»   » ಬಿಗ್ ಬಾಸ್ ಮನೆಯಲ್ಲಿ ಗಂಡ ಹೆಂಡತಿ ಸರಸ ವಿರಸ

ಬಿಗ್ ಬಾಸ್ ಮನೆಯಲ್ಲಿ ಗಂಡ ಹೆಂಡತಿ ಸರಸ ವಿರಸ

Posted By:
Subscribe to Filmibeat Kannada

ಈಟಿವಿ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ವೀಕ್ಷಕ ಬಳಗವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಏಳನೆ ದಿನದ ಆರಂಭ ಬೆಳಗ್ಗೆ 8ಕ್ಕೆ "ಹಳೆ ಪಾತ್ರೆ ಹಳೆ ಕಬ್ಬಿಣ..." ಹಾಡಿನ ಮೂಲಕ ಆರಂಭವಾಯಿತು. ಈ ಹಾಡಿಗೆ ಎಲ್ಲ ಸೆಲೆಬ್ರಿಟಿಗಳು (?) ಮೈಮುರಿದು ಕುಣಿದು ಹಗುರಾದರು.

ನರ್ಸ್ ಜಯಲಕ್ಷ್ಮಿ ಮನೆಯಿಂದ ಹೊರಬಿದ್ದ ಮೇಲೆ 'ಬಿಗ್ ಬಾಸ್' ಮನೆಯ ವಾತಾವರಣದಲ್ಲೂ ಹೆಚ್ಚಿನ ಬದಲಾವಣೆಗಳೇನು ಕಂಡುಬರಲಿಲ್ಲ. ಎಂದಿನಂತೆ ಅವರ ಕಾಲು ಇವರು ಇವರ ಕಾಲು ಅವರು ಎಳೆಯುವುದರಲ್ಲೇ ಕಾಲ ಕಳೆದರು.

ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ದಿನದ ಬಹುಪಾಲು ಸಮಯವನ್ನು ನಿದ್ದೆಯಲ್ಲೇ ಕಳೆದ ನರೇಂದ್ರ ಬಾಬು ಶರ್ಮಾ ಅವರು ಬಿಗ್ ಬಾಸ್ ಕಣ್ಣಿಗೆ ಬಿದ್ದು ಶಿಕ್ಷೆಗೂ ಗುರಿಯಾದರು. ಶರ್ಮಾ ಅವರ ಕೈಗೆ ಬಿಗ್ ಬಾಸ್ ಸ್ಲೇಟು ಕೊಟ್ಟು ಶಿಕ್ಷೆ ವಿಧಿಸಿದರು.

ಈ ಬಾರಿ ಮನೆಯಿಂದ ಹೊರಹೋಗಲು ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ. ಸಂಜನಾ, ನಿಖಿತಾ, ಅರುಣ್ ಸಾಗರ್ ಮತ್ತು ನರೇಂದ್ರ ಬಾಬು ಶರ್ಮಾ. ಇವರಲ್ಲಿ ಈ ವಾರ ಯಾರು ಔಟ್ ಆಗುತ್ತಾರೆ ಎಂಬುದು ಗೊತ್ತಾಗಬೇಕಾದರೆ ಶುಕ್ರವಾರತನಕ (ಏ.5) ಕಾಯಬೇಕು.

ಐದಾರು ತಿಂಗಳಲ್ಲಿ ನಿಖಿತಾ ಮದುವೆಯಂತೆ

ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ನಿಖಿತಾ ಹಾಗೂ ತಿಲಕ್ ಇಬ್ಬರೂ ಮದುವೆ ಬಗ್ಗೆ ಮಾತನಾಡಿಕೊಂಡರು. ಇನ್ನೂ ಐದಾರು ತಿಂಗಳಲ್ಲಿ ನನ್ನ ಮದುವೆ ಎಂದರು ನಿಖಿತಾ. ತಿಲಕ್ ಸಹ ಅಷ್ಟೇ ಶೀಘ್ರದಲ್ಲೇ ತಾವು ಹಸೆಮಣೆ ಏರುವುದಾಗಿ ತಿಳಿಸಿದರು.

ತಿಲಕ್ ಗೆ ಸಂಜನಾ ಹಿಗ್ಗಾಮುಗ್ಗಾ ತರಾಟೆ

ಅಡುಗೆಮನೆಯಲ್ಲಿ ಇನ್ನೊಂದು ಗಲಾಟೆ ಶುರುವಾಗಿತ್ತು. ಅದು ಸಂಜನಾ ಗಲಾಟೆ. ತಿಲಕ್ ಅವರನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದರು. ಅವನೇನು ಇಮ್ರಾನ್ ಹಶ್ಮಿ ಅಲ್ಲ. ಯಾರ್ಯಾರ ಜೊತೆ ಅವನಿಗೆ ಅಫೇರ್ ಇದೆ ಎಂಬುದನ್ನು ನಾನು ಓಪನ್ ಮಾಡಿದರೆ ಅವನ ಬಣ್ಣ ಬಯಲಾಗುತ್ತದೆ ಎಂದರು.

ನನ್ನಿಂದಲೇ ಅವನು ಬೆಳೆದದ್ದು, ಸಂಜನಾ

ಅವನ ಜೊತೆ ಮಾಡಿದ್ದು ಒಂದೇ ಒಂದು ಚಿತ್ರ. ನನ್ನ ಬಗ್ಗೆ ಅವಳು ಇವಳು ಎಂದು ಕಟ್ಟಿಕೊಂಡವನ ತರಹ ಮಾತನಾಡುತ್ತಾನೆ. ಅವನೇನಾದರೂ ಶಾರುಖ್ ಖಾನಾ. ಸ್ಟಂಟ್ ಜಾಸ್ತಿ ಅವನದ್ದು. ಗಂಡಹೆಂಡತಿ ಪಿಕ್ಚರ್ ಓಡಿದ್ದು ನನ್ನಿಂದ. ಅವನ್ಯಾರು. ನನ್ನಿಂದಲೇ ಅವನು ಬೆಳೆದದ್ದು. ಪಿಚ್ಚರ್ ನಲ್ಲಿ ಹೀರೋನೇ ಇರಲಿಲ್ಲ. ನಾನೇ ಎಲ್ಲ ಎಂದು ಗಂಡ ಹೆಂಡತಿ ರಹಸ್ಯಗಳನ್ನು ಬಿಚ್ಚಿಟ್ಟರು.

ಬಿಸಿಲಿಗೆ ಬೆಂಡಾದ ನರೇಂದ್ರ ಬಾಬು ಶರ್ಮಾ

ಇನ್ನೊಂದು ಕಡೆ ನರೇಂದ್ರ ಬಾಬು ಶರ್ಮಾ ಅವರು ಗಾರ್ಡನ್ ಏರಿಯಾದಲ್ಲಿ ಬಿಸಿಗೆ ಕೂತು ಕೂತು ಸುಸ್ತಾಗಿದ್ದರು. ಆದರೂ ಅವರು ಯಾರ ಬಗ್ಗೆಯೂ ಹೆಚ್ಚಾಗಿ ಮಾತನಾಡಲಿಲ್ಲ. ಆದರೆ ಅವರಿಗೆ ಕೊಟ್ಟಿದ್ದ ಕುರ್ಚಿ ಮಾತ್ರ ಪುಟ್ಟ ಮಕ್ಕಳ ಕುರ್ಚಿ ಮೇಲೆ ಆನೆ ಕುಳಿತಂತಿತ್ತು.

ಈ ಬಾರಿಯೂ ವಾಯ್ಸ್ ಸಿಂಕಿಂಗ್ ಪ್ರಾಬ್ಲಂ

ಈ ಬಾರಿಯ ಏಳನೆ ದಿನದ ಎಪಿಸೋಡ್ ನಲ್ಲೂ ವಾಯ್ಸ್ ಸರಿಯಾಗಿ ಸಿಂಕ್ ಆಗದೆ ವೀಕ್ಷಕರಿಗೆ ಕಿರಿಕಿರಿ ನೀಡಿತು. ಬಿಗ್ ಬಾಸ್ ಮನೆಗೆ ಬಂದ ಮೇಲೆ ಒಂದೇ ವಾರಕ್ಕೆ ಸಾಕಾಗಿಹೋಯ್ತು ಎಂದು ತಮ್ಮ ಸಂಕಟವನ್ನು ಶರ್ಮಾ ಬಳಿ ತೋಡಿಕೊಂಡರು ಚಂದ್ರಿಕಾ.

ಈಜಾಟದ ಬಗ್ಗೆ ನಿಖಿತಾ ಪ್ರಸ್ತಾಪ

ಇದೇ ಸಂದರ್ಭದಲ್ಲಿ ಶರ್ಮಾ ಅವರು ಈಜುವಂತೆ ನಿಖಿತಾ ಸಲಹೆ ನೀಡಿದರು. ಇದಕ್ಕೆ ಶರ್ಮಾ ಅವರು ನಾನೊಬ್ಬನೆ ಈಜಾಡಿದರೆ ಪ್ರಯೋಜನ ಇರಲ್ಲ. ನಿಮ್ಮಂತಹ ತಾರೆಗಳು ಜೊತೆಗಿದ್ದರೆ ಬಿಗ್ ಬಾಸ್ ಟಿಆರ್ ಪಿ ಇನ್ನಷ್ಟು ಏರುತ್ತದೆ ಎಂದ.

ಕನ್ನಡ ಬಳಕೆ ಕಡಿಮೆ ಎಂದು ಗುಡುಗಿದ ಬಾಸ್

ಮನೆಯಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದೆ. ಇಂಗ್ಲಿಷ್ ಬಳಕೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ಎಂಟನೆ ದಿನ ಬಿಗ್ ಬಾಸ್ ಎಚ್ಚರಿಸಿದರು. ಆದರೂ ಯಾರೂ ಅದನ್ನು ಅಷ್ಟಾಗಿ ಸೀರಿಯಸ್ಸಾಗಿ ತೆಗೆದುಕೊಂಡಂತೆ ಕಾಣಲಿಲ್ಲ.

ಶರ್ಮಾಗೆ ಬೆವರಿಳಿಸಿದ ಬಿಗ್ ಬಾಸ್

ಎಂಟನೆ ದಿನ ಗಡದ್ದಾಗಿ ನಿದ್ದೆ ಮಾಡುತ್ತಿದ್ದ ಶರ್ಮಾ ಅವರಿಗೆ ಕಠಿಣ ಶಿಕ್ಷೆಯಾಯಿತು. ಶರ್ಮಾಗೆ ಬಿಗ್ ಬಾಸ್ ಬೆವರಿಳಿಸಿದರು. ಆದರೂ ಶರ್ಮಾ ಮಾತ್ರ ನಿದ್ದೆಗೆ ಜಾರುವುದನ್ನು ಬಿಟ್ಟಿಲ್ಲ. ಶರ್ಮಾಗೆ ಶಿಕ್ಷೆಯಾಗಿದ್ದನ್ನು ಅರುಣ್ ಸಾಗರ್ ಸ್ವಾಗತಿಸಿದ. ರಾಜ್ಯದ ಮಾನ ಮರ್ಯಾದೆ ತೆಗೆಯುತ್ತಿರುವ ಸ್ವಾಮೀಜಿಗಳಿಗೆ ಶಿಕ್ಷೆ ಕೊಟ್ಟಷ್ಟೇ ಸಂತೋಷವಾಗಿದೆ ಎಂದರು.

ಶ್ವೇತಾ ಹಾಗೂ ಸಂಜನಾ ನಡುವೆ ಚಕಮಕಿ

ಶ್ವೇತಾ ಹಾಗೂ ಸಂಜನಾ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ ನಡೆಯಿತು. ಅಡುಗೆ ಮಾಡುವ ವಿಚಾರದಲ್ಲಿ. ಸಂಜನಾ ಸಹ ಅಷ್ಟೇ ಉರಿಯುವ ಬೆಂಕಿಗೆ ಸ್ವಲ್ಪ ತುಪ್ಪ ಸುರಿದರು. ಮಾತಿಗೆ ಮಾತು ಬೆಳೆದು ಎರಡು ಜಡೆ ಸೇರಿದರೆ ಅದನ್ನು ನಿಲ್ಲಿಸಲು ಸಾಧ್ಯವೆ? ಅರುಣ್ ಸ್ವಲ್ಪ ಕಂಟ್ರೋಲ್ ಗೆ ತರಲು ಪ್ರಯತ್ನಿಸಿದರು. ಆದರೂ ಸಾಧ್ಯವಾಗಲಿಲ್ಲ. ಶ್ವೇತ ಅವರು ಕಣ್ಣೀರಿಟ್ಟ ಪ್ರಸಂಗವೂ ನಡೆದುಹೋಯಿತು.

ಮನೆಯಲ್ಲಿ ಹೈವೋಲ್ಟೇಜ್ ಡ್ರಾಮಾ ಶುರು

ಮನೆಯಲ್ಲಿ ಹೈವೋಲ್ಟೇಜ್ ಡ್ರಾಮಾ ಶುರುವಾಗಿದೆ. ಮನೆಯ ತಾಪಮಾನವೂ ಹೆಚ್ಚುತ್ತಿದೆ. ತಮಾಷೆಗೆ ಆರಂಭವಾದ ಮಾತುಕತೆಗಳು ಸಣ್ಣಪುಟ್ಟ ಜಗಳದ ತನಕ ಹೋಗಿದೆ. ಅವರವರಲ್ಲೇ ಬತ್ತಿ ಇಡುವವರು ಹುಟ್ಟಿಕೊಂಡಿದ್ದಾರೆ. ಮುಂದೇನು....

English summary
Etv Kannada reality show Bigg Boss 7th and 8th day highlights. An easy comment made by Thilak to Sanjjanna irked the latter. She was seen fuming all through the day after that incident. So, what did he say?
Please Wait while comments are loading...