»   » ಬಿಗ್ ಬಾಸ್ ಬಗ್ಗೆ ಅನುಪಮಾ ಭಟ್ ಏನಂತಾರೆ?

ಬಿಗ್ ಬಾಸ್ ಬಗ್ಗೆ ಅನುಪಮಾ ಭಟ್ ಏನಂತಾರೆ?

Posted By:
Subscribe to Filmibeat Kannada

ಹೆಣ್ಮಕ್ಲ ಸಹವಾಸ ಗಂಡೈಕ್ಲ ಉಪವಾಸ, ಬಿಗ್ ಬಾಸ್ ಮನೆಯಲ್ಲಿ ವನವಾಸ. ಅನುಪಮಾ ಭಟ್ ಅವರು ಮನೆಯಿಂದ ಹೊರಹೋದ ಮೇಲೆ ಮನೆಯಲ್ಲಿ ನಾಲ್ಕು ಮಂದಿ ಮಾತ್ರ ಉಳಿದುಕೊಂದಿದ್ದಾರೆ. ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಗೊತ್ತಾಗಬೇಕಾದರೆ ಇನ್ನು ಉಳಿದಿರುವುದು ಒಂದೇ ಒಂದು ವಾರ ಮಾತ್ರ.

ಅನುಪಮಾ ಭಟ್ ಅವರು ಮನೆಯಲ್ಲಿ ಇದ್ದಷ್ಟು ದಿನವೂ ಎಲ್ಲರೊಂದಿಗೂ ಹೊಂದಿಕೊಂಡು ಗಲಾಟೆ, ಗದ್ದಲಗಳಿಂದ ಬಹಳ ದೂರ ಉಳಿದಿದ್ದರು. ಅವರು ಈಗ ಮನೆಯಿಂದ ಹೊರಬಂದಿದ್ದಾರೆ. ಸಖತ್ ಸಂಡೇ ವಿತ್ ಸುದೀಪ್ ಜೊತೆ ಮಾತನಾಡುತ್ತಾ ಬಿಗ್ ಬಾಸ್ ಅನುಭವಗಳನ್ನು ಹಂಚಿಕೊಂಡರು.

Anupama Bhat

ಸಿಕ್ಕಾಪಟ್ಟೆ ಸ್ವೀಟ್, ಕೆಲಸದಲ್ಲಿ ಮಾತ್ರ ಕಂಪ್ಲೀಟ್ ನೀಟು, ಹಾಡು ಹಕ್ಕಿ, ಮೂರಡಿ ಇರುವ ಬೆಳ್ಳಿಚುಕ್ಕಿ. ಬಿಗ್ ಬಾಸ್ ಮನೆಯ ಚಿಕ್ಕ ಅತ್ತೆ ಎಂದೆಲ್ಲಾ ಕರೆಸಿಕೊಂಡಿದ್ದ ಅನುಪಮಾ ಭಟ್ ಅವರನ್ನು ಸುದೀಪ್ ಅವರು ಹೇಗಿತ್ತು ಬಿಗ್ ಬಾಸ್ ಜರ್ನಿ ಎಂದರು. ಅದಕ್ಕೆ ಅನುಪಮಾ ಅವರು ಒನ್ ಆಫ್ ದ ಬ್ಯೂಟಿಫುಲ್ ಜರ್ನಿ ಆಫ್ ಮೈ ಲೈಫ್ ಎಂದರು.

ಇಲ್ಲಿಂದ ಹೋಗುವಾದ ಭಯವಾಗಲಿಲ್ಲ, ಈ ಮನೆ ನನಗಲ್ಲ ಎಂದು ಒಮ್ಮೆಯೂ ನನಗೆ ಅನ್ನಿಸಲಿಲ್ಲ. ಬಿಗ್ ಬಾಸ್ ಎಂಬುದು ಹೊರಗಿನ ಪ್ರಪಂಚದ ಮಿನಿಯೇಚರ್. ಹೊರಗಿನ ಪ್ರಪಂಚದ ಜಗಳಗಳು, ಕೋಪತಾಪಗಳು, ಪ್ರೀತಿ, ದ್ವೇಷ ಎಲ್ಲವೂ ಇರುತ್ತವೆ. ಮನೆಯಲ್ಲೂ ಅದೇ ರೀತಿ ಇತ್ತು. ಅಲ್ಲಿಂದ ಬರಬೇಕಾದರೂ ಲಾಟ್ ಆಫ್ ಲವ್ ಸಿಕ್ತು.

ನಾನು ಯಾರ ಜೊತೆಗೂ ಕಾಲು ಕೆರೆದು ಜಗಳಕ್ಕೆ ಹೋಗುತ್ತಿರಲಿಲ್ಲ, ಸಹನೆ ನನ್ನ ಪ್ಲಸ್ ಪಾಯಿಂಟ್. ಮನೆಯಲ್ಲಿ ಒಂದು ಘಟನೆ ನಡೆದಾಗ ತಕ್ಷಣ ರಿಯಾಕ್ಟ್ ಮಾಡದೆ ತಾಳ್ಮೆಯಿಂದ ಯೋಚನೆ ಮಾಡಿ ಪ್ರತಿಕ್ರಿಯಿಸುತ್ತಿದ್ದೆ. ಇದೇ ನನ್ನ ಮೈನಸ್ ಪಾಯಿಂಟ್ ಸಹ. ಕೂಡಲೆ ಸ್ಪಂದಿಸದೇ ಇರುವುದೇ ನನ್ನ ಪ್ಲಸ್ ಹಾಗೂ ಮೈನಸ್ ಪಾಯಿಂಟ್.

ಸೃಜನ್ ಹಾಗೂ ಶ್ವೇತಾ ಚೆಂಗಪ್ಪ ಅವರು ನನ್ನನ್ನು ಮನೆಯಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಸೃಜನ್ ನನ್ನ ಬೆಸ್ಟ್ ಫ್ರೆಂಡ್. ಬಹುಶಃ ಅನಿತಾ ಭಟ್ ಅವರು ನಮ್ಮೊಂದಿಗೆ ಜಾಸ್ತಿ ಸಮಯ ಇರಲಿಲ್ಲ ಹಾಗಾಗಿ ಅವರೊಂದಿಗೆ ಅಂತಹ ಫ್ರೆಂಡ್ ಗಳಿಸಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷದ ಹಿಂದೆ ಅವರನ್ನು ಭೇಟಿಯಾಗಿದ್ದೆ ಎಂಬ ನೆನಪಿದೆ.

ಸೃಜನ್ ಮತ್ತು ಶ್ವೇತಾ ಹೊರತುಪಡಿಸಿದರೆ ಮನೆಯಲ್ಲಿ ಇನ್ನೊಬ್ಬ ಬೆಸ್ಟ್ ಫ್ರೆಂಡ್ ಇದ್ದರು. ಅವರ್ಯಾರೆಂದರೆ ಕ್ಯಾಮೆರಾ ಎಂದು ಜಾಜಿಮಲ್ಲಿಗೆಯಂತೆ ಬಿರಿದರು. ಶ್ವೇತಾ ಚೆಂಗಪ್ಪ ಅವರನ್ನು ನಾನು ನಮ್ಮಕ್ಕನ ತರಹ ಭಾವಿಸುತ್ತೇನೆ. ಬಿಗ್ ಬಾಸ್ ಕೊಟ್ಟಂತಹ ಎರಡು ಅಪೂರ್ವ ಉಡುಗೊರೆ ಎಂದರೆ ಸೃಜನ್ ಹಾಗೂ ಶ್ವೇತಾ ಎಂದರು. (ಫಿಲ್ಮಿಬೀಟ್ ಕನ್ನಡ)

English summary
Anupama Bhat, one of the contestant of Bigg Boss Kannada 2 eliminated from the house. After gets eliminated she shares his experience in Bigg Boss house with Sakkat Sunday with Sudeep. Here is the synopsis.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada