»   » ತನ್ನ ಮಾಜಿ ಪತ್ನಿಯ ಬಗ್ಗೆ ಬಾಯ್ಬಿಟ್ಟ ಆದಿ ಲೋಕೇಶ್

ತನ್ನ ಮಾಜಿ ಪತ್ನಿಯ ಬಗ್ಗೆ ಬಾಯ್ಬಿಟ್ಟ ಆದಿ ಲೋಕೇಶ್

By: ಉದಯರವಿ
Subscribe to Filmibeat Kannada
<ul id="pagination-digg"><li class="next"><a href="/tv/deepika-complain-against-shwetha-bigg-boss-kannada-2-086473.html">Next »</a></li></ul>

ಒಂದು ಕಡೆ ಜೋರು ಮಳೆಯ ಸದ್ದು, ಇನ್ನೊಂದು ಕಡೆ ನೀತೂ ಯಾಕೋ ಬೇಸರದಲ್ಲಿ ಬಿಗ್ ಬಾಸ್ ಮನೆಯ ಆವರಣದಲ್ಲಿ ಕುಳಿತಿದ್ದರು. ಅದಕ್ಕೆ ಕಾರಣ ಕೇಳಿದರು ಆದಿ ಲೋಕೇಶ್. ಏನಿಲ್ಲಾ ಮನೆಯ ನೆನಪು ಬರುತ್ತಿದೆ ಎಂದರು. ಮತ್ತೆ ಮತ್ತೆ ಕೇಳಿದ್ದಕ್ಕೆ ಇನ್ನೇನು ಇಲ್ಲ ಎಂದೂ ಹೇಳಿದರು. ನೀತೂ ಕೆನ್ನೆ ಮುಟ್ಟಿ ಓಕೆ ಎಂದು ಹೊರಟರು ಆದಿ.

ಇಪ್ಪತ್ತಾರನೇ ದಿನ ಬೆಳಗ್ಗೆ ಇವರಿಬ್ಬರ ನಡುವಿನ ಘಟನೆಗಳ ಮೂಲಕ ಆರಂಭವಾಯಿತು. ಇನ್ನೊಂದು ಕಡೆ ದೀಪಿಕಾ ಜೊತೆ ಆದಿ ಮಾತನಾಡುತ್ತಾ ತಮ್ಮ ಸಾಂಸಾರಿಕ ಕಥೆಯನ್ನು ಹೇಳಿಕೊಂಡರು. ನನಗೆ ಏಳು ವರ್ಷದ ಮಗಳಿದ್ದಾಳೆ. ಆರ್ ಟಿ ನಗರಲ್ಲಿ ಸ್ವಂತ ಮನೆಯಿದೆ. 2005ರಲ್ಲಿ ಮದುವೆಯಾದೆ 2007ರಲ್ಲಿ ಅವಳು ಹುಟ್ಟಿದಳು.

Bigg Boss Kannada 2 highlights

ತಮ್ಮ ದಾಂಪತ್ಯ ಜೀವನ ಮುರಿದುಬಿದ್ದ ಬಗ್ಗೆ ವಿಶೇಷ ಕಾರಣವೇನು ಇರಲಿಲ್ಲ. ಈಗ ಅವಳು ಸಹಕಾರನಗರಲ್ಲಿದ್ದಾಳೆ. ಅವಳಿಗೆ ತನ್ನ ಮಾಜಿ ಪ್ರಿಯಕರ ಬೇಕಾಗಿತ್ತು. ಅದಕ್ಕೆ ಬಿಟ್ಟು ಹೋದಳು. ನನ್ನ ಎದುರಿಗೆ ಏನೂ ನಡೆಯುತ್ತಿರಲಿಲ್ಲ. ಎಲ್ಲವೂ ಹಿಂದೆಯೇ ನಡೆಯುತ್ತಿತ್ತು ಎಂದು ದೀಪಿಕಾ ಬಳಿ ಆದಿ ಹೇಳಿಕೊಂಡ.

ಬಳಿಕ ಮುಂದುವರಿಸುತ್ತಾ, ನಾನು ಬೆಳಗ್ಗೆ 7ಕ್ಕೆ ಮನೆಬಿಟ್ಟರೆ ರಾತ್ರಿ ಬರುವುದು 7-8 ಗಂಟೆಯಾಗುತ್ತಿತ್ತು. ಆಗ ಮನೆಯಲ್ಲಿ ಏನೇನೋ ನಡೆಯುತ್ತಿತ್ತು. ಮನೆ ಕೆಲಸದವರು ನನ್ನನ್ನು ಒಂಥರಾ ನೋಡುತ್ತಿದ್ದರು. ಅವರ ಮುಖದಲ್ಲಿನ ಭಾವ ನನಗೆ ಅರ್ಥವಾಗುತ್ತಿತ್ತು ಎಂದು ಹೇಳಿದ.

ಎಷ್ಟು ವರ್ಷ ಇದ್ದಿರಿ ಒಟ್ಟಿಗೆ ಎಂದು ದೀಪಿಕಾ ಕೇಳಿದ್ದಕ್ಕೆ, ಒಟ್ಟಿಗೆ ನಾಲ್ಕು ವರ್ಷ ಇದ್ದೆವು. ಈಗ ಅವಳು ತನ್ನ ಎಕ್ಸ್ ಫ್ರೆಂಡ್ ಜೊತೆ ಇದ್ದಾರಾ ಎಂದು ದೀಪಿಕಾ ಸಂಜ್ಞೆಯಲ್ಲಿ ಕೇಳಿದರು. ಇದಕ್ಕೆ ಉತ್ತರಿಸಿದ ಆದಿ ಅವರೇನಾ ಅಥವಾ ಇನ್ನೊಬ್ಬರ ಜೊತೆಗೆ ಇದ್ದಾರೋ ಗೊತ್ತಿಲ್ಲ ಎಂದರು.

ನಿಮಗೆ ಗೊತ್ತಿಲ್ವಾ ಅವರು ಯಾರ ಜೊತೆಗಿದ್ದಾರೆ ಎಂದು ದೀಪಿಕಾ ಕೇಳಿದ್ದಕ್ಕೆ, ಒಂದ್ಸಲ ನಾನು ಎಸೆದ ಮೇಲೆ ಇನ್ನು ಅದರ ಕಡೆ ತಿರುಗಿ ಸಹ ನೋಡಿಲ್ಲ ಎಂದರು. ಕುತೂಹಲಕ್ಕಾದರೂ ನೋಡಿಲ್ವಾ ಎಂದರು. ನಾನು ಯಾರಿಗೂ ನೋವುಂಟು ಮಾಡಿಲ್ಲ. ಆದರೆ ನನ್ನ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಒಂದು ವೇಳೆ ನೀನು ಹರ್ಟ್ ಮಾಡಿದರೂ ನಾನು ಮರೆತುಹೋಗುತ್ತೇನೆ ಎಂದು ಹೇಳಿದರು.

<ul id="pagination-digg"><li class="next"><a href="/tv/deepika-complain-against-shwetha-bigg-boss-kannada-2-086473.html">Next »</a></li></ul>
English summary
Aadhi Lokesh disclosed his marital life and split up. He shares his old memories with Deepika on Day 26th at Bigg Boss Kannada 2. Here is the highlights of the day.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada