»   » ಬಿಗ್ ಬಾಸ್ ಮನೆಯಲ್ಲಿ ಗಂಡುಮಗು ಹೆತ್ತ ಸಂತೋಷ್

ಬಿಗ್ ಬಾಸ್ ಮನೆಯಲ್ಲಿ ಗಂಡುಮಗು ಹೆತ್ತ ಸಂತೋಷ್

Posted By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಶೋನ 52ನೇ ಎಪಿಸೋಡು ಹಲವಾರು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಲಗ್ಜುರಿ ಬಜೆಟ್ ಟಾಸ್ಕ್ 'ಬಿಗ್ ಬಾಸ್ ಆಸ್ಪತ್ರೆ' ಎರಡನೇ ಹಂತ ತಲುಪಿ ಇನ್ನೊಂದಿಷ್ಟು ಮನರಂಜನೆ ನೀಡಿತು.

ಟಾಸ್ಕ್ ನ ಎರಡನೇ ದಿನ ಕೆಲವರಿಗೆ ಕಾಯಿಲೆ ಉಲ್ಬಣಿಸಿದರೆ ಇನ್ನೂ ಕೆಲವರಿಗೆ ಕಡಿಮೆಯಾಯಿತು. ಅನುಪಮಾ ಅವರು ಮುಪ್ಪಿನ ಸಮಸ್ಯೆಯಿಂದ ದೇವತೆಯಾಗಿ ಬದಲಾದರು. ಕೊನೆಗೆ ಎಲ್ಲರಿಗೂ ತಮ್ಮತಮ್ಮ ಕಾಯಿಲೆಯಿಂದ ಮುಕ್ತಿ ಸಿಕ್ಕಿತು.

ಇನ್ನೊಂದು ಕಡೆ ತುಂಬು ಗರ್ಭಿಣಿಯಾಗಿರುವ ಸಂತೋಷ್ ಅವರು ತನಗೆ ಸೀಮಂತ ಮಾಡಿಸಬೇಕು ಎಂದು ಕೇಳಿಕೊಂಡರು. ಅದರಂತೆ ಮನೆಯಲ್ಲಿ ಸೀಮಂತ ಸಂಭ್ರವೂ ನೆರವೇರಿತು. ಎಲ್ಲರೂ ಅವರಿಗೆ ಆರತಿ ಬೆಳಗಿ ಸೀಮಂತ ಆಚರಿಸಿದರು.

ಅಕುಲ್ ಕಣ್ಣಲ್ಲಿ ಧಾರಾಕಾರ ಕಣ್ಣೀರು

ಅಕುಲ್ ಬಾಲಾಜಿ ಅವರನ್ನು ಕನ್ಫೇಷನ್ ರೂಮಿಗೆ ಕರೆದ ಬಿಗ್ ಬಾಸ್ ನೀವ್ಯಾಕೋ ಈ ಟಾಸ್ಕ್ ನಲ್ಲಿ ಒಂಥರಾ ಭಾವುಕರಾಗಿದ್ದೀರಿ. ಏನಾಯ್ತೆಂದು ಬಿಗ್ ಬಾಸ್ ಗೆ ತಿಳಿಸಲು ಇಚ್ಛಿಸುತ್ತೀರಾ ಎಂದಾಗ ಅಕುಲ್ ಕಣ್ಣಲ್ಲಿ ಧಾರಾಕಾರ ಕಣ್ಣೀರು ಹರಿಯಿತು.

ಆಸ್ಪತ್ರೆ ಎಂದರೆ ಫೋಬಿಯಾ ಇದೆ ಎಂದ ಅಕುಲ್

ಬಿಗ್ ಬಾಸ್ ನನಗೆ ಆಸ್ಪತ್ರೆ ಎಂದರೆ ಫೋಬಿಯಾ (ಭಯ) ಇದೆ. ಆಸ್ಪತ್ರೆ ಎಂದರೆ ನನಗೆ ಇಷ್ಟವಿಲ್ಲ. ನಮ್ಮ ತಂದೆ ತೀರಿಹೋಗಿದ್ದು ಆಸ್ಪತ್ರೆಯಲ್ಲಿ, ಆಗಿಂದಲೂ ನನಗೆ ಹೆದರಿಕೆ. ಇದು ಟಾಸ್ಕ್ ಎಂಬ ಕಾರಣಕ್ಕೆ ತಾನು ಹೇಗೋ ನಿಭಾಯಿಸುತ್ತಿದ್ದೇನೆ ಎಂದರು.

ಕಾಡಿದ ತಂದೆಯ ಅಕುಲ್ ತಂದೆ ಸಾವು

ಈ ಟಾಸ್ಕ್ ಕೊಟ್ಟಾಗ ನನಗೆ ಅರಗಿಸಿಕೊಳ್ಳುವುದು ತುಂಬಾ ಕಷ್ಟ ಆಯಿತು. ತುಂಬಾ ಪ್ರಯಾಸದಾಯಕವಾಗಿ ಈ ಟಾಸ್ಕ್ ನಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು. ನಮ್ಮ ತಂದೆಗೆ ನಾನು ತುಂಬಾ ಹತ್ತಿರದವನಾಗಿದ್ದೆ. ಆದರೆ ಅವರು ನಿಧನರಾದ ಆಸ್ಪತ್ರೆ ನೆನಪುಗಳು ಇನ್ನೂ ಕಾಡುತ್ತಿವೆ ಎಂದರು. ಕಡೆಗೆ ಬಿಗ್ ಬಾಸ್ ಟಾಸ್ಕನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೀರಾ ಅಕುಲ್ ಎಂದು ಬೆನ್ನುತಟ್ಟಿದರು.

ಮನೆಯಲ್ಲಿ ಸಂತೋಷ್ ಗೆ ಸೀಮಂತ ಸಂಭ್ರಮ

ಏತನ್ಮಧ್ಯೆ 'ಬಿಗ್ ಬಾಸ್' ಮನೆಯಲ್ಲಿ ಸಂತೋಷ್ ಗೆ ಸೀಮಂತ ಸಂಭ್ರಮ. ಎಲ್ಲರೂ ಆರತಿ ಬೆಳಗಿ ಅವರಿಗೆ ಸೀಮಂತ ಮಾಡಿದರು. ಮಡಿಲಕ್ಕಿಯನ್ನೂ ತುಂಬಿಕೊಟ್ಟರು. ಸಂತೋಷ್ ಮಾತ್ರ ಇದು ಟಾಸ್ಕ್ ಎಂಬುದನ್ನೂ ಮರೆತು ಥೇಟ್ ಗರ್ಭಿಣಿಯಂತೆಯೇ ಅಭಿನಯಿಸಿದರು.

ಗರ್ಭದಲ್ಲಿರುವ ಶಿಶು ಜೊತೆ ಸಂತೋಷ್ ಮಾತುಕತೆ

ಕಡೆಗೆ ಸಂತೋಷ್ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದು ನಿಮ್ಮ ಗರ್ಭಿಣಿಯ ಜೀವನ ಹೇಗಿದೆ ಎಂದರು. ಇನ್ನು ಮುಂದೆ ಅವರು ಗರ್ಭದಲ್ಲಿರುವ ಶಿಶುವಿನ ಜೊತೆ ಮಾತನಾಡುತ್ತಿರಬೇಕು ಎಂಬ ಸಲಹೆಯನ್ನೂ ನೀಡಿದರು. ಅದರಂತೆ ಸಂತೋಷ್ ಸಹ ನಡೆದುಕೊಂಡರು.

ಗುರು ಮತ್ತು ಬುಲೆಟ್ ನಡುವೆ ಮುಸುಕಿನ ಗುದ್ದಾಟ

ಗುರುಪ್ರಸಾದ್ ಮತ್ತು ಬುಲೆಟ್ ಪ್ರಕಾಶ್ ಅವರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ ಎಂಬಂತಾಗಿದೆ. ಬುಲೆಟ್ ಬಗ್ಗೆ ಮಾತನಾಡುತ್ತಾ, ಇವನು ಇಲ್ಲಿಗೆ ಬಂದರೆ ಬೆಳಗ್ಗೆ ಟಿಫನ್, ಗಂಟೆಗೊಮ್ಮೆ ಗ್ರೀನ್ ಟೀ, ಬ್ಲ್ಯಾಕ್ ಟೀ ಸಿಗುತ್ತದೆ ಎಂದುಕೊಂಡಿದ್ದಾನೆ.

ಚೆನ್ನಾಗಿ ತಿಂದುಕೊಂಡು ಇದ್ದ ಬುಲೆಟ್

ಮಧ್ಯಾಹ್ನ ಆದರೆ ಬಿರ್ಯಾನಿ, ಬೋಟಿ, ತಲೆಮಾಂಸ ಅದು ಇದು ಕೊಡ್ತಾರೆ ಎಂದುಕೊಂಡಿದ್ದಾನೆ. ಮನೆಯಿಂದ ಫೋನ್ ಬಂದರೆ ಇವನು ಏನ್ಮಾಡ್ತಿದ್ದ ಗೊತ್ತಾ, ರಾತ್ರಿ 10 ಗಂಟೆಯಾಗುತ್ತದೆ ಬರೋದು. ಕನ್ವೇಯನ್ಸ್ ತಗೊಂಡು ಬರ್ಬೇಕಲ್ವಾ ಎನ್ನುತ್ತಾನೆ ಎಂದು ಹೇಳುತ್ತಿದ್ದ ಎಂದು ಗುರುಪ್ರಸಾದ್ ಹೇಳಿದರು.

ಸಂತೋಷ್ ಅವರಿಗೆ ಹೆರಿಗೆ ನೋವು

ಕಡೆಗೆ ಸಂತೋಷ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಎಲ್ಲರೂ ಅವರಿಗೆ ಸಹಜ ಹೆರಿಗೆ ಮಾಡಿಸಿದರು. ಅವರು ಗಂಡುಮಗುವಿಗೆ ಜನ್ಮ ನೀಡುವ ಮೂಲಕ ಲಗ್ಜುರಿ ಬಜೆಟ್ ಟಾಸ್ಕ್ ಅಲ್ಲಿಗೆ ಅಂತ್ಯವಾಯಿತು. ಈ ಬಾರಿ ಲಗ್ಜುರಿ ಬಜೆಟ್ ಟಾಸ್ಕ್ ನಲ್ಲಿ ಎಲ್ಲರಿಗೂ ಪಾಲು ಸಿಕ್ಕಿತು.

ಎಲಿಮಿನೇಷನ್ ಇರುವುದಿಲ್ಲ

ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಓಟಿಂಗ್ ಲೈನ್ಸ್ ತೆರೆದಿರುವುದಿಲ್ಲ. ಈ ವಿಷಯ ಮನೆಯ ಸದಸ್ಯರಿಗೆ ಗೊತ್ತಿರುವುದಿಲ್ಲ. ಈ ಬಾರಿ ಸಂತೋಷ್ ಮತ್ತು ಗುರುಪ್ರಸಾದ್ ಅವರನ್ನು ನಾಮಿನೇಟ್ ಮಾಡಲಾಗಿದೆ.

English summary
Santhosh who is pregnant, informed the doctor that he desires to have a baby shower. Accordingly he was given a baby shower by the participants in the house. Here is the Bigg Boss Kannada 2 day 52nd highlights. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada