»   » ಬಿಗ್ ಬಾಸ್ ಸ್ಪರ್ಧಿಗಳಿಗೆ 'ಬಿಗ್' ಮೊತ್ತದ ಸಂಭಾವನೆ

ಬಿಗ್ ಬಾಸ್ ಸ್ಪರ್ಧಿಗಳಿಗೆ 'ಬಿಗ್' ಮೊತ್ತದ ಸಂಭಾವನೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿ ಜನಪ್ರಿಯ ಹಾಗೂ ವಿವಾದಿತ ರಿಯಾಲಿಟಿ ಶೋ ಬಿಗ್ ಬಾಸ್ ನ 9ನೇ ಆವೃತ್ತಿಯ ಡಬ್ಬಲ್ ಟ್ರಬಲ್ ನ ಸ್ಪರ್ಧಿಗಳಿಗೆ ಕೈ ತುಂಬಾ ಸಂಭಾವನೆ ಸಿಕ್ಕಿರುವ ಮಾಹಿತಿ ಹೊರ ಬಿದ್ದಿದೆ.

ಬಿಗ್ ಬಾಸ್ 9 ಆವೃತ್ತಿ ಆರಂಭಕ್ಕೂ ಮುನ್ನ ನಟ ನಿರೂಪಕ ಸಲ್ಮಾನ್ ಖಾನ್ ಅವರು ಪ್ರತಿ ಎಪಿಸೋಡಿಗೆ ಎಷ್ಟು ಹಣ ಪಡೆಯುತ್ತಾರೆ ಎಂಬುದೇ ಕುತೂಹಲದ ವಿಷಯವಾಗಿತ್ತು. [ಬಿಗ್ ಬಾಸ್ ಮನೆಗೆ 'ಗೇ' ಸ್ಪರ್ಧಿ ವೈಲ್ಡ್ ಕಾರ್ಡ್ ಎಂಟ್ರಿ]

ಅದರೆ, ಈ ಬಾರಿ ಯಾರೂ ಅಂಥ ದೊಡ್ದ ಸೆಲೆಬ್ರಿಟಿಗಳಿಲ್ಲದ ಕಾರಣ ಯಾರಿಗೆ ಎಷ್ಟು ಸಿಗುತ್ತಿದೆ ಎಂಬುದು ಕುತೂಹಲದ ಅಂಶವಾಗಿದೆ. ಸಲ್ಮಾನ್ ಖಾನ್ ಅವರು ಸರಿ ಸುಮಾರು 7 ರಿಂದ 8 ಕೋಟಿ ರು ಪಡೆಯುತ್ತಿದ್ದಾರೆ ಎನ್ನಲಾಗಿದೆ. [ದುಡ್ಡಿಗಾಗಿ 'ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!]

ಈ ಬಗ್ಗೆ ಕೇಳಲಾದ ನೇರ ಪ್ರಶ್ನೆಗೆ ಸಲ್ಮಾನ್ ಕೊಟ್ಟ ಉತ್ತರ ಹುಬ್ಬೇರಿಸುವಂತಿತ್ತು. ಪತ್ರಕರ್ತರ ಸಂಬಳದ ಬಗ್ಗೆ ನಾನೆಂದು ಪ್ರಶ್ನಿಸುವುದಿಲ್ಲ, ನನ್ನ ಸಂಭಾವನೆ ಬಗ್ಗೆ ನಿಮಗೇಕೆ ಅಷ್ಟು ಕುತೂಹಲ ಎಂದು ಕೇಳಿದ್ದರು.[ಮನೆಗೆ ಹೃತಿಕ್ ಸೋದರಿ ಸುನೈನಾ ಎಂಟ್ರಿ?]

ಬಿಗ್ ಬಾಸ್ 8ರ ಆವೃತ್ತಿಯಲ್ಲಿ ಕರಿಷ್ಮಾ ತನ್ನಾಗೆ ಅತ್ಯಧಿಕ ಸಂಭಾವನೆ ಸಿಕ್ಕಿತ್ತು. ಬಿಗ್ ಬಾಸ್ 7ರಲ್ಲಿ ತನೀಶಾ ಮುಖರ್ಜಿ ಪ್ರತಿ ವಾರಕ್ಕೆ ಪಡೆಯುವ ಸಂಭಾವನೆ ಅಧಿಕವಾಗಿತ್ತು.

ಎಷ್ಟು ದಿನ/ವಾರಗಳ ಎಂಬುದರ ಮೇಲೆ ಲೆಕ್ಕಾಚಾರ

ಪ್ರತಿ ಸ್ಪರ್ಧಿಯು ಎಷ್ಟು ದಿನ/ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೋ ಅಷ್ಟು ದಿನಕ್ಕೆ ಮಾತ್ರ ಸಂಭಾವನೆ ಸಿಗುತ್ತದೆ. ಅಲ್ಲದೆ, ಸ್ಪರ್ಧೆಯಿಂದ ಅಕಸ್ಮಾತ್ ಬೇಗನೇ ಹೊರ ನಡೆದರೆ ಬಾಕಿ ಮೊತ್ತದ ಹೊರೆ ಸ್ಪರ್ಧಿಯ ಮೇಲೆ ಬೀಳುತ್ತದೆ. ಅಥವಾ ಸ್ಪರ್ಧಿಗೆ ನೀಡುತ್ತಿದ್ದ ಮೊತ್ತ ಮೊಟಕುಗೊಳ್ಳುತ್ತದೆ.

ರೊಶೆಲ್ ರಾವ್ ಗೆ 4 ಲಕ್ಷ ಕ್ಕಿಂತ ಹೆಚ್ಚಿನ ಮೊತ್ತ

ಅಂಕಿತ್ ಗೇರ, ರೂಪಲ್ ತ್ಯಾಗಿ, ವಿಕಾಸ್ ಬಲ್ಲಾ ಹಾಗೂ ಯುವಿಕಾ ಚೌಧರಿಗೆ ವಾರಕ್ಕೆ 4 ಲಕ್ಷ ರು ಸಿಕ್ಕಿದೆ. ಇವರಿಗಿಂತ ಸ್ವಲ್ಪ ಹೆಚ್ಚಿನ ಮೊತ್ತ ರೊಶೆಲ್ ರಾವ್ ಹಾಗೂ ದಿಗಂಗನಾಗೆ ಸಿಗುತ್ತಿದೆ.

ಮಂದನಾ ಕರಿಮಿಗೆ 5 ಲಕ್ಷ ರು

ಪ್ರಿನ್ಸ್ ನರುಲಾ, ಕಿಶ್ವರ್ ಮರ್ಚೆಂಟ್ ಹಾಗೂ ಸುಯಶ್ ರಾಯ್, ಅಮಾನ್ ವರ್ಮಾ, ಮಂದನಾ ಕರಿಮಿಗೆ 5 ಲಕ್ಷ ರು ನಂತೆ ಸಿಗುತ್ತಿದೆ. ವಿಶೇಷ ಸ್ಪರ್ಧಿಗಳಿಗೆ 40 ಲಕ್ಷ ರು ಸಿಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ರಿಮಿ ಸೇನ್ ಗೆ ಅತ್ಯಧಿಕ ಮೊತ್ತ

ಡಿಎನ್ ಎ ವರದಿ ಪ್ರಕಾರ ರಿಮಿ ಸೇನ್ ಗೆ ಸುಮಾರು 2 ಕೋಟಿ ರು ಸಂಭಾವನೆ (signing amount) ಸಿಗುತ್ತಿದೆಯಂತೆ ಇದು ಬಿಗ್ ಬಾಸ್ ವಿಜೇತರು ಪಡೆಯುವ ಮೊತ್ತಕ್ಕಿಂತ ಅಧಿಕವಾಗಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.

English summary
Colors TV's controversial reality show, Bigg Boss has always been in news every season, especially, regarding the amount that the contestants/host get paid.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada