For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆ ಹೊಕ್ಕ ಮೊದಲ ದಿನವೇ ಮದುವೆ ಫಿಕ್ಸ್

  By ಜೇಮ್ಸ್ ಮಾರ್ಟಿನ್
  |

  ರಿಯಾಲಿಟಿ ಶೋ ಗಳ ಬಾಪ್ ಎನಿಸಿಕೊಂಡಿರುವ ಬಿಗ್ ಬಾಸ್ 9 ಆರಂಭವಾಗಿ ದಿನ ಕಳೆಯುವುದರೊಳಗೆ ಜೋಡಿಯೊಂಡು ರಿಯಲ್ ಲೈಫ್ ನಲ್ಲಿ ಹಸಮಣೆ ಏರಲು ಸಿದ್ಧವಾಗಿದೆ. ಡಬ್ಬಲ್ಟ್ರಬಲ್ ನಲ್ಲಿ ಬೇರೆ ಬೇರೆಯಾಗಿರುವ ತಾರಾ ಜೋಡಿ ಸುಯಶ್ ಹಾಗೂ ಕಿಶ್ವಾರ್ ಮುಂದಿನ ವರ್ಷ ಮದುವೆಯಾಗುವುದಾಗಿ ಘೋಷಿಸಿದ್ದಾರೆ.

  ಕಲರ್ಸ್ ವಾಹಿನಿಯಲ್ಲಿ ಭರ್ಜರಿಯಾಗಿ ಆರಂಭಗೊಂಡ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 9 ಶೋ ಮುಗಿಯುತ್ತಿದ್ದಂತೆ ಮದುವೆಗೆ ಸಿದ್ಧರಾಗುತ್ತೇವೆ. ಜನವರಿ ಅಥವಾ ಫೆಬ್ರವರಿ ತಿಂಗಳ ಕೊನೆಗೆ ಇಬ್ಬರು ಮದುವೆಯಾಗುತ್ತಿದ್ದೇವೆ ಎಂದು ಟೆಲಿಫೋನ್ ಮೂಲಕ ಆಪ್ತರ ಜೊತೆ ಸುಯ್ಯಶ್ ಮಾತನಾಡಿದ್ದು ಮಾಧ್ಯಮಗಳ ಕಿವಿಗೆ ಬಿದ್ದಿದೆ. [ಯಾರು ಯಾರ ಜೋಡಿಯಾಗಿದ್ದಾರೆ? ]

  ಮುಂಬೈಯಿಂದ 80 ಕಿ.ಮೀ ದೂರದಲ್ಲಿರುವ ಲೋನಾವಾಲದ ಪಶ್ಚಿಮ ಘಟ್ಟದ ಪರ್ವತಶ್ರೇಣಿಯ ತಪ್ಪಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಇನ್ನು ಏನೇನು ನಡೆಯಲಿದೆಯೋ ಬಲ್ಲವರು ಯಾರು?

  ಸುಯಶ್ ರಾಯ್ ಹಾಗೂ ಕಿಶ್ವಾರ್ ಮರ್ಚಂಡ್ ಸದ್ಯಕ್ಕೆ ಮನೆಯಲ್ಲಿ ಬೇರೆ ಬೇರೆ ಪಾರ್ಟ್ನರ್ ಗಳ ಜೊತೆ ಇದ್ದಾರೆ. ಕಿಶ್ವಾರ್ ಅವರಿಗೆ ಅಮನ್ ವರ್ಮ ಜೋಡಿಯಾಗಿದ್ದರೆ, ಸುಯಶ್ ಗೆ ರೊಶೆಲ್ ರಾವ್ ಜೋಡಿಯಾಗಿದ್ದಾರೆ.

  ಸುಯಶ್ ಹಾಗೂ ಕಿಶ್ವಾರ್ ಅವರ ಮದುವೆ ದಿನಾಂಕ ಇನ್ನೂ ಪಕ್ಕಾ ಆಗದಿದ್ದರೂ ಮಧುಚಂದ್ರಕ್ಕೆ ತೆರಳಲು ಪ್ಯಾರೀಸ್, ಅಮ್ ಸ್ಟರ್ ಡ್ಯಾಂ, ಮಾಸ್ಕೋ.. ಕಡೆ ಟಿಕೆಟ್ ಬುಕ್ಕಿಂಗ್ ಬಗ್ಗೆ ಮಾತುಕತೆ ನಡೆಸಿರುವ ಸುದ್ದಿ ಸಿಕ್ಕಿದೆ. [ಬಿಗ್ ಬಾಸ್ ಗೆ ನೀಲಿ ತಾರೆ ಬರ್ತಿಲ್ಲ]

  ನಿರೀಕ್ಷೆಯಂತೆ ಅಂಕಿತ್ ಗೇರಾ, ರೂಪಲ್ ತ್ಯಾಗಿ, ದಿಗಂಗನಾ ಸೂರ್ಯವಂಶಿ, ರೊಶೆಲ್ ಮಾರಿಯಾ ರಾವ್ ಹಾಗೂ ಅಮನ್ ವರ್ಮ ಅವರು ಮನೆ ಸೇರಿದ್ದಾರೆ. ಕಿಶ್ವಾರ್ ಮರ್ಚಂಡ್, ರಿಮಿ ಸೇನ್, ಮಂದನಾ ಕರಿಮಿ, ಯುವಿಕಾ ಚೌಧರಿ, ವಿಕಾಶ್ ಭಲ್ಲಾ, ಅರವಿಂದ್, ಕೀತ್ ಸಿಕ್ವೇರಾ, ಪ್ರಿನ್ಸ್ ನರುಲಾ ಮನೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ.

  ಕಲರ್ಸ್ ವಾಹಿನಿಯಲ್ಲಿ ಅಕ್ಟೋಬರ್ 11ರಿಂದ ಬಿಗ್ ಬಾಸ್ 9 ಪ್ರಸಾರ ಅಧಿಕೃತವಾಗಿ ಆರಂಭಗೊಂಡಿದೆ. ಸಲ್ಮಾನ್ ಜೊತೆ ವಿಕೇಂಡ್ ಶೋ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ. ಇನ್ನೂ ಸ್ಪರ್ಧಿಗಳು ಜೋಡಿಯಾಗಿ ಮನೆಯೊಳಗೆ ಹೇಗೆ ಇರುತ್ತಾರೆ ಎಂಬ ಆಟವನ್ನು ಪ್ರತಿದಿನ ರಾತ್ರಿ 10.30 ರ ನಂತರ ಕಾಣಬಹುದು.

  English summary
  Actors and real life couple Suyyash Rai and Kishwar Merchant, who have just entered Bigg Boss 9 hosted by superstar Salman Khan, are planning to tie the knot by "January end or February next year".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X