For Quick Alerts
ALLOW NOTIFICATIONS  
For Daily Alerts

ಬಿಗ್ ಬಾಸ್ ನಲ್ಲಿ ಅಚ್ಚರಿ ಶಿಲ್ಪಾ ಮನೆಯಿಂದ ಹೊರಕ್ಕೆ

By ಜೇಮ್ಸ್ ಮಾರ್ಟಿನ್
|

ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ಬಂದಿರುವ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಎಲ್ಲರ ನಿರೀಕ್ಷೆ ಮೀರಿ ಪ್ರಬಲ ಸ್ಪರ್ಧಿ ಎನ್ನಲಾಗಿದ್ದ ಶಿಲ್ಪಾ ಅಗ್ನಿಹೋತ್ರಿ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ. ಅಫ್ ಕೋರ್ಸ್ ಇತರೆ ಸ್ಪರ್ಧೆಗಳ ವೋಟೌಟ್ ಹಾಗೂ ಪ್ರೇಕ್ಷಕರ ಅಭಿಮತ ಇದಕ್ಕೆ ಕಾರಣ ಎನ್ನಬಹುದಾದರೂ ಶಿಲ್ಪಾ ನಿರ್ಗಮನ ಸಲ್ಮಾನ್ ಗೂ ಅಚ್ಚರಿಯಾಗಿರಲಿಕ್ಕೂ ಸಾಕು.

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಇತ್ತೀಚೆಗಷ್ಟೇ ಎಲಿಮಿನೇಟ್ ಆಗಿದ್ದ ಅನಿತಾ ಅಡ್ವಾಣಿ ಅವರು ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನ ಬಗ್ಗೆ ಏನೂ ಸತ್ಯ ಹೇಳದೆ ಹೋಗಿದ್ದರು. ಖನ್ನಾ ಜತೆಗಿನ ಲಿವ್ ಇನ್ ಪಾರ್ಟ್ನರ್ ಎಂದೇ ಖ್ಯಾತಿ ಗಳಿಸಿದ್ದ ಅನಿತಾ ಅಡ್ವಾಣಿ ಅವರು ಲೈವ್ ಚಾಟ್ ನಲ್ಲಿ ಒಂದಷ್ಟು ಸತ್ಯ ಹೊರಹಾಕಿದ್ದರು.

ಮೂರು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅನಿತಾ ಅವರಿಗೂ ಮುನ್ನ ಹಜೇಲ್ ಕೀಚ್ ಹಾಗೂ ರತನ್ ರಜಪೂತ್ ಅವರು ಮನೆಯಿಂದ ಹೊರಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಜನರಿಗೆ ಮನರಂಜನೆ ನೀಡುವಲ್ಲಿ ಈ ಮೂವರು ಸ್ಪರ್ಧಿಗಳು ವಿಫಲರಾಗಿದ್ದರಲ್ಲದೆ ಕೆಲವು ಟಾಸ್ಕ್ ಗಳಲ್ಲಿ ಉತ್ತಮ ಸಾಧನೆ ತೋರದಿರುವುದೇ ಇವರನ್ನು ಮನೆಯಿಂದ ಹೊರಹಾಕಲು ಪ್ರಮುಖ ಕಾರಣವಾಗಿತ್ತು.

ಆದರೆ, ಶಿಲ್ಪಾ ಮನೆಯ ಟಾಸ್ಕ್ ಗಳಲ್ಲಿ ಎಲ್ಲರ ಪ್ರೀತಿ ಗಳಿಸುವಲ್ಲಿ ಸಫಲರಾಗಿದ್ದಳು. ಕೆಲವೊಮ್ಮೆ ಹುಚ್ಚುಚ್ಚಾಗಿ ಅರಚಿದ್ದು ಬಿಟ್ಟರೆ ಶಿಲ್ಪಾ ಎಲ್ಲರಿಗೂ ಮೆಚ್ಚುಗೆಯಾದ ಸ್ಪರ್ಧಿಯಾಗಿದ್ದಳು. ಪತಿದೇವ ಅಪೂರ್ವ ಅಗ್ನಿಹೋತ್ರಿ ಮನೆಯ ಕ್ಯಾಪ್ಟನ್ ಆದ ಬೆನ್ನಲ್ಲೇ ಶಿಲ್ಪಾ ನಿರ್ಗಮನವಾಗಿದ್ದು ವಿಶೇಷ...

ಅದಲು ಬದಲು ಕಾರ್ಯಕ್ರಮ

ಅದಲು ಬದಲು ಕಾರ್ಯಕ್ರಮ

ಸ್ವರ್ಗವಾಸಿಗಳು ನರಕಕ್ಕೆ ನರಕದವರು ಸ್ವರ್ಗಕ್ಕೆ ಹಾರಿದ ಜಗಳ ಕಾಯುವುದಕ್ಕೆ ಬಿಗ್ ಬಾಸ್ ಫುಲ್ ಸ್ಟಾಪ್ ಹಾಕಿದ್ದಾರೆ. ಎಲ್ಲರನ್ನು ಸ್ವರ್ಗಕ್ಕೆ ಕಳಿಸಿ ನರಕವನ್ನು ನಿರ್ನಾಮಗೊಳಿಸಿದ್ದಾರೆ. ಜೊತೆಗೆ ನಗ್ನ ಯೋಗ ಪಟು ಎಂಬ ಖ್ಯಾತಿ ಗಳಿಸಿರುವ ವಿವೇಕ್ ಹೊಸ ಎಂಟ್ರಿ ಕೊಟ್ಟಿದ್ದಾರೆ. ಆಂಡಿ ಹಾಗೂ ಅರ್ಮಾನ್ ವಾಗ್ಯುದ್ಧ ಇನ್ನೂ ಮುಗಿದಿಲ್ಲ ಜತೆ ಅರ್ಮಾನ್ ವಿರುದ್ಧ ಶಿಲ್ಪಾ ಅರಚಿದ್ದು ಮುಳುವಾಗಿದೆ. ಅಪೂರ್ವ ಎಷ್ಟೇ ಸಂಭಾಳಿಸಿದರೂ ಶಿಲ್ಪಾ ನಿಯಂತ್ರಣ ತಪ್ಪಿದ್ದಳು

ತನೀಶಾ ಇನ್ ಡೇಂಜರ್

ತನೀಶಾ ಇನ್ ಡೇಂಜರ್

ಒಂದು ಕಾಲದಲ್ಲಿ ಮನೆಯ ನಾಯಕಿಯಾಗಿ ಮೆರೆದಿದ್ದ ತನೀಶಾ ಈಗ ಅರ್ಮಾನ್ ಜತೆ ಸಹವಾಸದಿಂದ ಡೇಂಜರ್ ಜೋನ್ ಗೆ ಬಂದಿದ್ದಾಳೆ. ತನೀಶಾ ಜತೆಗೆ ಶಿಲ್ಪಾ, ಕಾಮ್ಯಾ, ಆಂಡಿ ಹಾಗೂ ಅರ್ಮಾನ್ ಇದ್ದಾರೆ.

ಒಂದು ಮೂಲಗಳ ಪ್ರಕಾರ ಶಿಲ್ಪಾ ಮನೆಯಿಂದ ಹೊರಬಿದ್ದು ಮನೆಯವರ ನೈಜ ಮುಖಗಳನ್ನು ಕಂಡು ಮತ್ತೆ ಹಿಂತಿರುಗುತ್ತಾರೆ ಎನ್ನಲಾಗಿದೆ.

ದಂಪತಿ ಕಿಸ್ಸಿಂಗ್

ದಂಪತಿ ಕಿಸ್ಸಿಂಗ್

ಶಿಲ್ಪಾ ಹಾಗೂ ಅಪೂರ್ವ ಅಗ್ನಿಹೋತ್ರಿ ಮೊದಲಿಗೆ ಸ್ವರ್ಗ-ನರಕದಲ್ಲಿ ಉಳಿದು ವಿರಹ ವೇದನೆ ಅನುಭವಿಸಿದ್ದರು ನಂತರ ಒಂದಾದ ಮೇಲೆ ಕಿಸ್ಸಿಂಗ್, ಹಗ್ಗಿಂಗ್ ಜೋರಾಗಿ ನಡೆದಿತ್ತು ಇದರಲ್ಲಿ ನಾಟಕೀಯತೆ ಇಲ್ಲದಿದ್ದರೂ ಪ್ರೇಕ್ಷಕರಿಗೆ ಇದು ಯಾಕೋ ಅತಿಯಾಯ್ತು ಎಂದೆನಿಸಿದ್ದು ನಿಜ. ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಕೊಟ್ಟಿರುವ ದೂರಿನಲ್ಲಿ ದಂಪತಿಗಳ ಕಿಸ್ಸಿಂಗ್ ಸೀನ್ ಕೂಡಾ ಇದೆ

ಅಪೂರ್ವ ಕಥೆ ಏನು

ಅಪೂರ್ವ ಕಥೆ ಏನು

ನಾಯಕನಾಗಿರುವ ಅಪೂರ್ವ ಎಲ್ಲರಿಗೂ ಬೇಕಾದ ಸ್ಪರ್ಧಿ ಎನಿಸಿದ್ದರೂ ಕೆಲವರು ಹಿಂಬದಿಯಿಂದ ಕತ್ತಿ ಮಸೆಯುತ್ತಿದ್ದಾರೆ.ಮುಂಚೆಲ್ಲ ಪತ್ನಿ ಶಿಲ್ಪಾ ಟೊಂಕಕಟ್ಟಿಕೊಂದು ಗಂಡನ ಪರ ಜಗಳಕ್ಕೆ ನಿಲ್ಲುತ್ತಿದ್ದಳು. ಈಗ ಒಬ್ಬಂಟಿಯಾಗಿ ಅಪೂರ್ವ ಯಾವ ರೀತಿ ಆಟವಾಡುತ್ತಾನೆ ಕಾದು ನೋಡಬೇಕಿದೆ.

ಟಾಸ್ಕ್ ಪ್ರವೀಣೆ

ಟಾಸ್ಕ್ ಪ್ರವೀಣೆ

ಮೊದಲಿನಿಂದಲೂ ಅಡುಗೆ ಮನೆ ನಿರ್ವಹಣೆ ವಹಿಸಿಕೊಂಡಿದ್ದ ಶಿಲ್ಪಾ ಆರಂಭದ ವಾರಗಳಲ್ಲಿ ತನೀಶಾ ನಾಯಕಿಯಾದರೂ ಮನೆ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಳು ಹೀಗಾಗಿ ಆಕೆ ಬಗ್ಗೆ ಪ್ರೇಕ್ಷಕರಿಗೂ ಮೆಚ್ಚುಗೆ ಇತ್ತು. ಆದರೆ, 20ನೇ ದಿನದ ನಂತರ ಶಿಲ್ಪಾ ಉಗ್ರ ರೂಪಿಯಾಗಿ ಅರ್ಮಾನ್ ಸಮಕ್ಕೂ ನಿಂತು ಅರಚತೊಡಗಿತು ಸಹ್ಯ ಎನಿಸಲಿಲ್ಲ

ಅರ್ಮಾನ್ ಜತೆ ಜಗಳ

ಅರ್ಮಾನ್ ಜತೆ ಜಗಳ

ಅರ್ಮಾನ್ ಜತೆ ಮತ್ತೆ ಮತ್ತೆ ಜಗಳವಾಡುತ್ತಿದ್ದ ಶಿಲ್ಪಾ ಮೆಡಲ್ ಕದಿಯುವ ಟಾಸ್ಕ್ ನಲ್ಲಿ ವಿಚಿತ್ರವಾಗಿ ವರ್ತಿಸಿದ್ದು ಪ್ರೇಕ್ಷಕರಿಗೂ ಇಷ್ಟವಾಗಲಿಲ್ಲ. ಉಳಿದ ಸ್ಪರ್ಧಿಗಳಿಂದಲೂ ಆಕ್ಷೇಪಕ್ಕೆ ಒಳಗಾದಳು. ಕಳೆದ ವಾರವಂತೂ ಹುಚ್ಚಾಟ ಹೆಚ್ಚಾಯಿತು. ಈದ್ ಸಂದರ್ಭದಲ್ಲಿ ಬಿಗ್ ಬಾಸ್ ಕೊಟ್ಟ ಟ್ವಿಸ್ಟ್ ಗೆ ಪ್ರತಿಕ್ರಿಯಿಸಿದ್ದ ರೀತಿ ಬಾಲಿಶವಾಗಿತ್ತು.

ಶಿಲ್ಪಾ ಮರಳಲು ಸಾಧ್ಯವೆ?

ಶಿಲ್ಪಾ ಮರಳಲು ಸಾಧ್ಯವೆ?

ಶಿಲ್ಪಾ ಅಗ್ನಿಹೋತ್ರಿ ಸದ್ಯಕ್ಕಂತೂ ಮತ್ತೆ ಮನೆಗೆ ಬರುವ ಸಾಧ್ಯತೆಯಿಲ್ಲ. ಯೋಗಪಟು ವಿವೇಕ್ ಆಗಮನವಾಗಿರುವುದರಿಂದ ಇನ್ನೆರಡು ವಾರವಾದರೂ ಶಿಲ್ಪಾ ಕಾಯಬೇಕು. ಅಥವಾ ಶಿಲ್ಪಾರನ್ನು ಅತಿಥಿಯಾಗಿ ಮನೆಗೆ ದೀಪಾವಳಿ ಸಮಯದಲ್ಲಿ ಕಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾವುದಕ್ಕೂ ಕಾದು ನೋಡೋಣ

English summary
Bigg Boss 7 will have Salman Khan eliminating Shilpa Agnihotri tonight. Shilpa contested along with her husband Apurva Agnihotri this season. She was one of the strongest contestants in the house and it was shocking to see her sent out.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more