»   » ಬಿಗ್ ಬಾಸ್ ನ ಅತ್ಯಂತ ಲಕ್ಕಿ ಸ್ಪರ್ಧಿ ಈ ಬಾರಿಯೂ ಸೇಫ್!

ಬಿಗ್ ಬಾಸ್ ನ ಅತ್ಯಂತ ಲಕ್ಕಿ ಸ್ಪರ್ಧಿ ಈ ಬಾರಿಯೂ ಸೇಫ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ವಿವಾದಿತ ರಿಯಾಲಿಟಿ ಶೋ ಬಿಗ್ ಬಾಸ್ ನ 'ಡಬ್ಬಲ್ ಟ್ರಬಲ್' ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕನ್ವಲ್ಜೀತ್ ಬಂದ ಮೇಲೆ ಮೊದಲ ಬಾರಿಗೆ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ಟ್ವಿಸ್ಟ್ ಉಳಿಸಿಕೊಳ್ಳಲಾಗಿದೆ. ನಿರೂಪಕ ಸಲ್ಮಾನ್ ಖಾನ್ ಅವರು ಎಂದಿನಂತೆ ಕುತೂಹಲ ಉಳಿಸಿಕೊಂಡು ಮನೆಯಿಂದ ಹೊರ ಹೋಗುವ ಸ್ಪರ್ಧಿಯನ್ನು ಘೋಷಿಸಿದ್ದಾರೆ.

ಅಚ್ಚರಿಯ ವಿಷಯವೆಂದರೆ ಪರಮ ಬೋರಿಂಗ್ ಸ್ಪರ್ಧಿ ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುತ್ತಿರುವ ಕಮ್ ಲಕ್ಕಿ ಸ್ಟಾರ್ ಎನಿಸಿರುವ ರಿಮಿ ಸೇನ್ ಅವರು ಈ ಬಾರಿಯೂ ಸೇಫ್ ಆಗಿದ್ದಾರೆ. ಬದಲಿಗೆ ಸ್ಪರ್ಧಿಗಳ ಪೈಕಿ ಹಿರಿಯರಾಗಿರುವ ನಟ ಅಮಾನ್ ವರ್ಮ ಅವರನ್ನು ಮನೆಯಿಂದ ಹೊರಕ್ಕೆ ಕರೆಯಲಾಗಿದೆ ಎಂಬ ಮಾಹಿತಿ ಟ್ವಿಟ್ಟರ್ ಮೂಲಕ ಹೊರಬಿದ್ದಿದೆ. [ಬಿಗ್ ಬಾಸ್ ಸ್ಪರ್ಧಿಗಳಿಗೆ 'ಬಿಗ್' ಮೊತ್ತದ ಸಂಭಾವನೆ]

ಈ ನಡುವೆ ಅಭಿಮಾನಿಗಳ ಒತ್ತಾಯದ ಮೇರೆಗೆ ಕೀತ್ ಅವರನ್ನು ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಕಳಿಸಲಾಗುತ್ತಿದೆ ಎಂದು ನಿರೂಪಕ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ. [ದುಡ್ಡಿಗಾಗಿ 'ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!]

ನಾಮಿನೇಟ್ ಆಗಿದ್ದ ಮಂದನ ಕರಿಮಿ, ಕಿಶ್ವರ್ ಮರ್ಚೆಂಟ್, ದಿಗಾಂಗನಾ ಸೂರ್ಯವಂಶಿ ಹಾಗೂ ರಿಷಬ್ ಸಿನ್ಹಾ ಅವರು ಸೇಫ್ ಎಂದ ಸಲ್ಮಾನ್ ಅವರು ರಿಮಿ ಹಾಗೂ ಅಮಾನ್ ಇಬ್ಬರು ಡೇಂಜರ್ ನಲ್ಲಿದ್ದರೆ ಎಂದು ಹೇಳಿ ಎಪಿಸೋಡ್ ಮುಗಿಸಿದ್ದರು.

ಭಾನುವಾರದ ಎಪಿಸೋಡ್ ನಲ್ಲಿ ಸಲ್ಮಾನ್ ರ ಜೊತೆ 'ಬಿಗ್ ಬಾಸ್' ರೋಲ್ ನಲ್ಲಿ ಕಾಣಿಸಿಕೊಳ್ಳುವ ದೀಪಿಕಾ ಪಡುಕೋಣೆ ಅಮಾನ್ ರನ್ನು ಹೊರಕ್ಕೆ ಕರೆದು ರಿಮಿ ಅವರನ್ನು ಮನೆಯಲ್ಲೇ ಉಳಿಸುತ್ತಾರೆ.

ನಾಮಿನೇಟ್ ಆಗಿದ್ದ ಸ್ಪರ್ಧಿಗಳು

ನಾಮಿನೇಟ್ ಆಗಿದ್ದ ಮಂದನ ಕರಿಮಿ, ಕಿಶ್ವರ್ ಮರ್ಚೆಂಟ್, ದಿಗಾಂಗನಾ ಸೂರ್ಯವಂಶಿ ಹಾಗೂ ರಿಷಬ್ ಸಿನ್ಹಾ ಅವರು ಸೇಫ್ ಎಂದ ಸಲ್ಮಾನ್ ಅವರು ರಿಮಿ ಹಾಗೂ ಅಮಾನ್ ಇಬ್ಬರು ಡೇಂಜರ್ ನಲ್ಲಿದ್ದರೆ ಎಂದು ಹೇಳಿ ಎಪಿಸೋಡ್ ಮುಗಿಸಿದ್ದರು. ಭಾನುವಾರದ ಎಪಿಸೋಡ್ ನಲ್ಲಿ ಅಮಾನ್ ರನ್ನು ಮನೆಯಿಂದ ಹೊರಕ್ಕೆ ಕರೆಯಲಾಗಿದೆ.

ಈ ಎಪಿಸೋಡಿಗೆ ದೀಪಿಕಾ ಅವರೇ ಬಿಗ್ ಬಾಸ್

ಭಾನುವಾರದ ಎಪಿಸೋಡಿಗೆ ದೀಪಿಕಾ ಅವರೇ ಬಿಗ್ ಬಾಸ್ ಆಗಿದ್ದರು. ಅಂತಿಮವಾಗಿ ಅಮಾನ್ ವರ್ಮ ಹಾಗೂ ರಿಮಿ ಸೇನ್ ನಡುವೆ ಯಾರನ್ನು ಹೊರಕ್ಕೆ ಕಳಿಸಬೇಕು ಎಂಬ ಪ್ರಶ್ನೆಗೆ ರಿಮಿಗೆ ಇನ್ನೊಂದು ಅವಕಾಶ ನೀಡುವುದು ಒಳ್ಳೆಯದು ಎಂದರು. ಜೊತೆಗೆ ರಿಮಿಗೆ, ನೀವು ನಿಮ್ಮ ಮೇಕ್ ಅಪ್ ಕಿಟ್ ಪಕ್ಕಕ್ಕಿಟ್ಟು ಟಾಸ್ಕ್ ಗಳಲ್ಲಿ ಪಾಲ್ಗೊಳ್ಳಿ ಇದರಿಂದ ಮನೆಯ ಲಕ್ಸುರಿ ಬಜೆಟ್ ಗೂ ಒಳ್ಳೆಯದು ಎಲ್ಲರಿಗೂ ಹಿತ ಎಂದು ಕಿವಿಮಾತು ಹೇಳಿದರು.

ಯಾರ ಮಾತು ಕೇಳದ ರಿಮಿ ಸೇನ್

ಪ್ರತಿ ವಾರ ನಾಮಿನೇಟ್ ಆಗಿ ಬಚಾವಾಗುತ್ತಾ ಬಂದಿರುವ ಮೊದಲ ಬಾರಿಗೆ ನಾಮಿನೇಟ್ ಆಗದೆ ಹೇಗೆ ಮನೆಯಲ್ಲಿ ಉಳಿಯುವ ಅನುಭವ ಹೇಗಿರುತ್ತೆ ನೋಡಬೇಕು ಎಂದು ಬಯಸಿದ್ದರು. ಅದರೆ, ಸೀಕ್ರೆಟ್ ರೂಮಿನಿಂದ ಬಂದ ಮಂದನ ಅವರು ತಮ್ಮ ಗೆಳತಿ ರೊಶೆಲ್ ರನ್ನು ನಾಮಿನೇಟ್ ಮಾಡಿದರು.ಅದರೆ, ಅದು ನಾಮಿನೇಟ್ ಬದಲು ಸೇಫ್ ಮಾಡುವುದಾಗಿತ್ತು. ರಿಮಿ ಈ ಬಾರಿಯೂ ನಾಮಿನೇಟ್ ಆಗಿದ್ದರು. ಡೇಂಜರ್ ಜೋನ್ ಗೆ ಬಂದಿದ್ದರು. ದೀಪಿಕಾ ಕೊಟ್ಟ ಆಫರ್ ಕೂಡಾ ನಿರಾಕರಿಸಿದರೂ ಉಳಿದಿದ್ದಾರೆ.

ಟಾಸ್ಕ್ ನಲ್ಲಿ ಪಾಲ್ಗೊಂಡರೂ ಅಮಾನ್ ಔಟ್

ಎಲ್ಲಾ ಟಾಸ್ಕ್ ನಲ್ಲಿ ಪಾಲ್ಗೊಂಡರೂ ಅಮಾನ್ ಔಟ್ ಆಗಲು ಮುಖ್ಯ ಕಾರಣ ಅವರಿಗೆ ಹೆಚ್ಚಿನ ಅಭಿಮಾನಿಗಳು ಈಗ ಇಲ್ಲ ಎನ್ನಬಹುದು. ಮನೆಯಲ್ಲಿ ಎಲ್ಲರಿಗೂ ಹಿತವಾಗಿ ಇರಬಯಸಿದ ಅಮಾನ್ ಅವರ ನಡೆ ನುಡಿ ಸಪ್ಪೆ ಎನಿಸಿದರೂ ಬಿಗ್ ಬಾಸ್ ಫಿನಾಲೆ ತನಕವಾದರೂ ಇರುತ್ತದೆ ಎಂಬ ನಿರೀಕ್ಷೆಯಿತ್ತು. ಅದರೆ, ಅಮಾನ್ ಅವರು ಮನೆಯಿಂದ ಹೊರ ಬೀಳಬೇಕಿದೆ.

ಒಂದೂ ಟಾಸ್ಕ್ ಮಾಡದ ರಿಮಿ ಸೇನ್

ಒಂದೂ ಟಾಸ್ಕ್ ಮಾಡದ ರಿಮಿ ಸೇನ್ ರನ್ನು ಇತರೆ ಸ್ಪರ್ಧಿಗಳು, ನಿರೂಪಕ ಸಲ್ಮಾನ್ ಕೂಡಾ ಕಾಲೆಳೆದಿದ್ದಾರೆ. ಅದರೆ, ಯಾವುದಕ್ಕೂ ಹೆಚ್ಚಿನ ಪ್ರತಿಕ್ರಿಯೆ ನೀಡದೆ ನಗೆ ಚೆಲ್ಲುವ ರಿಮಿ, ನಾನು ಇಲ್ಲಿ ಯಾರು ಏನು ಮಾಡುತ್ತಾರೆ ಎಂದು ನೋಡಲು ಬಂದಿದ್ದೇನೆ. ಜನರು ಮನೆಗೆ ಕಳಿಸಿದರೆ ಹೊರಡುತ್ತೇನೆ ಎಂದಿದ್ದಾರೆ. ಬಜೆಟ್ ಟಾಸ್ಕ್ ನಲ್ಲಿ ಪಾಲ್ಗೊಂಡರೂ ವೈಯಕ್ತಿಕ ಟಾಸ್ಕ್ ಗಳಲ್ಲಿ ಯಾವುದರಲ್ಲೂ ರಿಮಿ ಸ್ಪರ್ಧಿಸಿಲ್ಲ.

ರಿಮಿ ಸೇಫ್ ಎನ್ನುವುದರ ಬಗ್ಗೆ ಟ್ವೀಟ್ಸ್

ರಿಮಿ ಸೇಫ್ ಎನ್ನುವುದರ ಬಗ್ಗೆ ಟ್ವೀಟ್ಸ್ ಗಳು ಹರಿದಾಡುತ್ತಿದ್ದು, ಎಪಿಸೋಡ್ ಪ್ರಸಾರಕ್ಕೂ ಮುನ್ನ(ಭಾನುವಾರ ಸಂಜೆ) ಎಲ್ಲರಿಗೂ ಅಮಾನ್ ಔಟ್ ಆಗುವುದು ತಿಳಿದು ಬಿಟ್ಟಿದೆ.

English summary
Here comes the shocking news for all Bigg Boss 9 fans... According to latest reports, Rimi Sen is declared safe while Aman Verma is asked to leave the house!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada