»   » ಬುಲೆಟ್ ಪ್ರಕಾಶ್ ಎಂಟ್ರಿ, ಸಹಭೋಜನ ಬಿಟ್ಟ ಗುರು

ಬುಲೆಟ್ ಪ್ರಕಾಶ್ ಎಂಟ್ರಿ, ಸಹಭೋಜನ ಬಿಟ್ಟ ಗುರು

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೊಂದು ಧೂಮಕೇತು ಪ್ರವೇಶಿಸಿದೆ. ಆ ಧೂಮಕೇತು ಬೇರಾರು ಅಲ್ಲ ಹಾಸ್ಯ ನಟ, ಪೋಷಕ ಕಲಾವಿದ ಬುಲೆಟ್ ಪ್ರಕಾಶ್. ಬಿಗ್ ಬಾಸ್ ಮನೆಗೆ ಅಡಿಯಿಡುವ ಮುನ್ನವೇ ಅವರು ತಮ್ಮನ್ನು ತಾವು ಶನಿಗ್ರಹ ಎಂದು ಹೇಳಿಕೊಂಡಿದ್ದರು.

ಗುರುಪ್ರಸಾದ್ ಅವರು ಗುರು ಗ್ರಹದಂತೆ ಮನೆಗೆ ಅಡಿಯಿಟ್ಟರೆ ತಾವು ಶನಿಗ್ರಹದ ತರಹ ಮನೆಗೆ ಹೋಗುತ್ತೇನೆ ಎಂದಿದ್ದರು. ಅವರ ಮಾತುಗಳಿಂದ ಮನೆಯಲ್ಲಿ ಇನ್ನೇನಾಗುತ್ತದೋ ಎಂದು ಕ್ಷಣಕಾಲ ಸುದೀಪ್ ಸಹ ಬೆಚ್ಚಿಬಿದ್ದಿದ್ದರು.

ಬಿಗ್ ಬಾಸ್ ಶೋ ಐವತ್ತನೇ ದಿನಕ್ಕೆ ಅಡಿಯಿಟ್ಟಿದೆ. ಹಳೆಯ ಸದಸ್ಯರು ಹೊಂದಿಕೊಳ್ಳುತ್ತಿದ್ದಾರೆ. ಮನೆಗೆ ಹೊಸ ಸದಸ್ಯರು ಎಂಟ್ರಿಕೊಡುತ್ತಿದ್ದಾರೆ. ಹಳಬರ, ಹೊರಬರ ನಡುವೆ ಬಿಗ್ ಫೈಟ್ ನಡೆಯುತ್ತಲೇ ಇದೆ. ಬನ್ನಿ ನೊಡೋಣ ನಲವತ್ತೊಂಬತ್ತು ಮತ್ತು ಐವತ್ತನೇ ದಿನ ಏನು ನಡೀತು ಎಂಬುದನ್ನು.

ಏಕದಿನದ ಟಾಸ್ಕ್ ಓಎಲ್ಎಕ್ಸ್ ನಲ್ಲಿ ಮಾರಿಬಿಡಿ

ಈ ವಾರದ ಏಕದಿನದ ಟಾಸ್ಕ್ "ಓಎಲ್ಎಕ್ಸ್ ನಲ್ಲಿ ಮಾರಿಬಿಡಿ". ಅದರಂತೆ ಮನೆಯ ಎಲ್ಲಾ ಸದಸ್ಯರಿಗೂ ಒಂದು ವಸ್ತುವನ್ನು ಕೊಡಲಾಗಿತ್ತು ಅದನ್ನು ಅವರು ಓಎಲ್ಎಕ್ಸ್ ನಲ್ಲಿ ಅಪ್ ಲೋಡ್ ಮಾಡಬೇಕು. ತಮ್ಮ ಬಳಿ ಇದ್ದ ಮಕ್ಕಳ ಕುರ್ಚಿಯನ್ನು ಅತ್ಯುತ್ತಮವಾಗಿ ವರ್ಣಿಸಿದ ಅಕುಲ್ ಅವರು ವಿಜೇತರಾಗಿ ಆಯ್ಕೆಯಾದರು.

ಅಕುಲ್ ಅವರಿಗೆ ಶಿಕ್ಷೆ ಮುಕ್ತಾಯ

ಹರ್ಷಿಕಾ ಅವರು ಮನೆಯಿಂದ ಹೊರಬೀಳಬೇಕಾದರೆ ಅಕುಲ್ ಅವರಿಗೆ ನೀಡಿದ್ದ ಕಾರ್ಯ ಐವತ್ತನೇ ದಿನ ಮುಕ್ತಾಯವಾಯಿತು. ಅಕುಲ್ ಅವರಿಗೆ ನೀಡಿದ್ದ ಶಿಕ್ಷೆ ಅವರು ಗುರುಪ್ರಸಾದ್ ಅವರನ್ನು ಸದಾ ನೆರಳಿನಂತೆ ಹಿಂಬಾಲಿಸಬೇಕಾಗಿತ್ತು.

ಗುರುಪ್ರಸಾದ್ ಮತ್ತು ಸಂತೋಷ್ ಹೆಸರು

ಈ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಯಿತು. ಬಹುತೇಕರು ಗುರುಪ್ರಸಾದ್ ಮತ್ತು ಸಂತೋಷ್ ಅವರ ಹೆಸನ್ನು ಸೂಚಿಸಿದರು. ಮನೆಯ ಕ್ಯಾಪ್ಟನ್ ಶ್ವೇತಾ ಚೆಂಗಪ್ಪ ಅವರು ನಾಮಿನೇಷನ್ ಪ್ರಕ್ರಿಯೆಯಿಂದ ಹೊರಗೆ ಉಳಿದರು.

ಮತ್ತೆ ಇಕ್ಕಟ್ಟಿಗೆ ಸಿಕ್ಕಿದ ಗುರುಪ್ರಸಾದ್

ಯಾರು ನಾಮಿನೇಷನ್ ಮಾಡಬಾರದು ಎಂದು ಕೇಳಿದಕ್ಕೆ ಅವರು ಗುರುಪ್ರಸಾದ್ ಹೆಸರನ್ನು ಹೇಳಿದರು. ಅವರು ಬೇರೆಯವರನ್ನು ನಾಮಿನೇಟ್ ಮಾಡುವಂತಿಲ್ಲ. ಆದರೆ ಬೇರೆಯವರು ಅವರನ್ನು ನಾಮಿನೇಷನ್ ಮಾಡಬಹುದಾಗಿತ್ತು.

ಈ ವಾರ ಓಟಿಂಗ್ ಲೈನ್ಸ್ ಇರುವುದಿಲ್ಲ

ಇನ್ನೊಂದು ವಿಶೇಷ ಎಂದರೆ ಈ ಬಾರಿ ಗುರುಪ್ರಸಾದ್ ಮತ್ತು ಸಂತೋಷ್ ಅವರನ್ನು ಸುಮ್ಮನೆ ನಾಮಿನೇಟ್ ಮಾಡಲಾಗಿದೆ. ಓಟಿಂಗ್ ಲೈನ್ಸ್ ಇರುವುದಿಲ್ಲ. ಈ ವಿಷಯ ವೀಕ್ಷಕರಿಗೆ ಬಿಟ್ಟರೆ ಗುರು ಮತ್ತು ಸಂತೋಷ್ ಅವರಿಗೆ ಗೊತ್ತಿಲ್ಲ.

ಜಿಂಕೆ ಮರೀನಾ ಎಂದು ಬಂದ ಬುಲೆಟ್ ಪ್ರಕಾಶ್

"ಜಿಂಕೆ ಮರೀನಾ ನೀ ಜಿಂಕೆ ಮರೀನಾ ನೀ ಜಿಂಕೆ ಮರೀನಾ..." ಎಂಬ ಹಾಡನ್ನು ಹಾಕಲಾಯಿತು. ಆದರೆ ಮನೆಯ ಒಳಗೆ ಬಂದಿದ್ದು ಮಾತ್ರ ಆನೆ ತರಹ ಇರುವ ಬುಲೆಟ್ ಪ್ರಕಾಶ್. ಅವರು ಬಂದಿದ್ದನ್ನು ನೋಡಿ ತಲೆ ಮೇಲೆ ಕೈಹೊತ್ತಿ ಕುಳಿತರು ಗುರುಪ್ರಸಾದ್.

ತಲೆಮೇಲೆ ಕೈಹೊತ್ತು ಕುಳಿತ ಗುರುಪ್ರಸಾದ್

ಎಲ್ಲರೂ ಹೋಗಿ ಅವರನ್ನು ಅಪ್ಪಿ ಬರಮಾಡಿಕೊಂಡರೆ ಗುರುಗಳು ಮಾತ್ರ ತಲೆಮೇಲೆ ಕೈಹೊತ್ತು ಕುಳಿತುಬಿಟ್ಟರು. ತಾವು ಕಂಟೆಸ್ಟೆಂಟೋ, ಗೆಸ್ಟಾ ಎಂದಾಗ ಹೆಂಗಾದರೂ ತಿಳೀಬಹುದು ಎಂದರು ಬುಲೆಟ್ ಪ್ರಕಾಶ್. ಊಟಕ್ಕೂ ಹೋಗದಂತೆ ಎಲೂ ಹೋಗಿ ಕುಳಿತಿದ್ದರು ಗುರುಗಳು.

ಸಹಭೋಜನ ಮಾಡಲ್ಲ ಎಂದರು ಗುರುಪ್ರಸಾದ್

ಅವರನ್ನು ಬರಮಾಡಿಕೊಳ್ಳಲೂ ಹೋಗಲಿಲ್ಲ. ಅವನು ಕಲಾವಿದ ಎಂದು ಗೌರವ ಕೊಡ್ತೀನಿ. ಸಹಭೋಜನ ಮಾಡಲ್ಲ ಎಂದರು ಗುರುಪ್ರಸಾದ್. ನಾನೇನು ಅವನನ್ನು ಬರಮಾಡಿಕೊಳ್ಳುವುದು ಎಂದರು.

ಇಂಡಸ್ಟ್ರಿಯಲ್ಲಿ ನನಗಿಂತಲೂ ಸೀನಿಯರ್ ಎಂದರು

ಕಡೆಗೆ ಇಂಡಸ್ಟ್ರಿಯಲ್ಲಿ ನನಗಿಂತಲೂ ಸೀನಿಯರ್ ನೀವು ಎಂದು ಬುಲೆಟ್ ರನ್ನು ಗುರು ಮಾತನಾಡಿದರು. ನನಗೆ ಟೋಟಲಿ ಎಂಜಾಯ್ ಮಾಡಬೇಕು. ನನಗೆ ಯಾರೂ ಸ್ಪರ್ಧಿಯಲ್ಲ, ದುಡ್ಡು ಗೆಲ್ತೀನಿ, ಬಿಡ್ತೀನಿ ಎಂಬುದು ನಮ್ಮ ಕೈಯಲ್ಲಿಲ್ಲ. ನಾನು ಇಲ್ಲಿ ಇರೋ ಅಷ್ಟು ದಿನವೂ ಸಖತ್ ಎಂಜಾಯ್ ಮಾಡ್ತೀನಿ ಎಂದರು ಬುಲೆಟ್ ಪ್ರಕಾಶ್.

ನೆಲ ಒರೆಸಲ್ಲ, ಟಾಯ್ ಲೆಟ್ ತೊಳೆಯಲ್ಲ ಎಂದ ಗುರು

ಇನ್ನು ಮೇಲಿಂದ ನಾನು ನೆಲ ಒರೆಸುವುದು, ಟಾಯ್ ಲೆಟ್ ತೊಳೆಯುವ ಕೆಲಸಗಳನ್ನು ಮಾಡಲ್ಲ. ಯಾವ ಕ್ಯಾಪ್ಟನ್ ಹೇಳಿದರೂ ಕೇಳಲ್ಲ ಎಂದರು ಗುರುಪ್ರಸಾದ್. ಇಂದಿನಿಂದ ನಾನು ಸಹ ಭೋಜನ ಮಾಡ್ತಿಲ್ಲ. ಯಾಹೊತ್ತು ನನ್ನನ್ನು ಮನೆಯ ಸದಸ್ಯ ಎಂದು ತಾವು ಭಾವಿಸುತ್ತೀರೋ ಅಂದೇ ಬರುತ್ತೇನೆ ಎಂದು ಗುರುಪ್ರಸಾದ್ ಮುನಿಸಿಕೊಂಡರು.

ಗುರುಪ್ರಸಾದ್ ಮುನಿಸಿಗೆ ಅಸಲಿ ಕಾರಣ ಏನಿರಬಹುದು?

ಅವರ ಮುನಿಸಿಗೆ ಕಾರಣ ಮನೆಯ ಸದಸ್ಯರು ತಮ್ಮನ್ನು ಸರಿಯಾಗಿ ನೋಡಿಕೊಳ್ಳದೆ ಬಲಹೀನ ಮಾಡುತ್ತಿದ್ದಾರೆ ಎಂಬ ಆರೋಪ. ಅಥವಾ ಬುಲೆಟ್ ಪ್ರಕಾಶ್ ಎಂಟ್ರಿಕೊಟ್ಟ ಮೇಲೆ ಹೀಗಾಯಿತೋ ಎಂಬುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ.

English summary
Bigg Boss Kannada 2 reached the 50 day mark. Bullet Prakash made grand entry into the house. When the music started to play inside the house, all the participants gathered in the garden area. Bigg Boss Kannada 2, day 49th 50th highlights.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada