»   » ಸಂತೋಷ್ ರಿಂದ ನೇರವಾಗಿ ರೋಹಿತ್ ನಾಮಿನೇಟ್

ಸಂತೋಷ್ ರಿಂದ ನೇರವಾಗಿ ರೋಹಿತ್ ನಾಮಿನೇಟ್

By: ಉದಯರವಿ
Subscribe to Filmibeat Kannada

ಮಯೂರ್ ಮನೆಯಿಂದ ಹೊರಹೋದ ಬಳಿಕ ಅಕುಲ್ ಅದೃಶ್ಯರಾಗುವಂತೆ ವಹಿಸಿದ್ದ ಶಿಕ್ಷೆಯನ್ನು ಅವರು ಪರಿಪಾಲಿಸಿದರು. ಯಾರಿಗೂ ಕಾಣದಂತೆ ಮನೆಯಲ್ಲಿ ಓಡಾಡಬೇಕು. ಯಾರೊಂದಿಗೂ ಮಾತನಾಡದೆ ಸುಮ್ಮನೆ ಇರಬೇಕಾಗಿತ್ತು. ಅದರಂತೆ ಅವರು ನಡೆದುಕೊಂಡರು.

ಒಂದು ಹಂತದಲ್ಲಿ ಅವರು ತೀರಾ ಭಾವುಕರಾಗಿ ಮಕ್ಕಳೊಂದಿಗೆ ಮಾತನಾಡಬೇಕು ಕರೆ ಮಾಡಿಕೊಡಿ ಪ್ಲೀಸ್ ಎಂದು ಬಿಗ್ ಬಾಸ್ ಬಳಿ ಕಣ್ಣೀರಿಟ್ಟರು. ಬಹುಶಃ ಅವರು ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ಕಣ್ಣೀರು ಹಾಕಿದ್ದು ಎನ್ನಿಸುತ್ತದೆ.

ಇನ್ನೊಂದು ಕಡೆ ನೀತೂ ಮತ್ತು ಅನುಪಮಾ ಭಟ್ ಅವರು ಒಬ್ಬರಿಗೊಬ್ಬರು ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡರು. ಸದ್ಯಕ್ಕೆ ಇವರಿಬ್ಬರ ನಡುವಿನ ಘರ್ಷಣೆಗೆ ತೆರೆಬಿದ್ದಿದೆ. ಬನ್ನಿ ನೋಡೋಣ ನಲವತ್ತೆರಡು ಹಾಗೂ ನಲವತ್ತಮೂರನೇ ದಿನದ ಹೈಲೈಟ್ಸ್.

ಮನೆಯಲ್ಲಿ ರಕ್ಷಾಬಂಧನ ಸಂಭ್ರಮ

ಈ ಬಾರಿ ಮನೆಯಲ್ಲಿ ರಾಖಿ ಸಂಭ್ರಮ ನೆಲೆಸುವಂತೆ ಬಿಗ್ ಬಾಸ್ ಮಾಡಿದರು. ಎಲ್ಲರಿಗೂ ಅವರ ಪ್ರೀತಿ ಪಾತ್ರ ಸಹೋದರ ಸಹೋದರಿಯ ವಿಡಿಯೋ ಕ್ಲಿಪ್ಪಿಂಗ್ ತೋರಿಸಿ ಮನಸ್ಸಿಗೆ ಹೊಸ ಉಲ್ಲಾಸದ ಮಳೆ ಸುರಿಸಿದರು ಬಿಗ್ ಬಾಸ್.

ಗುರುಗೆ ನಾದಿನಿಯಿಂದ ಪ್ರೀತಿಯ ಉಡುಗೊರೆ

ಶ್ವೇತಾ ಚೆಂಗಪ್ಪಗೆ ಅಣ್ಣನ ಕಡೆಯಿಂದ ರಾಖಿ ಹಬ್ಬದ ಶುಭಾಶಯಗಳು ಬಂದರೆ. ಗುರುಪ್ರಸಾದ್ ಅವರಿಗೆ ನಾದಿನಿ ಕಡೆಯಿಂದ ರಕ್ಷಾಬಂಧನದ ಪ್ರೀತಿಯ ಶುಭಾಶಯ ಬಂತು. ಸೃಜನ್ ಅವರಿಗೆ ತನ್ನ ತಂಗಿ ಪೂಜಾ ಲೋಕೇಶ್ ಅವರಿಂದ ನಲ್ಮೆಯ ಉಡುಗೊರೆ ಸಿಕ್ಕಿತು.

ಡೈರೆಕ್ಟ್ ಆಗಿ ನಾಮಿನೇಟ್ ಆದ ರೋಹಿತ್ ಪಟೇಲ್

ಈ ವಾರದ ನಾಮಿನೇಷನ್ ಪ್ರಕ್ರಿಯೆಗೆ ಚಾಲನೆ ನೀಡಿದರು ಬಿಗ್ ಬಾಸ್. ಸಂತೋಷ್ ಗೆ ನೇರವಾಗಿ ನಾಮಿನೇಟ್ ಮಾಡಲು ಸೂಚಿಸಿದರು. ಅವರು ನೇರವಾಗಿ ನಾಮಿನೇಟ್ ಮಾಡಿದ್ದು ರೋಹಿತ್. ಈ ಬಾರಿ ಬಹುತೇಕ ಮಂದಿ ಹರ್ಷಿಕಾ ಅವರನ್ನು ನಾಮಿನೇಟ್ ಮಾಡಿದರು.

ಈ ವಾರ ನಾಲ್ಕು ಮಂದಿ ನಾಮಿನೇಟ್

ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರು ರೋಹಿತ್, ಹರ್ಷಿಕಾ, ನೀತೂ ಮತ್ತು ದೀಪಿಕಾ. ಸತತ ನಾಲ್ಕು ಬಾರಿ ನಾಮಿನೇಟ್ ಆಗಿ ಬಚಾವಾಗಿದ್ದ ರೋಹಿತ್ ಈ ಬಾರಿ ಏನಾಗುತ್ತಾರೋ ಎಂಬ ಕುತೂಹಲ ಇದ್ದೇ ಇದೆ.

ಸಂತೋಷ್, ರೋಹಿತ್ ನಡುವೆ ಮಾತಿನ ಚಕಮಕಿ

ಸಂತೋಷ್ ತನ್ನನ್ನು ನೇರವಾಗಿ ನಾಮಿನೇಷನ್ ಮಾಡಿದ ವಿಚಾರವಾಗಿ ರೋಹಿತ್ ಖ್ಯಾತೆ ತೆಗೆದ. ಇಬ್ಬರ ನಡುವೆಯೂ ಸ್ವಲ್ಪ ಮಾತಿನ ಚಕಮಕಿಯೂ ನಡೆಯಿತು. ಇದೇ ವಿಚಾರವಾಗಿ ನೀತೂ ಮತ್ತು ಸಂತೋಷ್ ನಡುವೆಯೂ ಮಾತುಕತೆಯಾಯಿತು.

ಬಿಗ್ ಬಾಸ್ ಮನೆಗೆ ಕನ್ನಡ ಮೇಷ್ಟ್ರು

ಮನೆಯಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ ಎಂದು ಬಿಗ್ ಬಾಸ್ ಎಚ್ಚರಿಸಿದರು. ಮನೆಯ ಎಲ್ಲಾ ಸದಸ್ಯರು ಹೆಚ್ಚಾಗಿ ಕನ್ನಡ ಬಳಸುವಂತೆ ನೋಡಿಕೊಳ್ಳಲು ಗುರುಪ್ರಸಾದ್ ಅವರಿಗೆ ಸೂಚಿಸಲಾಯಿತು. ಅದರಂತೆ ಅವರು ಮನೆಯ ಎಲ್ಲಾ ಸದಸ್ಯರ ನಡುವೆ ಕನ್ನಡ ಮಾತನಾಡುವಂತೆ ವಿನಂತಿಕೊಂಡರು.

English summary
RJ Rohit directly nominated for elimination in Bigg Boss Kannada 2 reality show. Rohit, Neethu, Harshika and Deepika are nominated for eviction. Here is the day 42nd and 43rd highlights.
Please Wait while comments are loading...