»   » ಬಿಗ್ ಬಾಸ್ ಮನೆಯಲ್ಲಿ ಬಂಡಾಯವೆದ್ದ ನೀತೂ

ಬಿಗ್ ಬಾಸ್ ಮನೆಯಲ್ಲಿ ಬಂಡಾಯವೆದ್ದ ನೀತೂ

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ರೋಹಿತ್ ಪಟೇಲ್ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಅದರ ಪ್ರಕಾರ ಅವರು ಕಮಾಂಡೋ ಇನ್ ಛೀಫ್. ಅವರು ಹೇಳಿದಂತೆ ಮನೆಯ ಸದಸ್ಯರು ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ಕೊಡುವ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಹದಿನಾರನೇ ದಿನ ಬಿಗ್ ಬಾಸ್ ನೀಡಿದ ಟಾಸ್ಕ್ 'ಕಮಾಂಡೋ ತರಬೇತಿ ಶಿಬಿರ'. ಅದರ ಪ್ರಕಾರ ಮನೆಯ ಎಲ್ಲ ಸದಸ್ಯರು ಕಮಾಂಡೋಗಳಾಗಬೇಕು. ಒಬ್ಬರು ಕಮಾಂಡರ್ ಇನ್ ಛೀಫ್. ಬೆಳಗೆ ಪೀಟಿ ನಡೆಸುವುದು, ಇಬ್ಬರನ್ನು ಮನೆಯ ಬಾಗಿಲ ಬಳಿ ಕಾವಲು ಹಾಕುವುದು, ಒಬ್ಬ ಕಮಾಂಡೋ ಪಾತ್ರೆ ತೊಳೆಯುವುದು, ಇನ್ನೊಬ್ಬರು ಬಟ್ಟೆ ಒಗೆಯುವುದು ಮಾಡಬೇಕು. ಈ ರೀತಿ ಕೆಲಸಗಳನ್ನು ಹಂಚಿಕೊಳ್ಳಲು ಸೂಚಿಸಲಾಯಿತು.

ರೋಹಿತ್ ಅವರನ್ನು ಕಮಾಂಡರ್ ಇನ್ ಛೀಫ್ ಆಗಿ ಬಿಗ್ ಬಾಸ್ ನೇಮಿಸಿದರು. ಸಂತೋಷ್ ಅವರು ಎಲ್ಲರಿಗೂ ಬೆಳಗಿನ ಪೀಟಿ ಮಾಡಿಸುವಂತೆ ರೋಹಿತ್ ಜವಾಬ್ದಾರಿ ವಹಿಸಿದರು. ಅದರಂತೆ ಸಂತೋಷ್ ಎಲ್ಲರಿಗೂ ಚೆನ್ನಾಗಿಯೇ ಪೀಟಿ ಮಾಡಿಸಿದರು.

ರೋಹಿತ್ ಬಳಿ ನೀತೂ ಚರ್ಚೆ

ಈ ಬಾರಿ ಡೈರೆಕ್ಟ್ ಆಗಿ ನಾಮಿನೇಟ್ ಆರಿರುವ ರೋಹಿತ್ ಬಳಿ ನೀತೂ ಚರ್ಚಿಸಿದರು. ಮೂರನೇ ಸಲವೂ ನೀವು ನಾಮಿನೇಟ್ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆದಿ ಲೋಕೇಶ್ ನಿಮ್ಮನ್ನು ನಾಮಿನೇಟ್ ಮಾಡುತ್ತಾನೆ ಎಂದುಕೊಂಡಿರಲಿಲ್ಲ ಎಂದರು. ಅವನು ನಾಮಿನೇಟ್ ಮಾಡಿದ್ದಕ್ಕೆ ನನಗೆ ಬೇಸರವಿಲ್ಲ. ಆದರೆ ಅವರು ಕೊಟ್ಟ ಕಾರಣ ಸರಿ ಇಲ್ಲ ಎಂದರು.

ಡಬ್ಬಾ ನನ್ನ ಮಗ ಎಂದು ಬೈದ ಮಯೂರ್

ಇನ್ನೊಂದು ಕಡೆ ಆದಿ ಲೋಕೇಶ್ ಅವರನ್ನು ಡಬ್ಬಾ ನನ್ ಮಗ ಎಂದ ಮಯೂರ್ ಬೈದರು. ಹೇಳಿದ್ದನ್ನೇ ಹತ್ತು ಸಲ ಹೇಳುತ್ತಾನೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾ ಅವರು ತುಂಬಾ ಬೇಸರಿಸಿಕೊಂಡರು.

ಶಕೀಲಾಗೆ ಅಡುಗೆ ಮಾಡುವ ಕೆಲಸ

ಶಕೀಲಾ ಅವರಿಗೆ ಅಡುಗೆ ಮಾಡುವ ಕೆಲಸವನ್ನು ಕಮಾಂಡರ್ ಇನ್ ಛೀಫ್ ಕೊಟ್ಟರು. ಈರುಳ್ಳಿ ಹೆಚ್ಚುತ್ತಾ ತಮ್ಮ ಕಷ್ಟವನ್ನು ಅವರ ಪಾಡಿಗೆ ಅವರು ಹೇಳಿಕೊಂಡರು. ನಾನೇನು ಕೆಲಸ ಮಾಡಲ್ಲ ಎಂದೇ ನನಗೆ ಈ ಶಿಕ್ಷೆ ಎಂದು ಕಂಗ್ಲಿಷ್ ನಲ್ಲಿ ಗುನುಗಿಕೊಂಡರು ಶಕೀಲಾ.

ಸಂತೋಷ್ ಮೇಲೆ ಸೇಡು ತೀರಿಸಿಕೊಂಡ ರೋಹಿತ್

ಸದಾ ಒಂದಿಲ್ಲೊಂದು ವಿಚಾರಕ್ಕೆ ರೋಹಿತ್ ಅವರನ್ನು ಗೋಳುಹೊಯ್ದುಕೊಳ್ಳುತ್ತಿದ್ದ ಸಂತೋಷ್ ಮೇಲೆ ಈ ಬಾರಿ ರೋಹಿತ್ ಸೇಡು ತೀರಿಸಿಕೊಂಡರು. ತಪ್ಪು ಮಾಡಿದ ಎಂಬ ಕಾರಣಕ್ಕೆ ಸಂತೋಷ್ ಗೆ ರೋಹಿತ್ ಶಿಕ್ಷೆ ಕೊಟ್ಟರು. ಅದರ ಪ್ರಕಾರ ಎರಡೂ ಕೈಗಳಲ್ಲಿ ಗನ್ನು ಮೇಲಕ್ಕೆ ಎತ್ತಿಕೊಂಡು "ಕಮಾಂಡರ್ ರೋಹಿತ್ ಗೆ ಜೈ" ಎಂದು ಹೇಳುತ್ತಾ ಹತ್ತು ರೌಂಡ್ ಕೈಯಲ್ಲಿ ಓಡಬೇಕಾಯಿತು.

ರೋಹಿತ್ ಖಡಕ್ ಕಮಾಂಡೋ ತರಬೇತಿ

ಎಲ್ಲರನ್ನೂ ಕಂಟ್ರೋಲ್ ಗೆ ತೆಗೆದುಕೊಂಡು ಚೆನ್ನಾಗಿಯೇ ಕಮಾಂಡೋ ತರಬೇತಿ ನೀಡಿದರು ರೋಹಿತ್. ಶಕೀಲಾ ಅವರನ್ನೂ ಮುಳ್ಳುತಂತಿ ಕೆಳಗೆ ನುಸುಳಿಸಿ, ತಡೆ ಚೌಕಟ್ಟುಗಳ ಮೇಲೆ ನೆಗೆಯುವಂತೆ ಮಾಡಿಸಿದರು. ಅವರು ಯಾರ ನೆರವೂ ಇಲ್ಲದಂತೆ ಆ ರೀತಿ ಮಾಡಿ ಕಡೆಗೆ ನಿಟ್ಟುಸಿರು ಬಿಟ್ಟರು.

ಬಂಡಾಯ ಕಮಾಂಡೋ ರಚಿಸಿದ ನೀತೂ

ಏತನ್ಮಧ್ಯೆ ನೀತೂಗೆ ಬಂಡಾಯ ಕಮಾಂಡೋ ಇನ್ ಚೀಪ್ ರಚಿಸಿಕೊಳ್ಳಲು ಬಿಗ್ ಬಾಸ್ ಸೂಚಿಸಿದರು. ಈ ರಹಸ್ಯ ಟಾಸ್ಕ್ ನ್ನು ನೀತೂಗೆ ಬಿಗ್ ಬಾಸ್ ವಹಿಸಿದ್ದರು. ಅದರಂತೆ ನೀತೂ ಕಾರ್ಯಪ್ರವೃತ್ತರಾದರು. ಸೃಜನ್, ಮಯೂರ್, ದೀಪಿಕಾ ಅವರನ್ನು ಸಂಪರ್ಕಿಸಿ ಬಂಡಾಯ ಕಮಾಂಡೋ ಪಡೆಗೆ ಒಪ್ಪಿಸಿದರು.

ಮನೆಯಲ್ಲಿ ಬಂಡಾಯ ಪಡೆ ರಚನೆ

ನೀತೂ ಅವರ ಮುಂದಾಳತ್ವದಲ್ಲಿ ಬಂಡಾಯ ಪಡೆ ರಚನೆಯಾಗುತ್ತದೆ. ಇದನ್ನು ಮನೆಯ ಎಲ್ಲ ಸದಸ್ಯರಿಗೂ ಬಿಗ್ ಬಾಸ್ ತಿಳಿಸುತ್ತಾರೆ. ಮನೆಯಲ್ಲಿ ಇನ್ನೊಂದು ಬಂಡಾಯ ಪಡೆ ರಚನೆಯಾಗಿದೆ ಎಂದು ಎಚ್ಚರಿಸುತ್ತಾರೆ. ಆ ಟೀಂ ಯಾವುದು ಎಂಬುದನ್ನು ಪತ್ತೆ ಹಚ್ಚಲು ರೋಹಿತ್ ಮುಂದಾಗುತ್ತಾರೆ.

ಬಂಡಾಯ ಟೀಂ ಬಗ್ಗೆ ರೋಹಿತ್ ಗೆ ಸುಳಿವು

ಇನ್ನೊಂದು ಬಂಡಾಯ ಟೀಂ ರೆಡಿಯಾಗಿರುವ ಬಗ್ಗೆ ರೋಹಿತ್ ಗೆ ಸುಳಿವು ಸಿಗುತ್ತದೆ. ಬಂಡಾಯ ಪಡೆಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಅವರಿಗೆ ಗೊತ್ತಾಗುತ್ತದೆ. ಅಲ್ಲಿಗೆ ಹದಿನಾರನೇ ದಿನದ ಆಟ ಮುಗಿದಿದೆ. ಸಂತೋಷ್, ರೋಹಿತ್ ಹಾಗೂ ಸೃಜನ್ ನಡುವೆ ಸ್ವಲ್ಪ ಬಿರುಸಿನ ಘಟನೆಗಳೂ ನಡೆದವು.

English summary
Bigg Boss gives luxury budget task "Commando Training Camp" to inmates. Rohit selected as Commando in chief. Bigg Boss Kannada 2, day 16th highlights.
Please Wait while comments are loading...