನೆಗೆ ರೀ ಎಂಟ್ರಿ ಕೊಟ್ಟ ಮೇಲೆ ಗೌಹರ್ ಬಳಿ ಹೇಳಿಕೊಂಡಿದ್ದ

  ವಿಜೆ ಆಂಡಿ, ಸಂಗ್ರಾಮ್ ಗೆ ಸಹಕಾರಿ

  ಅರ್ಮಾನ್ ಎಲ್ಲರೊಟ್ಟಿಗೆ ಕಿತ್ತಾಡಿಕೊಂಡು ಹೆಸರು ಕೆಡಿಸಿಕೊಂಡಿದ್ದಾನೆ. ಕುಶಾಲ್ ಹಾಗೂ ಗೌಹರ್ ಪ್ರೇಮ ಪ್ರಕರಣ ಹಾಗೂ ಏಜಾಜ್ ಭಗ್ನ ಪ್ರೇಮಿ ಪಾತ್ರ ನಾಟಕ ಎಲ್ಲವೂ ಪ್ರೇಕ್ಷಕರಿಗೆ ಅಷ್ಟಾಗಿ ಹಿಡಿಸುತ್ತಿಲ್ಲ. ಹೀಗಾಗಿ ವಿಜೆ ಆಂಡಿ ಹಾಗೂ ಸಂಗ್ರಾಮ್ ನಡುವೆ ಫೈನಲ್ ಹಣಾಹಣಿಗೆ ಪೈಪೋಟಿ ನಡೆಯುವ ಎಲ್ಲಾ ಸಾಧ್ಯತೆಯಿದೆ.

  ಈ ನಡುವೆ ತನೀಶಾ ಬಗ್ಗೆ ಪ್ರೇಕ್ಷಕರಲ್ಲಿ ಏನೋ ಅನುಕಂಪ, ಪ್ರೀತಿ ಮೊದಲಿನಿಂದಲೂ ಇದ್ದೇ ಇದೆ. ಈ ವಾರದ ಎಪಿಸೋಡುಗಳು ಬಿಗ್ ಬಾಸ್ ವಿಜೇತರನ್ನು ನಿರ್ಧರಿಸಲಿದೆ ಎನ್ನಲಾಗಿದೆ.

  ವಿವಾದಿತ ಟಾಸ್ಕ್

  ಕುಶಾಲ್ ಮತ್ತೆ ಮನೆಗೆ ಬಂದರೆ ಏನು ಆಗುತ್ತೋ ನನಗೆ ಗೊತ್ತಿಲ್ಲ ಎಂದು ಅರ್ಮಾನ್ ಹೇಳಿದ್ದಾನೆ. ನನ್ನ ಬಳಿ ಕುಶಾಲ್ ಕ್ಷಮೆಯಾಚಿಸಿಲ್ಲ. ಮನೆಗೆ ಬಂದರೆ ನಾನಿರುವುದಿಲ್ಲ ಎಂದು ತನೀಶಾ ನೇರವಾಗಿ ಹೇಳಿದ್ದಳು

  ಕುಶಾಲ್ ನಡೆಯೇನು?

  ಮೊದಲ ಬಾರಿ ಆಂಡಿ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಬಿದ್ದಿದ್ದ ಕುಶಾಲ್ ನಂತರ ಸಹ ಸ್ಪರ್ಧಿಗಳ ಮನೆಗೆ ತೆರಳಿ ಸ್ಸಾರಿ ಕೇಳಿ ಬಂದಿದ್ದ. ಕುಶಾಲ್ ಬದಲಾಗಿದ್ದಾನೆ ಎಂದು ಎಲ್ಲರೂ ಕೊಂಡಾಡಿದ್ದರು.

  ಆದರೆ, ಈಗ ಸೋಫಿಯಾ ಹಾಗೂ ಅರ್ಮಾನ್ ಕೊಹ್ಲಿ ಕುಟುಂಬದ ಸಮರ ಜಾರಿಯಲ್ಲಿರುವಾಗ ಜೊತೆಗೆ ಚಿತ್ರರಂಗದಿಂದ ನಿಷೇಧದ ಭೀತಿ ಎದುರಿಸುತ್ತಿರುವಾಗ ಕುಶಾಲ್ ನಡೆ ಕುತೂಹಲಕಾರಿಯಾಗಿದೆ. ಕೊಹ್ಲಿ ಸೀನಿಯರ್ ರಾಜಕುಮಾರ್ ಅವರು ಸೋಫಿಯಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸೋಫಿಯಾಗೆ ಕುಶಾಲ್ ಸಹಾಯ ಮಾಡುತ್ತಾನಾ?

  ಬಿಗ್ ಬಾಸ್ ತಂತ್ರವೇ?

  ಗೌಹರ್ ಜತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದ ಕುಶಾಲ್ ಗೆ ಕ್ಯಾಂಡಿಯನ್ನು ಎದುರುಗೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಮನೆಯಿಂದ ಹೊರಕ್ಕೆ ಹಾಕಲಾಯಿತು. ಈಗ ಅರ್ಮಾನ್ ಎಂಟ್ರಿ ನಂತರ ಇದೇ ತಂತ್ರ ಅನುಸರಿಸಿ ಕುಶಾಲ್ ನನ್ನು ಹೊರ ಹಾಕಲಾಗಿದೆ

  ಸಲ್ಲೂ ಚಮಚಾ ಅಲ್ಲ

  ಅರ್ಮಾನ್ ನಂತೆ ಸಲ್ಮಾನ್ ಖಾನ್ ಚಮಚಾ ಆಗಲು ಕುಶಾಲ್ ಒಪ್ಪಲಿಲ್ಲ ಅದಕ್ಕೆ ಮನೆಯಿಂದ ಹೊರಕ್ಕೆ

  English summary
  Armaan Kohli is back in the Bigg Boss 7 house after being granted bail against the complaint of physically abusing Sofia Hayat. Amidst all this drama a mid-week elimination happened and Kushal was asked to bid his final goodbye to Bigg Boss 7.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more