For Quick Alerts
ALLOW NOTIFICATIONS  
For Daily Alerts

  ಬಿಗ್ ಬಾಸ್ ಮನೆಯಲ್ಲಿ ಹಾದಿ ತಪ್ಪುತ್ತಿದ್ದಾರಾ ಆದಿ?

  By ಉದಯರವಿ
  |

  ಅದೃಷ್ಟವಂತರು ಹಾಗೂ ನತದೃಷ್ಟರ ನಡುವಿನ ಆಟ ಹತ್ತನೇ ದಿನವೂ ಮುಂದುವರೆಯಿತು. "ಆ ಅಂದ್ಲು ಆ ದಿನ ಊ ಅಂದ್ಲು ಈ ದಿನ.. ಲಿಪ್ಸು ಕೊಟ್ಲು ಆ ದಿನ ಚಿಪ್ಸು ಕೊಟ್ಲು ಈ ದಿನ...ಆ ಅಮಾಟೆ..." ಹಾಡಿನ ಮೂಲಕ ದಿನವನ್ನು ಬಿಗ್ ಬಾಸ್ ಆರಂಭಿಸಿದರು.

  'ಸಂಪತ್ತಿಗೆ ಸವಾಲ್' ಲಗ್ಜುರಿ ಬಜೆಟ್ ಆಟ ಮೇಲಾಟ ಎಂದಿನಂತೆ ನಡೆಯಿತು. ಈ ಆಟದಲ್ಲಿ ಬಹುತೇಕ ಎಲ್ಲರೂ ಆಸಕ್ತಿ ಕಳೆದುಕೊಂಡವರಂತೆ ಕಂಡರು. ಕೆಲವರಂತೂ ಮನೆಯಲ್ಲಿ ಇದ್ದಾರೋ ಇಲ್ಲವೋ ಎಂಬಂತಿದ್ದರು. ಅವರಲ್ಲಿ ಪ್ರಮುಖವಾಗಿ ಶಕೀಲಾ, ಮಯೂರ್, ಹರ್ಷಿಕಾ ಸಪ್ಪೆ ಪ್ರದರ್ಶನ ನೀಡಿದರು.

  ಆದರೆ ಆದಿ ಲೋಕೇಶ್ ಮಾತ್ರ ದಿನೇ ದಿನೇ ಮನೆಯಲ್ಲಿ ಡಾಮಿನೇಟ್ ಆಗಲು ಪ್ರಯತ್ನಿಸುತ್ತಿರುವುದು ಕಿರುತೆರೆ ವೀಕ್ಷಕರ ಗಮನಕ್ಕೆ ಬರುತ್ತಿದೆ. ಅವರು ಸಣ್ಣಪುಟ್ಟ ವಿಚಾರಕ್ಕೂ ಮಹಿಳಾ ಸ್ಪರ್ಧಿಗಳನ್ನು ತಬ್ಬಿಕೊಳ್ಳುತ್ತಿರುವುದು ಅತಿ ಎನ್ನಿಸುತ್ತಿದೆ. ಒಂದು ಸಂದರ್ಭದಲ್ಲಿ ಅವರು ಖಳನಟನಂತೆ ಮಾತನಾಡಿದರು. ಅವರು ಯಾಕೋ ನೀತೂಗೆ ತುಂಬಾ ಹತ್ತಿರವಾದಂತೆ ಕಾಣುತ್ತಿದ್ದರು.

  ನೀತೂಗೆ ಟಚ್ ಆದರೆ ನಾನು ಸುಮ್ಮನಿರಲ್ಲ

  ಸಂತೋಷ್ ಹಾಗೂ ರೋಹಿತ್ ನಡುವೆ ಸಣ್ಣ ಜಗಳ ನಡೆಯುತ್ತಿರಬೇಕಾದರೆ "ನಿಮ್ಮಿಬ್ಬರ ಗಲಾಟೆಯಲ್ಲಿ ನೀತೂಗೆ ಏನಾದರೂ ಸ್ವಲ್ಪ ಟಚ್ ಆದರೆ ನಾನು ಸುಮ್ಮನಿರಲ್ಲ" ಎಂದು ಆದಿ ಎಚ್ಚರಿಸಿದರು.

  ಅಳುವ ನಾಟಕ ನಾನು ಮಾಡಲ್ಲ ಎಂದ ದೀಪಿಕಾ

  ಇನ್ನೊಂದು ಕಡೆ ಟಾಸ್ಕ್ ನಲ್ಲಿ ಶ್ವೇತಾ ಚೆಂಗಪ್ಪ ಗಾಯಗೊಂಡು ನೋವು ಅನುಭವಿಸಿದರು. ಆದರೆ ಅದೇ ರೀತಿ ದೀಪಿಕಾಗೆ ಆದಾಗ ಅವರು ನಾನು ಆ ರೀತಿ ಅಳುವ ನಾಟಕ ಮಾಡಲ್ಲ ಎಂದರು.

  ಸೃಜನ್ ಲೋಕೇಶ್ ಮೇಲೆ ಆದಿ ಆರೋಪ

  ಕ್ಯಾಪ್ಟನ್ ಸೃಜನ್ ಲೋಕೇಶ್ ಒಂದು ತಂಡದ ಪರವಾಗಿದ್ದಾರೆ ಎಂದು ಆದಿ ಲೋಕೇಶ್ ಆರೋಪಿಸಿದರು. ಅದಕ್ಕೆ ಸೃಜನ್ ಮಾತನಾಡುತ್ತಾ ಯಾರ ಪರ ಇದ್ದರೆ ನನಗೇನು ಬರುತ್ತದೋ. ನಾನು ಬಯಾಸ್ಡ್ ಅಲ್ಲ ಎಂದು ಸ್ಪಷ್ಟಪಡಿಸಿದರು.

  ಇದೇ ಮೊದಲ ಸಲ ಗಳಗಳ ಅತ್ತ ಸಂತೋಷ್

  ಸದಾ ಮನೆಯಲ್ಲಿ ಒಂದಿಲ್ಲೊಂದು ತರಲೆ ಮಾಡುತ್ತಾ, ರೋಹಿತ್ ರನ್ನು ಗೋಳು ಹೊಯ್ದುಕೊಳ್ಳುತ್ತಾ ಕಾಲ ಕಳೆಯುವ ಸಂತೋಷ್ ಇದೇ ಮೊದಲ ಬಾರಿಗೆ ಗಳಗಳ ಎಂದು ಕಣ್ಣೀರು ಸುರಿಸಿದರು. ಯಾಕೆ ಎಂದು ಎಲ್ಲರೂ ಕೇಳಿದಾಗ ಇಲ್ಲಿ ಚಪಾತಿ ತಿನ್ನಲೂ ನನ್ನನ್ನು ಬಿಡಲಿಲ್ಲ ಎಂದು ಕಣ್ಣೀರಾಕಿದರು. ನಮ್ಮ ಎಮೋಷನ್ಸ್ ಗೆ ಇಲ್ಲಿ ಬೆಲೆ ಇಲ್ಲ ಎಂದು ಶ್ವೇತಾ ಸಹ ಧ್ವನಿಗೂಡಿಸಿದರು.

  ಅಕುಲ್ ಬಗ್ಗೆ ಹರ್ಷಿಕಾ ಕಾಮೆಂಟ್

  ಅಕುಲ್ ಗೆ ಸರಿಯಾಗಿ ಟೋನ್ ಇಲ್ಲ, ಎಲ್ಲದಕ್ಕೂ ತೊಡೆ ತಟ್ಟಿ ಹೊಡೆಯುವವರಂತೆ ಮುಂದೆ ಬರುತ್ತಾರೆ. ತೊಡೆ ತಟ್ಟಿ ತಟ್ಟಿ ಅವರ ತೊಡೆ ಕೆಂಪಗೆ ಹಾಗಿತ್ತು ಎಂದು ಸೃಜನ್ ಬಳಿ ಹರ್ಷಿಕಾ ಹೇಳಿದರು. ರೋಹಿತ್ ತುಂಬಾ ಸೀರಿಯಸ್ಸೂ ಅಲ್ಲ ಆಕಡೆ ತಮಾಷೆ ವ್ಯಕ್ತಿನೂ ಅಲ್ಲ ಎಂದು ಹರ್ಷಿಕಾ ಮತ್ತು ಸೃಜನ್ ಅವರಿವರ ಬಗೆ ಹೇಳಿಕೊಂಡರು.

  ಹುಡುಗಿಯರ ಹಿಂದೆ ಆದಿ ಲೋಕೇಶ್

  ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ವೀಕ್ಷಕರ ಗಮನಕ್ಕೆ ಬಂದ ಸಂಗತಿ ಎಂದರೆ, ಹೆಣ್ಣು ಮಕ್ಕಳ ಪರವಾಗಿ ಪದೇಪದೇ ಆದಿ ಲೋಕೇಶ್ ಮಾತನಾಡುತ್ತಿರುವುದು. ಇದು ಯಾಕೋ ಅತಿಯಾಯಿತು ಅನ್ನಿಸುತ್ತಿದೆ. ಅಲ್ಲಿನ ಹುಡುಗಿಯರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸಂದೇಹವೂ ಮೂಡಿಸಿದ್ದಾರೆ.

  ಅಕುಲ್ ಕಿರುಚಾಟಕ್ಕೆ ಆದಿ ಲೋಕೇಶ್ ಬೇಸರ

  ಅಕುಲ್ ಎಲ್ಲದಕ್ಕೂ ಕಿರುಚಾಡುವುದನ್ನು ನೋಡಿದ ಆದಿ ಲೋಕೇಶ್, ನಾನು ಬಿಗ್ ಬಾಸ್ ಮನೆಯಲ್ಲಿದ್ದಿನೋ ಅಕುಲ್ ಅವರ ಮನೆಯಲ್ಲಿದ್ದೋನೋ ಎಂಬ ಅನುಮಾನ ಆಗುತ್ತಿದೆ ಎಂದರು. ಇದಕ್ಕೆ ಅಕುಲ್ ಸಹ ಜೋರಾಗಿಯೇ ಮಾತನಾಡುತ್ತಾ, ನೀನೇನು ಲಾರ್ಡ್ ಲಬಕ್ ದಾಸ ಎಂದು ಅಬ್ಬರಿಸಿದರು.

  ಕೂತು ಕೂತು ಸೋಮಾರಿಯಾದ ಶಕೀಲಾ

  ಇಷ್ಟೆಲ್ಲಾ ಗಲಾಟೆ ಗದ್ದಲ ಆಟ ನಡೆಯುತ್ತಿದ್ದರೂ ಶಕೀಲಾ ಮಾತ್ರ ಅಯ್ಯೋ ಏನಾಯ್ತು ಎಂದು ಆಗಾಗ ನಿದ್ದೆಯಿಂದ ಎದ್ದಂತೆ ಪ್ರಶ್ನಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಲಯೇಂದ್ರ ಮಾತನಾಡುತ್ತಾ, ಕೂತು ಕೂತು ಅವರು ಸೋಮಾರಿಯಾಗಿದ್ದಾರೆ. ಬೆಳಗ್ಗೆ ಯಾರಾದರು ಅವರನ್ನು ವಾಕಿಂಗ್ ಕರೆದುಕೊಂಡಿ ಹೋಗಿ ಎಂಬ ಸಲಹೆ ನೀಡಿದರು.

  ಹದಿನಾರಕ್ಕೇ ಮದುವೆಯಾಗಿದ್ದರೆ ಗೊತ್ತಾಗುತ್ತಿತ್ತು

  ಶಕೀಲಾ ಅವರಿಗೆ ವಯಸ್ಸು 36 ಅಷ್ಟೇ ಆಗಿದ್ದರೂ ನೋಡಲು ಮಾತ್ರ ಐವತ್ತು ವರ್ಷದರಂತೆ ಕಾಣುತ್ತಾರೆ ಎಂಬ ಮಾತುಗಳು ಕೇಳಿಬಂದವು. ಇದಕ್ಕೆ ಶಕೀಲಾ ಏನೂ ಬೇಸರಿಸಿಕೊಳ್ಳದೆ, ನಿಮಗೂ 16 ವರ್ಷಕ್ಕೆ ಮದುವೆಯಾಗಿದ್ದಗೆ ಆಗ ಗೊತ್ತಾಗುತ್ತಿತ್ತು ಎಂದರು.

  ಗಂಡಸರ ಜಾತಿಗೆ ಸೇರಿದವರೇ ಅಲ್ಲ ಎಂದ ಆದಿ

  ಹುಡುಗಿಯನ್ನು ತುಂಬಾ ಗೋಳಾಡಿಸುತ್ತಿದ್ದೀರಾ. ನೀವು ಗಂಡಸರ ಜಾತಿಗೆ ಸೇರಿದವರೇ ಅಲ್ಲ ಎಂದ ಆದಿ ಲೋಕೇಶ್ ನೇರವಾಗಿ ರೋಹಿತ್ ರನ್ನು ಕೆಣಕಿದರು. ಅದಕ್ಕೆ ರೋಹಿತ್ ಸಮಾಧಾನದಿಂದಲೇ ಆ ರೀತಿ ಮಾತನಾಡಬೇಡ ಅಣ್ಣ ಎಂದ.

  ಎಮೋಷನ್ಸ್ ಜೊತೆ ಆಟ ಬೇಡ ಎಂದ ಶ್ವೇತಾ

  ನನ್ನ ಫೋಟೋವನ್ನು ಯಾರೋ ಮುರಿದರು ಎಂದು ಶ್ವೇತಾ ತುಂಬಾ ಬೇಸರ ವ್ಯಕ್ತಪಡಿಸಿದರು. ನನ್ನ ಎಮೋಷನ್ ಜೊತೆ ಆಟವಾಡುತ್ತಿದ್ದಾರೆ ಎಂದರು. ಇಲ್ಲಿ ಅತ್ತರೆ ಅದಕ್ಕೆ ಇನ್ನೊಂದು ಅರ್ಥ ಕಲ್ಪಿಸುತ್ತಾರೆ ಎಂದು ಏನೇನೋ ಬಡಬಡಸಿದರು.

  ಸಂತೋಷ್, ದೀಪಿಕಾಗೆ ಬಿಗ್ ಬಾಸ್ ಶಿಕ್ಷೆ

  ಸಂತೋಷ್ ಹಾಗೂ ದೀಪಿಕಾ ಅವರು ಕನ್ನಡ ಮಾತನಾಡಿದರೆ ಎಲ್ಲಿ ಅವಮಾನವಾಗುತ್ತದೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರನ್ನು ದಾರಿಗೆ ತರಲು ತಮ್ಮ ಬಳಿ ಒಂದು ಉಪಾಯವೂ ಇದೆ ಎಂದು ಬಿಗ್ ಬಾಸ್ ಹೇಳಿ ಅವರಿಬ್ಬರಿಗೂ ಒಂದು ಶಿಕ್ಷೆಯನ್ನೂ ನೀಡಲಾಯಿತು.

  ಸಂತೋಷ್ ಕುತ್ತಿಗೆಗೆ ಸ್ಲೇಟು ಕೈಗೆ ಬಳಪ

  ಆ ಶಿಕ್ಷೆಯ ಪ್ರಕಾರ, ಸಂತೋಷ್ ಯಾರೊಂದಿಗೂ ಒಂದೇ ಒಂದು ಪದವನ್ನೂ ಮಾತನಾಡುವಂತಿಲ್ಲ. ಕುತ್ತಿಗೆಗೆ ಸ್ಲೇಟು ಹಾಕಿಕೊಂಡಿರಬೇಕು. ಏನಾದರೂ ಮಾತನಾಡಬೇಕಾದರೆ ಬಳಪ ಬಳಸಿ ಸಂಭಾಷಣೆ ಮಾಡಬೇಕು. ಬೇಕಿದ್ದರೆ ಚಿತ್ರದ ಮೂಲಕ ಸಂಜ್ಞೆ ಮಾಡಿ ತಿಳಿಸಬೇಕು. ಅದನ್ನು ದೀಪಿಕಾ ತರ್ಜುಮೆ ಮಾಡಿ ಉಳಿದವರಿಗೆ ತಿಳಿಸಬೇಕು. ಅವರು ಮೈಕ್ ಮೂಲಕ ಎಲ್ಲರಿಗೂ ತಿಳಿಸಬೇಕು ಎಂಬುದೇ ಆ ಶಿಕ್ಷೆ.

  ಆಟದಲ್ಲಿ ಕೆಲವು ಮನಸುಗಳಿಗೆ ಗಾಯ

  ಅಕುಲ್ ಮಾತ್ರ ತಾನು ಇಲ್ಲಿಗೆ ಬಂದು ತಪ್ಪು ಮಾಡಿದೆ ಎಂಬ ಭಾವನೆಯಲ್ಲಿ ನರಳುತ್ತಿರುವುದು ಅವರ ಮನೋಭಾವದಲ್ಲೇ ಗೊತ್ತಾಗುತ್ತಿತ್ತು. ಈ ಬಾರಿಯ ಲಗ್ಜುರಿ ಬಜೆಟ್ ಟಾಸ್ಕ್ ಮನೆಯಲ್ಲಿ ಎರಡು ಗುಂಪುಗಳನ್ನಾಗಿ ಸೃಷ್ಟಿಸಿದೆ. ಆಟದಲ್ಲಿ ಕೆಲವು ಮನಸ್ಸುಗಳಿಗೆ ಗಾಯವೂ ಆಗಿದೆ. ಮುಂದೇನಾಗುತ್ತದೋ ಎಂಬ ಸಣ್ಣ ಕುತೂಲಹ ಮಾತ್ರ ಇದ್ದೇ ಇದೆ.

  English summary
  Bigg Boss Kannada 2, day 10 highlights. The luxuary budget task continues on 10th day also. Aadhi Lokesh is dominating himself in the house. Shakeela age also come into question in house. Here are the highlights.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more