Just In
Don't Miss!
- News
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 7,865ಕ್ಕೆ ಇಳಿಕೆ
- Automobiles
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- Sports
ಸಯ್ಯದ್ ಮುಷ್ತಾಕ್ ಅಲಿ ಟಿ20: ಕ್ವಾರ್ಟರ್ ಫೈನಲ್ಗೇರಿದ ಕರ್ನಾಟಕ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್‌ಬಾಸ್ ಸ್ಪರ್ಧಿಗೆ ಖುಲಾಯಿಸಿದ ಅದೃಷ್ಟ: 'ಕನಸು-ನನಸಾಯಿತು' ಎಂದ ದಿವಿ
'ಬಿಗ್‌ಬಾಸ್' ಕೇವಲ ರಿಯಾಲಿಟಿ ಶೋ ಆಗಿ ಮಾತ್ರವೇ ಉಳಿದಿಲ್ಲ. ಒಮ್ಮೆ ಬಿಗ್‌ಬಾಸ್ ಮನೆ ಹೊಕ್ಕಿ ಬಂದರೆಂದರೆ ಸ್ಪರ್ಧಿಗಳ ಭವಿಷ್ಯವೇ ಬದಲಾಗುತ್ತದೆ. ಹಲವಾರ ಅದೃಷ್ಟ ಬದಲಾಯಿಸಿದೆ ಈ ಬಿಗ್‌ಬಾಸ್ ರಿಯಾಲಿಟಿ ಶೋ.
ಇತ್ತೀಚೆಗಷ್ಟೆ ತೆಲುಗು ಬಿಗ್‌ಬಾಸ್ 4 ಮುಗಿದಿದೆ. ಕೊರೊನಾ ಅನ್‌ಲಾಕ್ ಸಮಯದಲ್ಲಿ ಪ್ರಸಾರ ಪ್ರಾರಂಭಿಸಿದ ಮೊದಲ ರಿಯಾಲಿಟಿ ಶೋ ತೆಲುಗು ಬಿಗ್‌ಬಾಸ್ ಕೆಲ ದಿನಗಳ ಹಿಂದಷ್ಟೆ ಮುಗಿದಿದೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಹಲವರ ಅದೃಷ್ಟ ಬದಲಾಗಿದೆ. ಅದರಲ್ಲಿ ಪ್ರಮುಖರು ದಿವಿ ವದತ್ಯ.
ಬಿಗ್‌ಬಾಸ್: ಯಾರು ಎಷ್ಟು ಪಡೆದರು-ಯಾರಿಗೆ ಒಲಿಯಿತು ಅದೃಷ್ಟ?
ಬಿಗ್‌ಬಾಸ್ ಮನೆಯಲ್ಲಿ ಕೊನೆಯ ವರೆಗೆ ಇದ್ದ ನಟಿ ದಿವಿ ವದತ್ಯ ಗೆ ಬಿಗ್‌ಬಾಸ್ ಫೈನಲ್ ದಿನವೇ ವೇದಿಕೆ ಮೇಲೆ ಚಿರಂಜೀವಿ ದೊಡ್ಡ ಅವಕಾಶವೊಂದನ್ನು ಘೋಷಿಸಿದರು. 'ನನ್ನ ಸಿನಿಮಾದಲ್ಲಿ ನಟಿಸುವ ಅವಕಾಶ ನಿನಗೆ ಕೊಡುತ್ತಿದ್ದೇನೆ' ಎಂದು ಚಿರಂಜೀವಿ ಹೇಳಿದ್ದರು. ಆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮುನ್ನವೇ ಮತ್ತೊಂದು ದೊಡ್ಡ ಅವಕಾಶ ಹುಡುಕಿ ಬಂದಿದೆ ದಿವಿ ಗೆ.

ಪವನ್ ಕಲ್ಯಾಣ್ ಸಿನಿಮಾದಲ್ಲಿ ದಿವಿ
ಹೌದು, ನಟಿ ದಿವಿ ಗೆ ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸುವ ಮತ್ತೊಂದು ಅವಕಾಶ ಹುಡುಕಿ ಬಂದಿದೆ. ವಕೀಲ್ ಸಾಬ್ ನಂತರ ಪವನ್ ಕಲ್ಯಾಣ್ ನಟಿಸುತ್ತಿರುವ ಸಿನಿಮಾದಲ್ಲಿ ದಿವಿ ಗೆ ಪ್ರಮುಖ ಪಾತ್ರವೊಂದು ದೊರೆತಿದೆ. ಅವಕಾಶ ಸಿಕ್ಕಿರುವ ಬಗ್ಗೆ ಮಾತನಾಡಿರುವ ದಿವಿ, 'ಇದು ಕನಸು ನನಸಾದ ಅನುಭವ' ಎಂದಿದ್ದಾರೆ.

'ವೇದಾಲಂ' ರೀಮೇಕ್‌ನಲ್ಲಿ ಪೊಲೀಸ್ ಪಾತ್ರ
ಇನ್ನು ಚಿರಂಜೀವಿ ಅಭಿನಯಿಸುತ್ತಿರುವ 'ವೇದಾಲಂ' ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ದಿವಿ. ಈ ವಿಷಯವನ್ನು ಚಿರಂಜೀವಿ ಅವರು ಬಿಗ್‌ಬಾಸ್ ಫೈನಲ್ ದಿನವೇ ವೇದಿಕೆ ಮೇಲೆ ಘೋಷಿಸಿದರು.
ಬಿಗ್‌ಬಾಸ್ ವಿನ್ನರ್ ಅಭಿಜಿತ್ ಗೆ ಸಿಕ್ಕಿತು ಭರ್ಜರಿ ಆಫರ್

ಅಭಿಜಿತ್ ಗೆ ಹಲವು ಸಿನಿಮಾಗಳ ಆಫರ್
ಇನ್ನೂ ಕೆಲವು ಬಿಗ್‌ಬಾಸ್ ಸ್ಪರ್ಧಿಗಳಿಗೆ ಅವಕಾಶಗಳು ಹುಡುಕಿ ಬರುತ್ತಿವೆ. ಬಿಗ್‌ಬಾಸ್ ಗೆದ್ದ ಅಭಿಜಿತ್ ದುದ್ದಲ ಗೆ ಮತ್ತೆ ಸಿನಿಮಾ ಅವಕಾಶಗಳು ಬರುವುದು ಪ್ರಾರಂಭವಾಗಿದೆ. ಈ ಹಿಂದೆ ಕೇವಲ ಒಂದು ಸಿನಿಮಾದಲ್ಲಿ ನಟಿಸಿ ನಂತರ ಅವಕಾಶವಂಚಿತರಾಗಿದ್ದ ಅಭಿ ಮುಂದೆ ಈಗ ಕನಿಷ್ಟ 3 ಕತೆಗಳಿವೆಯಂತೆ.

ಸೋಹೆಲ್‌ಗೆ ಮಾತುಕೊಟ್ಟಿರುವ ಚಿರಂಜೀವಿ
ಇನ್ನು 25 ಲಕ್ಷ ಹಣ ಪಡೆದು ಬಿಗ್‌ಬಾಸ್‌ನಿಂದ ಹೊರಗೆ ಹೋದ ಸೋಹೆಲ್ ಗೆ ಸಹ ಸಿನಿಮಾ ಅವಕಾಶಗಳು ದೊರಕುತ್ತಿವೆ. ಸೋಹೆಲ್ ನಿರ್ದೇಶಿಸುವ ಸಿನಿಮಾ ಕಾರ್ಯಕ್ರಮಕ್ಕೆ ಸ್ವತಃ ತಾವೇ ಬರುವುದಾಗಿ ಚಿರಂಜೀವಿ ಮಾತು ಕೊಟ್ಟಿದ್ದಾರೆ.