Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್ ಮನೆಗೆ ಬಂದ ಮೊದಲ ವಾರವೇ ಕ್ಯಾಪ್ಟನ್!
ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ದೊಡ್ಡಣ್ಣ ಬಿಗ್ ಬ್ರದರ್ ಶೋನಲ್ಲಿ ಸ್ಪರ್ಧಿಯಾಗಿದ್ದ ಪ್ರಿಯಾ ಮಲಿಕ್ ಡಬ್ಬಲ್ ಟ್ರಬಲ್ ನಲ್ಲಿ ಕಿರಿಕಿರಿ ಉಂಟು ಮಾಡಲು ಬಂದು ಕಿರಿಕಿರಿ ಅನುಭವಿಸಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿಗಾಗಿ ನಡೆದ ಟಾಸ್ಕ್ ನಲ್ಲಿ ಗೆಲುವು ಸಾಧಿಸಿ ಮೊದಲ ವಾರವೇ ಭರ್ಜರಿ ಸಾಧನೆ ಮಾಡಿದ್ದಾರೆ. ಈ ನಡುವೆ ಬಿಗ್ ಬಾಸ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ 47ನೇ ದಿನ ನಡೆದಿದೆ.
ಬಿಗ್ ಬಾಸ್ 9ರ ವೀಕೆಂಡ್ ಶೋನಲ್ಲಿ ಅಮಾನ್ ವರ್ಮ ಎಲಿಮಿನೇಷನ್ ಶಾಕ್ ಜೊತೆಗೆ ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಸಂಚಲನ ಮೂಡಿಸಿತ್ತು. [ಬಿಗ್ ಬಾಸ್ ಮನೆಗೆ ಹಾರಿ ಬಂದ ಬಿಗ್ ಬ್ರದರ್ ನ ಪ್ರಿಯಾ]
ಕಳೆದ ವಾರದ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ವಸ್ತ್ರ ವಿನ್ಯಾಸಕ ಕನ್ವಲ್ಜೀತ್ ಸಿಂಗ್ ಮನೆ ಪ್ರವೇಶಿಸಿದ್ದರು. ಈ ವಾರ ಆಸ್ಟ್ರೇಲಿಯಾದ ಬಿಗ್ ಬ್ರದರ್ ನಲ್ಲಿ ಸ್ಪರ್ಧಿಯಾಗಿ ಸಾಕಷ್ಟು ಸದ್ದು ಮಾಡಿದ್ದ ಭಾರತೀಯ ಮೂಲದ ಪ್ರಿಯಾ ಮಲಿಕ್ ಅವರನ್ನು ಬಿಗ್ ಬಾಸ್ ಮನೆಯೊಳಗೆ ಬಿಡಲಾಗಿದೆ. ಈಗ ಮತ್ತೊಮ್ಮೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಕೀತ್ ಆಗಮನದ ನಿರೀಕ್ಷೆಯಿದೆ,
ಈ
ನಡುವೆ
ಕನ್ವಲ್ಜೀತ್
ಸಿಂಗ್
ಮನೆಯಲ್ಲಿ
ಪ್ರಿಯಾ,
ರಿಷಬ್,
ಮಂದನಾ
ಜೊತೆ
ಕಿರಿಕಿರಿ
ಶುರು
ಮಾಡುತ್ತಾನೆ.
ಸುಮ್ಮನೆ
ಕುಳಿತಿದ್ದ
ದಿಗಂಗನಾ
ಜೊತೆ
ಮಂದನಾ
ಕಿರಿಕ್
ಮಾಡಿಕೊಳ್ಳುತ್ತಾಳೆ.
ಕಾರಿನಲ್ಲಿರುವ
ರೊಶೆಲ್
ನನ್ನ
ಹುಟ್ಟುಹಬ್ಬದ
ದಿನವೇ
ಈ
ರೀತಿ
ಹಿಂಸೆ
ಅನುಭವಿಸುತ್ತಿದ್ದೀನಲ್ಲಾ
ಎಂದು
ಕಣ್ಣೀರಿಡುತ್ತಾಳೆ.

ಕ್ಯಾಪ್ಟನ್ಸಿಗಾಗಿ ನಡೆದ ಟಾಸ್ಕ್
ಕ್ಯಾಪ್ಟನ್ಸಿ ಬಯಸುವ ಸ್ಪರ್ಧಿಗಳು ಕಾರಿನೊಳಗೆ ಹೋಗಬೇಕು ಬಿಗ್ ಬಾಸ್ ಆರ್ಡರ್ ಬರುವ ತನಕ ಅದರಲ್ಲೇ ಇರಬೇಕು ಕನಿಷ್ಠ 2 ದಿನ. ಕೊನೆ ತನಕ ಇರುವವರಿಗೆ ಎರಡು ವಾರಗಳ ಇಮ್ಯೂನಿಟಿ ಹಾಗೂ ಎರಡು ವಾರದ ನಾಮಿನೇಷನ್ ನಿಂದ ಸೇಫ್ ಆಗುವ ಅವಕಾಶ ಸಿಗಲಿದೆ. ಈಗ ಪ್ರಿಯಾ ಈ ಟಾಸ್ಕ್ ಗೆದ್ದುಕೊಂಡಿದ್ದಾರೆ. ಪ್ರಿನ್ಸ್ ನರುಲಾ ಹಾಗೂ ರೊಶೆಲ್ ಅವರು ಕೊನೆ ಕ್ಷಣದಲ್ಲಿ ಅಸ್ವಸ್ಥರಾಗಿ ಆಟದಿಂದ ಬಲವಂತವಾಗಿ ಹೊರಬರಬೇಕಾಯಿತು.

ಯಾರು ಯಾರು ಭಾಗವಹಿಸಿಲ್ಲ
ರಿಮಿ ಸೇನ್, ಮಂದನಾ ಕರಿಮಿ ಇಬ್ಬರು ಅತ್ಯಂತ ಕಳಪೆ ಆಟಗಾರರು ಎಂದು ಪರಿಗಣಿಸಲಾಗಿತ್ತು. ದಿಗಂಗನಾ ಅಸ್ವಸ್ಥರಾಗಿದ್ದ ಕಾರಣ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಭಾಗವಹಿಸಲಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಯಸ್ ಕೂಡಾ ಅಸ್ವಸ್ಥರಾಗಿ ಕಾರಿನಿಂದ ಹೊರ ಬಂದರು. ರಿಷಬ್ ಕೂಡಾ ಇರಲಿಲ್ಲ, ಕಿಶ್ವರ್ ಕೂಡಾ ದೈಹಿಕ ತೊಂದರೆಯಿಂದ ಕಾರಿನಿಂದ ಹೊರ ಬರಬೇಕಾಯಿತು.

ಸುಸು ಎಲ್ಲಾ ಮೈಮೇಲೆ ಹಾಕಿಕೊಂಡ ಪ್ರಿಯಾ
ಕಾರಿನಲ್ಲೇ ನಿತ್ಯ ಕರ್ಮ ಮಾಡಿ ಮುಗಿಸಬೇಕಾದ್ದರಿಂದ ಪ್ರಿಯಾ ಅವರು ಅಲ್ಲೇ ಸುಸು ಮಾಡಿಕೊಂಡರು. ನಂತರ ಪ್ರಿಯಾ ಮಾಡಿದ್ದ ಸುಸು ತೆಗೆದುಕೊಂಡ ಕಿಶ್ವರ್ ಆಕೆ ಮೇಲೆ ಎಸೆದರು. ಸ್ಪ್ರೇ ಹಿಟ್, ಸೇರಿದಂತೆ ಏನೇನೋ ಮೈಮೇಲೆ ಎಸೆದರೂ ಬೆಚ್ಚದೆ ಕೊನೆ ತನಕ ಉಳಿದವರು ನಾಯಕತ್ವ ಪಡೆಯಲಿದ್ದಾರೆ.

ಬಿಗ್ ಬಾಸ್ ನಲ್ಲಿ ಇತಿಹಾಸ ನಿರ್ಮಾಣ
ಬಿಗ್ ಬಾಸ್ ಇತಿಹಾಸದಲ್ಲೇ ಎಂದಿಗೂ ನಡೆಯದ ಘಟನೆ ಸಂಭವಿಸಿದೆ. ಎಲಿಮಿನೇಷನ್ ಗೂ ಮುನ್ನ ಕೆಲ ಕಾಲ ಬಿಗ್ ಬಾಸ್ ಮನೆ ಬಾಗಿಲು ತೆರೆಯಲಾಗಿತ್ತು. ರಿಷಬ್ ಹಾಗೂ ಸುಯಶ್ ಇಬ್ಬರೂ ರಿಮಿಯನ್ನು ಮನೆಯಿಂದ ಹೊರಡುವಂತೆ ಸೂಚಿಸಿದರು. ನಿಮ್ಮ ಲಗೇಜ್ ಪ್ಯಾಕ್ ಮಾಡಿ ಸಹಾಯ ಮಾಡುತ್ತೀವಿ ಎಂದು ಹೊರಟರು.