Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್ ಮನೆಗೆ 'ಗೇ' ಸ್ಪರ್ಧಿ ವೈಲ್ಡ್ ಕಾರ್ಡ್ ಎಂಟ್ರಿ
ಕಲರ್ಸ್ ವಾಹಿನಿಯ ಬಿಗ್ ಬಾಸ್ ಡಬ್ಬಲ್ ಟ್ರಬಲ್ ನಲ್ಲಿ ಮತ್ತೊಮ್ಮೆ ವೈಲ್ಡ್ ಕಾರ್ಡ್ ಎಂಟ್ರಿಯಾಗುತ್ತಿದೆ. ಸೋದರನ ಅಕಾಲಿಕ ಮರಣದ ಸಂತಾಪದೊಂದಿಗೆ ಕೀತ್ ಸಿಕ್ವೇರಾ ಮತ್ತೊಮ್ಮೆ ರೀ ಎಂಟ್ರಿ ಕೊಡುವುದು ಖಚಿತವಾಗಿದೆ. ಕೀತ್ ಜೊತೆಗೆ 'ಗೇ' ಸಮುದಾಯಕ್ಕೆ ಸೇರಿದ ಖ್ಯಾತ ವಸ್ತ್ರ ವಿನ್ಯಾಸಕರೊಬ್ಬರ ಆಗಮನದ ಬಗ್ಗೆ ಸುಳಿವು ಸಿಕ್ಕಿದೆ.
ರೊಶೆಲ್ ರಾವ್ ಅವರ ಗೆಳೆಯ ಕೀತ್ ಅವರು ಸ್ಪರ್ಧೆಯ ಮಧ್ಯದಲ್ಲಿ ತುರ್ತು ಕರೆ ಮೇರೆಗೆ ಶೋ ಬಿಟ್ಟು ಮನೆಗೆ ತೆರಳಿದ್ದರು. ಕೀತ್ ಮನೆಯಿಂದ ಏತಕ್ಕೆ ಹೊರಕ್ಕೆ ತೆರಳಿದ್ದರು ಎಂಬುದರ ಬಗ್ಗೆ ಸ್ಪರ್ಧಿಗಳಿಗೆ ಹೆಚ್ಚಾಗಿ ತಿಳಿಯಲೇ ಇಲ್ಲ. [ದುಡ್ಡಿಗಾಗಿ 'ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!]
ಅಭಿಮಾನಿಗಳ ಒತ್ತಾಯದ ಮೇರೆಗೆ ಕೀತ್ ಅವರನ್ನು ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಕಳಿಸಲಾಗುತ್ತಿದೆ ಎಂದು ನಿರೂಪಕ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.
ಈ ನಡುವೆ ಸೀಕ್ರೆಟ್ ರೂಮಿಗೆ ತೆರಳಿ ಎಲ್ಲರ ಬಗ್ಗೆ ತಿಳಿದು ಕೊಂಡ ಮಂದನಾ ಕರಿಮಿ ಈಗ ಆಪ್ತ ಗೆಳತಿ ರೊಶೆಲ್ ರಾವ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕನ್ವಲ್ಜೀತ್ ಅವರು ನನಗೆ ಮಂದನಾ ಹಾಗೂ ರೊಶೆಲ್ ಇಬ್ಬರೂ ಇಷ್ಟ ಎಂದಿದ್ದಾರೆ. [ಬಿಗ್ ಬಾಸ್ ಸ್ಪರ್ಧಿಗಳಿಗೆ 'ಬಿಗ್' ಮೊತ್ತದ ಸಂಭಾವನೆ]
ಸೀಕ್ರೆಟ್
ರೂಮಿನಿಂದ
ಬಂದ
ಮೇಲೆ
ಮಂದನಾ
ಹೇಳುವ
ಇಬ್ಬರು
ವ್ಯಕ್ತಿಗಳು
ನಾಮಿನೇಟ್
ಬದಲಿಗೆ
ಈ
ವಾರ
ಸೇಫ್
ಆಗುತ್ತಿದ್ದಾರೆ
ಎಂಬುದು
ಮಂದನಾ
ಬಿಟ್ಟು
ಉಳಿದ
ಎಲ್ಲರಿಗೂ
ತಿಳಿದಿತ್ತು.
ಈ
ವಾರ
ಯಾರು
ವೈಲ್ಡ್
ಕಾರ್ಡ್
ಮೂಲಕ
ಪ್ರವೇಶಿಸುತ್ತಾರೆ?
ಮುಂದೆ
ಓದಿ...

ಸೈಲಂಟ್ ಸ್ಟಾರ್ ರಿಮಿ ನಾಟ್ ಸೇಫ್
ಇದಕ್ಕಾಗಿ ರೊಶೆಲ್ ರಾವ್ ಅನಗತ್ಯವಾಗಿ ಮಂದನಾ ವಿರುದ್ಧ ವಿಷಕಾರಿ ನಾಮಿನೇಟ್ ಆಗುವಂತೆ ಮಾಡಿಕೊಂಡರು. ಹೀಗಾಗಿ ಈ ವಾರ ಸೇಫ್ ಆದರು. ರೊಶೆಲ್ ಜೊತೆಗೆ ಪ್ರಿನ್ಸ್ ನರುಲಾ ಕೂಡಾ ಸೇಫ್ ಆಗಿದ್ದಾರೆ. ಒಮ್ಮೆಯಾದರೂ ನಾಮಿನೇಟ್ ಆಗದೆ ಉಳಿಯುವ ಸ್ಥಿತಿ ಹೇಗಿರುತ್ತೆ ಎಂಬುದನ್ನು ನೋಡಬೇಕು ಎನ್ನುತ್ತಿದ್ದ ಸೈಲಂಟ್ ಸ್ಟಾರ್ ರಿಮಿ ಈ ಬಾರಿಯೂ ಮನೆಗೆ ಹೋಗುವ ಮನಸ್ಥಿತಿಯಲ್ಲಿದ್ದೇನೆ ಎನ್ನುತ್ತಿದ್ದಾರೆ.

ಬಿಗ್ ಬಾಸ್ ನ ಅಭಿಮಾನಿ ವಸ್ತ್ರ ವಿನ್ಯಾಸಕ ಕನ್ವಲ್ಜೀತ್
ಬಿಗ್ ಬಾಸ್ ನ ಅಪ್ಪಟ ಅಭಿಮಾನಿ ಎಂದು ಹೇಳಿಕೊಳ್ಳುವ ವಸ್ತ್ರ ವಿನ್ಯಾಸಕ ಕನ್ವಲ್ಜೀತ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ದೃಶ್ಯಾವಳಿಯ ಕ್ಲಿಪಿಂಗ್ ಗಳು ಈಗಾಗಲೇ ಪ್ರಸಾರವಾಗಿವೆ. ಸೀಸನ್ 1 ರಿಂದ ನಾನು ಒಮ್ಮೆಯಾದರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಕನಸು ಕಾಣುತ್ತಿದ್ದೆ. ಈಗ ಮನೆಗೆ ಎಂಟ್ರಿ ಕೊಡಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಗೇ ಫ್ಯಾಷನ್ ಸಮುದಾಯದ ಪ್ರತಿನಿಧಿ
ನಾನು ಇಲ್ಲಿ ಗೇ ಫ್ಯಾಷನ್ ಸಮುದಾಯದ ಪ್ರತಿನಿಧಿಯಾಗಿ ಇರುತ್ತೇನೆ. ನಾನು ಸ್ಪರ್ಧಿಯಾಗಿ ಉಳಿಯುತ್ತೇನೆ ಹಾಗೂ ಫಿನಾಲೆ ತನಕ ಹೋಗುವ ಭರವಸೆ ಇದ್ದೆ . ಇದಕ್ಕಾಗಿ ಯಾವುದೇ ಪೂರ್ವ ತಯಾರಿ ಅಗತ್ಯವಿಲ್ಲ ಎಂದಿದ್ದಾರೆ. ಮಾಧುರಿ ದೀಕ್ಷಿತ್, ಅಮಿತಾಬ್ ಬಚ್ಚನ್, ರಿಯಾ ಸೇನ್, ರಾಖಿ ಸಾವಂತ್, ಡಾಲಿ ಬಿಂದ್ರಾ ಅವರಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ
ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಪುನೀತ್ ವಶಿಷ್ಠ ಹಾಗೂ ರಿಷಬ್ ಸಿನ್ಹಾ ಪೈಕಿ ಪುನೀತ್ ಮನೆಯಿಂದ ಹೊರಬಿದ್ದಿದ್ದಾರೆ. ಈಗ ಕನ್ವಲ್ಜೀತ್ ಅವರು ಕೂಡಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ. ಕೀತ್ ಮರು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ.

ಫ್ಯಾಷನ್ ವಿನ್ಯಾಸಕ ಇಮಾಮ್ ಸಿದ್ದಿಕಿ
ಫ್ಯಾಷನ್ ವಿನ್ಯಾಸಕ, ಟಿವಿ ಕಲಾವಿದ ಇಮಾಮ್ ಸಿದ್ದಿಕಿ ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಇವರು ಕನ್ವಲ್ಜೀತ್ ಬಾಲ್ಯದ ಗೆಳೆಯರು ಎಂಬುದು ಗುಟ್ಟಿನ ಸಂಗತಿಯೇನಲ್ಲ. ಈ ಹಿಂದೆ ವಿಜೆ ಆಂಡಿ ಸೇರಿದಂತೆ ಅನೇಕರು ಬಿಗ್ ಬಾಸ್ ಮನೆಯಲ್ಲಿ ಎಲ್ ಜಿಬಿಟಿ ಸಮುದಾಯದ ಕೆಟಗರಿಗೆ ಬೆಂಬಲ ಸೂಚಿಸಿದ್ದರು.