»   » ಆದಿಗೆ ರಾತ್ರಿಯಲ್ಲಾ ನಿದ್ದೆ ಬರ್ತಿಲ್ಲವಂತೆ, ಯಾಕೋ?

ಆದಿಗೆ ರಾತ್ರಿಯಲ್ಲಾ ನಿದ್ದೆ ಬರ್ತಿಲ್ಲವಂತೆ, ಯಾಕೋ?

By: ಉದಯರವಿ
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಎಲ್ಲರೂ ಮುಖವಾಡಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಆದರೆ ರೋಹಿತ್ ಮಾತ್ರ ಯಾವುದೇ ಮುಖವಾಡ ತೊಟ್ಟು ನಾಟಕ ಮಾಡುತ್ತಿಲ್ಲ ಎಂದು ಶಕೀಲಾ ಹೇಳಿ ಹೋದ ಮೇಲೆ ಸುವರ್ಣ ವೀಕ್ಷಕರಲ್ಲೂ ಈ ಗುಮಾನಿ ಶುರುವಾಗಿದೆ.

ಇಪ್ಪತ್ತಮೂರನೇ ದಿನ ಮನೆಯ ಸದಸ್ಯರಿಗೆ ಬಿಗ್ ಬಾಸ್ ಲಗ್ಜುರಿ ಬಜೆಟ್ ಟಾಸ್ಕ್ ನೀಡಿದರು. ಇದಕ್ಕೂ ಮುನ್ನ ಕೆಲವು ಘಟನೆಗಳು ನಡೆದವು. ಅದೇನೆಂದರೆ ಆದಿ ಲೋಕೇಶ್ ಅವರು ರಾತ್ರಿಯಲ್ಲಾ ಸರಿಯಾಗಿ ನಿದ್ದೆ ಮಾಡದೆ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು ಎಂದು ಮಯೂರ್ ಹೇಳಿದರು.

ಅವರ ಪ್ರಕಾರ ಆದಿ ಒಳ್ಳೇ ರೊಮ್ಯಾಂಟಿಕ್ ಕನಸಿನಲ್ಲಿದ್ದರಂತೆ. ಹೌದಾ ಆದಿ ಎಂದು ಶ್ವೇತಾ ಚೆಂಗಪ್ಪ ಸಹ ಕಿಚಾಯಿಸಿದರು. ಇವರೆಲ್ಲರ ಮಾತಿನಿಂದ ಆದಿ ನಾಚಿಕೊಂಡು ಅಲ್ಲಿಂದ ಕಾಲ್ಕಿತ್ತರು. ಇದಕ್ಕೆ ಧ್ವನಿಗೂಡಿಸಿದ ಲಯ ಕೋಕಿಲ ಅವರು ಈರುಳ್ಳಿ ತಿನ್ನುವುದನ್ನು ಸ್ವಲ್ಪ ಕಮ್ಮಿ ಮಾಡ್ರಪ್ಪಾ ಎಂಬ ಸಲಹೆಯನ್ನೂ ನೀಡಿದರು.

ನಿದ್ದೆ ಬರ್ತಿಲ್ಲಾ ಆದಿ ಲೋಕೇಶ್ ಗೆ ನಿದ್ದೆ ಬರ್ತಿಲ್ಲ

ಬಹುಶಃ ಆದಿ ಲೋಕೇಶ್ ಅವರು ಈರುಳ್ಳಿಯನ್ನು ಜಾಸ್ತಿ ತಿನ್ನುತ್ತಿದ್ದಾರೋ ಏನೋ ಗೊತ್ತಿಲ್ಲ. ಅದಕ್ಕೆ ಇರಬೇಕು ರಾತ್ರಿಯಲ್ಲಾ ಹಾಸಿಗೆಯಲ್ಲಿ ಅವರು ಸಿಕ್ಕಾಪಟ್ಟೆ ಒದ್ದಾಡುತ್ತಿದ್ದಾರೆ ಅನ್ನಿಸುತ್ತದೆ. ಅಂದಹಾಗೆ ಈರುಳ್ಳಿ ಇಷ್ಟೆಲ್ಲಾ ಎಡವಟ್ಟಿಗೆ ಕಾರಣವಾಗುತ್ತದೆ ಎಂಬುದು ಲಯ ಅವರ ಅನುಭವದಿಂದ ಗೊತ್ತಾಗಿದೆ.

ಸಂತೋಷ್ ಮತ್ತು ಅಕುಲ್ ಕಾಲೆಳೆದಾಟ

ಇನ್ನೊಂದು ಕಡೆ ಸಂತೋಷ್ ಮತ್ತು ಅಕುಲ್ ಒಬ್ಬರಿಗೊಬ್ಬರು ಕಾಲೆದುಕೊಂಡರು. ಕಲ್ಲರಳಿ ಚಿತ್ರದಲ್ಲಿ ಈ ನನ್ ಮಗ ಎಲ್ಲಿದ್ದನೋ ಎಂದು ಭೂತಗನ್ನಡಿ ಹಾಕಿ ಹುಡುಕಬೇಕಾಗಿತ್ತು ಎಂದರೆ, ಹೌದು ಬಿಡೋ ಮಗ ನಿನ್ನ ಮೂವಿ ಪೋಸ್ಟರ್ ಗೆ ಸಗಣಿ ಹೊಡೆದಿದ್ದದ್ದು ಗೊತ್ತಿಲ್ವಾ ಎಂದ ಸಂತೋಷ್. ನೂರು ಜನ್ಮದ ಚಿತ್ರದ ಬಗ್ಗೆಯೂ ಅಕುಲ್ ಕಾಮಿಡಿ ಮಾಡಿದರು. ಇದು ಉಳಿದವರಿಗೆ ಪುಕ್ಕಟೆ ಮನರಂಜನೆ ನೀಡಿತು.

ಸಂತೋಷ್ ಅಭಿನಯಿಸಿದ ಚಿತ್ರಗಳ ಬಗ್ಗೆ ಕಾಮಿಡಿ

ಐಪಿಎಸ್ ಆರ್ಯವರ್ಧನ (ತಮಿಳು) ಚಿತ್ರದ ಬಗ್ಗೆ ಸಂತೋಷ್ ಮತ್ತು ಅಕುಲ್ ಜೊತೆ ಮಾತಿನ ಚಕಮಕಿ. ಕಲ್ಲರಳಿ ಹೂವಾಗಿ ಚಿತ್ರದಲ್ಲಿ ಇವನನ್ನು ಭೂತಗನ್ನಡಿ ಹಾಕಿ ಹುಡುಕಬೇಕಾಗಿತ್ತು ಎಂದು ರೇಗಿಸಿದರು. ಬಳಿಕ ಅವರ ನೂರು ಜನ್ಮಕು ಚಿತ್ರದ ಬಗ್ಗೆಯೂ ಕಾಮಿಡಿ ಮಾಡಿದರು. ಒಬ್ಬರಿಗೊಬ್ಬರು ಕಾಲೆಳೆದುಕೊಂಡರು. ಉಳಿದವರಿಗೆ ಪುಕ್ಕಟೆ ಮನರಂಜೆಯೂ ಸಿಕ್ಕಿತು.

ರಾಜಕೀಯ ಯುದ್ಧಭೂಮಿಯಾದ ಮನೆ

ಈ ವಾರದ ಲಗ್ಜುರಿ ಬಜೆಟ್ ಟಾಸ್ಕ್ ಮನೆಯನ್ನು ರಾಜಕೀಯ ಯುದ್ಧಭೂಮಿಯಾಗಿ ಬದಲಾಯಿಸುವುದು. ಮನೆಯಲ್ಲಿ ಎರಡು ರಾಜಕೀಯ ಪಕ್ಷಗಳನ್ನು ಸ್ಥಾಪಿಸುವುದು. ಒಂದೊಂದು ಪಕ್ಷ ಒಬ್ಬ ಆಪ್ತಸಹಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು. ತಮ್ಮ ತಮ್ಮ ಪಕ್ಷಕ್ಕೆ ಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳಬೇಕು. ಅದರಂತೆ ಪಕ್ಷವನ್ನು ಬೆಳೆಸಬೇಕು. ತಂತ್ರ ಪ್ರತಿತಂತ್ರಗಳನ್ನು ಬಳಸಿ ಸದಸ್ಯರನ್ನ ಸೇರ್ಪಡಿಸಿಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶಿಸಿದರು. ಅದರಂತೆ ಆಟ ಶುರುವಾಯಿತು.

ತಮಾಷೆನೇ ಅಲ್ಲ, ಕಾವೇರಿ ಪಕ್ಷಗಳು

ತಮಾಷೇನೇ ಅಲ್ಲ ಎಂಬುದು ಶ್ವೇತಾ ಅವರ ಪಕ್ಷ. ಅದರ ಗುರುತು ಕ್ಯಾಮೆರಾ. ಇವರ ಆಪ್ತಸಹಾಯಕರಾಗಿ ಅನುಪಮಾ ಭಟ್ ಅವರನ್ನು ಆಯ್ಕೆ ಮಾಡಿಕೊಂಡರು. ಇನ್ನೊಂದು ಪಕ್ಷ ದೀಪಿಕಾ ಅವರ ಮುಂದಾಳತ್ವದ ಕಾವೇರಿ ಪಕ್ಷ. ಅದರ ಗುರುತು ಕಣ್ಣು. ಅವರ ಬಲಗೈ ಬಂಟ ಮಯೂರ್ ಪಟೇಲ್.

'ಅ'ಕಾರ 'ಹ'ಕಾರ ಗೊತ್ತಾಗದ ಮಯೂರ್

ಎರಡೂ ಪಕ್ಷಗಳು ಮನೆಯ ಸದಸ್ಯರನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಕಷ್ಟು ಕಸರತ್ತನ್ನು ಮಾಡಿದವು. ಚುನಾವಣಾ ಪ್ರಚಾರದ ವೇಳೆ ಮಯೂರ್ ಪಟೇಲ್ ಅವರಿಗೆ 'ಅ'ಕಾರ ಹಾಗೂ 'ಹ' ಕಾರದ ನಡುವಿನ ವ್ಯತ್ಯಾಸ ಗೊತ್ತಿಲ್ಲದ ಅರಿತು ಎನ್ನುವ ಬದಲು ಹರಿತು ಎಂದು ಉಚ್ಚರಿಸಿದರು. ಅದನ್ನು ಸೃಜನ್ ತಿದ್ದಿದ್ದರು.

ಬಾತ್ ರೂಮಿನಲ್ಲೂ ಬಿಡದ ಪ್ರಚಾರ

ಬಾತ್ ರೂಮ್ ನಲ್ಲೂ ಬಿಡದ ಪ್ರಚಾರ ಶುರು ಮಾಡಿತು ತಮಾಷೆನೇ ಅಲ್ಲ ಪಕ್ಷ. ಸೃಜನ್ ಅವರನ್ನು ತಮ್ಮ ಪಕ್ಷಕ್ಕೆ ಸೇರುವಂತೆ ಶ್ವೇತಾ ಹಾಗೂ ಅನುಪಮಾ ಭಟ್ ಅವರು ಬಾತ್ ರೂಮ್ ಬಳಿಯೂ ಪ್ರಚಾರ ಮಾಡಿದರು. ನಿದ್ದೆ ಮಾಡಿದ್ದಕ್ಕೆ ಆದಿ ಲೋಕೇಶ್ ಅವರಿಗೆ ಎರಡು ಗಂಟೆಗಳ ಜೈಲು ಶಿಕ್ಷೆಯನ್ನು ನೀಡಲಾಯಿತು. ಅದೇ ತೀತಿ ಸೃಜನ್ ಅವರಿಗೂ ಜೈಲು ಶಿಕ್ಷೆಯಾಯಿತು.

ಇದು ಏನೋ ಕಾಟಾಚಾರದ ಟಾಸ್ಕ್ ನಂತಿದೆ

ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜಕೀಯದ ಚದುರಂಗದಾಟ ಈಗ ಟಾಸ್ಕ್ ರೂಪದಲ್ಲಿ ನಡೆಯುತ್ತಿದೆ. ಈ ಆಟದಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬುದನ್ನು ಕಾದುನೋಡಬೇಕು. ಒಟ್ಟಾರೆಯಾಗಿ ಮನೆಯಲ್ಲಿ ಟಾಸ್ಕ್ ಗಳನ್ನು ಏನೋ ಕಾಟಾಚಾರಕ್ಕೆ ಮಾಡುತ್ತಿರುವುದು ಈ ವಾರ ವೀಕ್ಷಕರ ಗಮನಕ್ಕೆ ಬಂತು.

English summary
Aadhi Lokesh, one of the bbk2 inmate, not sleeping confortably why? What's his problem? He is in romantic mood! Actually what happening in Bigg Boss house? Here is the day 23rd highlighst of BBK2.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada