»   » ಬಿಗ್ ಬಾಸ್ ಅಚ್ಚರಿ ಎಕ್ಸಿಟ್ ಅಂಕಿತ್ ಬದಲಿಗೆ ಯಾರು ಎಂಟ್ರಿ?

ಬಿಗ್ ಬಾಸ್ ಅಚ್ಚರಿ ಎಕ್ಸಿಟ್ ಅಂಕಿತ್ ಬದಲಿಗೆ ಯಾರು ಎಂಟ್ರಿ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ 9ರ ಡಬ್ಬಲ್ ಟ್ರಬಲ್ ನಲ್ಲಿ ಸಲ್ಮಾನ್ ಅವರು ನಂ.1 ಫ್ಲರ್ಟ್ ಅಂಕಿತ್ ಗೇರರನ್ನು ಮನೆಯಿಂದ ಹೊರಕ್ಕೆ ಕರೆದಾಗ ಎಲ್ಲರಿಗೂ ಸಹಜವಾಗಿ ಅಚ್ಚರಿಯಾಯಿತು. ಅದರೆ, ಗೇರ ಅವರ ಸ್ಥಾನಕ್ಕೆ ಮತ್ತೊಬ್ಬ ಯುವ ನಟನನ್ನು ಮಎನ್ಯೋಳಗೆ ಕಳಿಸಲು ಕಲರ್ಸ್ ವಾಹಿನಿ ಸಿದ್ಧತೆ ನಡೆಸಿರುವ ಸುದ್ದಿ ಬಂದಿದೆ.

ಸಪ್ನೆ ಸುಹಾನೆ ಲಡಕ್ ಪನ್ ನಟ ಅಂಕಿತ್ ಗೇರ ಅವರ ತಮ್ಮ ಜೋಡಿಯಾದ ಅರವಿಂದ್ ವೆಗ್ಡಾ ಜೊತೆ ಇನ್ನಷ್ಟು ಕಾಲ ಇರುವ ಸುದ್ದಿ ಇತ್ತು. ಅರವಿಂದ್ ನೆಗ್ಡಾ ಗೊರಕೆ ರಗಳೆ, ರೇಜಿಗೆ ಹುಟ್ಟಿಸುವ ಅಂಕಿತ್ ಮಾತುಗಳ ನಡುವೆ ಅಂಕಿತ್ ಮನೆ ತೊರೆಯಬೇಕಾಯಿತು.[ಫ್ಲರ್ಟ್ ಮಾಡುವ ಅಂಕಿತ್ ಹೊರಕ್ಕೆ]

ಈಗ ಅಂಕಿತ್ ಬದಲಿಗೆ ಎಕ್ಸ್ ಕ್ಯೂಸ್ಮಿ ಹಾಗೂ ಸ್ಟೈಲ್ ಚಿತ್ರದ ಸಾಹಿಲ್ ಖಾನ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸುದ್ದಿ ಬಂದಿದೆ. ಕೀತ್ ಸಿಕ್ವೇರಾ ಹಾಗೂ ಪ್ರಿನ್ಸ್ ನರುಲಾ ಅವರಿಗೆ ಪೈಪೋಟಿ ನೀಡಲು ಸಾಹಿಲ್ ಬರಲಿದ್ದಾರಂತೆ.

Bigg Boss 9: After Ankit Gera’s Exit, Sahil Khan To Enter The House As Wild Card Entry!

ವಿವಾದಿತ ನಟ: ನಟ ಜಾಕಿ ಶ್ರಾಫ್ ಅವರ ಪತ್ನಿ ಆಯೇಷಾ ಶ್ರಾಫ್ ಅವರ ವಿರುದ್ಧ 5 ಕೋಟಿ ರು ವಂಚನೆ ಮಾಡಿದ ಆರೋಪ ಹೊರೆಸುವ ಮೂಲಕ ಸಾಹಿಲ್ ಅವರು ಸುದ್ದಿಯಾಗಿದ್ದರು. [ಮನೆಗೆ ಏಳು ಜೋಡಿ, ಸಲ್ಮಾನ್ ಮತ್ತೆ ಮೋಡಿ]

ನಂತರ 2014ರಲ್ಲಿ ಸಾಹಿಲ್ ಅವರ ಜೊತೆ ಆಯೇಷಾಗೆ ಅನೈತಿಕ ಸಂಬಂಧ ಇರುವ ಸುದ್ದಿಯೂ ಬಂದಿತು. ಇದಕ್ಕೆ ಪೂರಕವಾಗಿ ಇಬ್ಬರು ಜತೆಗಿರುವ ಖಾಸಗಿ ಚಿತ್ರಗಳು ಇಂಟರ್ನೆಟ್ ನಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಯೇಷಾ, ಸಾಹಿಲ್ ಒಬ್ಬ ಗೇ ಎಂದಿದ್ದರು. ಕೊನೆ ಇಬ್ಬರ ನಡುವಿನ ಕೇಸ್ ಪರಸ್ಪರ ಮಾತುಕತೆ ಮೂಲಕ ಬಗೆಹರಿಯಿತು.

ನಂತರ ಸನಾ ಖಾನ್ ಅವರ ಬಾಯ್ ಫ್ರೆಂಡ್ ಇಸ್ಮಾಯಿಲ್ ಖಾನ್ ಅವರ ಮೇಲೆ ಜಿಮ್ ವೊಂದರಲ್ಲಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಹೀಗಾಗಿ ವಿವಾದಗಳ ಬಗ್ಗೆ ಸ್ಪಷ್ಟನೆ ನೀಡಲು ಸಾಹಿಲ್ ಎಂಟ್ರಿ ಕೊಡುವ ಸಾಧ್ಯತೆಯಿದೆ.

English summary
We all know Bigg Boss game show is full of surprises. The game has just begun and we just got the reports of wild card entry. It is reported that Xcuse Me and Style actor Sahil Khan will enter the Bigg Boss 9 to spice it up! Well, we need masala on the show for sure.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada