For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಿಂದ ಆಚೆ ಬರ್ತಿದ್ದಂತೆ ಸಿಕ್ತು ಚಂದನಾಗೆ ಹೊಸ ಕೆಲಸ.!

  |

  ಮೇಕಪ್ ಇಲ್ಲದೇ ಇದ್ದರೂ ಅಂದವಾಗಿ ಕಾಣ್ತಾರೆ ಎಂಬ ಕಾರಣಕ್ಕೆ 'ಬಿಗ್ ಬಾಸ್' ಕಾರ್ಯಕ್ರಮದಿಂದ ಕಿರುತೆರೆ ನಟಿ ಚಂದನಾ ಅನಂತಕೃಷ್ಣಗೆ ಫ್ಯಾನ್ ಫಾಲೋವಿಂಗ್ ಜಾಸ್ತಿ ಆಯ್ತು.

  'ಬಿಗ್ ಬಾಸ್' ಮನೆಯೊಳಗೆ 84 ದಿನಗಳ ಕಾಲ ಇದ್ದು, ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಿದವರು ಚಂದನಾ ಅನಂತಕೃಷ್ಣ. 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಂತೂ ಚಂದನಾ ಅನಂತಕೃಷ್ಣ ಫಿನಾಲೆ ವಾರದವರೆಗೂ ಬರಲಿಲ್ಲ.

  ಆದ್ರೆ, 'ಬಿಗ್ ಬಾಸ್' ಮನೆಯಿಂದ ಆಚೆ ಬರುತ್ತಿದ್ದ ಹಾಗೆ, ಚಂದನಾ ಅನಂತಕೃಷ್ಣಗೆ ಹೊಸ ಕೆಲಸ ಸಿಕ್ಕಿದೆ. ಏನು ಆ ಕೆಲಸ ಅಂತೀರಾ.? ಫುಲ್ ಡೀಟೇಲ್ಸ್ ಕೊಡ್ತೀವಿ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ಸಿಂಗಿಂಗ್ ಶೋಗೆ ಆಂಕರ್.!

  ಸಿಂಗಿಂಗ್ ಶೋಗೆ ಆಂಕರ್.!

  'ರಾಜಾ ರಾಣಿ' ಸೀರಿಯಲ್ ನಲ್ಲಿ ಅಭಿನಯಿಸಿದ್ದ ಚಂದನಾ ಅನಂತಕೃಷ್ಣ ಇದೀಗ ಆಂಕರ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಹೊಸ ಸಿಂಗಿಂಗ್ ಶೋನಲ್ಲಿ ನಿರೂಪಣೆ ಮಾಡುವ ಜವಾಬ್ದಾರಿ ಚಂದನಾ ಅನಂತಕೃಷ್ಣಗೆ ಸಿಕ್ಕಿದೆ.

  ಕಿಶನ್ ಆಡಿದ್ದು ಅದೆಂಥ ಮಾತು.? ಚಂದನಾ ಕೆನ್ನೆ ಫುಲ್ ಕೆಂಪು ಕೆಂಪು.!ಕಿಶನ್ ಆಡಿದ್ದು ಅದೆಂಥ ಮಾತು.? ಚಂದನಾ ಕೆನ್ನೆ ಫುಲ್ ಕೆಂಪು ಕೆಂಪು.!

  'ಹಾಡು ಕರ್ನಾಟಕ' ಶೋ

  'ಹಾಡು ಕರ್ನಾಟಕ' ಶೋ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಸಿಂಗಿಂಗ್ ಶೋ 'ಹಾಡು ಕರ್ನಾಟಕ' ಪ್ರಸಾರವಾಗಲಿದೆ. ಇದೇ ಶೋಗೆ ಆಂಕರಿಂಗ್ ಮಾಡಲು ಚಂದನಾ ಅನಂತಕೃಷ್ಣ ರನ್ನ ಆಯ್ಕೆ ಮಾಡಲಾಗಿದೆ.

  ಚಂದನಾ ಫುಲ್ ಖುಷ್

  ಚಂದನಾ ಫುಲ್ ಖುಷ್

  ''ಇದು ದೊಡ್ಡ ಹೆಜ್ಜೆ ಮತ್ತು ದೊಡ್ಡ ಜವಾಬ್ದಾರಿ. ಮೊದಲ ಬಾರಿಗೆ ಆಂಕರ್ ಆಗಿ ನಿಮ್ಮೆಲ್ಲರ ಮುಂದೆ ಬರ್ತಿದ್ದೀನಿ. ಹಾಡು ಕರ್ನಾಟಕ ಶೋನ ನಾನು ಹೋಸ್ಟ್ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಮೇಲಿರಲಿ'' ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಚಂದನಾ ಬರೆದುಕೊಂಡಿದ್ದಾರೆ.

  ಹಾಡುವುದರಲ್ಲಿ ಎತ್ತಿದ ಕೈ

  ಹಾಡುವುದರಲ್ಲಿ ಎತ್ತಿದ ಕೈ

  ನಟಿ ಚಂದನಾ ಬರೀ ನಟಿ ಮಾತ್ರ ಅಲ್ಲ. ಪ್ರತಿಭಾವಂತ ನೃತ್ಯಗಾರ್ತಿ ಹಾಗೂ ಗಾಯಕಿ. 'ಬಿಗ್ ಬಾಸ್' ಮನೆಯಲ್ಲಿ ಹಲವು ಬಾರಿ ಸ್ಪರ್ಧಿಗಳಿಗೆ ಚಂದನಾ ಶಾಸ್ತ್ರೀಯ ನೃತ್ಯ ಹೇಳಿಕೊಟ್ಟಿದ್ದಾರೆ. ಜೊತೆಗೆ 'ಕಪ್ಪು ಚುಕ್ಕಿ' ಹಾಡನ್ನು ಹಾಡಿದ್ದು ಇದೇ ಚಂದನಾ ಅನ್ನೋದು ನಿಮ್ಗೆ ನೆನಪಿರಬಹುದು. ಅಂದು 'ಕಪ್ಪು ಚುಕ್ಕಿ' ಹಾಡನ್ನು ಹಾಡಿ ಸುದೀಪ್ ರಿಂದ ಮೆಚ್ಚುಗೆ ಗಳಿಸಿದ್ದ ಚಂದನಾ ಇಂದು ಸಿಂಗಿಂಗ್ ಶೋನಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

  English summary
  Bigg Boss Contestant Chandana to host singing reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X