For Quick Alerts
  ALLOW NOTIFICATIONS  
  For Daily Alerts

  ಬಿಬಿ8: 12 ಜನರಿಗೆ ಏರೋಪ್ಲೇನ್ ಹತ್ತಿಸಿದ ಸಲ್ಮಾನ್

  By * ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 8 ಸೆ.21 ರಂದು ಹೊಸ ಥೀಮ್ ನೊಂದಿಗೆ ಆರಂಭಗೊಂಡಿದ್ದು, ಬಾಲಿವುಡ್ ನ ಸ್ಟಾರ್ ಸಲ್ಮಾನ್ ಖಾನ್ ಅವರು ಏರೋಪ್ಲೇನ್ ಪೈಲಟ್ ರೂಪದಲ್ಲಿ ಕಾಣಿಸಿಕೊಂಡು ರಂಜಿಸಿದರು. ವಿವಾದಿತ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅವಕಾಶ 15 ಜನರಿಗೆ ಸಿಕ್ಕಿದೆ. ಈ ಪೈಕಿ 12 ಜನರಿಗೆ ಬಿಗ್ ಬಾಸ್ ಮನೆ ಏರೋಪ್ಲೇನ್ ಹತ್ತುವ ಅವಕಾಶ ಸಿಕ್ಕಿದೆ.

  ಸ್ಪರ್ಧಿಗಳ ಆಯ್ಕೆ ವಿಷಯಕ್ಕೆ ಬಂದರೆ ಜನಪ್ರಿಯ ನಟ, ನಟಿ, ಮಾದಕ ತಾರೆ, ಟಿವಿ ಜಗತ್ತಿನ ಜನಪ್ರಿಯ ಸ್ಟಾರ್, ವಿವಾದಿತ ವ್ಯಕ್ತಿ, ಸಲಿಂಗಿಗಳನ್ನು ಆಯ್ಕೆ ಮಾಡುವ ಮಾದರಿ ಮುಂದುವರೆಸಲಾಗಿದೆ. ಕಳೆದ ಎಲ್ಲಾ ಆವೃತ್ತಿಗಳಿಗಿಂತ ಭಿನ್ನವಾಗಿ ಇನ್ನಷ್ಟು ಐಷಾರಾಮಿಯಾಗಿ ಬಿಗ್ ಬಾಸ್ 8 ಮೂಡಿ ಬಂದಿದೆ. ಬಿಸಿನೆಸ್ ಕ್ಲಾಸ್, ಎಕಾನಾಮಿ ಕ್ಲಾಸ್ ಜೊತೆಗೆ ವೇಟಿಂಗ್ ಲಾಂಜ್ ವಿಮಾನದ ಟಿಕೆಟ್, ಅನೌನ್ಸ್ ಮೆಂಟ್ ಎಲ್ಲವೂ ಹೊಸತನದಿಂದ ಕೂಡಿದೆ. ['ಸಂಭಾವನೆ,' ಸಲ್ಲೂ ಬಿಗ್ ಬಾಸ್]

  ಸಂಭಾವ್ಯ ಪಟ್ಟಿಯಲ್ಲಿದ್ದ ಶೆರ್ಲಿನ್ ಛೋಪ್ರಾ, ಪ್ರಿಯಾಮಣಿ ಅವರು ವಿಮಾನ ಏರುವ ಅವಕಾಶದಿಂದ ವಂಚಿತರಾಗಿದ್ದಾರೆ. ಹಾಗಾದರೇ ಯಾರಿಗೆ ಸಿಕ್ಕಿದೆ ಟಿಕೆಟ್, ಯಾರು ಯಾವ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಾರೆ? ಮುಂದಿದೆ ವಿವರ..

  ಮಿಕ್ಕ ಸ್ಪರ್ಧಿಗಳ ಕಥೆ ಏನು?

  ಮಿಕ್ಕ ಸ್ಪರ್ಧಿಗಳ ಕಥೆ ಏನು?

  15 ಜನರ ಪೈಕಿ 12 ಜನರನ್ನು ವಿವಿಧ ಕ್ಲಾಸ್ ಪ್ರಯಾಣಿಕರಾಗಿ ವಿಂಗಡಿಸಿ ಕಳಿಸಿದ ಸಲ್ಮಾನ್ ಖಾನ್ ಮಿಕ್ಕ ಸ್ಪರ್ಧಿಗಳನ್ನು ಮುಂದಿನ ಎಪಿಸೋಡ್ ನಲ್ಲಿ ಬಿಗ್ ಬಾಸ್ ವಿಮಾನ ಹತ್ತಿಸಲಾಗುವುದು ಎಂದರು.

  ಬಿಗ್ ಬಾಸ್ 8 ಆರಂಭಕ್ಕೂ ಮುನ್ನ ಕುತೂಹಲ

  ಬಿಗ್ ಬಾಸ್ 8 ಆರಂಭಕ್ಕೂ ಮುನ್ನ ಕುತೂಹಲ ಕಾಯ್ದಿರಿಸಲು ಸರಣಿ ಟ್ವೀಟ್ ಹಾಗೂ ವಿಡಿಯೋ ತುಣುಕುಗಳ ಮೂಲಕ ಕಲರ್ಸ್ ವಾಹಿನಿ ಪ್ರೇಕ್ಷಕರನ್ನು ಸೆಳೆಯಿತು.

  ಬಿಗ್ ಬಾಸ್ ಮನೆಯಲ್ಲಿ ಬಾಂಬ್

  ಬಿಗ್ ಬಾಸ್ ಮನೆಯಲ್ಲಿ ಬಾಂಬ್ ಎಂದು ಘೋಷಿಸುತ್ತಾ ಕಳೆದ ಬಾರಿಯ ಸ್ಪರ್ಧಿ ಎಲ್ಲಿ ಅವ್ರಾಮ್ ರನ್ನು ಕರೆ ತರಲಾಯಿತು. ಹಾಡಿ ಕುಣಿದ ಎಲ್ಲಿ ಮತ್ತೇಲ್ಲಿ ಬಿಗ್ ಬಾಸ್ ಮನೆಗೆ ಹೋಗುತ್ತಾಳೋ ಎಂದೆನಿಸಿತ್ತು. ಇದೇ ರೀತಿ ಅರ್ಮಾನ್ ಕೂಡಾ ಶೋನಲ್ಲಿ ಬಂದು ಸ್ಪರ್ಧಿಗಳಿಗೆ ಶುಭ ಹಾರೈಸಿದರು,

  ಬಿಗ್ ಬಾಸ್ 8 ಸ್ಪರ್ಧಿ ನಟಾಶಾ

  ಬಿಗ್ ಬಾಸ್ 8 ಸ್ಪರ್ಧಿ ನಟಾಶಾ

  ಬಿಗ್ ಬಾಸ್ 8 ಸ್ಪರ್ಧಿ ನಟಾಶಾ ಸ್ಟಾಂಕೊವಿಕ್ ಸೆರ್ಬಿಯಾದ ಮಾಡೆಲ್ ಕಮ್ ನಟಿ ಸತ್ಯಾಗ್ರಹ ಚಿತ್ರದ ಐಟಂ ಸಾಂಗ್ಸ್ ನಲ್ಲಿ ಕುಣಿದಿದ್ದಳು.

  ಬಿಗ್ ಬಾಸ್ 8 ಸ್ಪರ್ಧಿ ಪ್ರಣೀತ್ ಭಟ್

  ಬಿಗ್ ಬಾಸ್ 8 ಸ್ಪರ್ಧಿ ಪ್ರಣೀತ್ ಭಟ್

  ಹೊಚ್ಚ ಹೊಸ ಮಹಾಭಾರತ ಸರಣಿಯಲ್ಲಿ ಶಕುನಿ ಮಾವನ ಪಾತ್ರಧಾರಿಯಾಗಿ ಕಾಣಿಸಿಕೊಂಡ ಜನಪ್ರಿಯ ನಟ ಪ್ರಣೀತ್ ಭಟ್

  ಬಿಗ್ ಬಾಸ್ 8 ಸ್ಪರ್ಧಿ: ಸುಕೀರ್ತಿ ಕಂದಪಾಲ್

  ಬಿಗ್ ಬಾಸ್ 8 ಸ್ಪರ್ಧಿ: ಸುಕೀರ್ತಿ ಕಂದಪಾಲ್

  ಬಿಗ್ ಬಾಸ್ 8ರ ಸ್ಪರ್ಧಿ ಸುಕೀರ್ತಿ ಕಂದಪಾಲ್ ದಿಲ್ ಮಿ ಗಯೇ, ಪ್ಯಾರ್ ಕಿ ಯೇ ಏಕ್ ಕಹಾನಿ ಧಾರಾವಾಹಿ ಮೂಲಕ ಮನೆಮಂದಿಗೆ ಚಿರಪರಿಚಿತ.

  ಬಿಗ್ ಬಾಸ್ 8 ಸ್ಪರ್ಧಿ: ಗೌತಮ್ ಗುಲಾಟಿ

  ಬಿಗ್ ಬಾಸ್ 8 ಸ್ಪರ್ಧಿ: ಗೌತಮ್ ಗುಲಾಟಿ

  ಬಿಗ್ ಬಾಸ್ ಗಾಗಿ ಧಾರಾವಾಹಿಯ ಪಾತ್ರ ತೊರೆದು ಬಂದ ದಿಯಾ ಔರ್ ಬಾತಿ ಹಮ್ ನ ಗೌತಮ್ ಗುಲಾಟಿ

  ಬಿಗ್ ಬಾಸ್ 8 ಸ್ಪರ್ಧಿ: ಸುಶಾಂತ್ ದಿವ್ಗಿಕರ್

  ಬಿಗ್ ಬಾಸ್ 8 ಸ್ಪರ್ಧಿ: ಸುಶಾಂತ್ ದಿವ್ಗಿಕರ್

  2014ರ ಮಿ.ಗೇ ಇಂಡಿಯಾ ಎನಿಸಿಕೊಂಡಿರುವ ಸುಶಾಂತ್ ದಿವ್ಗಿಕರ್ ಎಂಟ್ರಿ ಕೊಟ್ಟು ಗಂಡು ಹಾಗೂ ಹೆಣ್ಣಿನ ದನಿಯಲ್ಲಿ ಹಾಡಿ ಸಲ್ಮಾನ್ ಖಾನ್ ರನ್ನೇ ಚಕಿತಗೊಳಿಸಿದರು.

  ಬಿಗ್ ಬಾಸ್ 8 ಸ್ಪರ್ಧಿ: ಡಿಯಾಂಡ್ರ ಸೊರೆಸ್

  ಬಿಗ್ ಬಾಸ್ 8 ಸ್ಪರ್ಧಿ: ಡಿಯಾಂಡ್ರ ಸೊರೆಸ್

  ಬಿಗ್ ಬಾಸ್ 8ರ ಸ್ಪರ್ಧಿ ಡಿಯಾಂಡ್ರ ಸೊರೆಸ್ ಮಾಡೆಲಿಂಗ್ ಹಾಗೂ ಫ್ಯಾಷನ್ ಡಿಸೈನರ್ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು.

  ಬಿಗ್ ಬಾಸ್ 8 ಸ್ಪರ್ಧಿ:ಆರ್ಯ ಬಬ್ಬರ್

  ಬಿಗ್ ಬಾಸ್ 8 ಸ್ಪರ್ಧಿ:ಆರ್ಯ ಬಬ್ಬರ್

  ನಟ ಕಮ್ ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಹಿಂದಿ ಹಾಗೂ ಪಂಜಾಬಿ ನಟ ಆರ್ಯ ಬಬ್ಬರ್ ಈಗ ಬಿಗ್ ಬಾಸ್ ಮನೆ ಕೃತಕ ವಿಮಾನಯಾನದ ಪ್ರಯಾಣಿಕ.

  ಬಿಗ್ ಬಾಸ್ 8 ಸ್ಪರ್ಧಿ: ಸೋನಿ ಸಿಂಗ್

  ಬಿಗ್ ಬಾಸ್ 8 ಸ್ಪರ್ಧಿ: ಸೋನಿ ಸಿಂಗ್

  ಬಿಗ್ ಬಾಸ್ 8ರ ಸ್ಪರ್ಧಿ ಸೋನಿ ಸಿಂಗ್, ಘರ್ ಕಿ ಲಕ್ಷ್ಮಿ ಬೇಟಿಯಾನ್ ಧಾರಾವಾಹಿ ಮೂಲಕ ಜನರಿಗೆ ಪರಿಚಿತ.

  ಬಿಗ್ ಬಾಸ್ 8 ಸ್ಪರ್ಧಿ: ಉಪೇನ್ ಪಟೇಲ್

  ಬಿಗ್ ಬಾಸ್ 8 ಸ್ಪರ್ಧಿ: ಉಪೇನ್ ಪಟೇಲ್

  ಬಿಗ್ ಬಾಸ್ 8ರ ಸ್ಪರ್ಧಿ ಉಪೇನ್ ಪಟೇಲ್, 36 ಚೈನಾ ಟೌನ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಹಾಗೂ ಶಂಕರ್ ನಿರ್ದೇಶನದ ಐ ಚಿತ್ರದ ವಿಲನ್ ಪಾತ್ರಧಾರಿಯಾಗಿ ದಕ್ಷಿಣ ಭಾರತೀಯ ಸಿನಿರಸಿಕರಿಗೆ ಪರಿಚಿತ. ನಟಿ ಅಮೃತಾ ಅರೋರಾ ಅವರ ಮಾಜಿ ಪ್ರಿಯಕರ ಕೂಡಾ.

  ಬಿಗ್ ಬಾಸ್ 8 ಸ್ಪರ್ಧಿ: ಸೋನಾಲಿ ರಾವುತ್

  ಬಿಗ್ ಬಾಸ್ 8 ಸ್ಪರ್ಧಿ: ಸೋನಾಲಿ ರಾವುತ್

  ಬಿಗ್ ಬಾಸ್ 8ರ ಸ್ಪರ್ಧಿ ದಿ ಎಕ್ಸ್ ಪೋಸ್ ಖ್ಯಾತಿ ಸೋನಾಲಿ ರಾವುತ್.

  ಬಿಗ್ ಬಾಸ್ 8 ಸ್ಪರ್ಧಿ: ಕರಿಷ್ಮಾ ತನ್ನಾ

  ಬಿಗ್ ಬಾಸ್ 8 ಸ್ಪರ್ಧಿ: ಕರಿಷ್ಮಾ ತನ್ನಾ

  ಬಿಗ್ ಬಾಸ್ 8ರ ಸ್ಪರ್ಧಿ ಕರಿಷ್ಮಾ ತನ್ನಾ ಗ್ರಾಂಡ್ ಮಸ್ತಿ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಸುದ್ದಿಯಾದವಳು.

  ಬಿಗ್ ಬಾಸ್ 8 ಸ್ಪರ್ಧಿ: ಮಿನಿಷಾ ಲಂಬಾ

  ಬಿಗ್ ಬಾಸ್ 8 ಸ್ಪರ್ಧಿ: ಮಿನಿಷಾ ಲಂಬಾ

  ಬಿಗ್ ಬಾಸ್ 8ರ ಸ್ಪರ್ಧಿ ಮಿನಿಷಾ ಲಂಬಾ ಅರ್ಜುನ್ ಸರ್ಜಾ ಜೊತೆ ಕಾಂಟ್ರ್ಯಾಕ್ ಚಿತ್ರದಲ್ಲಿ ನಟಿಸಿದ್ದರು. ಜಿಲ್ಲಾ ಗಾಜಿಯಾಬಾದ್, ಬೇಜಾ ಫ್ರೈ, ಬಚ್ನಾ ಏ ಹಸೀನೋ ಇವರ ಪ್ರಮುಖ ಚಿತ್ರಗಳು

  ಮಿಕ್ಕ ಸ್ಪರ್ಧಿಗಳು ಯಾರಿರಬಹುದು?

  ಮಿಕ್ಕ ಸ್ಪರ್ಧಿಗಳು ಯಾರಿರಬಹುದು?

  * ದೀಪ್ಶಿಕಾ ನಾಗ್ಪಾಲ್( ಮಧುಬಾಲಾ ಧಾರಾವಾಹಿ ಖ್ಯಾತಿ)

  * ಪ್ರೀತಮ್ ಸಿಂಗ್ (ಆರ್ ಜೆ)

  * ಪುನೀತ್ ಇಸ್ಸಾರ್(ಮಹಾಭಾರತ ಧಾರವಾಹಿಯ ಧುರ್ಯೋಧನ)

  English summary
  Bigg Boss 8 Premier: Bigg Boss 8 is finally on air and the host of the controversial reality show, Salman Khan, introduced the 12 out of 15 contestants who will be living in the Bigg Boss house, an airplane rather, since the makers have decided to spice up their stay this season.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X