For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಬಿಗ್ ಫಿಕ್ಸಿಂಗ್ ಕಾರ್ಯಕ್ರಮ: ಬ್ರಹ್ಮಾಂಡ

  By ಉದಯರವಿ
  |

  'ಬಿಗ್ ಬಾಸ್ ಕನ್ನಡ' ರಿಯಾಲಿಟಿ ಶೋನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಬೆಂಗಳೂರಿಗೆ ಮರಳಿದ್ದಾರೆ. ತೊಂಬತ್ತೆಂಟು ದಿನಗಳ ಕಾಲ ಯಾವುದೇ ಕಾಮಿಡಿ ನಟನಿಗೂ ಕಮ್ಮಿ ಇಲ್ಲದಂತೆ ಎಲ್ಲರನ್ನೂ ನಕ್ಕು ನಲಿಸಿದ್ದು ಶರ್ಮಾ ಅವರ ವಿಶೇಷ.

  ಈ ಶೋನಿಂದ ಹೊರಬಂದ ಅವರಿಗೆ ಅಸಲಿ ರಿಯಾಲಿಟಿ ಗೊತ್ತಾಗಿದೆ. ಈ ಬಗ್ಗೆ ಅವರು ಕನ್ನಡ ದೈನಿಕ 'ಕನ್ನಡ ಪ್ರಭ' ಜೊತೆ ತಮ್ಮ ಮನದಾಳದ ನೋವು, ದುಗುಡಗಳನ್ನು ಹಂಚಿಕೊಂಡಿದ್ದಾರೆ. ಅದರ ಮುಖ್ಯಾಂಶಗಳ ಮೇಲೊಮ್ಮೆ ಕಣ್ಣಾಡಿಸೋಣ ಬನ್ನಿ.

  ಈ ಶೋಗೆ ಹೋಗಲೇ ಬಾರದಿದ್ದು. ಈ ಶೋನಲ್ಲಿ ಭಾಗವಹಿಸಿ ತಪ್ಪು ಮಾಡಿದೆ. ಇದೊಂದು ದೊಡ್ಡ ಗ್ಯಾಬ್ಲಿಂಗ್, ಬಿಗ್ ಫಿಕ್ಸಿಂಗ್ ಎಂದು ಹೇಳಿಕೊಂಡಿದ್ದಾರೆ. ಶೋನಲ್ಲಿ ತಮ್ಮನ್ನು ಈ ರೀತಿ ಜೋಕರ್ ತರಹ ತೋರಿಸುತ್ತಾರೆ ಎಂದುಕೊಂಡಿರಲಿಲ್ಲ ಎಂಬ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ ಶರ್ಮಾ ಅವರು.

  ಮಕ್ಕಳು ಗೊಂಬೆಗಳನ್ನು ಇಟ್ಟುಕೊಂಡು ಆಟವಾಡಿದರೆ ಇವರು ಮನುಷ್ಯರನ್ನು ಇಟ್ಟುಕೊಂಡು ಆಟವಾಡಿದರು. ಮನೆಯಲ್ಲಿ ನಡೆದ ಘಟನೆಗಳನ್ನು ಅವರಿಗೆ ಬೇಕಾದಂತೆ ತೋರಿಸಿದರು. ಅಲ್ಲಿ ಇದ್ದಷ್ಟು ದಿನವೂ ಸಾಕಪ್ಪಾ ಸಾಕು ಅನ್ನಿಸಿಬಿಟ್ಟಿತು.

  ನನ್ನನ್ನು ಜೋಕರ್ ತರಹ ತೋರಿಸಿದ್ದಾರೆ

  ನನ್ನನ್ನು ಜೋಕರ್ ತರಹ ತೋರಿಸಿದ್ದಾರೆ

  ಅಲ್ಲಿ ನಡೆಯುವ ಘಟನೆಗಳನ್ನು ಯಥಾವತ್ತಾಗಿ ತೋರಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ನನ್ನನ್ನು ಜೋಕರ್ ತರಹ ತೋರಿಸಿದ್ದಾರೆ. ಮನೆಯಲ್ಲಿ ಬೇಕಾದವರನ್ನು ಉಳಿಸಿಕೊಳ್ಳುತ್ತಿದ್ದರು. ಇಲ್ಲಿ ಒಳ್ಳೆಯವರನ್ನು ಕೆಟ್ಟದಾಗಿ, ಕೆಟ್ಟವರನ್ನು ಒಳ್ಳೆಯವರಾಗಿ ತೋರಿಸುತ್ತಿದ್ದರು.

  ನಾನು ನಿಖಿತಾರಿಗಿಂತಲೂ ಕಡೆಯೇ?

  ನಾನು ನಿಖಿತಾರಿಗಿಂತಲೂ ಕಡೆಯೇ?

  ಮನೆಯಲ್ಲಿ ತಮ್ಮನ್ನು ಕೊನೆಯ ತನಕ ಉಳಿಸಿಕೊಂಡು ಫೈನಲ್ ನಲ್ಲಿ ನಾಲ್ಕನೆ ಸ್ಥಾನ ನೀಡಿದ್ದು ಯಾಕೆ. ಅಷ್ಟು ದಿನ ಅವರಿಗೆ ಬೇಕಾಗಿದ್ದ ನಾನು ಕೊನೆಯ ದಿನ ಬೇಡವಾದೆನೇ? ತಮ್ಮನ್ನು ನಿಕಿತಾರಿಗಿಂತಲೂ ಕೆಳಗಿಳಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ ಬ್ರಹ್ಮಾಂಡ.

  ನಿಖಿತಾ ಬಗ್ಗೆ ಮೃದು ಧೋರಣೆ ತೋರಲಾಗಿತ್ತು

  ನಿಖಿತಾ ಬಗ್ಗೆ ಮೃದು ಧೋರಣೆ ತೋರಲಾಗಿತ್ತು

  ಈ ಶೋನಲ್ಲಿ ಕನ್ನಡಿಗರಿಗಿಂತ ಹೆಚ್ಚಾಗಿ ನಿಖಿತಾ ಅವರಿಗೆ ಮಣೆಹಾಕಲಾಯಿತು. ಅವರ ಬಗ್ಗೆ ಮೃದು ಧೋರಣೆ ತೋರಿದರು. ಅಪರ್ಣಾ, ಚಂದ್ರಿಕಾ ಅವರನ್ನು ಕಡೆಗಣೆಸಿದರು. ಇದೆಲ್ಲವನ್ನೂ ನೋಡಿದರೆ ಇದು ಫಿಕ್ಸಿಂಗ್ ಅನ್ನಿಸುವುದಿಲ್ಲವೇ? ಎಂದು ಬ್ರಹ್ಮಾಂಡ ಗುರುಗಳು ಗುಡುಗಿದ್ದಾರೆ.

  ಅರುಣ್ ಗೆ ಕನಿಷ್ಠ ನಗದು ಬಹುಮಾನ ಸಿಗಲಿಲ್ಲ

  ಅರುಣ್ ಗೆ ಕನಿಷ್ಠ ನಗದು ಬಹುಮಾನ ಸಿಗಲಿಲ್ಲ

  ವಿಜಯ್ ರಾಘವೇಂದ್ರ ಗೆದ್ದದ್ದಕ್ಕೆ ಬೇಸರವಿಲ್ಲ ಎಂದಿರುವ ಶರ್ಮಾ, ಈ ಶೋನಲ್ಲಿ ಗೆಲ್ಲುವ ಸಂಪೂರ್ಣ ಅರ್ಹತೆ ಪ್ರತಿಭಾವಂತನಾದ ಅರುಣ್ ಸಾಗರ್ ಅವರಿಗಿತ್ತು. ಅವರಿಗೆ ಕನಿಷ್ಠ ರು.10 ಲಕ್ಷಗಳನ್ನಾದರೂ ಕೊಡಬೇಕಾಗಿತ್ತು ಎಂದಿದ್ದಾರೆ ಶರ್ಮಾ.

  ಚಂದ್ರಿಕಾ, ಅರುಣ್ ನಡುವೆ ಇದ್ದದ್ದು ಆತ್ಮೀಯತೆ

  ಚಂದ್ರಿಕಾ, ಅರುಣ್ ನಡುವೆ ಇದ್ದದ್ದು ಆತ್ಮೀಯತೆ

  ಇನ್ನು ಚಂದ್ರಿಕಾ ಹಾಗೂ ಅರುಣ್ ಸಾಗರ್ ಅವರ ಏನೋ ನಡೆಯುತ್ತಿದೆ ಎಂಬಂತೆ ತೋರಿಸಿದ್ದು ಸರಿಯಲ್ಲ. ಅವರಿಬ್ಬರ ನಡುವೆ ಆತ್ಮೀಯತೆ ಇತ್ತು. ಇದನ್ನು ಕೆಟ್ಟದಾಗಿ ಬಿಂಬಿಸಲಾಯಿತು ಎಂದಿದ್ದಾರೆ ಬ್ರಹ್ಮಾಂಡ ಗುರುಗಳು.

  English summary
  Speaking to Kannada Prabha, Narendra Babu Sharma said, "I made a big mistake by being part of Bigg Boss Kannada. I would never commit such mistakes in my life. It's a big gambling and a fixing show."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X