»   » ಬಿಗ್ ಬಾಸ್ ಮನೆಯಲ್ಲಿ ಪರವಶರಾದ ನೀತೂ-ಆದಿ

ಬಿಗ್ ಬಾಸ್ ಮನೆಯಲ್ಲಿ ಪರವಶರಾದ ನೀತೂ-ಆದಿ

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಯಾರ ಊಹೆಗೂ ನಿಲುಕದಂತೆ ಸಾಗುತ್ತಿದೆ. ಸ್ಪರ್ಧಿಗಳು ಒಂದು ಬಯಸಿದರೆ, ಬಿಗ್ ಬಾಸ್ ಮತ್ತೊಂದು ಎಣಿಸುತ್ತಾನೆ. ಕಳೆದ ಬಾರಿ ನಾಮಿನೇಟ್ ಆಗಿದ್ದ ಸಂತೋಷ್ ಮತ್ತು ಗುರುಪ್ರಸಾದ್ ಅವರಿಗೆ ಬದಲಾಗಿ ಅನಿರೀಕ್ಷಿತವಾಗಿ ಬುಲೆಟ್ ಪ್ರಕಾಶ್ ಹೊರಬಿದ್ದರು.

ಈ ವಾರ ಯಾರೆಲ್ಲಾ ಆಗಬಹುದು? ನಾವು ಯಾರನ್ನು ನಾಮಿನೇಟ್ ಮಾಡಬೇಕು ಎಂದು ಮನೆಯ ಸದಸ್ಯರು ಏನೇನೋ ಲೆಕ್ಕಾಚಾರ ಹಾಕಿದ್ದರು. ಆದರೆ ಈ ಬಾರಿಯೂ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ನಾಮಿನೇಶನ್ ಪ್ರಕ್ರಿಯೆ ಯಾರ ಊಹೆಗೂ ನಿಲುಕದ ಮೀನಿನ ಹೆಜ್ಜೆಯಂತಾಗಿದೆ.

ಶ್ವೇತಾ ಅವರು ಪಕ್ಷಪಾತ ಮಾಡುತ್ತಿದ್ದಾರೆ. ಅವರು ಕಲಾವಿದೆ ಡ್ರಾಮಾ ಮಾಡುತ್ತಿದ್ದಾರೆ. ಇದೆಲ್ಲಾ ನನಗೆ ಸರಿಹೋಗಲ್ಲಪ್ಪ ಎಂದರು ಗುರುಪ್ರಸಾದ್. ಅವರು ಆದಿ ಜೊತೆ ಮಾತನಾಡುತ್ತಾ, ಶ್ವೇತಾ ಅವರು ಪಕ್ಷಪಾತ ಮಾಡುತ್ತಿರುವುದನ್ನು ಹೇಳಿದರು. ಐವತ್ತೇಳನೇ ದಿನದ ಏನು ನಡೀತು ಎಂಬುದನ್ನು ನೋಡೋಣ ಬನ್ನಿ.

ಎಲ್ಲರನ್ನೂ ನಾಮಿನೇಟ್ ಮಾಡಿದ ಬಿಗ್ ಬಾಸ್

ಬಿಗ್ ಬಾಸ್ ಪಯಣದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ದಾರಿ ಕ್ರಮಿಸಿದ್ದೀರಿ ಎಂದು ಬಿ ಬಾಸ್ ಮನೆಯ ಎಲ್ಲ ಸದಸ್ಯರನ್ನೂ ಪ್ರಶಂಸಿದರು. ಈ ಬಾರಿ ಎಲ್ಲರ ಮನೋರಂಜನಾ ಸಾಮರ್ಥ್ಯವನ್ನು ಪರೀಕ್ಷಿಸಲು ತಾವೊಂದು ಪರೀಕ್ಷೆ ಕೊಡುತ್ತಿದ್ದೇವೆ ಎಂದು ಎಲ್ಲರನ್ನೂ ನಾಮಿನೇಟ್ ಮಾಡಿದರು ಬಿಗ್ ಬಾಸ್.

ಕ್ಯಾಪ್ಟನ್ ನೀತೂ ಈ ವಾರ ಸೇಫ್

ಕ್ಯಾಪ್ಟನ್ ಆದ ನೀತೂ ಅವರನ್ನು ಹೊರತುಪಡಿಸಿ ಮನೆಯ ಎಲ್ಲಾ ಸದಸ್ಯರು ಈ ಬಾರಿ ನಾಮಿನೇಟ್ ಆಗಿದ್ದಾರೆ. ಗುರುಪ್ರಸಾದ್, ಸಂತೋಷ್, ಸೃಜನ್ ಲೋಕೇಶ್, ಅಕುಲ್ ಬಾಲಾಜಿ, ಆದಿ ಲೋಕೇಶ್, ದೀಪಿಕಾ ಕಾಮಯ್ಯ, ಅನುಪಮಾ ಭಟ್, ರೋಹಿತ್ ಹಾಗೂ ಶ್ವೇತಾ ಚೆಂಗಪ್ಪ ಈ ಬಾರಿ ನಾಮಿನೇಟ್ ಆದ ಸದಸ್ಯರು.

ಇಬ್ಬರು ಮನೆಯಿಂದ ಹೊರಗೆ ಹೋಗ್ತಾರಾ?

ಅಯ್ಯೋ ಈ ಬಾರಿ ಯಾರನ್ನೂ ನಾಮಿನೇಶನ್ ಮಾಡಬೇಕಾಗಿಲ್ಲ ಎಂದು ಎಲ್ಲರೂ ಒಬ್ಬರಿಗೊಬ್ಬರು ಅಪ್ಪಿಕೊಂಡು ಸಂಭ್ರಮಿಸಿದರು. ಮನೆಯಲ್ಲಿ ಈ ಬಾರಿ ಯಾರು ಹೊರಗೆ ಹೋಗುತ್ತಾರೆ ಎಂಬ ಬಗ್ಗೆಯೇ ಚರ್ಚೆ ನಡೆಯಿತು. ಈ ಬಾರಿ ಮನೆಯಿಂದ ಇಬ್ಬರು ಹೊರಗೆ ಹೋಗುತ್ತಾರೆ ಎಂದು ಬಹಳಷ್ಟು ಮಂದಿ ಗುಸುಗುಸು ಎಂದು ಮಾತನಾಡಿಕೊಂಡರು.

ಡೀಕೋಡಿಂಗ್ ಫೇಯ್ ಲೂರ್

ಡೀಕೋಡಿಂಗ್ ಎಲ್ಲಾ ಫೇಯ್ ಲೂರ್ ಆಯ್ತು ಎಂದು ಮಾತನಾಡಿಕೊಂಡರು. ಇಲ್ಲಿ ಡೀಕೋಡಿಂಗ್ ಎಂದರೆ ಬಿಗ್ ಬಾಸ್ ಈ ಬಾರಿ ಏನು ಮಾಡುತ್ತಾರೆ ಎಂಬುದು. ಮನೆಯ ಸದಸ್ಯರ ಊಹೆ ನಿಜಕ್ಕೂ ತಲೆಕೆಳಗಾಯಿತು ಎಂದು ಆದಿ ಡೀಕೋಡಿಂದ್ ವಿವರ ನೀಡಿದರು.

ಸದಸ್ಯರೇ ಆಡಿದ Truth or Dare ಎಂಬ ಆಟ

ಈ ಬಾರಿ ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಿಂತಲೂ ಚೆನ್ನಾಗಿದ್ದದ್ದು ಮನೆಯ ಸದಸ್ಯರೇ ಆಡಿದ Truth or Dare ಎಂಬ ಆಟ. ಬಾಟಲ್ ಒಂದನ್ನು ಮೇಜಿನ ಮೇಲೆ ಮಲಗಿಸಿ ತಿರುಗಿಸಿ ಬಿಡುವುದು. ಅದು ಯಾರ ಕಡೆ ಮುಖ ಮಾಡುತ್ತದೋ ಅವರು Truth or Dare ಎರಡರಲ್ಲಿ ಒಂದು ಆಯ್ಕೆ ಮಾಡಿಕೊಳ್ಳಬೇಕು. ಉತ್ತರ ಹೇಳಲಿಲ್ಲ ಎಂದರೆ ಗ್ಲಾಸಲ್ಲಿ ಒಂದು ಸ್ಫೂನ್ ಕಾರದಪುಡಿ ಹಾಕಿದ ನೀರನ್ನು ಕುಡುಯಬೇಕು.

ಖಾರದಪುಡಿ ಹಾಕಿದ ನೀರು ಕುಡಿದ ಸೃಜನ್

ಆಯ್ಕೆಯಾದ ಮೊದಲು ಹೆಸರು ಸೃಜನ್ ಲೋಕೇಶ್. ಆದರೆ ಅವರು ಎರಡನ್ನೂ ಬಿಟ್ಟು ಖಾರದಪುಡಿ ಹಾಕಿದ ನೀರನು ಒಂದೇ ಗುಡುಕಿಗೆ ಕುಡಿದರು. ಕುಡುಕಿ ತರಹ ನಟಿಸಿದ ದೀಪಿಕಾ ಎಲ್ಲರನ್ನೂ ರಂಜಿಸಿದರು. "ಕೂಗೋ ಕೋಳಿಗೆ ಖಾರ ಮಸಾಲೆ ಮೇಯೋ ಮೇಕೆಗೆ ಮಿರ್ಚಿ ಮಸಾಲೆ.." ಹಾಡಿಗೆ ಸ್ಟೆಪ್ ಹಾಕಿದರು ಎಲ್ಲರನ್ನೂ ರಂಜಿಸಿದರು.

ನೀತೂ, ಆದಿ ಮತ್ತೆ ಪರವಶರಾದ ಗಳಿಗೆ

ಅನುಪಮಾ ಭಟ್ ಆಯ್ಕೆ ಮಾಡಿದ್ದು ಡೇರ್ ಆಪ್ಷನ್. ನೀತೂ ಸಹ ಆಯ್ಕೆ ಮಾಡಿಕೊಂಡಿದ್ದು ಡೇರ್‍. ಒಂದು ರೋಮ್ಯಾಂಟಿಕ್ ಹಾಡಿಗೆ ಯಾರನ್ನೂ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದಾಗ ಥಟ್ಟನೆ ಹೇಳಿದ ಹೆಸರು ಆದಿ. ಬಳಿಕ ಇಬ್ಬರೂ "ಪರವಶನಾದೆನೂ ಅರಿಯುವ ಮುನ್ನವೇ ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ?" ಹಾಡಿಗೆ ಮೈಮರೆತು ಹೆಜ್ಜೆ ಹಾಕಿದರು.

ಸಂತೋಷ್ ತೆರೆದಿಟ್ಟ ಮನದಾಳದ ಹುಡುಗಿ

ನಾನು ಟ್ರೂತ್ ಎಂದು ಹೇಳಿದ ಸಂತೋಷ್ ತಮ್ಮ ಮನಸ್ಸಿನಾಳದ ನಿಜವನ್ನು ಹೊರಹಾಕಿದರು. ಮನೆಯಲ್ಲಿರುವ ಹುಡುಗಿಯಲ್ಲಿ ಲೈಫ್ ಪಾರ್ಟನರ್ ಆಗಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀಯಾ ಎಂದು ಅವರನ್ನು ಕೇಳಿದಾಗ, ಕೂಡಲೆ ಅವರು ಆಯ್ಕೆ ಮಾಡಿದದ ಹೆಸರು ದೀಪಿಕಾ ಕಾಮಯ್ಯ. ಅವರೊಬ್ಬ ಉತ್ತಮ ಗೃಹಿಣಿ ಎಂಬುದನ್ನು ಹೇಳಿದರು. ಹೊಂದಾಣಿಕೆ ಎಲ್ಲದರಲ್ಲೂ ಹೇಳಿ ಮಾಡಿಸಿದ ಹುಡುಗಿ ಎಂದು ಹೇಳಿದರು.

ಬಿಗ್ ಬಾಸ್ ಕೊಟ್ಟ ವಿಶೇಷ ಟಾಸ್ಕ್ 'ಶ್'

ಈ ಬಾರಿಯ ಬಿಗ್ ಬಾಸ್ ಕೊಟ್ಟ ವಿಶೇಷ ಟಾಸ್ಕ್ 'ಶ್'. ಇದರ ಪ್ರಕಾರ ಮನೆಯಲ್ಲಿ ಯಾರೂ ಮಾತನಾಡುವಂತಿಲ್ಲ. ತುಂಬಿದ ಕೊಡದಂತೆ ಗಂಭೀರವಾಗಿ ಇರಬೇಕು. ಖಾಲಿ ಕೊಡದಂತೆ ಸದ್ದು ಮಾಡಬಾರದು ಎಂದು ಬಿಗ್ ಬಾಸ್ ಮೌನದ ಮಹತ್ವ ಹೇಳಿ ಈ ಟಾಸ್ಕ್ ಕೊಟ್ಟರು.

ಯಾರೂ ಸದ್ದು ಮಾಡದೆ ಶ್ ಟಾಸ್ಕ್

ಶ್ ಟಾಸ್ಕ್ ನಲ್ಲಿ ಎಲ್ಲವೂ ಸೈಲೆಂಟಾಗಿಯೇ ಮಾಡಬೇಕಾಯಿತು. ಗುರುಪ್ರಸಾದ್ ಅವರು ಸದ್ದು ಮಾಡದೆ ಐಸ್ ಬಕೆಟ್ ಚಾಲೆಂಜ್ ಎದುರಿಸಿದರು. ಸದ್ದು ಮಾಡದಂತೆ ಆಕ್ರೂಟನ್ನು ತಿನ್ನಲು ಪ್ರಯತ್ನಿಸಿದರು ದೀಪಿಕಾ. ಟೂಟ್ ಪೇಸ್ಟ್ ಮತ್ತು ಬೇವಿನ ತೈಲದಲ್ಲಿ ಹಲ್ಲನ್ನು ಉಜ್ಜಿಕೊಳ್ಳಬೇಕಾಯಿತು ಅನುಪಮಾ. ಆದರೆ ಯಾರೂ ಸದ್ದು ಬರಬಾರದು ಎಂಬ ಎಚ್ಚರಿಕೆಯನ್ನು ಪಾಲಿಸಬೇಕಾಯಿತು.

ನಗುಬಂದರೂ ಜೋರಾಗಿ ನಗುವಂತಿಲ್ಲ

ಉಳಿದ ಸ್ಪರ್ಧಿಗಳು ಇದನ್ನು ನೋಡಿ ನಗು ಬಂದರೂ ತಡೆದುಕೊಳ್ಳಬೇಕು. ಜೋರಾಗಿ ನಗುವಂತಿರಲಿಲ್ಲ. ಚಪ್ಪಾಳೆಯನ್ನೂ ಸದ್ದಾಗದಂತೆ ತಟ್ಟಬೇಕು. ಗಂಟೆಯನ್ನು ಭುಜದ ಸಮನಾಗಿ ಹಿಡಿದು ನಡೆಯಬೇಕು. ಆದರೆ ಗಂಟೆ ಸದ್ದಾಗದಂತೆ ನೋಡಿಕೊಳ್ಳಬೇಕು.

ಶಬ್ದ ನಿಶ್ಯಬ್ದದ ನಡುವೆ ಪ್ರೀತಿಯ ಸಿಂಚನ

ಈ ರೀತಿಯ ಹೊಸತರದ ಶ್ ಟಾಸ್ಕ್ ನಿಂದ ಮನೆಯ ಸದಸ್ಯರು ಥ್ರಿಲ್ ಆದರು. ಈ ಬಾರಿ ಹೊಸತರದ ನಾಮಿನೇಷನ್, ಸಮಾಧಾನ ಅಸಮಾಧಾನದ ಹೊಗೆ ಮನೆಯಲ್ಲಿ ಸಣ್ಣಗೆ ಶುರುವಾಗಿ ಶಬ್ದ-ನಿಶ್ಯಬ್ದದ ನಡುವೆ ಪ್ರೀತಿಯ ಸಿಂಚನ ಈ ಬಾರಿ ಮನೆಯ ಸದಸ್ಯರನ್ನು ಗೆಲುವಾಗಿಸಿದೆ. ಎಲ್ಲರೂ ನಾಮಿನೇಟ್ ಆಗಿದ್ದು ಸದ್ಯಕ್ಕೆ ಖುಷಿಯಾಗಿದ್ದಾರೆ.

English summary
This week all the contestants in the house are nominated for elimination except the house captain for the week, Neetu Shetty. To know more about the weekend tamasha tune in to Bigg Boss Season 2 only on Suvarna TV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada