»   » ಬಿಗ್ ಬಾಸ್ ನಲ್ಲಿ ಆದಿ, ನೀತೂ ನಡುವೆ ಐಸ್ ಪೈಸ್!

ಬಿಗ್ ಬಾಸ್ ನಲ್ಲಿ ಆದಿ, ನೀತೂ ನಡುವೆ ಐಸ್ ಪೈಸ್!

By: ಉದಯರವಿ
Subscribe to Filmibeat Kannada

ಒಂದು ರಿಯಾಲಿಟಿ ಶೋ ಎಂದರೆ ಅದನ್ನು ದ್ವೇಷಿಸುವವರೂ ಇರುತ್ತಾರೆ, ಅದೇ ರೀತಿ ಪ್ರೀತಿಸುವವರು ಇರುತ್ತಾರೆ. 'ಬಿಗ್ ಬಾಸ್' ಶೋನ ವಿಶೇಷ ಎಂದರೆ ದ್ವೇಷಿಸುತ್ತಲೇ ಅದನ್ನು ವೀಕ್ಷಿಸುವವರೇ ಸಂಖ್ಯೆ ಅಧಿಕವಾಗಿದೆ. ಹಾಗಾಗಿಯೇ ಅದು ಜನಪ್ರಿಯವಾಗುತ್ತಲೇ ಇದೆ.

ಬನ್ನಿ ಹನ್ನೊಂದನೇ ದಿನದ ಮನೆಯಲ್ಲಿ ಏನು ನಡೆಯಿತು ಎಂಬುದನ್ನು ನೋಡೋಣ. ಈ ಬಾರಿ ಹಲವು ನಾಟಕೀಯ, ರೋಚಕ ಸಂಗತಿಗಳಿಗೆ ಬಿಗ್ ಬಾಸ್ ಶೋ ಕಾರಣವಾಯಿತು. ಹದಿಮೂರು ಜನರಲ್ಲಿ ಒಬ್ಬರೊಬ್ಬರು ಒಂದೊಂದು ತರಹ ಎಂಬುದು ದಿನ ಕಳೆದಂತೆ ಗೊತ್ತಾಗುತ್ತಿದೆ. [ಬಿಗ್ ಬಾಸ್ ಮನೆಯಲ್ಲಿ ಹಾದಿ ತಪ್ಪುತ್ತಿದ್ದಾರಾ ಆದಿ?]

ಹನ್ನೊಂದನೇ ದಿನದ ಆಟ ಉಪೇಂದ್ರ ಅವರ ಎ ಚಿತ್ರದ "ಮಾರಿ ಕಣ್ಣು ಹೋರಿ ಮ್ಯಾಗೆ ಕಟುಕನ ಕಣ್ಣು ಕುರಿ ಮ್ಯಾಲೆ... ಅವಳ ಕಣ್ಣು ಆಕಾಶದಾಗೆ ಇವನ ಕಣ್ಣು ಅವಳ ಮ್ಯಾಲೆ..." ಹಾಡಿನ ಮೂಲಕ ಆರಂಭವಾಯಿತು. ಮನೆಯಲ್ಲಿ ರೋಹಿತ್ ಮಾತ್ರ ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ತಮ್ಮ ಪಾಡಿಗೆ ತಾವಿರುವುದು ಯಾಕೋ ಸರಿ ಅನ್ನಿಸುತ್ತಿಲ್ಲ.

ಮನೆಯಲ್ಲಿ ಏಕಾಂಗಿಯಾದ ರೋಹಿತ್

ಅವರಷ್ಟಕ್ಕೇ ಅವರು ಮಾತನಾಡಿಕೊಳ್ಳುತ್ತಾ, "ಆದಿ ಅವರು ಹೊಡೆದಾಕಿ ಬಿಡ್ತೀನಿ, ಕಿತ್ತಾಕ್ ಬಿಡ್ತೀನಿ ಎಂದು ಮಾತನಾಡುವುದು ಸರಿಯಿಲ್ಲ ಎಂದು ತನ್ನಷ್ಟಕ್ಕೆ ತಾನೆ ಮಾತನಾಡಿಕೊಳ್ಳುತ್ತಿದ್ದರು. ತಪ್ಪು ಮಾಡಿದ ಮೇಲೆ ಮುಖ ತೋರಿಸಿಕೊಳ್ಳಲು ಸಾಧ್ಯವಿಲ್ಲವಲ್ಲ ಎಂದು ಗೊಣಗಿಕೊಳ್ಳುತ್ತಿದ್ದರು.

ಬಿಗ್ ಬಾಸ್ ಮನೆಯ ಹೊಸ ಜೋಡಿ ಹಕ್ಕಿಗಳು

ಆದಿ ತನ್ನ ಬಳಿ ಮಾತನಾಡದೆ ಇರುವ ಬಗ್ಗೆ ನೀತೂ ಯಾಕೆ ಎಂದು ಕೇಳಿದರು. ಅದ್ಯಾಕೋ ಏನೋ ಇಬ್ಬರೂ ಮನೆಯಲ್ಲಿ ಅವಕಾಶ ಸಿಕ್ಕಿದರೆ ಅಪ್ಪಿಕೊಳ್ಳುವುದು ಅಳುವುದು ಮುಂದುವರೆದೇ ಇದೆ. ಇವರಿಬ್ಬರು ಆಪ್ತರಾದಷ್ಟು ಇನ್ಯಾರು ಕಾಣಿಸುತ್ತಿಲ್ಲ. ತುಂಬಾ ಆಪ್ತರಾಗಿದ್ದಾರೆ ಅನ್ನಿಸುತ್ತದೆ. ಬಿಗ್ ಬಾಸ್ ಮನೆಯ ಜೋಡಿ ಹಕ್ಕಿಗಳಂತೆ ಕಾಣುತ್ತಿದ್ದಾರೆ.

ಬಯಸದೆ ಬಳಿ ಬಂದೆ...ನಿನ್ನ ಅಂದಕ್ಕೆ...

ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಸಮಯ ಅಪ್ಪಿಕೊಂಡೇ ಇದ್ದರು. ಒಂದು ಕಡೆ ನೀತೂ ಬಿಕ್ಕಿಬಿಕ್ಕಿ ಅಳುತ್ತಿದ್ದರೆ. ಆದಿ ಮಾತ್ರ ಕೂಲ್ ಆಗಿ, ನೀನು ನನಗೆ ತುಂಬಾ ಆತ್ಮೀಯ ಫ್ರೆಂಡ್. ಏನೇ ಆದರು ಅಳಬಾರದು ಎಂದು ಸಮಾಧಾನ ಮಾಡಿದರು. ಬಳಿಕ ಅದೇಕೋ ಏನೋ "ಬಯಸದೆ ಬಳಿ ಬಂದೆ.." ಎಂದು ತನ್ನಷ್ಟಕ್ಕಷ್ಟೇ ತಾನೇ ಹಾಡಿಕೊಂಡರು ಆದಿ.

ನೀತೂ ನನಗೆ ಏಳು ವರ್ಷಗಳಿಂದ ಗೊತ್ತು

ಇನ್ನೊಂದು ಕಡೆ ಶಕೀಲಾ ಬಳಿ ಆದಿ ಮಾತನಾಡುತ್ತಾ, ನನಗೂ ನೀತೂಗೂ ಏಳುವರ್ಷಗಳಿಂದ ಪರಿಚಯ, ಆದರೆ ಟಚ್ ಬಿಟ್ಟು ಹೋಗಿತ್ತು. ಇಬ್ಬರ ನಡುವೆ ಕಮ್ಯುನಿಕೇಷನ್ ಇರಲಿಲ್ಲ. ಏಕೆಂದರೆ ಈ ಮೂರನೇಯವರಿರುತ್ತಾರಲ್ಲಾ ಐ ಮೀನ್ ಥರ್ಡ್ ಪರ್ಸನ್ಸ್ ..ಅವರೇನೋ ನನ್ನ ಮೇಲೆ ಹೇಳಿರ್ತಾರೆ. ಅವರು ಹಂಗೆ ಹಿಂಗೆ ಎಂದು. ಅದನ್ನು ನಂಬಿಕೊಂಡು ಇವರಿದ್ದರು.

ಈಗ ಇಬ್ಬರೂ ಮತ್ತೆ ಫ್ರೆಂಡ್ಸ್ ಆಗಿದ್ದೀವಿ

ಮೊನ್ನೆ ಟಾಸ್ಕ್ ವೇಳೆ ಇಬ್ಬರೂ ಮಾತನಾಡಿಕೊಂಡೆವು. ಈಗ ಬ್ಯಾಕ್ ಟು ಫ್ರೆಂಡ್ ಶಿಪ್. ಅಷ್ಟೇ ಇನ್ನೇನು ಇಲ್ಲ. ಆದರೆ ನಿನ್ನತ್ರ ಮಾತನಾಡು ಎಂದಾಗ ಅತ್ತಳು ಎಂದು ಶಕೀಲಾ ಹೇಳಿದ್ದಕ್ಕೆ. ನನ್ನ ಬಳಿ ಯಾರೇ ಬಂದು ಮಾತನಾಡಿದರೂ ನಾನು ಮಾತನಾಡುತ್ತೇನೆ. ಎಂಥ ಶತ್ರುತ್ವಭಾವ ಇದ್ದರೂ ಸರಿ ಎಂದರು. ನಾನು ಆ ತರಹ ಮನಸ್ಸಲ್ಲಿ ಇಟ್ಟುಕೊಳ್ಳಲ್ಲ. ಆದರೆ ಜನ ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಆದಿ ತನಗೆ ತಾನೇ ಸರ್ಟಿಫಿಕೇಟ್ ಕೊಟ್ಟುಕೊಂಡರು.

ಸೃಜನ್ ಲೋಕೇಶ್ ಕ್ಯಾಪ್ಟನ್ಸಿ ಬಗ್ಗೆ ಬೇಸರ

ಈ ಬಾರಿಯ 'ಸಂಪತ್ತಿಗೆ ಸವಾಲ್' ಟಾಸ್ಕ್ ನಲ್ಲಿ ಗೆದ್ದ ಆದಿಯ ತಂಡ ಲಗ್ಜುರಿ ಬಜೆಟ್ ಟಾಸ್ಕ್ ನಲ್ಲಿ ಭಾಗಿಯಾಯಿತು. ಕ್ಯಾಪ್ಟನ್ ಸೃಜನ್ ಲೋಕೇಶ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದೆ ಇದ್ದ ಕಾರಣ ಈ ಬಾರಿಯ ಲಗ್ಜುರಿ ಬಜೆಟ್ ನಲ್ಲಿ ಅವರಿಗೆ 200 ಪಾಯಿಂಟ್ ಗಳನ್ನು ಮೈನಸ್ ಮಾಡಲಾಯಿತು.

ಸಂತೋಷ್ ಮೂಕಾಭಿನಯಕ್ಕೆ ತೆರೆ

ಮನೆಯಲ್ಲಿ ಸಂತೋಷ್ ಅವರ ಮೂಕಾಭಿನಯದ ಶಿಕ್ಷೆ ಮುಂದುವರಿದಿದೆ. ಆ ಕಡೆ ಮಾತನಾಡಲು ಆಗದೆ ಈ ಕಡೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಆಗದೆ ಒದ್ದಾಡುವ ಪರಿಸ್ಥಿತಿ ಅವರದು. ಅವರೊಂದು ಹೇಳಿದರೆ ಬೇರೆಯವರು ಇನ್ನೊಂದು ಅರ್ಥ ಮಾಡಿಕೊಳ್ಳುವಂತಾಗಿದೆ. ಕಡೆಗೆ ಅವರ ಮೂಕಾಭಿನಯಕ್ಕೆ ತೆರೆಬಿತ್ತು.

ಇಂಡಸ್ಟ್ರಿಯಲ್ಲಿ ನಾನು ಯಾರೊಂದಿಗೂ ಜಗಳವಾಡಿಲ್ಲ

ಇಂಡಸ್ಟ್ರಿಯಲ್ಲಿ ಯಾರೊಂದಿಗೂ ಇದುವರೆಗೂ ನಾನು ಜಗಳ ಆಡಿಲ್ಲ ಎಂದರು ನೀತೂ ತಮ್ಮ ಬಗ್ಗೆ ಹೇಳಿಕೊಂಡರು. ಆದರೆ ಇಲ್ಲಿ ಆ ರೀತಿಯ ಸಂದರ್ಭ ಬಂತು ಎಂದು ಶಕೀಲಾ ಅವರ ಬಳಿ ಬೇಸರ ತೋಡಿಕೊಂಡರು.

ಮನೆಗೆ ಹೊಸ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ

ಮೊದಲ ವಾರ ಕ್ಯಾಪ್ಟನ್ ಪ್ರದರ್ಶನ ಕೇವಲ ಸಾಧಾರಣ ಎಂದು ಹೇಳಿದರು ಬಿಗ್ ಬಾಸ್. ಇದರಿಂದ ಸ್ವಲ್ಪ ಅಪ್ ಸೆಟ್ ಆದಂತೆ ಕಂಡರು ಸೃಜನ್. ಅವರ ಕ್ಯಾಪ್ಟನ್ ಅವಧಿ 11 ನೇ ದಿನಕ್ಕೆ ಮುಗಿಯಿತು. ಮನೆಯ ಹೊಸ ಕ್ಯಾಪ್ಟನ್ ಆಯ್ಕೆ ಮಾಡುವ ಜವಾಬ್ದಾರಿಯನ್ನು ಸದಸ್ಯರಿಗೆ ನೀಡಲಾಯಿತು.

ಸಿಡಿಮಿಡಿಗೊಂಡ ಸೃಜನ್ ಲೋಕೇಶ್

ತಲೆಗೊತ್ತಿಲ್ಲ ಬುಡಗೊತ್ತಿಲ್ಲ ನನಗೆ, ಶೋ ನೋಡಿದವನಲ್ಲ ಏನು ಮಾಡುವುದು ಎಂದು ಗೊತ್ತಾಗಲಿಲ್ಲ ಎಂದು ಸೃಜನ್ ತಮ್ಮ ಕ್ಯಾಪ್ಟನ್ಸಿ ಬಗ್ಗೆ ಕೊಂಚ ಬೇಸರ, ಸಿಟ್ಟು ವ್ಯಕ್ತಪಡಿಸಿದರು. ಈ ಬಾರಿ ಕ್ಯಾಪ್ಟನ್ ಪಟ್ಟಕ್ಕೆ ನಾನೇ ಸೂಕ್ತ ಎಂದು ದೀಪಿಕಾ, ಮಯೂರ್ ಹಾಗೂ ಆದಿ ಲೋಕೇಶ್ ಸ್ಪರ್ಧಿಸಿದರು.

ಮನೆಯ ಹೊಸ ಕ್ಯಾಪ್ಟನ್ ಆಗಿ ಆದಿ ಲೋಕೇಶ್

ಮೂವರ ನಡುವೆ ಆದಿ ಲೋಕೇಶ್ ಅವರು ಬಹುಮತದ ಮೂಲಕ ಆಯ್ಕೆಯಾದರು. ಮನೆಯವರ ಬಲವಂತಕ್ಕೆ ನಾನೂ ಕ್ಯಾಪ್ಟನ್ ಸ್ಪರ್ಧೆಗೆ ಬಂದಿದ್ದೇನೆ. ಕ್ಯಾಪ್ಟನ್ ಆದರೂ ಆಗದಿದ್ದರೂ ಈ ಮನೆಯ ನಿಯಮಗಳನ್ನು ಪಾಲಿಸುತ್ತೇನೆ ಬಿಗ್ ಬಾಸ್ ಎಂದು ಆದಿ ಲೋಕೇಶ್ ಹೇಳಿದ್ದು ಅವರಿಗೆ ಕ್ಯಾಪ್ಟನ್ ಪಟ್ಟ ಒಲಿದಿದ್ದು ಎರಡೂ ನಡೆದವು.

ಆದಿ ಕ್ಯಾಪ್ಟನ್ಸಿ ಬಗ್ಗೆ ಶಕೀಲಾ ಭಿನ್ನಾಭಿಪ್ರಾಯ

ಕ್ಯಾಪ್ಟನ್ ಪಟ್ಟ ಸಿಕ್ಕರೆ ಒಬ್ಬ ವ್ಯಕ್ತಿಯಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದಕ್ಕೆ ಆದಿ ಲೋಕೇಶ್ ಕಾರಣರಾದರು. ಅವರು ಕ್ಯಾಪ್ಟನ್ ಆಗಿದ್ದಕ್ಕೆ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ತರಹ ಮಾತನಾಡಿಕೊಂಡರು. ಕ್ಯಾಪ್ಟನ್ ಆಗಲು ನೀವು ಅರ್ಹರಾಗಿದ್ದೀರಾ ಆದರೆ ಮಾತನಾಡುವ ಶೈಲಿ ಸರಿಯಿಲ್ಲ ಎಂದು ಶಕೀಲಾ ಎಚ್ಚರಿಸಿದರು.

ಆದಿ ಅವರನ್ನು ಆಯ್ಕೆ ಮಾಡಿ ತಪ್ಪು ಮಾಡಿದೆವು

ಆದಿ ಅವರನ್ನು ಆಯ್ಕೆ ಮಾಡಿ ತಪ್ಪು ಮಾಡಿದೆವು ಎಂದು ಅವರ ಕ್ಲೋಸ್ ಫ್ರೆಂಡ್ ನೀತೂ ಅಭಿಪ್ರಾಯಪಟ್ಟರು. ಆದಿ ಕುತಂತ್ರದ ಆಟ ಆಡುತ್ತಿದ್ದಾರೆ ಎಂದು ಶಕೀಲಾ ಅನುಮಾನ ವ್ಯಕ್ತಪಡಿಸಿದರು. ಆದಿ ತಮ್ಮ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಅವರನ್ನು ಸರಿದಾರಿಗೆ ತರುವುದು ಹೇಗೆ ಎಂಬುದು ತಮಗೆ ಗೊತ್ತು ಎಂದರು ನೀತೂ.

ಸಂತೋಷ್ ಅವರಿಗೆ ಎರಡು ನಾಲಿಗೆ ಇದೆಯಾ?

ಸಂತೋಷ್ ಅವರಿಗೆ ಎರಡು ನಾಲಿಗೆ ಇದೆ. ಮನೆಯಲ್ಲಿ ಎಲ್ಲರೂ ತಮ್ಮದೇ ಆದ ಆಟವನ್ನು ಆಡುತ್ತಿದ್ದಾರೆ ಎಂದು ಶಕೀಲಾ, ದೀಪಿಕಾ, ನೀತೂ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಮಾತನಾಡಿಕೊಂಡರು.

ಮನೆಯವರ ಬಾಂಧವ್ಯದಲ್ಲಿ ಏರುಪೇರು

ಆದಿ ಅಧಿಕಾರ ವಹಿಸಿಕೊಂಡ ಬಳಿಕ ಮನೆಯವರ ಬಾಂಧವ್ಯ ಏರುಪೇರಾಗುತ್ತಿದೆ. ಎಲ್ಲರ ನಿಜವಾದ ಬಣ್ಣ ಬೆಳಕಿಗೆ ಬರುತ್ತಿದೆ. ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಬಿಗ್ ಬಾಸ್ ಆಟ ನಡೆಯುತ್ತಿದೆ. ಕ್ಯಾಪ್ಟನ್ ಆಗಿ ಆದಿ ಎಲ್ಲರ ಮನ ಗೆಲ್ಲುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
Bigg Boss Kannada 2, day 11th highlights. Aadhi Lokesh electes as new captain of the house with huge margin. some of the house mates started having difference of opinion with Aadhi. What happend on 11th day in BBK2?
Please Wait while comments are loading...