»   » ಬಿಗ್ ಬಾಸ್ ಶೋನಲ್ಲಿ ಮುಂದುವರಿದ ಒಣ ಪ್ರದರ್ಶನ

ಬಿಗ್ ಬಾಸ್ ಶೋನಲ್ಲಿ ಮುಂದುವರಿದ ಒಣ ಪ್ರದರ್ಶನ

By: ಉದಯರವಿ
Subscribe to Filmibeat Kannada

ಅಂತೂ ಇಂತೂ 'ಕಾಡುಪ್ರಾಣಿಗಳ ಪ್ಯಾಟೆ ಲೈಫು' ಟಾಸ್ಕ್ ಗೆ ತೆರೆಬಿದ್ದಿದೆ. ಆರಂಭದಲ್ಲಿ ಸಿಕ್ಕಾಪಟ್ಟೆ ಗೊಂದಲ, ಕಿತ್ತಾಟ ರಂಪಾಟಗಳ ಮೂಲಕ ತಾಳತಪ್ಪಿದ್ದ ಟಾಸ್ಕ್ ಕೊನೆಯ ಘಟ್ಟದಲ್ಲಿ ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು. ಬಿಗ್ ಬಾಸ್ ನ ನವಲತ್ತೈದನೇ ದಿನ ಏನೆಲ್ಲಾ ನಡೀತು ಎಂಬುದನ್ನು ನೋಡೋಣ ಬನ್ನಿ.

ನಲವತ್ತೈದನೇ ದಿನ ಹರ್ಷಿಕಾ ಮಾತನಾಡುತ್ತಾ, ಕೆಲವರು ರಾತ್ರಿಯಲ್ಲಾ ಹೊರಗಡೆ ಮಲಗಿದ್ದಾರೆ, ಆದರೆ ನಾವು ಮಾತ್ರ ಇಲ್ಲಿ ಹೊರಗಡೆ ಮಲಗಬೇಕಲ್ಲಾ ಎಂದು ಹರ್ಷಿಕಾ ಕಣ್ಣೀರಿಟ್ಟರು. ನಲವತ್ತೈದನೇ ದಿನವೂ ಕೆಲವು ಗಲಾಟೆ, ಗದ್ದಲದ ನಡುವೆ ಟಾಸ್ಕ್ ಆರಂಭವಾಯಿತಾದರೂ ಕಡೆಗೆ ಸುಖಾಂತ್ಯ ಕಂಡಿತು.

ಬಿಗ್ ಬಾಸ್ ಕೊಟ್ಟ ಟಾಸ್ಕನ್ನು ಮಾಡದೆ ಕೇವಲ ವಾದವಿವಾದ, ಮಾತಿನ ಚಕಮಕಿಯಲ್ಲೇ ಕಾಲಹರಣ ಮಾಡಿದರು ಮನೆಯ ಸದಸ್ಯರು. ಬಿಗ್ ಬಾಸ್ ವೇದಿಕೆ ಕೇವಲ ಒಣ ಪ್ರದರ್ಶನಕ್ಕೆ, ಕೆಲವರ ಒಣ ಪ್ರತಿಷ್ಠೆಗೆ ಮೀಸಲಾಗಿದೆಯೇ ಎಂಬ ಅನುಮಾನ ಕಾಡುವಂತೆ ಆಗಿದೆ. ಬನ್ನಿ ನೋಡೋಣ ಮನೆಯಲ್ಲಿ ಏನೆಲ್ಲಾ ನಡೀತು.

ಮನೆಯಲ್ಲಿ ಮುಗಿಯದ ಮಾತಿನ ಕದನ

ನೀತೂ, ಸಂತೋಷ್ ನಡುವೆಯೂ ಸಣ್ಣ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಆದಿ ಲೋಕೇಶ್ ಮತ್ತು ಸೃಜನ್ ನಡುವೆಯೂ ಮಾತಿನ ಚಕಮಕಿ ನಡೆಯಿತು.

ಮನೆಬಿಟ್ಟು ಇಲ್ಲಿಗೆ ಬಂದಿರುವುದು ಜಗಳ ಆಡಕ್ಕೆ ಅಲ್ಲ

ಒಂದು ಕಡೆ ಇದ್ದಕ್ಕಿದ್ದಂತೆ ಸೃಜನ್ ಲೋಕೇಶ್ ಮತ್ತು ಆದಿ ಲೋಕೇಶ್ ನಡುವೆ ಜಗಳ ಶುರುವಾಯಿತು. ಇಬ್ಬರೂ ಸುಖಾಸುಮ್ಮನೆ ಮಾತಿನ ಮಲ್ಲಯುದ್ಧ ಶುರುವಚ್ಚಿಕೊಂಡರು. ಕಡೆಗೆ ಸೃಜನ್ ಅವರು, ಮನೆಬಿಟ್ಟು ಇಲ್ಲಿಗೆ ಬಂದಿರುವುದು ಜಗಳ ಆಡಕ್ಕೆ ಅಲ್ಲ ಎಂದರು.

ಕಡೆಗೆ ಎಲ್ಲವೂ ಕೂಲ್ ಕೂಲ್

ಆದಿ ಮತ್ತು ಸೃಜನ್ ನಡುವೆ ಸಣ್ಣದಾಗಿ ಶುರುವಾದ ಜಗಳದ ಸನ್ನಿವೇಶ ಜೋರು ಮಳೆಯಂತೆ ಮಾರ್ಪಾಟಾಗಿ ಕಡೆಗೆ ನಿಂತುಹೋಯಿತು. ಸಂತೋಷ್ ಮತ್ತು ರೋಹಿತ್ ನಡುವೆಯೂ ಒಂದು ಸುತ್ತಿನ ಮಾತಿನ ಕದನ ನಡೆಯಿತು. ಕಡೆಗೆ ಎಲ್ಲವು ತಣ್ಣಗಾಯಿತು.

ಪಳಗಿದ ಕಾಡುಪ್ರಾಣಿಗಳ ಶೋ

ಕೊನೆಯದಾಗಿ ಶಿಕಾರಿಗಳು ಪಳಗಿಸಿದ ಕಾಡುಪ್ರಾಣಿಗಳ ಒಂದು ಶೋ ನಡೆಯಿತು. ಚಿರತೆಯಾಗಿ ದೀಪಿಕಾ ಕಾಮಯ್ಯ, ಕೋತಿಯಾಗಿ ಅಕುಲ್, ಯೇತಿಯಾಗಿ ಆದಿ ಲೋಕೇಶ್, ಜಿರಾಫೆಯಾಗಿ ಶ್ವೇತಾ ಚೆಂಗಪ್ಪ ಅದ್ಭುತವಾಗಿ ಪ್ರದರ್ಶನ ನೀಡಿದರು.

ಆದಿ, ಸೃಜನ್ ಕೊರಳಿಗೆ ಗೆಲುವಿನ ಮಾಲೆ

ಕೊನೆಯದಾಗಿ ಅದ್ಭುತ ಪ್ರದರ್ಶನ ನೀಡಿದ ಶಿಕಾರಿ ಮತ್ತು ಕಾಡುಪ್ರಾಣಿಗಳಾಗಿ ಆದಿ ಲೋಕೇಶ್ ಮತ್ತು ಸೃಜನ್ ಲೋಕೇಶ್ ಗೆದ್ದರು ಎಂದು ಮನೆಯ ಕ್ಯಾಪ್ಟನ್ ಸಂತೋಷ್ ಘೋಷಿಸಿದರು. ಅವರ ಪ್ರದರ್ಶನಕ್ಕೆ ಒಳ್ಳೆಯ ಮೆಚ್ಚುಗೆಯೂ ವ್ಯಕ್ತವಾಯಿತು.

ಲಗ್ಜುರಿ ಬಜೆಟ್ ನಿಂದ ಛಿದ್ರವಾದ ಮನಸ್ಸುಗಳು

ಲಗ್ಜುರಿ ಬಜೆಟ್ ನಿಂದ ಛಿದ್ರವಾಗಿದ್ದ ಮನೆ ನಿಧಾನವಾಗಿ ಮತ್ತೆ ತನ್ನ ಹಳೆಯ ರೂಪವನ್ನು ಪಡೆದುಕೊಳ್ಳುತ್ತಿದೆ. ಆದರೆ ಜಗಳದ ಕಲೆಗಳು ಮಾತ್ರ ಹಾಗೆಯೇ ಉಳಿದಿದ್ದು ಮುಂದೆ ಯಾವ ಸ್ವರೂಪ ಪಡೆಯುತ್ತವೋ ಗೊತ್ತಿಲ್ಲ.

ಸೈಲೆಂಟ್ ಆದ ವಯಲೆಂಟ್ ಗುರುಪ್ರಸಾದ್

ನಲವತ್ತನಾಲ್ಕನೇ ದಿನ ಎಡವಟ್ಟು ಮಾಡಿಕೊಂಡಿದ್ದ ಗುರುಪ್ರಸಾದ್ ಅವರು ನಲವತ್ತೈದನೇ ದಿನ ಯಾಕೋ ಏನೋ ತುಂಬಾ ಸೈಲೆಂಟ್ ಆಗಿದ್ದರು. ಬಿಗ್ ಬಾಸ್ ಅವರಿಗೆ ಒಪ್ಪಿಸಿರುವ ಮನೆಯ ಎಲ್ಲ ಸದಸ್ಯರು ಕನ್ನಡದಲ್ಲೇ ಮಾತನಾಡವಂತೆ ನೋಡಿಕೊಳ್ಳುವ ಕೆಲಸವನ್ನು ಅವರು ಚಾಚೂ ತಪ್ಪದೆ ಮಾಡುತ್ತಿದ್ದಾರೆ.

English summary
Srujan and Aadhi got into heated arguments over the rules of the task. Aadhi accused Srujan of breaking rules on constant basis. Here are the Bigg Boss Kannada 2 Day 45th highlights
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada