»   » ಸೀಕ್ರೆಟ್ ಟಾಸ್ಕ್ ಸೋತ ಜೆ.ಕೆಯಿಂದ ಮನೆಯವರಿಗೆ ದೊಡ್ಡ ನಷ್ಟ.!

ಸೀಕ್ರೆಟ್ ಟಾಸ್ಕ್ ಸೋತ ಜೆ.ಕೆಯಿಂದ ಮನೆಯವರಿಗೆ ದೊಡ್ಡ ನಷ್ಟ.!

Posted By:
Subscribe to Filmibeat Kannada
Bigg Boss Kannada Season 5 : ಬಿಗ್ ಬಾಸ್ ಕನ್ನಡ ಸೀಸನ್ 5 : ಸೀಕ್ರೆಟ್ ಟಾಸ್ಕ್ ನಲ್ಲಿ ಸೋತ ಜೆಕೆ

'ಬಿಗ್ ಬಾಸ್' ಈ ವಾರ ಬಿಗ್ ಮನೆಯ ಸ್ಪರ್ಧಿಗಳಿಗೆ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಮ್ಯೂಸಿಕಲ್ ಚೇರ್ ಗೇಮ್ ಆಡಿಸಿದ್ದರು. ಶುಕ್ರವಾರ ಈ ಟಾಸ್ಕ್ ಯಶಸ್ವಿಯಾಗಿ ಮುಗಿಯಿತು.

ಟಾಸ್ಕ್ ಮುಗಿದ ಮೇಲೆ ಯಾರಿಗೂ ಗೊತ್ತಿಲ್ಲದೇ ಇದ್ದ ಸೀಕ್ರೆಟ್ ಒಂದು ಎಲ್ಲರ ಮುಂದೆ ಬಹಿರಂಗವಾಯಿತು. ಅಷ್ಟೇ ಅಲ್ಲ, ಕಾರ್ತಿಕ್ ಜಯರಾಂಗೆ ರಿವಾರ್ಡ್ ಕೂಡ ಸಿಕ್ತು. ಯಾಕಂದ್ರೆ ಕಾರ್ತಿಕ್ ಜಯರಾಂ ಅವರಿಂದ ಮನೆಯ ಸದಸ್ಯರು 1000 ಲಕ್ಷುರಿ ಪಾಯಿಂಟ್ಸ್ ಕಳೆದು ಕೊಂಡರು.

ಅಷ್ಟಕ್ಕೂ, ಎಲ್ಲರ ಮುಂದೆ ಬಹಿರಂಗವಾದ ಸೀಕ್ರೆಟ್ ಏನು ಮತ್ತು ಜೆಕೆಗೆ ಯಾಕೆ ರಿವಾರ್ಡ್ ಎಂದು ತಿಳಿದುಕೊಳ್ಳಲು ಮುಂದೆ ಓದಿ.......

ಬಿಗ್ ಬಾಸ್ ಕೊಟ್ಟಿದ್ದರು ಸೀಕ್ರೆಟ್ ಟಾಸ್ಕ್

ಮ್ಯೂಸಿಕಲ್ ಚೇರ್ ಲಕ್ಷುರಿ ಬಜೆಟ್ ನಲ್ಲಿ ಜೆಕೆಗೆ ಬಿಗ್ ಬಾಸ್ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದರು. ಇದರ ಅನುಸಾರ ಮ್ಯೂಸಿಕಲ್ ಚೇರ್ ಆಡುತ್ತಿರುವ ಇತರೆ ಸ್ಪರ್ಧಿಗಳನ್ನ ಬುದ್ಧಿವಂತಿಕೆ ಬಳಸಿ ಕೆಳಗೆ ಬೀಳಿಸಬೇಕಿತ್ತು. ಹಾಗೆ ಮಾಡಿದರೇ 2000 ಸಾವಿರ ಲಕ್ಷುರಿ ಪಾಯಿಂಟ್ಸ್ ಸಿಗುತ್ತಿತ್ತು.

ವೀಕ್ಷಕರು ಹೀಗೆ ಹೇಳ್ತಾವ್ರೆ, 'ಬಿಗ್ ಬಾಸ್' ಒಸಿ ಕೇಳಿಸಿಕೊಳ್ಳಿ...

ಮೊದಲ ಪ್ರಯತ್ನ ಕೃಷಿ

'ಬಿಗ್ ಬಾಸ್' ಜೆಕೆಗೆ ಸೀಕ್ರೆಟ್ ಟಾಸ್ಕ್ ಕೊಟ್ಟಾಗ ಕೃಷಿ ತಾಪಂಡ, ಜೆಕೆ ಮತ್ತು ಸಮೀರಾಚಾರ್ಯ ಮಾತ್ರ ಆಟದಲ್ಲಿ ಇದ್ದರು. ಹೀಗಾಗಿ, ಜೆಕೆ ಮೊದಲ ಟಾರ್ಗೆಟ್ ಕೃಷಿ ತಾಪಂಡ ಆದರು. ಕೃಷಿಯನ್ನ ಚೇರ್ ನಿಂದ ಬೀಳಿಸಲು ಜೆಕೆ ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ.

ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್.!

ಸಮೀರಾಚಾರ್ಯ ಮಿಸ್ ಆದರು

ಕೃಷಿ ತಾಪಂಡ ಅವರ ಜೆಕೆ ಬಲೆಗೆ ಬೀಳದೆ ಇದ್ದಾಗ ಜೆಕೆ ಸಮೀರಾಚಾರ್ಯ ಅವರ ಕಡೆ ಕಣ್ಣಾಕಿದರು. ಸಮೀರಾಚಾರ್ಯ ಅವರನ್ನ ಕೆಳಗೆ ಬೀಳಿಸಬೇಕೆಂದು ಏನೇನೋ ಪ್ಲಾನ್ ಮಾಡಿದರು. ಆದ್ರೆ, ಸಮೀರ್ ಅವರು ಮಾತ್ರ ಕೆಳಗೆ ಬೀಲಲೇ ಇಲ್ಲ.

ಟೀಚರ್ ಮೇಲೆ ಕ್ರಷ್: ಕಪಾಳಕ್ಕೆ ಹೊಡೆಸಿಕೊಂಡಿದ್ದ ಜಗನ್.!

ಸಮೀರ್ ವಿನ್, ಕೃಷಿ ಜಸ್ಟ್ ಮಿಸ್, ಜೆಕೆ ಔಟ್

ಜೆಕೆ ಎಷ್ಟೆ ಸರ್ಕಸ್ ಮಾಡಿದರು ಸಮೀರ್ ಮತ್ತು ಕೃಷಿಯನ್ನ ಚೇರ್ ನಿಂದ ಬೀಳಿಸಲು ಮತ್ತು ಎಬ್ಬಿಸಲು ಆಗಲಿಲ್ಲ. ಅಷ್ಟೋತ್ತಿಗೆ ಜೆಕೆ ಅವರೇ ಗೇಮ್ ಯಿಂದ ಔಟ್ ಆದರು. ಕೊನೆಗೆ ಸಮೀರಾಚಾರ್ಯ ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಜಯಶಾಲಿ ಆಗಿ ಹೊರಹೊಮ್ಮಿದರು. ಕೃಷಿ ತಾಪಂಡ ಎರಡನೇ ಸ್ಥಾನಕ್ಕೆ ಜಿಗಿದರು.

ಸಿಹಿ ಕಹಿ ಚಂದ್ರು ಹೊರ ಹೋದರೆ, ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಹೇಳ್ದಂಗೆ ಕೇಳ್ತಾರೆ.!

1000 ಪಾಯಿಂಟ್ಸ್ ಮೈನಸ್

ಈ ಮೊದಲೇ ಇತರೆ ಸ್ಪರ್ಧಿಗಳು ಮಾಡಿದ್ದ ಎಡವಟ್ಟಿನಿಂದ 1000 ಲಕ್ಷುರಿ ಪಾಯಿಂಟ್ ಕಳೆದುಕೊಂಡಿದ್ದ ಮನೆಯ ಸದಸ್ಯರು ಜೆಕೆ ಅವರು ಸೀಕ್ರೆಟ್ ಟಾಸ್ಕ್ ವಿಫಲವಾದ ಕಾರಣ 1000 ಲಕ್ಷುರಿ ಪಾಯಿಂಟ್ಸ್ ಕಳೆದುಕೊಳ್ಳಬೇಕಾಯಿತು.

ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!

English summary
Bigg Boss kannada 5, day 33: Bigg Boss assigns a secret task to Karthik Jayram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada