Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ವಾತಿ ಕೈ ಹಿಡಿದ ಮಾಡರ್ನ್ ರೈತ ಶಶಿ ಕುಮಾರ್!
ಮಾರ್ಡನ್ ರೈತ ಎಂದು ಪ್ರಸಿದ್ದಿ ಪಡೆದಿದ್ದ ಶಶಿ ಕುಮಾರ್, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರಿಗೆ ಶಶಿಕುಮಾರ್ ಪರಿಚಿತ. ಕಾರ್ಯಕ್ರಮದಲ್ಲಿ ಗೆದ್ದ ಬಳಿಕ, ಕೆಲವು ದಿನ ಕೆಲವು ವಿಚಾರಗಳಿಗೆ ಸುದ್ದಿ ಆಗಿದ್ದ ಶಶಿ ಕುಮಾರ್ ನಂತರ ಮಾಯವಾಗಿ ಬಿಟ್ಟಿದ್ದರು.
ಕಾರ್ಯಕ್ರಮದಲ್ಲಿ ಇರುವಾಗಲೇ ನಾನು ಮಾಡರ್ನ್ ರೈತ ಎಂದು ಹೇಳಿಕೊಂಡಿದ್ದರು. ಜೊತೆಗೆ ಕೃಷಿಯಲ್ಲಿ ಪದವಿ ಪಡೆದಿದ್ದು, ಅದರಲ್ಲಿಯೇ ಆಸಕ್ತಿ ಹೆಚ್ಚು ಇದೆ ಎನ್ನುವುದನ್ನು ಹಲವು ಬಾರಿ ಹೇಳಿಕೊಂಡಿದ್ದರು. ಮಾಡರ್ನ್ ರೈತ ಎನ್ನುವ ಹೆಸರಿಂದ ಕೆಲವು ಜನರು ಶಶಿ ಅವ್ರನ್ನು ಇಷ್ಟ ಪಟ್ಟಿದ್ದು ಇದೆ.
ಬೆಟ್ಟದ
ಹೂ:
ರಾಹುಲ್
ಮತ್ತು
ಹೂವಿಗೆ
ವಯಸ್ಸಾದರೆ
ಹೇಗೆ
ಕಾಣುತ್ತಾರೆ..?
ಈಗ ಶಶಿಕುಮಾರ್ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಅದು ಅವರ ವೈಯಕ್ತಿಕ ವಿಚಾರವಾಗಿ ಶಶಿ ಕುಮಾರ್ ಮದುವೆ ನಿಗದಿ ಆಗಿದ್ದ ಬಗ್ಗೆ ಈ ಹಿಂದೆಯೇ ಸುದ್ದಿ ಆಗಿತ್ತು. ಈಗ ಶಶಿ ಕುಮಾರ್ ಮದುವೆ ನೆರವೇರಿದೆ. ಕುಟುಂಬಸ್ಥರು, ಅಪ್ತರ ಸಮ್ಮುಖದಲ್ಲಿ ಶಶಿಕುಮಾರ್ ಮದುವೆ ನಡೆದಿದೆ.

ಮದುವೆಯಾದ ಶಶಿ ಕುಮಾರ್!
ಮಾಡರ್ನ್ ರೈತ ಶಶಿ ಕುಮಾರ್ ಮತ್ತು ಸ್ವಾತಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ ಶಶಿ ಕುಮಾರ್ ಮತ್ತು ಸ್ವಾತಿ ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಿದೆ. ಇದೇ ಆಗಸ್ಟ್ 6 ರಂದು ಆರತಕ್ಷತೆ ಮತ್ತು 7ರಂದು ಮದುವೆ ನಡೆದಿದೆ. ಶಶಿ ಕುಮಾರ್ ಮತ್ತು ಸ್ವಾತಿ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಾಲಿ
ಬೆಡಗಿಯಾಗಿ
ಮಿಂಚಿದ
'ಪುಟ್ಟಕ್ಕನ
ಮಗಳು'
ಸಂಜನಾ
ಬುರ್ಲಿ!

ಸ್ವಾತಿ ಕೈ ಹಿಡಿಯಲಿರುವ ಶಶಿ!
ಶಶಿಕುಮಾರ್‌ಗೆ ಈಗಾಗಲೇ ಮದುವೆ ನಿಗದಿ ಆದಾಗಲೇ ಹುಡುಗಿ ಯಾರು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿತ್ತು. ಹುಡುಗಿ ಕರ್ನಾಟಕದವರೇ. ದೊಡ್ಡಬಳ್ಳಾಪುರದ ಸ್ವಾತಿ ಎಂಬ ಹುಡುಗಿಯನ್ನು ಶಶಿ ಮದುವೆ ಆಗಿದ್ದಾರೆ. ಸದ್ಯ ಇದಿಷ್ಟು ಮಾಹಿತಿ ಮಾತ್ರವೇ ಲಭ್ಯ ಆಗಿದೆ. ಇನ್ನು ಕುಟುಂಬಸ್ಥರಾಗಲಿ ಅಥವಾ ಶಶಿ ಹುಡುಗಿಯ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ಸಿನಿಮಾ ಸಾಹಸಕ್ಕೆ ಶಶಿ!
ರಿಯಾಲಿಟಿ ಕಾರ್ಯಕ್ರಮದಲ್ಲಿ ಖ್ಯಾತಿ ಪಡೆದ ಬಳಿಕ ಶಶಿಕುಮಾರ್, ನಟ ಸುದೀಪ್ ಅವರನ್ನು ಟೀಕಿಸಿ ವಿವಾದಕ್ಕೊಳಗಾಗಿದ್ದರು. ಬಳಿಕ ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಆರಂಭಿಸಿದ್ದರು. ಜೊತೆಗೆ ಒಂದು ಸಿನಿಮಾ ಕೂಡ ಪ್ರಕಟ ಮಾಡಿದ್ದರು. ಸಿನಿಮಾ ಮಾಡಿ ಹೀರೊ ಆಗಲು ಹೊರಟಿದ್ದರು. ಆದರೆ ಆ ಸಿನಿಮಾ ಯಾವ ಹಂತದಲ್ಲಿ ಇದೆ? ಏನಾಗಿದೆ? ಎನ್ನುವುದು ಬಹಿರಂಗವಾಗಿಲ್ಲ.

ಕೃಷಿಯಲ್ಲಿ ಪದವಿ!
ಕೃಷಿಯಲ್ಲಿ ಪದವಿ ಪಡೆದಿರುವ ಶಶಿಕುಮಾರ್ ರೈತ ಎಂಬ ಮಾನದಂಡದ ಮೇಲೆಯೇ ಬಿಗ್ಬಾಸ್ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಶೋನಿಂದ ಹೊರ ಬಂದ ಮೇಲೆ ರೈತನಾಗಿ ಮುಂದುವರೆಯುತ್ತೇನೆ ಎಂದಿದ್ದರು. ಶಶಿ ಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಶಶಿ ಕುಮಾರ್ ಪದವಿ ಪಡೆದುಕೊಂಡಿದ್ದಾರೆ.