For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ವಿಜೇತೆ ಗೌಹರ್ ಕುಶಾಲ್ ಇನ್ ಗೋವಾ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ 7ನೇ ಆವೃತ್ತಿಯಲ್ಲಿ ಎಲ್ಲಾ ನಿರೀಕ್ಷೆಗಳನ್ನು ಮೀರಿ ಕಿರೀಟ ಧರಿಸಿದ ರೂಪದರ್ಶಿ, ನಟಿ ಗೌಹರ್ ಖಾನ್ ಈಗ ಏನು ಮಾಡುತ್ತಿದ್ದಾಳೆ? ಎಂಬ ಪ್ರಶ್ನೆಗೆ ತಕ್ಷಣವೇ ಉತ್ತರ ಸಿಕ್ಕಿದ್ದು, ಲೋನಾವಾಲದ ಬಿಗ್ ಬಾಸ್ ಮನೆಯಿಂದ ಗೋವಾದ ಕಡಲ ತೀರಕ್ಕೆ ಹಾರಿದ್ದಾಳೆ. ಅಫ್ ಕೋರ್ಸ್ ಆಕೆ ಜತೆಗೆ ಗೆಣೆಕಾರ ಕುಶಾಲ್ ಥಂಡನ್ ಕೂಡಾ ಇದ್ದಾನೆ.

  ಮುಂಬೈ ಸಮೀಪದ ಲೋನವಾಲದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ 50 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪಡೆದು ಗೌಹರ್ ಖಾನ್ ಬೀಗಿದ್ದಳು. ಗೌಹರ್ ಗೆ ಪ್ರಬಲ ಸ್ಪರ್ಧಿ ಎನ್ನಲಾದ ತನಿಶಾ ಮುಖರ್ಜಿ ಕೊನೆ ಗಳಿಗೆ ತನಕ ಗೆಲ್ಲುವ ಭರವಸೆ ಹುಟ್ಟಿಸಿದ್ದಳು. ಆದರೆ, ಅಂತಿಮ ಸುತ್ತಿನಲ್ಲಿ ಪ್ರೇಕ್ಷಕ ಪ್ರಭುಗಳು ಗೌಹರ್ ಪರ ನಿಂತರು.

  ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸವನ್ನು ನೋಡಿದರೆ ಮಹಿಳಾ ಸ್ಪರ್ಧಿಯೊಬ್ಬರು ಪ್ರಶಸ್ತಿ ಗೆದ್ದಿರುವುದು ಇದು ನಾಲ್ಕನೇ ಬಾರಿ. ಅಂದ ಹಾಗೆ ಗೌಹರ್ ಖಾನ್ ಈ ಮುಂಚೆ ಕೂಡಾ ರಿಯಾಲಿಟಿ ಶೋಗಳಲ್ಲಿ ತನ್ನ ಕಮಾಲ್ ತೋರಿಸಿದ್ದಳು. ಸದ್ಯಕ್ಕೆ ಗೋವಾದಲ್ಲಿರುವ ಬಿಗ್ ಬಾಸ್ ನ ಲವ್ ಬರ್ಡ್ಸ್ ಗಳ ಚಿತ್ರಗಳನ್ನು ಇಲ್ಲಿ ನೋಡಿ

  ಲೀಗಲ್ ನೋಟಿಸ್

  ಲೀಗಲ್ ನೋಟಿಸ್

  ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡುವ ಸ್ಪರ್ಧೆಗಳು ಅಮಾನವೀಯವಾಗಿದೆ. ಕುರ್ಚಿಯಲ್ಲಿ ಕುಳಿತು ಎಲೆಕ್ಟ್ರಿಕ್ ಶಾಕ್ ನೀಡುವುದು, ಸಗಣಿಯಲ್ಲಿ ಸ್ನಾನ ಮಾಡುವುದು, 12 ಗಂಟೆ ಕುಳಿತ ಕಡೆ ಕುಳಿತಿರುವ ಶಿಕ್ಷೆ, ಸ್ಪರ್ಧಿಗಳಿಗೆ ವಿಚಿತ್ರ ಕೇಶ ವಿನ್ಯಾಸ ನೀಡುವುದು, ಸ್ಪರ್ಧಿಗಳನ್ನು ಉಪವಾಸ ಕೂರಿಸುವುದು, ಪರಸ್ಪರ ಅತಿಯಾಗಿ ಮುದ್ದಾಡುವುದು, ಪ್ರೇಮಿಗಳಂತೆ ವರ್ತಿಸುವುದು ಇವೆ ಮುಂತಾದ ಶಿಕ್ಷೆಗಳು ಆಕ್ಷೇಪಾರ್ಹ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಲರ್ಸ್ ವಾಹಿನಿಗೆ ಲೀಗಲ್ ನೋಟಿಸ್ ಜಾರಿ ಮಾಡಿತ್ತು

  ವಾಹಿನಿ ಸಮರ್ಥನೆ

  ವಾಹಿನಿ ಸಮರ್ಥನೆ

  ಬಿಗ್ ಬಾಸ್ ಕಾರ್ಯಕ್ರಮ 7 ವರ್ಷ ವಯಸ್ಕರಿಂದ 70 ವರ್ಷ ವಯಸ್ಕರು ನೋಡುವಂತೆ ರೂಪಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ, Broadcasting Content Complaints Council ನಿರ್ದೇಶನದಂತೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕುಟುಂಬಸ್ಥರು ಕುಳಿತು ನೋಡುವಂತೆ ಕಾರ್ಯಕ್ರಮವನ್ನು ಕಾಯ್ದುಕೊಳ್ಳಲಾಗಿದೆ ಎಂದು ವಾಹಿನಿ ಹೇಳಿತ್ತು.

  ಬಿಗ್ ಬಾಸ್ ನ ಲವ್ ಬರ್ಡ್ಸ್

  ಬಿಗ್ ಬಾಸ್ ನ ಲವ್ ಬರ್ಡ್ಸ್

  ಬಿಗ್ ಬಾಸ್ ನ ಲವ್ ಬರ್ಡ್ಸ್ ಗೋವಾದ ರೆಸ್ಟೋರೆಂಟ್ ವೊಂದರಲ್ಲಿ ರೆಸ್ಟ್ ಮಾಡುತ್ತಿದ್ದಾರೆ

  ಕುಶಾಲ್ ನಿರಾಳ

  ಕುಶಾಲ್ ನಿರಾಳ

  ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ರನ್ನು ಅರ್ಮಾನ್ ವಿರುದ್ಧ ತಿರುಗಿ ಬೀಳುವಂತೆ ಮಾಡಿರುವ ಕುಶಾಲ್ ಮೇಲೆ ನಿಷೇಧ ಹೇರಲು ಬಾಲಿವುಡ್ ಚಿತ್ರರಂಗದ ದೊಡ್ಡ ತಲೆಗಳು ಚಿಂತನೆ ನಡೆಸಿರುವ ಸುದ್ದಿ ಹೊರ ಬಿದ್ದಿತ್ತು. ಅರ್ಮಾನ್ ಕೊಹ್ಲಿ ಅವರ ಅಪ್ಪ ರಾಜಕುಮಾರ್ ಕೊಹ್ಲಿ ಒಂದು ಕಾಲದ ಸೂಪರ್ ನಿರ್ದೇಶಕರಾಗಿದ್ದು, ಈಗಲೂ ಚಿತ್ರರಂಗದಲ್ಲಿ ಸಾಕಷ್ಟು ಒಳ್ಳೆ ಹೆಸರು ಉಳಿಸಿಕೊಂಡಿದ್ದಾರೆ. ಹೀಗಾಗಿ ಕುಶಾಲ್ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಕುಶಾಲ್ ಈ ಭೀತಿಗಳಿಂದ ದೂರಾಗಿದ್ದಾರೆ.

  ಸಲ್ಮಾನ್ ಕೂಡಾ ಗರಂ

  ಸಲ್ಮಾನ್ ಕೂಡಾ ಗರಂ

  ಅರ್ಮಾನ್ ಹಾಗೂ ಸೋಫಿಯಾ ಪ್ರಕರಣದ ಮೂಕ ಪ್ರೇಕ್ಷಕರಾಗಿದ್ದ ಕುಶಾಲ್ ಹಾಗೂ ಗೌಹರ್ ಮೇಲೆ ಸಲ್ಮಾನ್ ಖಾನ್ ಕೂಡಾ ಗರಂ ಆಗಿದ್ದಾನೆ ಎಂದು ತಿಳಿದು ಬಂದಿದೆ. ಉತ್ತಮ PR ಸಂಸ್ಥೆಗಳ ಸಹಾಯ ಪಡೆದು ಸಲ್ಮಾನ್ ಅವರನ್ನು ನಿಂದಿಸುತ್ತಾ ಹಾಗೂ ಸಲ್ಮಾನ್ ನನಗೆ ಸ್ಸಾರಿ ಕೇಳಿದರೂ ಎನ್ನುವ ಮೂಲಕ ಕುಶಾಲ್ ತನಗೆ ಬೇಕಾದ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದ. ಅದನ್ನೆಲ್ಲ ಮನೆಗೆ ರೀ ಎಂಟ್ರಿ ಕೊಟ್ಟ ಮೇಲೆ ಗೌಹರ್ ಬಳಿ ಹೇಳಿಕೊಂಡಿದ್ದ

  ಬಿಗ್ ಬಾಸ್ ತಂತ್ರವೇ?

  ಬಿಗ್ ಬಾಸ್ ತಂತ್ರವೇ?

  ಗೌಹರ್ ಜತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದ ಕುಶಾಲ್ ಗೆ ಕ್ಯಾಂಡಿಯನ್ನು ಎದುರುಗೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಮನೆಯಿಂದ ಹೊರಕ್ಕೆ ಹಾಕಲಾಯಿತು. ಈಗ ಅರ್ಮಾನ್ ಎಂಟ್ರಿ ನಂತರ ಇದೇ ತಂತ್ರ ಅನುಸರಿಸಿ ಕುಶಾಲ್ ನನ್ನು ಹೊರ ಹಾಕಲಾಗಿತ್ತು.

  ನಂತರ ಏಜಾಜ್ ಹಾಗೂ ಗೌಹರ್ ನಡುವಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಲಾಯಿತು. ಹೀಗಾಗಿ, ಗೌಹರ್ ನತ್ತ ಪ್ರೇಕ್ಷಕರ ಸಿಂಥತಿ ತಿರುಗಿತ್ತು. ತನೀಶಾ ವೈಯಕ್ತಿಕವಾಗಿ ಸರಳತೆಯಿಂದ ಆಟವಾಡಿದರೂ ಗೌಹರ್ ಟಾಸ್ಕ್ ಗಳಲ್ಲಿ ಮೆರೆದ ತಂತ್ರಗಾರಿಕೆ ಕೊನೆಯಲ್ಲಿ ಆಕೆಯನ್ನು ಗೆಲ್ಲಿಸಿತ್ತು.

  English summary
  Gauhar Khan was spotted in Goa holidaying post Bigg Boss 7 success with her current boyfriend Kushal Tandon. The lovebirds met on the show, became friend and fell in love with each other on the show. The couple became a rage with their on-(small)screen chemistry and romance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X