Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್‌ಬಾಸ್ ವಿರುದ್ಧ ಹರಿಹಾಯ್ದ ಮಾಜಿ ಸ್ಪರ್ಧಿ
ಬಿಗ್‌ಬಾಸ್ ಭಾರತದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಗಳಲ್ಲಿ ಬಿಗ್‌ಬಾಸ್ ಪ್ರಸಾರವಾಗುತ್ತಿದೆ. ಎಲ್ಲ ಭಾಷೆಗಳಲ್ಲಿಯೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ ಈ ಶೋ.
ಬಿಗ್‌ಬಾಸ್‌ಗೆ ಹೋಗಿ ಬಂದ ಸಾಮಾನ್ಯರು ಸಹ ಸೆಲೆಬ್ರಿಟಿಗಳಾಗಿದ್ದಿದೆ. ಆದರೆ ಇದೀಗ ಮಾಜಿ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಬಿಗ್‌ಬಾಸ್ ಅನ್ನು ಕಠುವಾಗಿ ಟೀಕಿಸಿದ್ದು, ಈ ಶೋ ಅನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದಿ ಬಿಗ್‌ಬಾಸ್ ಸೀಸನ್ 13 ರಲ್ಲಿ ಸ್ಪರ್ಧಿಸಿದ್ದ ನಟಿ ಹಿಮಾಂಶಿ ಖುರಾನಾ ಇದೀಗ ಬಿಗ್‌ಬಾಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಐಎಚ್‌ಡಬ್ಲು ಕೌನ್ಸಿಲ್ (ಇಂಟಿಗ್ರೇಟೆಡ್ ಹೆಲ್ತ್ ಕೌನ್ಸಿಲ್) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ನಟಿ ಹಿಮಾಂಶಿ, ''ಜನರು ನಾವು ಯಾವ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತೇವೆಯೋ ಅದರ ಆಧಾರದ ಮೇಲೆ ನಮ್ಮನ್ನು ಗುರುತಿಸುತ್ತಾರೆ, ನಮ್ಮ ವ್ಯಕ್ತಿತ್ವ ಇಂಥಹದ್ದೆಂದು ಅಳೆಯುತ್ತಾರೆ. ಆದರೆ ಅವರಿಗೆ ಕ್ಯಾಮೆರಾದ ಹಿಂದೆ ಏನಾಗುತ್ತದೆ ಎಂಬುದು ಗೊತ್ತಿರುವುದಿಲ್ಲ'' ಎಂದಿದ್ದಾರೆ.
''ಆಯೋಜಕರಿಗೆ ಕೆಲವು ಸ್ಪರ್ಧಿಗಳು ಫೇವರೇಟ್‌ಗಳಾಗಿರುತ್ತಾರೆ, ಹಾಗಾಗಿ ಅವರನ್ನು ಹೀರೋ ಮಾಡಲು ಆಯ್ದ ದೃಶ್ಯಗಳನ್ನಷ್ಟೆ ತೋರಿಸುತ್ತಾರೆ. ಆಗ ಉಳಿದ ಸ್ಪರ್ಧಿಗಳು ವಿಲನ್‌ಗಳಂತೆ ಕಾಣುತ್ತಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್‌ಗೂ ಕಾರಣವಾಗುತ್ತದೆ'' ಎಂದಿದ್ದಾರೆ ಹಿಮಾಂಶಿ.
''ಬಿಗ್‌ಬಾಸ್ ಮನೆಯಲ್ಲಿದ್ದ ಸಮಯ ನನ್ನ ಜೀವನದ ಬಹಳ ಕೆಟ್ಟ ಸಮಯ, ಅಲ್ಲಿ ಸಾಕಷ್ಟು ವಿಷಯಗಳು ನಡೆಯುತ್ತಿದ್ದವು, ಜಗಳಗಳು ನಡೆಯುತ್ತಿದ್ದವು ಅವು ನನ್ನ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದವು. ನನಗೆ ಖಿನ್ನತೆ ಕಾಡಲಾರಂಭಿಸಿತು, ಪ್ಯಾನಿಕ್ ಅಟ್ಯಾಕ್‌ಗಳು ಆಗಲಾರಂಭವಾಯ್ತು'' ಎಂದಿದ್ದಾರೆ.
ಆಟಗಾರರನ್ನು ಬಹಳ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತದೆ. ಆ ಟ್ರೋಲ್‌ಗಳು ಆ ಸ್ಪರ್ಧಿಗಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತವೆ. ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದ ಮೇಲೆ ಅವರು ಯಾವುದೇ ವಿಷಯ ಮಾತನಾಡಿದರೂ ಅದನ್ನು ಋಣಾತ್ಮಕವಾಗಿ ಪರಿಗಣಿಸುತ್ತಾರೆ. ವ್ಯಂಗ್ಯ ಮಾಡುತ್ತಾರೆ. ನಾನು ಇದನ್ನು ಅನುಭವಿಸಿದ್ದೇನೆ. ಇದರಿಂದಾಗಿಯೇ ನಾನು ಖಿನ್ನತೆಗೆ ಜಾರಿದ್ದೆ. ಆದರೆ ಈಗ ನನ್ನ ಮಾನಸಿಕ ಆರೋಗ್ಯ ಚೆನ್ನಾಗಿದೆ'' ಎಂದಿದ್ದಾರೆ.