»   » ಬಿಗ್ ಬಾಸ್ ನಲ್ಲಿ ನೀತೂ, ದೀಪಿಕಾ ಶರಂಪರ ಕಿತ್ತಾಟ

ಬಿಗ್ ಬಾಸ್ ನಲ್ಲಿ ನೀತೂ, ದೀಪಿಕಾ ಶರಂಪರ ಕಿತ್ತಾಟ

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿ ಅರ್ಧ ದಾರಿ ಸವೆಸಿದೆ. ಇನ್ನುಳಿದ ದಾರಿಯನ್ನು ಕ್ರಮಿಸಬೇಕಾದರೆ ಟಾಸ್ಕ್ ಗಳೂ ಕಠಿಣವಾಗುತ್ತಾ ಹೋಗುತ್ತಿವೆ. ಈ ವಾರ ಬಿಗ್ ಬಾಸ್ ಕೊಟ್ಟದ್ದು 'ಡಬ್ಬ ಟಾಸ್ಕ್'. ಇದು ಲಗ್ಜುರಿ ಬಜೆಟ್ ಟಾಸ್ಕ್ ಆಗಿದ್ದು ಗೆಲ್ಲಲು ಸ್ಪರ್ಧಿಗಳು ತಮ್ಮ ಶಕ್ತಿಮೀರಿ ಪ್ರಯತ್ನಿಸಿದರು.

ಐವತ್ತೆಂಟನೇ ದಿನ ಮನೆಯಲ್ಲಿ ಕೆಲವೊಂದು ನಾಟಕೀಯ ಬೆಳವಣಿಗೆಗಳು, ಮಾತಿನ ಚಕಮಕಿ, ವಾಗ್ವಾದಗಳು ನಡೆದವು. ಡಬ್ಬಾ ಟಾಸ್ಕ್ ಪ್ರಕಾರ ಎರಡು ತಂಡಗಳಾಗಿ ರಚಿಸಲಾಯಿತು. ಒಂದು ತಂಡಕ್ಕೆ ರೋಹಿತ್, ಇನ್ನೊಂದು ತಂಡಕ್ಕೆ ಸಂತೋಷ್ ನಾಯಕರಾದರು.

ಟಾಸ್ಕ್ ನ ಪ್ರಕಾರ ದೊಡ್ಡದೊಡ್ಡ ಡಬ್ಬಾಗಳಲ್ಲಿ ಒಂದು ತಂಡದ ಸ್ಪರ್ಧಿಗಳು ಬಂಧಿಯಾಗಬೇಕು. ಇನ್ನೊಂದು ತಂಡ ಅವರನ್ನು ಡಬ್ಬದಿಂದ ಹೊರಬರುವಂತೆ ಮಾಡಬೇಕು. ಇದಕ್ಕಾಗಿ ನಾನಾ ಕಸರತ್ತುಗಳನ್ನು ಮಾಡಿತು ಸಂತೋಷ್ ತಂಡ. ಬನ್ನಿ ನೋಡೋಣ ಮನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು.

ಡಬ್ಬದಲ್ಲಿ ಬಂಧಿಯಾದ ಸ್ಪರ್ಧಿಗಳು

ಡಬ್ಬ ಟಾಸ್ಕ್ ನ ಡಬ್ಬದಲ್ಲಿ ಬಂಧಿಯಾಗಿದ್ದು ಅನುಪಮಾ, ಶ್ವೇತಾ ಚೆಂಗಪ್ಪ, ರೋಹಿತ್ ಹಾಗೂ ಸೃಜನ್ ಲೋಕೇಶ್. ಅವರನ್ನು ಡಬ್ಬದಿಂದ ಹೊರಹಾಕಲು ನಾನಾ ಪ್ರಯತ್ನಗಳನ್ನು ಮಾಡಿದರು.

ಡಬ್ಬದಲ್ಲೇ ಎಲ್ಲವನ್ನೂ ಸಹಿಸಿಕೊಂಡರು

ಡಬ್ಬದಿಂದ ಅವರು ಹೊರಗೆ ಬರುವಂತೆ ಮಾಡಲು ಮೆಣಸಿನಕಾಯಿ ಗಾಟು ಹಾಕಿದರು. ಆದರೂ ಡಬ್ಬದಿಂದ ಯಾರೂ ಹೊರಗೆ ಬರಲಿಲ್ಲ. ಮೊಟ್ಟೆಯನ್ನು ಎಸೆದರೂ ಹೊರಗೆ ಬರಲಿಲ್ಲ. ಕಡೆಗೆ ಕಸವನ್ನೂ ಡಬ್ಬದಲ್ಲಿ ಸುರಿದರು. ಗಲೀಜನ್ನೆಲ್ಲಾ ತಂದು ಹಾಕಿದರು. ಎಲ್ಲವನ್ನೂ ಸಹಿಸಿಕೊಂಡು ಡಬ್ಬದಲ್ಲೇ ಉಳಿದರು.

ಗುರುಪ್ರಸಾದ್ ವಿರುದ್ಧ ಅಸಹನೆ

ಇನ್ನೊಬ್ಬರಿಗೆ ಟಾರ್ಚರ್ ಕೊಡಬೇಕು ಎಂದರೆ ಗುರು ಅವರಿಗೆ ತಲೆ ಚೆನ್ನಾಗಿ ಕೆಲಸ ಮಾಡುತ್ತದೆ. ಅವರಿಗೆ ಎಲ್ಲಿಲ್ಲದ ಕ್ರೀಡಾ ಉತ್ಸಾಹ ಬರುತ್ತದೆ ಎಂದು ದೀಪಿಕಾ ಅಸಹನೆ ವ್ಯಕ್ತಪಡಿಸಿದರು. ಆದರೂ ಎರಡೂ ತಂಡದಲ್ಲಿಲ್ಲದ ಗುರುಪ್ರಸಾದ್ ಅವರು ಡಬ್ಬದಲ್ಲಿರುವವರಿಗೆ ನಾನಾ ಕಿರಿಕಿರಿ ನೀಡಿದರು.

ರೋಸಿ ಹೋದ ಗುರುಪ್ರಸಾದ್

ಕಡೆಗೆ ರೋಸಿ ಹೋದ ಗುರುಪ್ರಸಾದ್ ಅವರು ಟಾಸ್ಕನ್ನು ಚೆನ್ನಾಗಿ ನಿಭಾಯಿಸುತ್ತಿಲ್ಲ ಎಂದು ಸಂತೋಷ್ ಜೊತೆ ವಾಗ್ವಾದಕ್ಕೆ ಇಳಿದರು. ಈ ಸಂಬಂಧ ಇಬ್ಬರಿಗೂ ಮಾತಿನ ಚಕಮಕಿ ನಡೆಯಿತು. ತಂಡದ ಕ್ಯಾಪ್ಟನ್ ಆಗಿ ಸಂತೋಷ್ ಟಾಸ್ಕ್ ನಿಭಾಯಿಸುತ್ತಿಲ್ಲ ಎಂದು ಹೇಳಿ ಇಬ್ಬರೂ ಜೋರಾಗಿಯೇ ಕಿತ್ತಾಡಿದರು.

ಹೊಗೆ ಹಾಕಿ ಉಸಿರುಗಟ್ಟಿಸಿದರು

ಕಡೆಗೆ ಅವರು ಹೂಡಿದ ಹೊಸ ತಂತ್ರ ಹೊಗೆಯನ್ನು ಹಾಕಿ ಅವರು ಉಸಿರುಗಟ್ಟುವಂತೆ ಮಾಡಿ ಹೊರಗೆ ತರಲಾಯಿತು. ಮೊದಲು ಸೃಜನ್ ಲೋಕೇಶ್ ಅವರನ್ನು ಹೊರಗೆ ತರಲಾಯಿತು, ಬಳಿಕ ರೋಹಿತ್, ಶ್ವೇತಾ ಚೆಂಗಪ್ಪ ಹೊರಬಂದರು. ಕೊನೆಯವರೆಗೂ ಡಬ್ಬದಲ್ಲಿ ಉಳಿದವರೆಂದರೆ ಅನುಪಮಾ ಭಟ್.

ದೀಪಿಕಾ, ನೀತೂ ಶರಂಪರ ಕಿತ್ತಾಟ

ಇನ್ನೊಂದು ಕಡೆ ದೀಪಿಕಾ ಮತ್ತು ನೀತೂ ನಡುವೆ ಶರಂಪರ ಕಿತ್ತಾಟ ನಡೆಯಿತು. ಸತಿ ಸಾವಿತ್ರಿ ಪಾಪ ಯಾರೂ ನೋಡೇ ಇಲ್ಲ ಎಂದು ಬಿರುದು ಕೊಟ್ಟ ದೀಪಿಕಾ. ಅವಳೇ ಹೇಳಿದ್ದಳು ನಾನು ಮಾಡ್ತಾ ಇರುವುದು ಕ್ಯಾಮೆರಾಗೆ ಮಾತ್ರ ಎನ್ನುತ್ತಿದ್ದಳು ಎಂದರು.

ನೀತೂ ಮಾಡುತ್ತಿರುವುದು ಡ್ರಾಮಾನಾ?

ಟಾಸ್ಕ್ ಗೆ ಸಂಬಂಧ ಪಟ್ಟಂತೆ ದೀಪಿಕಾ ಮತ್ತು ನೀತೂ ನಡುವೆ ಜಗಳವೂ ನಡೆಯಿತು. ಅವರ ವಾಲ್ಯೂಮ್ ಯಾವಾಗಲೂ ಮೇಲೇ ಇರುತ್ತದೆ ಎಂದು. ಮಾಡ್ತಾ ಇರೋದು ಆಕ್ಟಿಂಗ್. ಅವಳೇ ಹೇಳ್ತಾಲೆ ನಾನು ಮಾಡ್ತಾ ಇರುವುದೆಲ್ಲಾ ಕ್ಯಾಮೆರಾಗೆ ಮಾತ್ರ ಎನ್ನುತ್ತಿದ್ದಾರೆ ತಮ್ಮ ಅಸಹನೆಯನ್ನು ತೋಡಿಕೊಂಡರು ದೀಪಿಕಾ.

ಸಂಯಮಕ್ಕೆ ಸವಾಲೊಡ್ಡಿದ ಟಾಸ್ಕ್

ಹೊಸ ಟಾಸ್ಕ್ ಮನೆಯ ಸದಸ್ಯರ ಸಂಯಮ ಪರೀಕ್ಷೆಗೆ ಒಡ್ಡಿದ ಸವಾಲಾಗಿತ್ತು. ಸೃಜನ್, ಶ್ವೇತಾ, ರೋಹಿತ್ ಡಬ್ಬದಿಂದ ಹೊರಬಂದರೆ ಕೊನೆಯವರೆಗೂ ಅನುಪಮಾ ಭಟ್ ಮಾತ್ರ ಡಬ್ಬದಲ್ಲೇ ಉಳಿದರು. ಟಾಸ್ಕ್ ಇನ್ನೂ ಮುಂದುವರಿಯುತ್ತಿದೆ.

English summary
After repeated warning from the captain Neetu, that the fire is touching the box, Santhosh came up with a genius plan of getting the smoke inside the box using a tube. New luxury budget task was announced for this week in the Bigg Boss Kannada 2 house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada