»   » ಬಿಗ್ ಬಾಸ್ ಗೃಹಪ್ರವೇಶಿಸಿದ 12 ಸ್ಪರ್ಧಿಗಳು

ಬಿಗ್ ಬಾಸ್ ಗೃಹಪ್ರವೇಶಿಸಿದ 12 ಸ್ಪರ್ಧಿಗಳು

Posted By:
Subscribe to Filmibeat Kannada

ಪುಣೆಯ ಲೋನಾವಾಲದಲ್ಲಿರುವ ಬಿಗ್ ಬಾಸ್ ಗೃಹಪ್ರವೇಶವಾಗಿದೆ. ಮಾ.24ರ ಭಾನುವಾರ ರಾತ್ರಿ 8 ಗಂಟೆಗೆ ಈ ಟಿವಿ ಕನ್ನಡದಲ್ಲಿ 13 ಸ್ಪರ್ಧಿಗಳ ಬದಲಿಗೆ 12 ಸ್ಪರ್ಧಿಗಳು ಮನೆ ಹೊಕ್ಕಿದ್ದಾರೆ. 13ನೇ ಸ್ಪರ್ಧಿಯಾಗಬೇಕಿದ್ದ ಹಳ್ಳಿ ಹೈದ ಪ್ಯಾಟೆಗೆ ಬಂದ ಖ್ಯಾತಿಯ ರಾಜೇಶ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

13ನೇ ಸ್ಪರ್ಧಿ ಬದಲಿ ಸ್ಪರ್ಧಿ ಬಗ್ಗೆ ಇನ್ನೂ ಗುಟ್ಟು ರಟ್ಟಾಗಿಲ್ಲ. ಬಿಗ್ ಬಾಸ್ ಮನೆಗೂ ಸ್ವಾಮಿ ನಿತ್ಯಾನಂದನಿಗೂ ಭಾರಿ ನಂಟಿರುವುದರಿಂದ ನಿತ್ಯಾನಂದ ಸ್ವಾಮಿಯನ್ನು ಕರೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಮುಂದಿನ ಸ್ಪರ್ಧಿ ಬಗ್ಗೆ ನಿರೂಪಕ ಕಿಚ್ಚ ಸುದೀಪ್ ಕೂಡಾ ಸುಳಿವು ಕೊಟ್ಟಿಲ್ಲ. ಅಂದ ಹಾಗೆ, ಬಿಗ್ ಬಾಸ್ ಮನೆ ಎಷ್ಟು ಚೆನ್ನಾಗಿದೆಯೋ ಬಿಗ್ ಬಾಸ್ ವಾಯ್ಸ್ ಅಷ್ಟೇ ಡಬ್ಬಾ ಥರಾ ಇದೆ. ಸುದೀಪ್ ವಾಯ್ಸ್ ಗೆ ಹೋಲಿಸಿದರೆ ಬಿಗ್ ಬಾಸ್ ವಾಯ್ಸ್ 'ಬಿಗ್' ಆಗಿಲ್ಲ.

ಹಿಂದಿ ಬಿಗ್ ಬಾಸ್ ಆವೃತ್ತಿ 6ರಲ್ಲಿ ಮನೆಗೆ ಹೊಕ್ಕಬೇಕಿದ್ದ ಜನಪ್ರಿಯ ವಿವಾದಿತ ಸ್ವಾಮೀಜಿ ಈಗ ಕನ್ನಡದ ಬಿಗ್ ಬಾಸ್ ಮನೆ ಒಕ್ಕಲಿಗೆ ಬರ್ತಾರೆ ಎಂಬ ಗಾಳಿ ಸುದ್ದಿ ಪಂಕ್ಚರ್ ಆಗಿದೆ. ಜೊತೆಗೆ ಅಸ್ಖಲಿತ ಕನ್ನಡ ಮಾತನಾಡುವ ಸುಚೇಂದ್ರ ಪ್ರಸಾದ್ ಹೆಸರು ಕೂಡಾ ಕೇಳಿ ಬಂದಿದೆ.

ಬಿಗ್ ಬಾಸ್ ಮನೆ ಬಾಗಿಲು ತೆರೆಯಲಾಗಿದೆ. ಸ್ಪರ್ಧಾಳುಗಳ ಲಿಸ್ಟ್ ಹೊರ ಹಾಕದೆ ಕುತೂಹಲ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಬಿಗ್ ಬಾಸ್ ತಂಡ ಯಶಸ್ವಿಯಾಗಿತ್ತು.ಆದರೂ, ಗುಸು ಗುಸು ಪಿಸು ಪಿಸು ಮಾತುಗಳ ಪ್ರಕಾರ 13 ಸ್ಪರ್ಧಿಗಳ ಪಟ್ಟಿ ಮೊದಲೇ ಹೊರ ಬಿದ್ದಿತ್ತು.

ಬಿಗ್‌ ಬಾಸ್‌ ಮನೆಯಲ್ಲಿರುವ 12 ಸ್ಪರ್ಧಿಗಳ ವಿವರ ಮುಂದಿದೆ: ಸ್ಪರ್ಧಿಗಳ ಗ್ಯಾಲರಿ:

ನರೇಂದ್ರ ಬಾಬು ಶರ್ಮ (ಬ್ರಹ್ಮಾಂಡ)

ಜ್ಯೋತಿಷ್ಯ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ಸ್ಥೂಲಕಾಯ ಗುರೂಜಿ ಇವರು. ಹೆಣ್ಣು ಮಕ್ಕಳಿಗೆ ಬೈದಾಡುತ್ತಾ, ಚಿತ್ರ ವಿಚಿತ್ರ ಆಚರಣೆಗಳನ್ನು ಪ್ರೇಕ್ಷಕರಿಗೆ ಹೇಳುತ್ತಾ ವಿವಾದಕ್ಕೆ ಈಡಾದವರು.

ಸಂಜನಾ

ಗಂಡ ಹೆಂಡತಿ ಖ್ಯಾತಿ ಬಿಕಿನಿ ರಾಣಿ ಸಂಜನಾ ಗಲ್ ರಾಣಿ ಬಿಗ್ ಬಾಸ್ ಮನೆಯ ಬಿಸಿ ಹೆಚ್ಚಿಸಲು ಕಾಲಿಟ್ಟಿದ್ದಾಳೆ.

ಅರುಣ್‌ ಸಾಗರ್

ವೈವಿಧ್ಯಮಯ ವ್ಯಕ್ತಿತ್ವದ ಪ್ರತಿಭಾವಂತ ನಟ, ಕಲಾ ನಿರ್ದೇಶಕ ಅರುಣ್ ಸಾಗರ್

ಚಂದ್ರಿಕಾ

ಚೆಲುವೆ ನೀನು ನಕ್ಕರೆ ಹಾಡು ನೆನಪಾದರೆ ತಕ್ಷಣೆ ಹೊಳೆಯುವುದು ಚಂದ್ರಿಕಾ ಹೆಸರು. 10 ವರ್ಷದ ಹಿಂದಿನ ಚೆಲುವನ್ನು ಕಾಪಾಡಿಕೊಂಡಿರುವ ಬಹುಭಾಷಾ ನಟಿ ಚಂದ್ರಿಕಾ

ನರ್ಸ್‌ ಜಯಲಕ್ಷ್ಮೀ

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಜೊತೆ ಕಿಸ್ಸಿಂಗ್ ಫೋಟೊದಲ್ಲಿ ಕಾಣಿಸಿಕೊಂಡಿದ್ದ ನರ್ಸ್ ಜಯಲಕ್ಷ್ಮಿ ಅವರು ನಂತರ ಮಂತ್ರಿ ರೇಣುಕಾಚಾರ್ಯ ವಿರುದ್ಧ ಸಮರ ಸಾರಿ ಜನಪ್ರಿಯತೆ ಗಳಿಸಿದವರು.

ಶ್ವೇತಾ ಪಂಡಿತ್‌

ಪರಮಾತ್ಮ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಶ್ವೇತಾ ಪಂಡಿತ್ ಸದ್ಯಕ್ಕೆ 18/9 ತಮಿಳು ಚಿತ್ರದ ಕನ್ನಡ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇನ್ನೊಂದು ತೆಲುಗು ಚಿತ್ರ ಕೂಡಾ ಕೈಲಿದೆ. ಹೋಮ್ ಸಿಕ್ ಶ್ವೇತಾ ಇದು ಬಿಗ್ ಟೆಸ್ಟ್

ಅಪರ್ಣ,

ಅಪ್ಪಟ ಕನ್ನಡ ಸೊಗಡಿನ ಹೆಣ್ಮಗಳು ಅಪರ್ಣಾ ಅವರು ಅಸ್ಖಲಿತವಾಗಿ ಸುಸ್ಪಷ್ಟವಾಗಿ ಕನ್ನಡ ನಿರೂಪಕಿಯಾಗಿ ಚಿರಪರಿಚಿತರು. ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ

ವಿಜಯ್‌ ರಾಘವೇಂದ್ರ

ನಟ, ಗಾಯಕ, ಉತ್ತಮ ನೃತ್ಯ ಪಟು, ಚಿತ್ರರಂಗದಲ್ಲಿ ಎಲ್ಲರೊಡನೆ ಸ್ನೇಹಿತ ಉಳಿಸಿಕೊಂಡಿರುವ ಜಂಟೆಲ್ ಮನ್ ವಿಭಾಗಕ್ಕೆ ಸೇರಬಲ್ಲ ವ್ಯಕ್ತ್ ವಿಜಯ್ ರಾಘವೇಂದ್ರ

ನಿಖಿತಾ ತುಕ್ರಲ್

ಅಮದು ಬೆಡಗಿ ನಿಖಿತಾ ಅಲ್ಪ ಸ್ವಲ್ಪ ಕನ್ನಡ ಕಲಿತು ಕನ್ನಡತಿ ಆಗಲು ಹೊರಟಿರುವ ನಟಿ. ದರ್ಶನ್ ಜೊತೆ ಹೆಸರು ತಗುಲಿ ಹಾಕಿಕೊಂಡಾಗ ದಿಟ್ಟವಾಗಿ ವಿವಾದಗಳನ್ನು ಎದುರಿಸಿದರು

ವಿನಾಯಕ ಜೋಷಿ

ಬಾಲ ನಟನಾಗಿ ಯಶಸ್ವಿಯಾದ ವಿನಾಯಕ ಜೋಶಿ ನಾಯಕ ನಟನಾಗಲು ಹೋಗಿ ಸೋತರು. ಆರ್ ಜೆ ಅಗಿ ಮತ್ತೆ ವೃತ್ತಿ ಕಂಡುಕೊಂಡು, ಮತ್ತೆ ನಟನೆಯತ್ತ ಹೊರಳಿರುವ ಪ್ರತಿಭಾವಂತ

ತಿಲಕ್

ಕನ್ನಡದ ಇಮ್ರಾನ್ ಹಶ್ಮಿ ಎಂದೇ ಖ್ಯಾತಿ ಗಳಿಸಿರುವ ತಿಲಕ್ ಕೂಡಾ ಗಂಡ ಹೆಂಡತಿ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದರು. ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗಿ ಬೆಳೆಯುತ್ತಿದ್ದಾರೆ

ಅನುಶ್ರೀ

ಕಿರುತೆರೆ ವಿಜೆಯಾಗಿ, ನಿರೂಪಕಿಯಾಗಿ ಜನಪ್ರಿಯತೆ ಗಳಿಸಿರುವ ಕರಾವಳಿ ಮೂಲದ ಬೆಡಗಿ

ರಾಜೇಶ್

ಕಾಡಿನಿಂದ ನಾಡಿಗೆ ರಿಯಾಲಿಟಿ ಶೋ ಮೂಲಕ ಬಂದ ರಾಜೇಶ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಷ್ಟೇ ಗೊತ್ತು. ಈಗ ಮತ್ತೊಮ್ಮೆ ಮಾನಸಿಕ ಅಸ್ವಸ್ಥನಾಗಿರುವುದು ದುರ್ದೈವದ ಸಂಗತಿ. ರಾಜೇಶ ಮತ್ತೆ ಬಿಗ್ ಬಾಸ್ ಸೇರುತ್ತಾನಾ ಕಾಲವೇ ಉತ್ತರಿಸಬೇಕು

English summary
Etv Kannada version of Bigg Boss house opened today(Mar.24) a reality hosted by Kiccha Sudeep has 13 contestants Vijay Raghavendra, Sanjjanaa, Tilak, Vinayak Joshi, Shwetha Pandit, Nurse Jayalakshmi, Chandrika.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada