For Quick Alerts
ALLOW NOTIFICATIONS  
For Daily Alerts

  ಅಣ್ಣಾವ್ರು ಮುಟ್ಟಿದ್ದ ಗಡ್ಡವನ್ನೇ ಪಣಕ್ಕಿಟ್ಟಿದ್ದ ಗುರು

  By ಉದಯರವಿ
  |

  ಬಿಗ್ ಬಾಸ್ ಮನೆಗೆ ಗುರುಪ್ರಸಾದ್ ಅವರು ಅಡಿಯಿಟ್ಟ ಮೇಲೆ ಹೊಸ ಕಳೆ ಬಂದಂತಾಗಿದೆ. ಇಷ್ಟು ದಿನ ಏನೋ ಒಂದು ರೀತಿ ಯಾಂತ್ರಿಕವಾಗಿ ನಡೆಯುತ್ತಿದ್ದ ಬಿಗ್ ಬಾಸ್ ಸ್ಪರ್ಧೆಗೆ ಈಗ ಒಂದು ಹೊಸ ತಿರುವು ಸಿಕ್ಕಂತಾಗಿದೆ.

  ಮನೆಯಲ್ಲಿ ಎಲ್ಲರೂ ನಾಮಿನೇಷನ್ ಬಗ್ಗೆಯೇ ಚರ್ಚೆಸುತ್ತಿದ್ದರು. ಈ ಬಗ್ಗೆ ಚರ್ಚಿಸಬಾರದು ಎಂಬ ಬಿಗ್ ಬಾಸ್ ಆಜ್ಞೆ ಇದ್ದರೂ ಯಾರೂ ಅದನ್ನು ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣಲಿಲ್ಲ. ಇದೇ ಸಂದರ್ಭದಲ್ಲಿ ಗುರುಪ್ರಸಾದ್ ಅವರು ಅಕುಲ್ ಅವರ ಟೀ ಶರ್ಟ್ ತೊಟ್ಟು ಕಾಣಿಸಿಕೊಂಡರು.

  ಇದನ್ನು ನೋಡಿದ ಅಕುಲ್ ಅವರು ಟೀ ಶರ್ಟ್ ತುಂಬಾ ಚೆನ್ನಾಗಿದೆ ಗುರುಗಳೇ ಎಂದರು. ಇದಕ್ಕೆ ಪ್ರತಿಯಾಗಿ ಅವರು, ಒಬ್ಬ ಪಾಪ ನನ್ನನ್ನು ಬೈಕೊಂಡು ಬೈಕೊಂಡು ರಾತ್ರಿಯಲ್ಲಿ ಐರನ್ ಮಾಡಿ ಇಟ್ಟಿದ್ದ. ಅದನ್ನು ನೀಟಾಗಿ ರಾತ್ರಿ ಕದ್ದು ಈಗ ಹಾಕಿಕೊಂಡಿದ್ದೇನೆ ಎಂದರು. ಅದು ಅಕುಲ್ ಅವರಿಗೂ ಅರ್ಥವಾಯಿತು. ಬನ್ನಿ ನೋಡೋಣ ಮೂವತ್ತೇಳನೇ ದಿನದ ಹೈಲೈಟ್ಸ್.

  ಗುರುಗೆ ಅಕುಲ್ ಆಕ್ಷನ್ ಕಟ್

  ಅಕುಲ್ ಅವರು ಗುರು ಅವರಿಗೆ ಆಕ್ಷನ್ ಕಟ್ ಹೇಳಿದರು. "ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು..." ಎಂಬ ಹಾಡಿಗೆ ಹೇಗೆ ಹೆಜ್ಜೆ ಹಾಕಬೇಕು ಎಂದು ಹಲವು ಬಾರಿ ತೋರಿಸಿದರೂ ಅವರು ಮಾಡಲು ಸಾಧ್ಯವಾಗಲಿಲ್ಲ. ಗುರು ಹೇಗೇಗೋ ಮಾಡಿ ಎಲ್ಲರ ಮುಖದಲ್ಲಿ ನಗೆಯುಕ್ಕಿಸುವಲ್ಲಿ ಯಶಸ್ವಿಯಾದರು.

  ಲಗ್ಜುರಿ ಬಜೆಟ್ ಟಾಸ್ಕ್ ಹೆಸರು ಧಮ್

  ಈ ಬಾರಿಯಯ ಲಗ್ಜುರಿ ಬಜೆಟ್ ಟಾಸ್ಕ್ ಹೆಸರು ಧಮ್. ಎದುರಾಳಿ ತಂಡ ಸವಾಲುಗಳನ್ನು ಒಡ್ಡುತ್ತದೆ. ಎದುರಾಳಿಗಳ ಧಂ ಎಷ್ಟಿದೆ ಎಂದು ತಿಳಿಯುವ ಪ್ರಯತ್ನ ಈ ಟಾಸ್ಕ್ ನದು. ಎ ಮತ್ತು ಬಿ ಎಂದು ಎರಡು ತಂಡಗಳಾಗಿ ವಿಂಗಡಿಸಲಾಗಿತ್ತು.

  ಎರಡು ತಂಡಗಳ ನಡುವೆ ಧಮ್ ಆಟ

  'ಎ' ತಂಡದಲ್ಲಿ ಅಕುಲ್, ಆದಿ, ಸಂತೋಷ್, ದೀಪಿಕಾ ಮತ್ತು ಹರ್ಷಿಕಾ ಇದ್ದರೆ. 'ಬಿ' ತಂಡದಲ್ಲಿ ಗುರು, ಸೃಜನ್, ಮಯೂರ್, ಶ್ವೇತಾ ಮತ್ತು ಅನುಪಮಾ ಇದ್ದಾರೆ. ಇಬ್ಬರ ನಡುವೆ ಒಳ್ಳೆಯ ಧಮ್ ಆಟವೇ ನಡೆಯಿತು.

  ಕ್ಯಾಪ್ಟನ್ ನಿರ್ಧಾರವೇ ಅಂತಿಮ

  ಗಾರ್ಡನ್ ಏರಿಯಾದಲ್ಲಿ ಇಟ್ಟಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಪ್ರತಿ ತಂಡವು ಎದುರಾಳಿಗೆ ಸವಾಲನ್ನು ಹಾಕಬೇಕು. ಸವಾಲಿನಲ್ಲಿ ಗೆದ್ದ ತಂಡಕ್ಕೆ ಅಂಕಗಳು ಇರುತ್ತವೆ. ಸವಾಲುಗಳಲ್ಲಿ ವಿವಾದ ಸೃಷ್ಟಿಯಾದರೆ ಕ್ಯಾಪ್ಟನ್ ನಿರ್ಧಾರವೇ ಅಂತಿಮ.

  ಗಡ್ಡ ಗುರುಪ್ರಸಾದ್ ಎಂದ ಅಕುಲ್ ಬಾಲಾಜಿ

  ಮಧ್ಯಾಹ್ನದ ಹೊತ್ತಿಗೆ ಧಮ್ ಆಟ ಶುರುವಾಯಿತು. ಸಗಣಿ, ಹಾಗಲಕಾಯಿ, ಕನ್ನಡಕ ಹೀಗೆ ಒಂದಷ್ಟು ವಸ್ತುಗಳನ್ನು ಇಡಲಾಗಿತ್ತು. ಇದೇ ಸಂದರ್ಭದಲ್ಲಿ ಗಡ್ಡ ಗುರುಪ್ರಸಾದ್ ಎಂದು ಅಕುಲ್ ಕರೆದು ಗುರುಗಳಿಗೆ ಸಖತ್ ಹಿಂಸೆ ಕೊಟ್ಟರು.

  ಮೊದಲ ಸವಾಲಿನಲ್ಲೇ ಸೋತ ಗುರುಪ್ರಸಾದ್

  ಮೊದಲ ಸವಾಲು ಸ್ವೀಕರಿಸಿದ ಗುರುಪ್ರಸಾದ್, ಒಂದು ಕಾಲು ಮೇಲೆತ್ತಿ ಗೊಂಬೆಯೊಂದನ್ನು ಒತ್ತಿಹಿಡಿಯಬೇಕಾಗಿತ್ತು. ಐವತ್ತು ಎಣಿಸುವವರೆಗೂ ಅವರು ಹಾಗೆಯೇ ಇರಬೇಕಿತ್ತು. ಆದರೆ ಹತ್ತರ ಒಳಗೆ ಅವರ ಆಟ ಮುಗಿದಿತ್ತು. ಮೊದಲ ಸವಾಲಿನಲ್ಲೇ ಸೋತರು. ಆದರೆ ಅವರ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

  ಕೂದಲನ್ನೇ ಪಣಕ್ಕಿಟ್ಟ ಗುರುಪ್ರಸಾದ್

  ಇನ್ನೊಂದು ಟಾಸ್ಕ್ ತಲೆ ಕೂದಲು ತೆಗೆಯುವುದಾಗಿತ್ತು. ಇದಕ್ಕೂ ಗುರುಪ್ರಸಾದ್ ಮುಂದೆ ಬಂದು ತಮ್ಮ ತಲೆಯನ್ನೇ ಪಣಕ್ಕಿಟ್ಟರು. ನಮ್ಮ ಸಂಪ್ರದಾಯದಲ್ಲಿ ತಂದೆತಾಯಿ ಇರೋವರೆಗೂ ತಲೆಗೂದಲು ತೆಗೆಸೋ ಹಂಗಿಲ್ಲ. ಆದರೆ ಟಾಸ್ಕ್ ಮುಂದುವರೆಯಲು ಈ ಕೆಲಸ ಮಾಡುತ್ತಿದ್ದೇನೆ. ಅಪ್ಪಅಮ್ಮ ದಯವಿಟ್ಟು ಕ್ಷಮೆಯಿರಲಿ ಎಂದು ಕೂತರು.

  ಕಡೆಗೆ ಗುರು ಗಡ್ಡಕ್ಕೂ ಬಂದಿತ್ತು ಸಂಚಕಾರ

  ಈ ಗಡ್ಡ ಡಾ ರಾಜ್ ಕುಮಾರ್ ಅವರು ಹದಿನಾರು ವರ್ಷದ ಹಿಂದೆ ಮುಟ್ಟಿದ್ದು. ಹಾಗಾಗಿ ಈ ಹೊತ್ತಿನವರೆಗೂ ಅದನ್ನು ತೆಗೆದಿರಲಿಲ್ಲ. ಈ ಹೊತ್ತು ತೆಗೆಸುತ್ತಿದ್ದೇನೆ. ಅಣ್ಣಾವ್ರೆ ಕ್ಷಮೆ ಇರಲಿ ಎಂದರು. ಆದರೆ ಗಡ್ಡ ಟಾಸ್ಕ್ ನಲ್ಲಿಲ್ಲದೆ ಅಡ್ಡ ಬಂತು. ಕಡೆಗೆ ಅಣ್ಣಾವ್ರಿಗೆ ಥ್ಯಾಂಕ್ಸ್ ಹೇಳಿದರು ಗುರು.

  ಗುರು ಕೂದಲು ಬಚಾವ್ ಮಾಡಿದ ಸೃಜನ್

  ಕೊನೆಗೆ ತಲೆ ಬೋಳಿಸಿಕೊಳ್ಳಲು ಸೃಜನ್ ಲೋಕೇಶ್ ಮುಂದೆ ಬಂದರು. ಹಾಗಾಗಿ ಗಡ್ಡ ಮತ್ತು ತಲೆಕೂದಲನ್ನು ಗುರುಪ್ರಸಾದ್ ಉಳಿಸಿಕೊಂಡರು. ಈ ಟಾಸ್ಕ್ ನಲ್ಲಿ ಗೆದ್ದ ಸೃಜನ್ ಮೂವತ್ತು ಪಾಯಿಂಟ್ ಗಳಿಗಾಗಿ ಈ ರೀತಿ ಮಾಡಿ ಗೆದ್ದರು.

  ಹಾಗಲಕಾಯಿ ತಿಂದ ಅನುಪಮಾ ಭಟ್

  ಮುಂದೆ ಹಾಗಲಕಾಯಿ ತಿನ್ನುವ ಟಾಸ್ಕನ್ನು ಟೀಂ 'ಬಿ'ಗೆ ನೀಡಲಾಯಿತು. ಹಾಗಲಕಾಯಿ ತಿನ್ನಲು ಅನುಪಮಾ ಭಟ್ ಮುಂದೆ ಬಂದರು. ಅವರು ಸುಲಭವಾಗಿಯೇ ಒಂದು ಹಾಗಲಕಾಯಿ ತಿಂದು ಹತ್ತು ಪಾಯಿಂಟ್ ಗಳಿಸಿದರು.

  ಕಡೆಗೆ ಅಕುಲ್ ಬಾಲಾಜಿ ತಂಡಕ್ಕೆ ಒಲಿದ ಜಯ

  ಕಡೆಗೆ ಈ ಬಾರಿಯ ಲಗ್ಜುರಿ ಬಜೆಟ್ ಟಾಸ್ಕ್ ನಲ್ಲಿ ಅಕುಲ್ ಬಾಲಾಜಿ ಅವರ 'ಎ' ತಂಡ ಗೆದ್ದಿದೆ. ಅವರಿಗೆ ಎಷ್ಟು ಪಾಯಿಂಟ್ ಸಿಗುತ್ತವೆ ಎಂಬುದು ಮೂವತ್ತೆಂಟನೇ ದಿನ ಗೊತ್ತಾಗಲಿದೆ.

  ಧಮ್ ಪರೀಕ್ಷೆಯಲ್ಲಿ ಕೆಲವರ ಮದವಡಗಿದೆ

  ಸ್ಪರ್ಧಿಗಳ ಧಮ್ ಎಷ್ಟಿದೆ ಎಂಬ ಪರೀಕ್ಷೆಯಲ್ಲಿ ಕೆಲವರ ಮದವಡಗಿದೆ. ಇನ್ನೂ ಕೆಲವರ ಪಿತ್ತ ಕೆರಳಿಸಿದೆ. ಕೆಲವರು ಸ್ನೇಹದ ಸಿಹಿಗೋಸ್ಕರ ತಮ್ಮ ತಲೆಯನ್ನೇ ಕೊಟ್ಟರೆ. ಇನ್ನೂ ಕೆಲವರು ಹಾಗಲಕಾಯಿ ತಿಂದು ಟಸ್ಕ್ ನಲ್ಲಿ ಗೆದ್ದಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

  English summary
  Bigg Boss gives luxuary budget taks to inmates. Akul Balaji lead group 'A' finally wins the task. Guruprasad also gives best performance in the task. Here is the day 37th highlights.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more