Don't Miss!
- Sports
ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಬಿಗ್ ಬಾಸ್ ಮನೆಗೆ ಹಾರಿ ಬಂದ ಬಿಗ್ ಬ್ರದರ್ ನ ಪ್ರಿಯಾ
ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ದೊಡ್ಡಣ್ಣ ಬಿಗ್ ಬ್ರದರ್ ಶೋನಲ್ಲಿ ಸ್ಪರ್ಧಿಯಾಗಿದ್ದ ಒಬ್ಬರನ್ನು ಡಬ್ಬಲ್ ಟ್ರಬಲ್ ನಲ್ಲಿ ಕಿರಿಕಿರಿ ಉಂಟು ಮಾಡಲು ಕರೆಸಿಕೊಳ್ಳಲಾಗಿದೆ. ಬಿಗ್ ಬಾಸ್ 9ರ ವೀಕೆಂಡ್ ಶೋನಲ್ಲಿ ಅಮಾನ್ ವರ್ಮ ಎಲಿಮಿನೇಷನ್ ಶಾಕ್ ಜೊತೆಗೆ ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಸಂಚಲನ ಮೂಡಿಸಿದೆ.
ನಿರೀಕ್ಷೆಯಂತೆ ಅಮಾನ್ ವರ್ಮ ಅವರನ್ನು ಮನೆಯಿಂದ ಹೊರಕ್ಕೆ ಕರೆಸಿಕೊಳ್ಳಲಾಗಿದೆ. ಜನತೆ ನಿಮಗೆ ಹೆಚ್ಚಿನ ಮತ ನೀಡಲಿಲ್ಲ. ಮನೆಯಲ್ಲಿ ಸುಮ್ಮನೆ ಕುಳಿತು ಮೇಕಪ್ ಮಾಡಿಕೊಂಡು ಓಡಾಡಿದರೂ ರಿಮಿ ಸೇನ್ ಗೆ ಹೆಚ್ಚಿನ ಮತ ಸಿಕ್ಕಿದೆ. ಅಲ್ಲದೆ, ಎಪಿಸೋಡ್ ಗೆ ಬಿಗ್ ಬಾಸ್ ಆಗಿ ದೀಪಿಕಾ ಕೂಡಾ ರಿಮಿ ಮನೆಯಲ್ಲೇ ಇರಲಿ ಎಂದು ಬಯಸಿದ್ದರಿಂದ ಅಮಾನ್ ಮನೆಯಿಂದ ಔಟ್ ಆಗಿದ್ದಾರೆ.[ಬಿಗ್ ಬಾಸ್ ನ ಅತ್ಯಂತ ಲಕ್ಕಿ ಸ್ಪರ್ಧಿ ಈ ಬಾರಿಯೂ ಸೇಫ್!]
ಕಳೆದ
ವಾರದ
ವೈಲ್ಡ್
ಕಾರ್ಡ್
ಎಂಟ್ರಿಯಾಗಿ
ವಸ್ತ್ರ
ವಿನ್ಯಾಸಕ
ಕನ್ವಲ್ಜೀತ್
ಸಿಂಗ್
ಮನೆ
ಪ್ರವೇಶಿಸಿದ್ದರು.
ಈ
ವಾರ
ಆಸ್ಟ್ರೇಲಿಯಾದ
ಬಿಗ್
ಬ್ರದರ್
ನಲ್ಲಿ
ಸ್ಪರ್ಧಿಯಾಗಿ
ಸಾಕಷ್ಟು
ಸದ್ದು
ಮಾಡಿದ್ದ
ಭಾರತೀಯ
ಮೂಲದ
ಪ್ರಿಯಾ
ಮಲಿಕ್
ಅವರನ್ನು
ಬಿಗ್
ಬಾಸ್
ಮನೆಯೊಳಗೆ
ಬಿಡಲಾಗುತ್ತಿದೆ.

ವೈಲ್ಡ್ ಕಾರ್ಡ್ ಅರ್ಥಕ್ಕೆ ಸರಿಯಾದ ಆಟವಾಡುತ್ತೇನೆ
ವೈಲ್ಡ್ ಕಾರ್ಡ್ ಅರ್ಥಕ್ಕೆ ಸರಿಯಾದ ಆಟವಾಡುತ್ತೇನೆ. ನಾನು ಇಲ್ಲಿ ಸಮಸ್ಯೆ ಸೃಷ್ಟಿಸಲೆಂದೇ ಬಂದವಳು ಎಂದಿದ್ದಾಳೆ. ಸಕತ್ ಬೋರಿಂಗ್ ಆಗಿರುವ ಬಿಗ್ ಬಾಸ್ ಮನೆಯಲ್ಲಿ ಅತ್ತೆ ಸೊಸೆ ಜಗಳ ಮಾದರಿಯನ್ನು ಕಂಡಿರುವ ಪ್ರೇಕ್ಷಕರಿಗೆ ಪ್ರಿಯಾ ಯಾವ ರೀತಿ ಕಿರಿಕ್ ಶುರು ಮಾಡುತ್ತಾಳೆ ಎಂಬ ಕುತೂಹಲವಿದೆ.

ವೃತ್ತಿಯಿಂದ ಶಿಕ್ಷಕಿಯಾಗಿರುವ ಪ್ರಿಯಾ
ವೃತ್ತಿಯಿಂದ ಶಿಕ್ಷಕಿಯಾಗಿರುವ ಪ್ರಿಯಾ ಅವರು ಸ್ಟಾಂಟ್ ಅಪ್ ಕಾಮಿಡಿಯನ್ ಕೂಡಾ ಹೌದು. ಹಿಂದಿ ಆವೃತ್ತಿಯ ಬಿಗ್ ಬಾಸ್ ಪ್ರತಿ ಎಪಿಸೋಡ್ ನೋಡಿ ಪ್ರತಿ ಸ್ಪರ್ಧಿಯ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡೇ ಇಲ್ಲಿಗೆ ಬಂದಿದ್ದಾರೆ. ಇಲ್ಲಿ ತನಕದ ಆಟದಲ್ಲಿ ಕೀತ್ ಮಾತ್ರ ಅಸಲಿ ಆಟವಾಡಿದ್ದಾರೆ. ಮಿಕ್ಕವರದ್ದು ಫೇಕ್ ಗೇಮ್ ಎಂದಿದ್ದಾಳೆ.

43ನೇ ದಿನ ನಾಮಿನೇಷನ್ ಗದ್ದಲ
ಸೋಮವಾರದ ಎಪಿಸೋಡ್ ನಲ್ಲಿ ಪ್ರಿಯಾ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾರಿ ಗದ್ದಲ ಉಂಟು ಮಾಡುವ ಸುಳಿವು ಸಿಕ್ಕಿದೆ. ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಲ್ಲರೂ ಏಕೆ ಬಂದಿದ್ದಾರೆ ಎಂಬುದನ್ನು ತಿಳಿಸಿಕೊಡಲು ಪ್ರಿಯಾ ಮುಂದಾಗಿದ್ದಾರೆ. ಮುಖ್ಯವಾಗಿ ರೊಶೆಲ್ ರಾವ್ ಹಾಗೂ ಸುಯಶ್ ರಾಯ್ ರನ್ನು ಟೀಕಿಸುತ್ತಾ, ನಾಯಕನಾಗಿ ನೀನು ನಾಲಾಯಕ್ ಎಂದಿದ್ದಾರೆ.

ಎಪಿಸೋಡಿಗೆ ದೀಪಿಕಾ ಅವರೇ ಬಿಗ್ ಬಾಸ್
ಭಾನುವಾರದ ಎಪಿಸೋಡಿಗೆ ದೀಪಿಕಾ ಅವರೇ ಬಿಗ್ ಬಾಸ್ ಆಗಿದ್ದರು. ಅಂತಿಮವಾಗಿ ಅಮಾನ್ ವರ್ಮ ಹಾಗೂ ರಿಮಿ ಸೇನ್ ನಡುವೆ ಯಾರನ್ನು ಹೊರಕ್ಕೆ ಕಳಿಸಬೇಕು ಎಂಬ ಪ್ರಶ್ನೆಗೆ ರಿಮಿಗೆ ಇನ್ನೊಂದು ಅವಕಾಶ ನೀಡುವುದು ಒಳ್ಳೆಯದು ಎಂದರು. ಜೊತೆಗೆ ರಿಮಿಗೆ, ನೀವು ನಿಮ್ಮ ಮೇಕ್ ಅಪ್ ಕಿಟ್ ಪಕ್ಕಕ್ಕಿಟ್ಟು ಟಾಸ್ಕ್ ಗಳಲ್ಲಿ ಪಾಲ್ಗೊಳ್ಳಿ ಇದರಿಂದ ಮನೆಯ ಲಕ್ಸುರಿ ಬಜೆಟ್ ಗೂ ಒಳ್ಳೆಯದು ಎಲ್ಲರಿಗೂ ಹಿತ ಎಂದು ಕಿವಿಮಾತು ಹೇಳಿದರು.

ಕೀತ್ ಆಗಮನ ಯಾವಾಗ?
ಎಲ್ಲರ ನಿರೀಕ್ಷೆ ಈಗ ಕೀತ್ ಮೇಲಿದೆ. ಮಂದನ ಹಾಗೂ ರೊಶೆಲ್ ನಡುವಿನ ಗೆಳೆತನ ಹಳಸಿದೆ. ಕೀತ್ ಮನೆಗೆ ಬಂದು ಯಾವ ರೀತಿ ಆಟವಾಡುತ್ತಾರೆ ಎಂಬುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಕನ್ವಲ್ಜೀತ್ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕೀತ್ ಬರಬೇಕಿತ್ತು. ಅದರೆ, ವಿಳಂಬಕ್ಕೆ ಏನು ಕಾರಣ ಇನ್ನೂ ತಿಳಿದು ಬಂದಿಲ್ಲ.