»   » ಮಿಸ್ಟರಿ ಬಾಕ್ಸ್ ರಹಸ್ಯ ಔಟ್, ಸಂಗ್ರಾಮ್ ಫಿನಾಲೆಗೆ

ಮಿಸ್ಟರಿ ಬಾಕ್ಸ್ ರಹಸ್ಯ ಔಟ್, ಸಂಗ್ರಾಮ್ ಫಿನಾಲೆಗೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸ್ವರ್ಗ ನರಕ ಕಲ್ಪನೆ ಹೊರ ತಂದ ಕಲರ್ಸ್ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಕೋರ್ಟ್ ಮೆಟ್ಟಿಲೇರಿದ್ದು, ಬಿಗ್ ಬಾಸ್ ನ ಸ್ಪರ್ಧಿ ಅರ್ಮಾನ್ ಕೊಹ್ಲಿ ವಿರುದ್ಧ ಮತ್ತೊಬ್ಬ ಸ್ಪರ್ಧಿ ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ದೂರು ನೀಡಿದ್ದು, ವೀಕೆಂಡ್ ಕಾ ವಾಹ್ ನಲ್ಲಿ ಬಂದ ಕುಶಾಲ್ ತನ್ನ ಪ್ರಿಯತಮೆ ಗೌಹರ್ ಗೆ ಕಾಟ ಕೊಡಬೇಡ ಎಂದು ಏಜಾಜ್ ಗೆ ಅವಾಜ್ ಹಾಕಿದ್ದು ಎಲ್ಲದರ ನಡುವೆ ಬಿಗ್ ಬಾಸ್ ಎಂದಿನಂತೆ ಸಾಗಿದೆ. ಉಳಿದಿರುವ ಸ್ಪರ್ಧಿಗಳ ಪೈಕಿ ಯಾರು ಫೈನಲ್ ಗೆ ಆಯ್ಕೆಯಾದ ಮೊದಲ ಸ್ಪರ್ಧಿ ಯಾರು ಎಂಬ ರಹಸ್ತ ಬಹಿರಂಗಗೊಂಡಿದೆ.

ಮಿಸ್ಟರಿ ಬಾಕ್ಸ್ ನಲ್ಲಿ ಏನಿದೆ ಎಂದು ಬಿಗ್ ಬಾಸ್ ಸ್ಪರ್ಧಿಗಳು ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು. ಆದರೆ,ಕೊನೆಗೂ ಸಮಸ್ಯೆ ಬಗೆಹರಿದಿದ್ದು, ಸಂಗ್ರಾಮ್ ಸಿಂಗ್ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾದ ಮೊದಲ ಲಕ್ಕಿ ಸ್ಪರ್ಧಿ ಎನಿಸಿದ್ದಾರೆ. ಏಜಾಜ್ ಖಾನ್, ತನೀಶಾ ಮುಖರ್ಜಿ, ವಿಜೆ ಆಂಡಿ ಹಾಗೂ ಗೌಹರ್ ಖಾನ್ ಅವರು ಈಗ ಪ್ರೇಕ್ಷಕರ ಕೃಪೆಗಾಗಿ ಕಾಯಬೇಕಿದೆ.

ಬೆಳಗ್ಗೆ ನಡೆದ ವೋಟಿಂಗ್ ನಲ್ಲಿ ಗೌಹರ್ ಹಾಗೂ ಆಂಡಿ ಇಬ್ಬರು ಸಂಗ್ರಾಮ್ ಪರ ಮತ ಹಾಕಿದರೆ, ತನೀಶಾ ಹಾಗೂ ಆಂಡಿ ಕಿತ್ತಾಟದಲ್ಲಿ ಮತ ಹಾಕಲಿಲ್ಲ. ಆಂಡಿ ಸುಮ್ಮನಿದ್ದುಬಿಟ್ಟ.ಕೊನೆಗೆ ಬಾಕ್ಸ್ ಓಪನ್ ಮಾಡಿದ ಸಂಗ್ರಾಮ್ ಹಿರಿ ಹಿರಿ ಹಿಗ್ಗಿ ಬಿಟ್ಟ. 'First Finalist Of Bigg Boss 7' ಎಂಬ ಪತ್ರ ಕಂಡು ಹರ್ಷದಿಂದ ಕುಣಿದಾಡಿದ. ಮಿಕ್ಕ ಸ್ಪರ್ಧಿಗಳು ಸಪ್ಪೆ ಮುಖದಲ್ಲೇ ಸಂಗ್ರಾಮ್ ಗೆ ವಿಶ್ ಮಾಡಿದರು.

ದಿನ ಗಣನೆ

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭಗೊಂಡಿದೆ. ಈ ವಾರ ಆದಷ್ಟು ಜಗಳ ಕದನಗಳಿಲ್ಲದೆ ಸಂಭ್ರಮಾಚರಣೆಯಲ್ಲಿ ಬಿಗ್ ಬಾಸ್ ಮನೆ ಮುಳುಗಲಿದೆ

ಮಿಸ್ಟರಿ ಬಾಕ್ಸ್

ಮಿಸ್ಟರಿ ಬಾಕ್ಸ್ ಹಾಗೂ ಅದರಲ್ಲಿರುವ ಕಾರ್ಡ್ ಬಗ್ಗೆ ಎಲ್ಲಾ ಸ್ಪರ್ಧಿಗಳಲ್ಲೂ ಕುತೂಹಲ ತುಂಬಿತ್ತು. ಆದರೆ, ಏಜಾಜ್ ಸರಿಯಾಗಿ ಊಹಿಸಿದ್ದ. ಇದು ಟಿಕೆಟ್ ಟು ಗ್ರ್ಯಾಂಡ್ ಫಿನಾಲೆ ಆಗಲಿದೆ. ಬಹುಶಃ ಸಂಗ್ರಾಮ್ ಗೆ ಸಿಗಲಿದೆ ಎಂದಿದ್ದ. ಕೊನೆಗೆ ಹಾಗೆ ಆಯಿತು

ವಿಜೆ ಆಂಡಿಗೆ ಮಿಸ್

ಕಳೆದ ವಾರದ ಎಲಿಮಿನೇಷನ್ ನಂತರ ವಿಜೆ ಆಂಡಿ, ಸಂಗ್ರಾಮ್ ಹಾಗೂ ತನೀಶಾ ಫೈನಲ್ ತಲುಪುವ ಪ್ರಬಲ ಸ್ಪರ್ಧಿಗಳೆನಿಸಿದ್ದರು. ಈ ಪೈಕಿ ತನೀಶಾ ಮತ ಚಲಾಯಿಸದೆ ಆಂಡಿ ಜತೆ ಕಿತ್ತಾಡಿದರೆ, ಆಂಡಿ ತಟಸ್ಥನಾಗಿ ಉಳಿದಿದ್ದು ಸಂಗ್ರಾಮ್ ಗೆ ಲಾಭದಾಯಕವಾಯಿತು

ತನೀಶಾಗೆ ಸಲಹೆ

ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ತಕ್ಷಣ ಅರ್ಮಾನ್ ಕೊಹ್ಲಿಯನ್ನು ಮದುವೆಯಾಗಿ ಬಿಡು ಎಂದು ತನೀಶಾಗೆ ಸಲಹೆ ನೀಡಿದ್ದ ಸಂಗ್ರಾಮ್ ಸಿಂಗ್

ಗೌಹರ್ ಖಾನ್ ಜತೆ

ವಿವಾದಿತ ಸ್ಪರ್ಧಿ ಗೌಹರ್ ಖಾನ್ ಜತೆ ಕೂಡಾ ಸಂಗ್ರಾಮ್ ಒಳ್ಳೆ ರೀತಿಯಲ್ಲಿ ನಡೆದು ಕೊಂಡು ಮೆಚ್ಚುಗೆ ಗಳಿಸಿದ್ದು ವರವಾಗಿದೆ.

ಅರ್ಮಾನ್ ಜತೆ ಜಗಳ

ಸದಾಕಾಲ ಸೌಮ್ಯವಾಗಿರುತ್ತಿದ್ದ ಸಂಗ್ರಾಮ್ ಸಿಂಗ್ ಒಮ್ಮೆ ಮಾತ್ರ ಅರ್ಮಾನ್ ಕೊಹ್ಲಿ ಜತೆ ಕೂಗಾಡಿದ್ದು ಅಚ್ಚರಿ ಮೂಡಿಸಿತ್ತು

ಜೀವದ ಗೆಳೆಯರು

ವಿಜೆ ಆಂಡಿ ಹಾಗೂ ಸಂಗ್ರಾಮ್ ಸಿಂಗ್ ಇಬ್ಬರು ಜೀವದ ಗೆಳೆಯರಾಗಿಬಿಟ್ಟಿದ್ದಾರೆ. ಇದು ಇಬ್ಬರನ್ನು ಫೈನಲ್ ಹಂತದ ತನಕ ತಂದಿದೆ. ಕ್ಯಾಪ್ಟನ್ ಆಗಿ ಕೂಡಾ ಸಂಗ್ರಾಮ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ

ರಜತ್ ಕಪೂರ್ ಶೋ

ರಜತ್ ಕಪೂರ್ ಅದಾಲತ್ ಶೋನಿಂದಾಗಿ ಸ್ಪರ್ಧಿಗಳ ನಡುವಿನ ಸಂಬಂಧ ಬಹಿರಂಗಗೊಂಡು ಸಂಗ್ರಾಮ್ ಗೆ ಹೆಚ್ಚಿನ ಬಲಬಂದಿತು

English summary
Bigg Boss 7 was in a chaotic situation when the mystery box arrived. But, finally its solved ! Sangram Singh took the initiative to open it and what he got was a surprise to all. Sangram got the ticket to directly enter the finale and become the very first finalist of this season.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada