»   » ಆದಿ ಲೋಕೇಶ್ ಕಡೆಗೂ ಬಿಚ್ಚಿಟ್ಟರು ಕಣ್ಣೀರ ಕಥೆ

ಆದಿ ಲೋಕೇಶ್ ಕಡೆಗೂ ಬಿಚ್ಚಿಟ್ಟರು ಕಣ್ಣೀರ ಕಥೆ

Posted By:
Subscribe to Filmibeat Kannada
<ul id="pagination-digg"><li class="next"><a href="/tv/bigg-boss-kannada-2-akul-balaji-tells-tragic-story-085905.html">Next »</a></li></ul>

ಬಿಗ್ ಬಾಸ್ ಮನೆಯಲ್ಲಿ ಐದು ದಿನಗಳು ಕಳೆಯುತ್ತಿದ್ದಂತೆ ಎಲ್ಲರೂ ಒಬ್ಬರಿಗೊಬ್ಬರು ನಿಧಾನಕ್ಕೆ ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಐದನೇ ದಿನ ಹಲವಾರು ಸ್ವಾರಸ್ಯಕರ ಸಂಗತಿಗಳಿಗೆ ಕಾರಣವಾಯಿತು. ಆದಿ, ಸೃಜನ್, ಶಕೀಲಾ, ಲಯ, ಅನಿತಾ ತಮ್ಮ ತಮ್ಮ ಕಥೆಗಳನ್ನು ಹೇಳಿಕೊಂಡರು.

ಐದನೇ ದಿನ ಬೆಳಗ್ಗೆ 8 ಗಂಟೆಯಾದರೂ ಯಾರೂ ಹಾಸಿಗೆ ಬಿಟ್ಟು ಎದ್ದೇಳಲಿಲ್ಲ. ನಿಧಾನಕ್ಕೆ ಎದ್ದ ಮೇಲೆ ಒಬ್ಬರೊಬ್ಬರೇ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು. ಲಯ ಕೋಕಿಲಾ ಮಾತನಾಡುತ್ತಾ, ಅನಿತಾ ಭಟ್ ಅವರು ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಲ್ಲ, ಎಲ್ಲವನ್ನೂ ಹೇಳಿಬಿಡುತ್ತಾರೆ ಎಂದರು.

Aadi Lokesh terrible incident

ಇದೇ ಸಂದರ್ಭದಲ್ಲಿ ಲಯ ಅವರಿಗೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ನಡೆದ ಒಂದು ಘಟನೆಯನ್ನು ಸೃಜನ್ ಹೇಳ್ತೀನಿ ಎಂದು ಹೊರಟವರು ಅದ್ಯಾಕೋ ಏನೋ ಅವರು ಹೇಳಲಿಲ್ಲ. ಅಂತಹದ್ದೇನು ನಡೀತಪ್ಪಾ ಎಂದು ವೀಕ್ಷಕರು ಕುತೂಹದಿಂದ ಎದುರು ನೋಡುವಂತಾಯಿತು.

ಇನ್ನೊಂದು ಕಡೆ ಆದಿ ಲೋಕೇಶ್ ಅವರು ಮಾತನಾಡುತ್ತಾ, ಚಿಂದೋಡಿ ಲೀಲಾ ಅವರ ಕೆಬಿಆರ್ ನಾಟಕ ಕಂಪನಿಯಲ್ಲಿ ನಾನು ನಾಟಕಗಳನ್ನು ಮಾಡುತ್ತಿದ್ದೆ. ಆರಂಭದಲ್ಲಿ ದೊಡ್ಡ ಆಕ್ಟರ್ ಮಗ ಎಂದುಕೊಂಡು ಯಾರೂ ತಮಗೆ ಚಾನ್ಸ್ ಕೊಡಲಿಲ್ಲ. ಆಗ ನನಗೆ 15 ಸಾವಿರ ಸಂಬಳ ಕೊಡುತ್ತಿದ್ದರು.

ಅದಕ್ಕಿಂತಲೂ ಹೆಚ್ಚಾಗಿ ಅಭಿಮಾನಿಗಳು ಪ್ರೀತಿಯಿಂದ ಕೊಡುತ್ತಿದ್ದ ದುಡ್ಡೇ ಜಾಸ್ತಿ ಬರುತ್ತಿತ್ತು. ಮೊದಲು ನನಗೆ 300 ರುಪಾಯಿ ಸಂಬಳ. ಅದು 15 ಸಾವಿರದ ತನಕ ಹೋಯಿತು. ಕಡೆಗೆ ಸಿನಿಮಾನ ನಂಬಿಕೊಂಡು ಆಕಡೆ ನಾಟಕನೂ ಇಲ್ಲ, ಈ ಕಡೆ ಸಿನಿಮಾನೂ ಇಲ್ಲ ಎಂಬಂತಹ ಪರಿಸ್ಥಿತಿ ಬಂತು. ಹೊಟ್ಟೆಗೆ ಅನ್ನ ಇಲ್ಲದಂತಹ ದುಃಸ್ಥಿತಿ ಎದುರಾಯಿತು ಎಂದರು.

ಆಗ ನನಗೆ 'ಜೋಗಿ' ಚಿತ್ರ ಸಿಕ್ಕಿದ್ದು. ನಾನು ನಿರೀಕ್ಷಿಸಿಯೇ ಇರಲಿಲ್ಲ ಜನ ನನ್ನನ್ನು ಅಲ್ಲಿ ಕೂರಿಸುತ್ತಾರೆ ಎಂದು. ಮಾರ್ನಿಂಗ್ ಶೋಗೆ ಹೋಗ್ತೀನಿ ನಿಂತುಕೊಳ್ಳಕ್ಕೂ ಜಾಗ ಇರಲಿಲ್ಲ. ಈ ಸಿನಿಮಾದಲ್ಲಿ ನಾನು ಆಕ್ಟಿಂಗ್ ಮಾಡಿದ್ದೀನಿ ಸ್ವಲ್ಪ ದಾರಿ ಬಿಡಿ ಎಂದು ಪೊಲೀಸರಿಗೆ ಹೇಳಿದರೆ, ಎಲ್ಲರೂ ಅದನ್ನೇ ಹೇಳೋದು ಹೋಗಯ್ಯ ಎಂದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿ ಪ್ರಹಾರ ಮಾಡಲಾಯಿತು. ಆಗ ನನ್ನ ಬೆನ್ನಿಗೂ ಸರಿಯಾಗಿ ತದುಕಿದರು ಪೊಲೀಸರು. ಇದೆಲ್ಲಾ ನನಗೆ ಬೇಕಾಗಿತ್ತಾ ಎನ್ನಿಸಿತು.

ಅಲ್ಲಿಂದ ಮನೆಗೆ ಹೋಗಲು ಜೇಬಲ್ಲ ದುಡ್ಡಿರಲಿಲ್ಲ. ಅಲ್ಲಿಂದ ಆರ್ ಟಿ ನಗರಕ್ಕೆ ನಡೆದುಕೊಂಡು ಹೋದೆ. ಆಗ ಕಣ್ಣಲ್ಲಿ ನೀರು ಧಾರಾಕಾರ ಸುರಿಯುತ್ತಿತ್ತು. ಎಷ್ಟು ಬೇಕೋ ಅಷ್ಟು ಅತ್ತೆ. ಬಳಿಕ ಮನೆಗೆ ಹೋಗಿ ಒಗೆಯಬೇಕಾಗಿದ್ದ ಬಟ್ಟೆಗಳನ್ನು ಚೆನ್ನಾಗಿ ಒದೆಗು ನನ್ನ ಸಿಟ್ಟನ್ನೆಲ್ಲಾ ಅದರ ಮೇಲೆ ತೀರಿಸಿಕೊಂಡೆ. ಬಳಿಕ ಒಬ್ಬನೇ ಮಲಗಿದೆ.

<ul id="pagination-digg"><li class="next"><a href="/tv/bigg-boss-kannada-2-akul-balaji-tells-tragic-story-085905.html">Next »</a></li></ul>
English summary
Bigg Boss gives 'Who is the best' task to inmates on fifth day. According to their age, career graph Sahkeela herself occupied number 1 position. Srujan Lokesh, Shakeela, Akul Balaji, Laya Kokila and Anita Bhat disclosed some of interesting and tragic moments of life. Here is the day 5 highlights.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada