»   » ದುಡ್ಡಿಗಾಗಿ ಎಲ್ಲಾ! ಬಿಗ್ ಬಾಸ್ ವಿನ್ನರ್ ಮೀರಿಸಿದ ರಿಮಿ

ದುಡ್ಡಿಗಾಗಿ ಎಲ್ಲಾ! ಬಿಗ್ ಬಾಸ್ ವಿನ್ನರ್ ಮೀರಿಸಿದ ರಿಮಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ ಇತಿಹಾಸದಲ್ಲೇ ಎಂದಿಗೂ ನಡೆಯದ ಘಟನೆ ಸಂಭವಿಸಿತ್ತು. ಎಲಿಮಿನೇಷನ್ ಗೂ ಮುನ್ನ ಕೆಲ ಕಾಲ ಬಿಗ್ ಬಾಸ್ ಮನೆ ಬಾಗಿಲು ತೆರೆಯಲಾಗಿತ್ತು. ರಿಷಬ್ ಹಾಗೂ ಸುಯಶ್ ಇಬ್ಬರೂ ರಿಮಿಯನ್ನು ಮನೆಯಿಂದ ಹೊರಡುವಂತೆ ಸೂಚಿಸಿದರು.

ನಿಮ್ಮ ಲಗೇಜ್ ಪ್ಯಾಕ್ ಮಾಡಿ ಸಹಾಯ ಮಾಡುತ್ತೀವಿ ಎಂದು ಹೊರಟರು. ಮನೆ ಮಂದಿ, ಸಲ್ಮಾನ್ ಖಾನ್ ಸೇರಿದಂತೆ ಎಲ್ಲರೂ ಛೀ !ಥೂ! ಎಂದರೂ ನಿರ್ಲಿಪ್ತರಾಗಿ ಕುಳಿತ್ತಿದ್ದ ರಿಮಿ ಸೇನ್ ಕೊನೆಗೂ ಮನೆಯಿಂದ ಹೊರಕ್ಕೆ ಹೋಗುವ ಕಾಲ ಬಂದಿದೆ.['ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!]

ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ರಿಮಿ ಸೇನ್ ರನ್ನು ಅಂತಿಮವಾಗಿ ಮನೆಯಿಂದ ಹೊರಕ್ಕೆ ಕಳಿಸಲಾಗುತ್ತದೆ ಎಂಬ ಸುದ್ದಿಯಿದೆ. ವೀಕೆಂಡ್ ನಂತರವೂ ಸಲ್ಮಾನ್ ಖಾನ್ ನಿರೂಪಣೆ ಮುಂದುವರೆಸಿದ್ದಾರೆ.[ಸ್ಪರ್ಧಿಗಳಿಗೆ 'ಬಿಗ್' ಮೊತ್ತದ ಸಂಭಾವನೆ]

ಸ್ಪರ್ಧಿಗಳಿಗೆ ಶ್ರೇಯಾಂಕ ಪಟ್ಟಿಯಂತೆ ನಿಲ್ಲಲು ಹೇಳಿದಾಗ 8ನೇ ಸ್ಥಾನದಲ್ಲಿ ನಿಂತ ರಿಮಿ ನಾನು ಅರ್ಧದಾರಿ ಕ್ರಮಿಸಿದ್ದೆ, ಜನರು ನನ್ನನ್ನು ಮನೆಗೆ ಕಳಿಸುವ ತನಕ ನಾನು ಇಲ್ಲೇ ಇರುತ್ತೇನೆ ಎಂದಿದ್ದಾರೆ. [ಬಿಗ್ ಬಾಸ್ ನ ಅತ್ಯಂತ ಲಕ್ಕಿ ಸ್ಪರ್ಧಿ]

ಮನೆಯ ಇತರೆ ಸದಸ್ಯರು ಮೊದಲಿನಿಂದಲೂ ರಿಮಿಗೆ ಬೆಂಬಲ ನೀಡುತ್ತಾ ಬಂದಿದ್ದೆ ಇದಕ್ಕೆಲ್ಲ ಕಾರಣ. ಆಕೆ ಏನು ಹೇಳಿದರೂ ನಗುತ್ತಾ ಇರುತ್ತಾಳೆ. ಟಾಸ್ಕ್ ಮಾಡುವುದೂ ಇಲ್ಲ, ಜನರು ಆಕೆಯನ್ನು ಮನೆಯಿಂದ ಹೊರ ಹಾಕುವುದು ಇಲ್ಲ ಎಂದು ಸಲ್ಮಾನ್ ಕೂಡಾ ತಿವಿದಿದ್ದರು. [ಮನೆಗೆ ಬಂದ ಮೊದಲ ವಾರವೇ ಕ್ಯಾಪ್ಟನ್!]

ಮನೆಯಿಂದ ಹೊರಕ್ಕೆ ಹೋಗಲು ಬಾಗಿಲು ತೆಗೆದಾಗ ಏನಾದರೂ ರಿಮಿ ಹೊರಕ್ಕೆ ಹೋಗಿದ್ದರೆ ಆಕೆ ಸಹಿ ಹಾಕಿದ ಮೊತ್ತ(2ಕೋಟಿ ರು) ಕಳೆದುಕೊಳ್ಳಬೇಕಾಗಿತ್ತು.

ವೋಟಿಂಗ್ ನಿಂದ ಮಾತ್ರ ಎಲಿಮಿನೇಟ್

ಹೀಗಾಗಿ ವೋಟಿಂಗ್ ನಿಂದ ಮಾತ್ರ ಎಲಿಮಿನೇಟ್ ಆಗಲು ನಿರ್ಧರಿಸಿದ ರಿಮಿ ಈಗ ಮನೆಯಿಂದ ಹೊರಕ್ಕೆ ಕಾಲಿಟ್ಟರೆ 2 ಕೋಟಿ ರು ಪಡೆದುಕೊಳ್ಳಲಿದ್ದಾರೆ. ಇದು ಬಿಗ್ ಬಾಸ್ ಸ್ಪರ್ಧೆಯ ವಿಜೇತರು ಪಡೆಯುವ ನಗದು ಬಹುಮಾನಕ್ಕಿಂತ ಅಧಿಕವಾಗಿದೆ. ಹೀಗಾಗಿ ಮೊತ್ತದಿಂದ ಈ ಸ್ಪರ್ಧೆ ಅಳೆಯುವುದಾದರೆ, ರಿಮಿ ಎಂದೋ ಬಿಗ್ ಬಾಸ್ ಗೆದ್ದುಕೊಂಡಿದ್ದಾರೆ.

ಹಗ್ಗ ಹಿಡಿದು ನಿಲ್ಲುವ ಟಾಸ್ಕ್

ಈ ನಡುವೆ ಹಗ್ಗ ಹಿಡಿದು ನಿಲ್ಲುವ ಟಾಸ್ಕ್ ಜಾರಿಯಲ್ಲಿದೆ. ಹಣದ ಥೈಲಿಯನ್ನು ಹಗ್ಗಕ್ಕೆ ಕಟ್ಟಿ ನೇತು ಹಾಕಲಾಗಿದೆ. ಒಂದು ಕೈಯಲ್ಲಿ ಅದನ್ನು ಹಿಡಿದುಕೊಂಡು ನಿಂತಿರಬೇಕು. ಕೈ ಬಿಟ್ಟರೆ ಹಣ ನೆಲದ ಪಾಲಾಗುತ್ತದೆ. ಸ್ಪರ್ಧಿಯೂ ಔಟ್ ಆಗುತ್ತಾರೆ.

ರೊಶೆಲ್ ಹಾಗೂ ಸಂಚಾಲಕಿ ಪ್ರಿಯಾ

ಈ ನಡುವೆ ರೊಶೆಲ್ ಹಾಗೂ ಸಂಚಾಲಕಿ ಪ್ರಿಯಾ ನಡುವೆ ಜೋರು ಮಾತಿನ ಚಕಮಕಿ ನಡೆದು ಪ್ರಿಯಾ ಅತ್ತು ಕರೆದು ರಂಪಾ ಮಾಡಿದ್ದಾರೆ. ಬಿಗ್ ಬಾಸ್ ಮನೆ ಕನ್ಫೆಷನ್ ರೂಮಿನಲ್ಲಿ ಸುಯಶ್ ಸೋದರಿ ಬಂದು ಕುಳಿತುಕೊಳ್ಳುತ್ತಾರೆ.

ಸುಯಶ್ ಗೋಳೋ ಎಂದು ಅಳುತ್ತಾರೆ

ಆಟದ ನಡುವೆ ಸೋದರಿಯನ್ನು ಕಂಡ ಸುಯಶ್ ಗೋಳೋ ಎಂದು ಅಳುತ್ತಾರೆ. ಇತರೆ ಸ್ಪರ್ಧಿಗಳು ಪರ್ವಾಗಿಲ್ಲ ದುಡ್ಡೂ ಹೋದರೂ ಸರಿ ನೀನು ಸೋದರಿಯನ್ನು ಕಾಣು ಎನ್ನುತ್ತಾರೆ. ಅದರೆ, ಆಟವನ್ನು ಅರ್ಧಕ್ಕೆ ಬಿಟ್ಟು ಹೋಗದೆ ಸುಯಶ್ ಅಳುತ್ತಾ ನಿಲ್ಲುತ್ತಾರೆ.

ಸುಯಶ್ ಗೋಳೋ ಎಂದ ವಿಡಿಯೋ

ಸೋದರಿಯನ್ನು ಕಂಡರೂ ಮಾತನಾಡಲು ಆಗದಂಥ ಪರಿಸ್ಥಿತಿ ಎದುರಿಸಿದ ಸುಯಶ್ ಅವರು ಕಣ್ಣೀರಿಟ್ಟ ವಿಡಿಯೋ

English summary
Oops! It seems like there is a change of plan in Bigg Boss 9. According to the reports that are doing the rounds, Rimi will be eliminated today from the house as the audiences finally chose not to save her!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada