»   » ಬಿಗ್ ಬಾಸ್ 8: ಕೈಕೊಟ್ಟ ಸಲ್ಮಾನ್, ಗೌತಮ್ ಹೊಸ ಸ್ಟಾರ್

ಬಿಗ್ ಬಾಸ್ 8: ಕೈಕೊಟ್ಟ ಸಲ್ಮಾನ್, ಗೌತಮ್ ಹೊಸ ಸ್ಟಾರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದ ಬಿಗ್ ಬಾಸ್ 8 ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಯಾರು ಎಂಬುದು ಮಾತ್ರ ಮೊದಲೇ ಪ್ರೇಕ್ಷಕರಿಗೆ ತಿಳಿದು ಬಿಟ್ಟಿತ್ತು. ನಿರೂಪಕನಾಗಿ ಸಲ್ಮಾನ್ ಖಾನ್ ಮತ್ತೆ ಎಂಟ್ರಿ ಕೊಡುವ ಆಸೆ ಕಮರಿ ಹೋಯಿತು. ಅದರೆ, ಸೋನಾಕ್ಷಿ ಸಿನ್ಹಾ ಹಾಗೂ ಮಲೈಕಾ ಆರೋರಾ ನೃತ್ಯ ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋಗೆ ಮುಕ್ತಾಯ ಹಾಡಿತು. ಫೈನಲಿ ಗೌತಮ್ ಗುಲಾಟಿ ಕೈಗೆ ಬಿಗ್ ಬಾಸ್ 8 ರ ಪ್ರಶಸ್ತಿ ಸಿಕ್ಕಿದೆ.

ಈ ಹಿಂದಿನ ಎಲ್ಲಾ ಸೀಸನ್ ಮೀರಿಸಿದಂಥ ವಿವಾದಗಳನ್ನು ಮೈಮೇಲೆ ಹೊತ್ತುಕೊಂಡಿದ್ದ ಬಿಗ್ ಬಾಸ್ 8 ಪ್ರೇಕ್ಷಕರನ್ನು ರಂಜಿಸುವಲ್ಲಿ ಅಷ್ಟಾಗಿ ಸಫಲವಾಗಲಿಲ್ಲ. ಕಲರ್ಸ್ ವಾಹಿನಿಗೂ ಕೂಡಾ ಸಲ್ಮಾನ್ ರನ್ನು ನಿರೂಪಕನಾಗಿ ಇಟ್ಟುಕೊಳ್ಳಲು ಆಗದೆ ಟಿಆರ್ ಪಿ ಕೈ ಜಾರುವ ಆತಂಕ ಎದುರಿಸಬೇಕಾಯಿತು.

ಅದರೆ, ಹಳೆ ಸ್ಪರ್ಧಿಗಳ ರೀ ಎಂಟ್ರಿ ಕೆಲ ಕಾಲ ಈ ಶೋ ನೋಡುವಂತೆ ಮಾಡಿತು. ಚಾಲೆಂಜರ್ಸ್ ಆಗಿ ಮನೆ ಸೇರಿದ್ದ ರಾಹುಲ್ ಮಹಾಜನ್, ಮೇಹಕ್ ಚಾಹಲ್, ಏಜಾಜ್ ಖಾನ್, ಸನಾ ಖಾನ್ ಪೈಕಿ ಕೊನೆಯವರಾಗಿ ಸಂಭಾವನಾ ಮನೆಯಿಂದ ಹೊರನಡೆದಿದ್ದಾರೆ. ಗ್ರ್ಯಾಂಡ್ ಫಿನಾಲೆ ತನಕ ಸಂಭಾವನಾ ಉಳಿಯುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು.. ಕೊನೆಗೂ ನಿರೀಕ್ಷೆಯಂತೆ ಟ್ವಿಟ್ಟರ್ ನಲ್ಲಿ ಮೊದಲಿಗೆ ಗೌತಮ್ ಗೆದ್ದಿದ್ದು ತಿಳಿಯಿತು..

ಕಿರುತೆರೆಯ ತಾರೆ ಗೌತಮ್ ಗುಲಾಟಿ

ಕಿರುತೆರೆಯ ತಾರೆ 27 ವರ್ಷ ಗೌತಮ್ ಗುಲಾಟಿಯನ್ನು ಮುಂದಿನ ಸ್ಟಾರ್ ಎಂದು ಜನ ಗುರುತಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ಪ್ಲಸ್ ನ ದಿಯಾ ಔರ್ ಬಾತಿ ಹಮ್ ಟೆಲಿ ಸರಣಿಯಲ್ಲಿ ನಟಿಸಿದ ಗುಲಾಟಿ ಕಾಣಿಸಿಕೊಂಡಿದ್ದು ನೆಗಟೆವ್ ಶೇಡ್ ಪಾತ್ರದಲ್ಲಿಯಾದರೂ ಲಕ್ಷಾಂತರ ವೀಕ್ಷಕರ ಮನಗೆದ್ದಿದ್ದಾರೆ. ಟಾಸ್ಕ್ ವೇಳೆ ಕರೀಷ್ಮಾ ತನ್ನಾಗೆ ಬೈದಿದ್ದು ಬಿಟ್ಟರೆ ಗುಲಾಟಿ ಮೆಚ್ಚಿನ ಸ್ಪರ್ಧಿಯಾಗಿದ್ದ. ಪ್ರೀತಂ ಹಾಗೂ ಅಲಿ ಮಾತ್ರ ಗುಲಾಟಿ ವಿರೋಧಿಗಳಾಗಿದ್ದರು.

ಪ್ರೇಕ್ಷಕರ ಮನ ಗೆದ್ದ ಗೌತಮ್

ಗ್ರ್ಯಾಂಡ್ ಫಿನಾಲೆಯಲ್ಲಿ ಗೌತಮ್, ಕರೀಷ್ಮಾ ತನ್ನಾ, ಅಲಿ, ಡಿಂಪಿ ಮಹಾಜನ್, ಪ್ರೀತಂ ಅಂತಿಮ ಸುತ್ತಿನಲ್ಲಿದ್ದರು. ಈ ಪೈಕಿ ಕರೀಷ್ಮಾ, ಪ್ರೀತಂ ಹಾಗೂ ಗೌತಮ್ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಗೌತಮ್ ಗುಲಾಟಿ ವಿಜೇತ ಎಂದು ಸುದ್ದಿ ಹಬ್ಬಿತ್ತು. ಅದರಂತೆ ಗೌತಮ್ 50 ಲಕ್ಷ ರು ಬಹುಮಾನ ಹಾಗೂ ಬಿಗ್ ಬಾಸ್ ಪ್ರಶಸ್ತಿ ಫಲಕ ಗೆದ್ದರೆ, ಕರಿಷ್ಮಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಸಲ್ಮಾನ್ ಖಾನ್ ಗ್ರ್ಯಾಂಡ್ ಫಿನಾಲೆಗೆ ಗೈರು

ಸಲ್ಮಾನ್ ಖಾನ್ ಗ್ರ್ಯಾಂಡ್ ಫಿನಾಲೆಗೆ ಬರುವುದರಿಂದ ಪ್ರೇಕ್ಷಕರು ತಪ್ಪದೇ ಶೋ ನೋಡುತ್ತಾರೆ ಎಂಬ ನಿರೀಕ್ಷೆ ಕಲರ್ಸ್ ವಾಹಿನಿಗಿತ್ತು. ಪ್ರೇಕ್ಷಕರು ಕೂಡಾ ಸಲ್ಮಾನ್ ಬರುವ ಆಸೆ ಇಟ್ಟುಕೊಂಡಿದ್ದರು. ಆದರೆ, ಮೂಲಗಳ ಪ್ರಕಾರ ಫಿಲಂಫೇರ್ ಪ್ರಶಸ್ತಿ ಸಮಾರಂಭಕ್ಕೆ ತೆರಳಲು ಬಯಸಿದ ಸಲ್ಮಾನ್ ಬೇಕಂತಲೇ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ತಪ್ಪಿಸಿಕೊಂಡರಂತೆ.

BIGG BOSS Newz @biggbossnewz tweeted, "Salmaan khan will not be seen for the Bigg Boss 8 Halla Bol finale."

ಸೋನಾಕ್ಷಿ ಸಿನ್ಹಾ ಆಕರ್ಷಣೆಯ ಕೇಂದ್ರ ಬಿಂದು

ಸಲ್ಮಾನ್ ಖಾನ್ ಇರದ ಹಲ್ಲಾ ಬೋಲ್ ಫಿನಾಲೆಯನ್ನು ನಿರೂಪಕಿ ಫರ್ಹಾ ಖಾನ್ ತಕ್ಕಮಟ್ಟಿಗೆ ನಡೆಸಿಕೊಟ್ಟರು. ಅತಿಥಿಯಾಗಿ ಆಗಮಿಸಿದ್ದ ನಟಿ ಸೋನಾಕ್ಷಿ ಸಿನ್ಹಾ ಸ್ಪರ್ಧಿಗಳ ಜೊತೆ ಬೆರೆತು ಫಿನಾಲೆಗೆ ಲವಲವಿಕೆ ತುಂಬಿದರು.

ಮಲೈಕಾ ಡ್ಯಾನ್ಸಿಂಗ್ ಮೋಡಿ

ಮಲೈಕಾ ಅರೋರಾ ಖಾನ್ ಅವರು ಗುಲಾಟಿ ಜೊತೆ ಡ್ಯಾನ್ಸ್ ಮಾಡುವ ಮೂಲಕ ಫಿನಾಲೆಗೆ ಇನ್ನಷ್ಟು ರಂಗು ತಂದರು.

ಗೌತಮ್ ಗುಲಾಟಿ ಗೆಲ್ಲಲು ಏನು ಕಾರಣ?

ಕಳೆದ ಬಾರಿಯ ವಿಜೇತೆ ಗೌಹರ್ ಖಾನ್ ಳಷ್ಟು ಜನಪ್ರಿಯತೆ ಇಲ್ಲದಿದ್ದರೂ ಕಿರುತೆರೆಯ ಸ್ಟಾರ್ ಗೌತಮ್ ಗುಲಾಟಿಗೆ ಬಿಗ್ ಬಾಸ್ ಉತ್ತಮ ವೇದಿಕೆ ಒದಗಿಸಿತು. ಗೆಳೆಯರಷ್ಟೇ ಅಲ್ಲದೆ ವಿರೋಧಿಗಳ ಜೊತೆ ಜೊತೆಗೆ ವಾರದಿಂದ ವಾರಕ್ಕೆ ಗೌತಮ್ ತನ್ನತನವನ್ನು ಉಳಿಸಿಕೊಂಡು ಮುಂದುವರೆದಿದ್ದು ಪ್ರೇಕ್ಷಕರಿಗೆ ಇಷ್ಟವಾಯಿತು.

ಸುಳ್ಳು, ಮೋಸದಾಟವೇ ಪ್ರಮುಖ ಎನಿಸುವ ಬಿಗ್ ಬಾಸ್ ನಲ್ಲಿ ಗೌತಮ್ ಎಲ್ಲರ ಮೆಚ್ಚುಗೆ ಗಳಿಸುವಂತೆ ನಡೆದುಕೊಂಡಿದ್ದು ಗೆಲುವಿಗೆ ಮುನ್ನುಡಿ ಬರೆಯಿತು. ಹೀಗಾಗಿ ಲಕ್ಷಾಂತರ ಮಂದಿ ಟ್ವಿಟ್ಟರ್ ನಲ್ಲಿ ಮುಂದಿನ ಸೂಪರ್ ಸ್ಟಾರ್ ಎಂದು ಘೋಷಿಸತೊಡಗಿದರು.

Read in English: Gautam Wins BB8!
English summary
Gautam Gulati is declared the winner of Bigg Boss 8 and Bigg Boss Halla Bol. The Diya Aur Baati Hum actor beats Karishma Tanna, RJ Preetam, Ali Quli Mirza and Dimpy Mahajan and wins Bigg Boss 8 with highest number of votes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada