»   » ಬಿಗ್ ಬಾಸ್ ಮನೆಯ ಹೊಸ ಕ್ಯಾಪ್ಟನ್ ಆಗಿ ಅಕುಲ್

ಬಿಗ್ ಬಾಸ್ ಮನೆಯ ಹೊಸ ಕ್ಯಾಪ್ಟನ್ ಆಗಿ ಅಕುಲ್

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮುಖವಾಡಗಳು ಸ್ವಲ್ಪಸ್ವಲ್ಪವೇ ಬಯಲಾಗುತ್ತಿವೆ. ಕೆಲವರು ನಾಟಕ ಮಾಡುತ್ತಿರುವುದು ಗೊತ್ತಾಗುತ್ತಿದೆ. ಆದರೆ ಅವರ ನಾಟಕ ಎಷ್ಟು ದಿನ. ಅವರ ಮುಖವಾಡವನ್ನು ಬಿಗ್ ಬಾಸ್ ಬಯಲು ಮಾಡ್ತಾರಾ? ಯಾವಾಗ? ಎಂಬ ಸಂದೇಶಗಳು ಕಾಡುತ್ತಿವೆ.

ಹದಿನೆಂಟನೇ ದಿನ ಕನ್ನಡದ ಡಾರ್ಲಿಂಗ್ ಚಿತ್ರದ "ಡಬ್ಬಾ ಡಬ್ಬಾ" ಸಾಂಗ್ ಮೂಲಕ ಆರಂಭಿಸಲಾಯಿತು. ಎಂಟು ಗಂಟೆಗೆ ಎದ್ದ ಮನೆಯವರು ಬಳಿಕ ತಮ್ಮ ತಮ್ಮ ಕೆಲಸಗಳಲ್ಲಿ, ಕಾಲೆಳೆಯುವ ಆಟದಲ್ಲಿ ನಿರತರಾದರು. ಇಂದಿಗೆ ಆದಿ ಲೋಕೇಶ್ ಅವರ ಕ್ಯಾಪ್ಟನ್ ಅವಧಿ ಮುಗಿಯಿತು.

ಆದಿ ಅವರ ಕ್ಯಾಪ್ಟನ್ ಅವಧಿ ಇಲ್ಲಿಗೆ ಮುಕ್ತಾಯ ಎಂದು ಬಿಗ್ ಬಾಸ್ ಘೋಷಿಸಿದರು. ಈ ಕೂಡಲೆ ನೀವು ಕ್ಯಾಪ್ಟನ್ ರೂಮಿನಿಂದ ಹೋಗಬೇಕೆಂದು ಆದೇಶಿಸಲಾಯಿತು. ಕ್ಯಾಪ್ಟನ್ ಅವರನ್ನು ವಿಶೇಷ ಕೊಠಡಿಯಿಂದ ಹೊರಬರಬೇಕು ಎಂದ ಬಗ್ಗೆ ಶಕೀಲಾ ಮಾತನಾಡುತ್ತಾ, ಅಷ್ಟು ಮರ್ಯಾದೇನೂ ಬೇಡ ಇಷ್ಟು ಅವಮಾನವೂ ಬೇಡ ಎಂದರು.

ಕ್ಯಾಪ್ಟನ್ ಬಗ್ಗೆ ಮನೆಯಲ್ಲಿ ಚರ್ಚೆ

ಈ ವಾರದ ಟಾಸ್ಕ್ ನ್ನು ನಿರ್ವಹಿಸಿದ ಬಗ್ಗೆ ಬಿಗ್ ಬಾಸ್ ಪ್ರಶಂಸಿಸಿದರು. ಈ ವಾರ ಅತ್ಯುತ್ತಮ ಫರ್ಮಾಮರ್ ಯಾರು ಎಂದು ತಿಳಿಸಬೇಕಾಗಿತ್ತು. ಅದೇ ರೀತಿ ಈ ಬಾರಿ ಮನೆಯ ಕ್ಯಾಪ್ಟನ್ ಯಾರಾಗಬೇಕು ಎಂಬ ಬಗ್ಗೆ ಮನೆಯಲ್ಲಿ ಚರ್ಚಿಸಲಾಯಿತು.

ಈ ಬಾರಿಯ ಕ್ಯಾಪ್ಟನ್ ಯಾರಾಗಬೇಕು?

ಈ ಬಾರಿ ಯಾರನ್ನು ಮಾಡಿದರೆ ಚೆಂದ ಎಂದು ಎಲ್ಲರೂ ತಮ್ಮಷ್ಟಕ್ಕೆ ತಾವು ಚರ್ಚಿಸಿದರು. ಕೆಲವರು ದೀಪಿಕಾ ಎಂದರೆ ಕೆಲವರು ಅಕುಲ್ ಎಂದೂ, ಇನ್ನೂ ಕೆಲವರು ಅನುಪಮಾ ಎಂದು ಮತ್ತೂ ಕೆಲವರು ಶ್ವೇತಾ ಚೆಂಗಪ್ಪ ಎಂದರು.

ಬೆಸ್ಟ್ ಪರ್ಫಾಮರ್ ಎನ್ನಿಸಿಕೊಂಡ ಶಕೀಲಾ

ಈ ವಾರ ಶಕೀಲಾ ಅವರು ಬೆಸ್ಟ್ ಪರ್ಫಾಮರ್ ಎಂದು ಎಲ್ಲರೂ ಒಮ್ಮತದಿಂದ ಆರಿಸಿದರು. ಆದರೆ ಈ ಬಗ್ಗೆ ಸ್ವತಃ ಶಕೀಲಾ ಅವರಿಗೆ ಬೇಸರವಿತ್ತು. ಆ ಬೇಸರ ಅವರ ಮುಖ ಚಹರೆಯಲ್ಲಿ ಚೆನ್ನಾಗಿ ವ್ಯಕ್ತವೂ ಆಯಿತು. ಅವರು ತಮ್ಮ ವಯಸ್ಸು, ದೇಹದ ತೂಕವನ್ನೂ ಲೆಕ್ಕಿಸದೆ ಟಾಸ್ಕ್ ನಲ್ಲಿ ಭಾಗಿಯಾದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ಕ್ಯಾಪ್ಟನ್ ಆಗಿ ಅಕುಲ್ ಆಯ್ಕೆ

ಈ ಬಾರಿ ಮನೆಯ ಕ್ಯಾಪ್ಟನ್ ಯಾರಾಗಬೇಕು ಎಂಬ ಬಗ್ಗೆಯೇ ಬಹಳಷ್ಟು ಚರ್ಚೆ ನಡೆಯಿತು. ಎಲ್ಲರೂ ಅದೇ ವಿಚಾರವಾಗಿಯೇ ಚರ್ಚಿಸುತ್ತಿದ್ದರು. ಬಹುತೇಕರು ಅಕುಲ್ ಅವರ ಹೆಸರನ್ನು ಸೂಚಿಸಿದರು. ಅದರಂತೆ ಅವರು ಸರ್ವಾನುಮತದಿಂದ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯೂ ಆದರು.

ಆದಿ ಮತ್ತು ಮಯೂರ್ ನಡುವೆ ಸಣ್ಣ ಜಗಳ

ಇನ್ನೊಂದು ಕಡೆ ಮಯೂರ್ ಪಟೇಲ್ ಬಗ್ಗೆ ಆದಿ ಲೋಕೇಶ್ ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದರು. ತುಳಸಿ ಗ್ರೀನ್ ಟೀಗಾಗಿ ಆದಿ ಮತ್ತು ಮಯೂರ್ ನಡುವೆ ಸಣ್ಣ ಜಗಳವೂ ಆಯಿತು. ಆ ಟೀನಲ್ಲಿ ಒಂದು ಬ್ಯಾಗ್ ಸಹ ಮುಟ್ಟುವುದಿಲ್ಲ ಎಂದು ಹೇಳಿದರು. ಇವರಿಬ್ಬರನ್ನೂ ಒಂದಾಗಿಸಲು ನೀತೂ ಮಾಡಿದ ಸಂಧಾನವೂ ವಿಫಲವಾಯಿತು.

ತೊಡೆ ಸ್ಟಾರ್ ಆಗಿ ಅಕುಲ್ ಗೆ ಬಿರುದು

ಅಕುಲ್ ಪದೇಪದೇ ತೊಡೆ ತಟ್ಟಿಕೊಳ್ಳುತ್ತಿರುವ ಬಗ್ಗೆ ಅವರಿಗೆ ತೊಡೆ ಸ್ಟಾರ್ ಎಂಬ ಬಿರುದನ್ನೂ ಕೊಡಲಾಯಿತು. ಎಲ್ಲರೂ ಹೊಸ ಕ್ಯಾಪ್ಟನ್ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಹೊಂದಿದ್ದಾರೆ.

ಸದ್ಯಕ್ಕೆ ಮನೆಯಲ್ಲಿ ಎಲ್ಲವೂ ಕೂಲ್ ಕೂಲ್

ಸದ್ಯಕ್ಕೆ ಅಕುಲ್ ಕೂಲ್ ಕೂಲ್ ಮುಂದೇನು ಎಂಬುದನ್ನು ಕಾದುನೋಡಬೇಕು. ದೀಪಿಕಾ ಚೆನ್ನಾಗಿ ರಂಜಿಸಿದರು ಎಂದು ಅಕುಲ್ ಅವರನ್ನು ಬೆಸ್ಟ್ ಪರ್ಫಾಮರ್ ಎಂದು ಆಯ್ಕೆ ಮಾಡಿದರು.

English summary
One of the strong inmage of Bigg Boss Kannada 2 Akul Balaji elected as new captain of the house. All other inmates elected his unanimous. Here is the day 18th highlights.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada