»   » ನಿಮಗ್ಯಾರಿಗೂ ಗೊತ್ತಿಲ್ಲದ 'ಬಿಗ್ ಬಾಸ್' ಸುದೀಪ್.!

ನಿಮಗ್ಯಾರಿಗೂ ಗೊತ್ತಿಲ್ಲದ 'ಬಿಗ್ ಬಾಸ್' ಸುದೀಪ್.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಂದ್ರೆ 'ಬಿಗ್ ಬಾಸ್'. 'ಬಿಗ್ ಬಾಸ್' ಅಂದ್ರೆ ಕಿಚ್ಚ ಸುದೀಪ್ - ಈ ಮಾತು 'ಬಿಗ್ ಬಾಸ್' ರಿಯಾಲಿಟಿ ಶೋ ಮತ್ತು ಕಿಚ್ಚ ಸುದೀಪ್ ಗೆ ಸಿಕ್ಕಿರುವ ಜನಪ್ರಿಯತೆಗೆ ಸಾಕ್ಷಿ.

'ಬಿಗ್ ಬಾಸ್' ಜನಪ್ರಿಯವಾಗುವುದಕ್ಕೆ ಸ್ಪರ್ಧಿಗಳು ಎಷ್ಟು ಮುಖ್ಯವೋ, ಯಾರನ್ನೂ ಹೊಗಳದೆ, ತೆಗಳದೆ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಿಭಾಯಿಸುವ ಕಿಚ್ಚ ಸುದೀಪ್ ಕೂಡ ಅಷ್ಟೇ ಮುಖ್ಯ.['ಬಿಗ್ ಬಾಸ್' ವೀಕೆಂಡ್ ಸ್ಪೆಷಲ್ ನಲ್ಲಿ ನೀವೂ ಭಾಗವಹಿಸಬಹುದು.!]

ಶೂಟಿಂಗ್, ಸಿಸಿಎಲ್ ಮಧ್ಯೆ 'ಬಿಗ್ ಬಾಸ್' ಶೋಗೂ ಕಮಿಟ್ ಆಗಿರುವ ಕಿಚ್ಚ ಸುದೀಪ್ ನಿದ್ದೆ ಇಲ್ಲದೆ ಶೋಗಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನೋದು ನಿಮಗೆ ಗೊತ್ತಿರಲಿಕ್ಕಿಲ್ಲ.

ಶನಿವಾರ, ಭಾನುವಾರ ಬಂತೂಂದ್ರೆ ತಪ್ಪದೆ 'ಬಿಗ್ ಬಾಸ್' ನೋಡ್ತಿದ್ದ ನಿಮಗೆ, ಅದರ ಹಿಂದಿನ ಶ್ರಮ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. 'ಬಿಗ್ ಬಾಸ್' ಶೋಗಾಗಿ ಸುದೀಪ್ ಪಡುತ್ತಿದ್ದ ಕಷ್ಟದ ಕಥೆ ಇಲ್ಲಿದೆ ಓದಿ....ಸುದೀಪ್ ಮಾತುಗಳಲ್ಲೇ....

'ಬಿಗ್ ಬಾಸ್-3' ಸ್ಪೆಷಾಲಿಟಿ ಏನು?

''ಬಿಗ್ ಬಾಸ್' ಕರ್ನಾಟಕಕ್ಕೆ ಶಿಫ್ಟ್ ಆಗಿರುವುದು ಈ ಬಾರಿಯ (ಸೀಸನ್ 3) ವಿಶೇಷ. ತುಂಬಾ ಖರ್ಚು ಮಾಡಿದ್ದಾರೆ ಅದಕ್ಕಾಗಿ. ಇದುವರೆಗೂ ಯಾವುದೇ ಭಾಷೆಯಲ್ಲಿ 'ಬಿಗ್ ಬಾಸ್' ಮನೆ ಶಿಫ್ಟ್ ಆಗಿಲ್ಲ. ಇದು ಸಾಧ್ಯವಾಗಿದ್ದು ನಿಮ್ಮೆಲ್ಲರಿಂದ. ಇಲ್ಲಿ ಕಾರ್ಯಕ್ರಮಕ್ಕೆ ಹೆಚ್ಚು ಜನಪ್ರಿಯತೆ ಇರುವ ಕಾರಣ, ಮನೆ ಇಲ್ಲಿಗೆ ಶಿಫ್ಟ್ ಆಗಿದೆ.'' - ಸುದೀಪ್['ನನ್ನ ಮದುವೆ ಆಗಿ' ಅಂತ ಸುದೀಪ್ ಬಹಿರಂಗವಾಗಿ ಕೇಳಿದ್ದು ಯಾರಿಗೆ?]

ನನಗೆ ಖುಷಿ ಯಾಕ್ ಗೊತ್ತಾ?

''ಬಿಗ್ ಬಾಸ್' ಮನೆ ಶಿಫ್ಟ್ ಆಗಿರುವುದು ನನಗೆ ಖುಷಿ. ಯಾಕೆ ಅಂದ್ರೆ, ಶೋ ಮುಗಿಯುತ್ತಿದ್ದ ಹಾಗೆ ನಾನು ಮನೆಗೆ ಹೋಗಬಹುದು. ನಾನು ನಿದ್ದೆ ಇಲ್ಲದೇ ಕೆಲಸ ಮಾಡುತ್ತಿದ್ದೆ ಈ ಶೋಗಾಗಿ. ನನಗೆ ಆಗ್ತಾನೇ ಇರ್ಲಿಲ್ಲ. ಪೂಣೆಗೆ ಹೋಗುವುದಕ್ಕೆ 2 ಗಂಟೆ ಬೇಕು. ಅಲ್ಲಿಂದ ಲೋನಾವಾಲಾಗೆ ತೆರಳಬೇಕು. ತುಂಬಾ ಕಷ್ಟ.'' - ಸುದೀಪ್

ನಿದ್ದೆಗೆಟ್ಟು ಕೆಲಸ ಮಾಡಿದ್ದೇನೆ.!

''ನನಗೆ ಚೆನ್ನಾಗಿ ದುಡ್ಡು ಕೊಟ್ಟಿದ್ದಾರೆ. ಅದಕ್ಕೆ ಶೋ ಮಾಡುತ್ತಿದ್ದೇನೆ ಅಂತ ಎಲ್ಲರೂ ಅಂದುಕೊಳ್ಳಬಹುದು. ಆದ್ರೆ, ಸತ್ಯ ಅದಲ್ಲ. ನಾನು ಬಿಗ್ ಬಾಸ್ ಆಗಿ ನಿದ್ದೆ ಇಲ್ಲದೆ ಕೆಲಸ ಮಾಡಿದ್ದೇನೆ.'' - ಸುದೀಪ್

ಸುದೀಪ್ ಶೆಡ್ಯೂಲ್ ಇರುವುದು ಹೀಗೆ.....

''ಕಳೆದ ಬಾರಿ ನನಗೆ 'ರನ್ನ' ಶೂಟಿಂಗ್ ಕೂಡ ಇತ್ತು. 'ರನ್ನ' ಶೂಟಿಂಗ್ ಮುಗಿಸಿ ನಾನು 5 ಗಂಟೆಗೆ ಹೊರಟರೆ, 9 ಗಂಟೆಗೆ ಫ್ಲೈಟ್ ಇತ್ತು. 11 ಗಂಟೆಗೆ ಪೂಣೆಯಲ್ಲಿ ಲ್ಯಾಂಡ್ ಆಗ್ತಿದ್ದೆ. ಅಲ್ಲಿಂದ ಕಾರ್ ನಲ್ಲಿ ಲೋನಾವಾಲಾಗೆ ಹೊರಟು ತಲುಪುದರೊಳಗೆ 12.30 ಆಗ್ತಿತ್ತು.'' - ಸುದೀಪ್

ಇಡೀ ರಾತ್ರಿ ಜಾಗರಣೆ

''ಅಲ್ಲಿ ಊಟ ಮಾಡಿದ ತಕ್ಷಣ, ವಾರದ ಐದು ಎಪಿಸೋಡ್ ಗಳನ್ನ ನಾನು ನೋಡಬೇಕಿತ್ತು. ಅದೆಲ್ಲಾ ನೋಡುವಷ್ಟರಲ್ಲಿ ಬೆಳಗ್ಗೆ 5 ಗಂಟೆ ಆಗ್ತಿತ್ತು. ಅಷ್ಟೊತ್ತಿಗೆ ನಾನು ಮಲಗಿದ್ರೆ, ತಿಪ್ಪರಲಾಗ ಹಾಕಿದ್ರೂ ನನ್ನನ್ನ ಏಳಿಸುವುದಕ್ಕೆ ಆಗಲ್ಲ. ಹೀಗಾಗಿ, ಮಲಗುತ್ತಿರಲಿಲ್ಲ. ಅಷ್ಟರಲ್ಲಿ ರೈಟರ್ಸ್ ಬಂದು ಏನೇನು ಮಾತನಾಡಬೇಕು ಅನ್ನುವ ಬಗ್ಗೆ ಚರ್ಚೆ ಆಗ್ತಿತ್ತು.'' - ಸುದೀಪ್

ಒಂದೇ ದಿನ ಎರಡು ಎಪಿಸೋಡ್

''ಎಲ್ಲವೂ ಫೈನಲ್ ಆದ ತಕ್ಷಣ ಶೂಟಿಂಗ್ ಸ್ಟಾರ್ಟ್ ಆಗ್ತಿತ್ತು. ಮೊದಲ ಎಪಿಸೋಡ್ 1.30 ವರೆಗೂ ನಡೆಯುತ್ತಿತ್ತು. ಸ್ವಲ್ಪ ಗ್ಯಾಪ್ ತಗೊಂಡು 4.30 ಗೆ ಸೆಕೆಂಡ್ ಎಪಿಸೋಡ್ ಶುರುಮಾಡಿದರೆ 12 ಗಂಟೆಗೆ ಪ್ಯಾಕಪ್ ಆಗ್ತಿತ್ತು. 2 ಗಂಟೆಗೆ ಹೊರಟರೆ, ಅವತ್ತೂ ಕೂಡ ನಿದ್ದೆ ಇರ್ತಿರ್ಲಿಲ್ಲ. ಮಾರನೇ ದಿನ ಮತ್ತೆ 'ರನ್ನ' ಶೂಟಿಂಗ್. ಎರಡು ದಿನ ನಿದ್ದೆ ಇಲ್ಲದೆ ಕೆಲಸ. ಹೀಗೆ ಇಡೀ ಕಾರ್ಯಕ್ರಮ ನಡೆಸಿಕೊಟ್ಟಿದ್ದೇನೆ. ಹೀಗಾಗಿ ಬೆಂಗಳೂರಿಗೆ ಶಿಫ್ಟ್ ಆಗಿರುವುದು ನನಗೆ ತುಂಬಾ ಖುಷಿ.'' - ಸುದೀಪ್

English summary
Kannada Actor Sudeep is extremely happy about Bigg Boss Kannada-3 house is shifted from Poona to Bengaluru. Sudeep explained about his tight schedule when he used to shoot in Poona for previous Bigg Boss seasons.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada