»   » ಗುರುಪ್ರಸಾಸ್ ಮೇಲೆ ಕೈಮಾಡಿದ ಅಕುಲ್ ಬಾಲಾಜಿ!

ಗುರುಪ್ರಸಾಸ್ ಮೇಲೆ ಕೈಮಾಡಿದ ಅಕುಲ್ ಬಾಲಾಜಿ!

By: ಉದಯರವಿ
Subscribe to Filmibeat Kannada

'ಬಿಗ್ ಬಾಸ್'ನಲ್ಲಿ ಆರಂಭವಾದ ಡಬ್ಬ ಟಾಸ್ಕ್ ಗೆ ಇಂದು ತೆರೆಬಿತ್ತು. ಸತತ ಇಪ್ಪತ್ತ ಮೂರು ಗಂಟೆಗಳ ಕಾಲ ಡಬ್ಬದಲ್ಲಿ ಉಳಿಯುವ ಮೂಲಕ ಹೊಸ ದಾಖಲೆಗೆ ಪಾತ್ರರಾದರು ಅನುಪಮಾ ಭಟ್. ಕೊನೆಯದಾಗಿ ಮೆಣಸಿನಕಾಯಿ ಹೊಗೆ ಹಾಕುವ ಮೂಲಕ ಅವರು ಡಬ್ಬದಿಂದ ಹೊರಬಂದರು.

ಈ ಬಗ್ಗೆ ಅನುಪಮಾ ಅವರು ಬಿಗ್ ಬಾಸ್ ಮೆಚ್ಚುಗೆಗೂ ಪಾತ್ರರಾದರು. ಸಂತೋಷ್, ದೀಪಿಕಾ ಅವರು ಟಾಸ್ಕ್ ನಲ್ಲಿ ಚೆನ್ನಾಗಿ ತೊಡಗಿಕೊಂಡಿದ್ದಕ್ಕೆ ಬಿಗ್ ಬಾಸ್ ಅಭಿನಂದಿಸಿದರು. ಸಂತೋಷ್ ತಂಡದ ಮೂವರು ಸದಸ್ಯರು ಡಬ್ಬದಲ್ಲಿ ಇರುವಂತೆ ಬಿಗ್ ಬಾಸ್ ಹೇಳಿದರು.

ಅದರ ಪ್ರಕಾರ ದೀಪಿಕಾ, ಸಂತೋಷ್ ಹಾಗೂ ಅಕುಲ್ ಬಾಲಾಜಿ ಡಬ್ಬದಲ್ಲಿ ಬಂಧಿಯಾದರು. ರೋಹಿತ್ ತಂಡ ಮೆಣಸಿನಕಾಯಿ ಹೊಗೆಯನ್ನು ಹಾಕುವ ಮೂಲಕ ಅಕುಲ್ ಬಾಲಾಜಿ ಆರಂಭದಲ್ಲೇ ಡಬ್ಬದಿಂದ ಹೊರಬಂದು ಔಟ್ ಆದರು. ಐವತ್ತೆಂಟನೇ ದಿನ ಮನೆಯಲ್ಲಿ ಏನು ನಡೀತು ಎಂಬುದನ್ನು ನೋಡೋಣ ಬನ್ನಿ.

ಇಲ್ಲಿಗೆ ಬಂದಿರುವುದು ಕ್ಲೀನ್ ಮಾಡಕ್ಕೆ ಅಲ್ಲ

ಡಬ್ಬ ಟಾಸ್ಕ್ ಗಾಗಿ ಉಪಯೋಗಿಸಿದ್ದ ಕಸ ಎಲ್ಲ ಮನೆಯ ಆವರಣದಲ್ಲಿ ಬಿದ್ದಿತ್ತು. ಅದನ್ನು ಕ್ಲೀನ್ ಮಾಡುವಂತೆ ಆದಿ ಲೋಕೇಶ್ ಗೆ ಸೃಜನ್ ಲೋಕೇಶ್ ಹೇಳಿದರು. ಇದರಿಂದ ಕುಪಿತಗೊಂಡ ಆದಿ, ನಾವು ಬಿಗ್ ಬಾಸ್ ಮನೆಗೆ ಬಂದಿರುವುದು ಕ್ಲೀನ್ ಮಾಡಕ್ಕೆ ಅಲ್ಲ ಎಂದರು. ಅವನ್ಯಾರು ನನಗೆ ಕ್ಲೀನ್ ಮಾಡಕ್ಕೆ ಹೇಳಲು. ಯಾವ ಲಾರ್ಡ್ಸ್ ಲಬಕ್ ದಾಸ್ ಎಂದು ಕಿಚಾಯಿಸಿದರು ಆದಿ.

ಡಬ್ಬದಲ್ಲೇ ಇದ್ದು ದಾಖಲೆ ನಿರ್ಮಿಸಿದ ಅನುಪಮಾ

ಡಬ್ಬಾದಲ್ಲೇ ಉಳಿದಿರುವ ಅನುಪಮಾ ಭಟ್ ಅವರನ್ನು ಹೊರಗೆ ತರುವುದು ಹೇಗೆ ಎಂಬ ಬಗ್ಗೆ ಸತತ ಚಿಂತನೆ ನಡೆಸಿದ ಸಂತೋಷ್ ತಂಡ ಕಡೆಗೂ ಅವರನ್ನು ಡಬ್ಬದಿಂದ ಹೊರತರುವಲ್ಲಿ ಯಶಸ್ವಿಯಾಯಿತು.

ಈ ಪಾಡು ಯಾರಿಗೂ ಬರಬಾರದು ಎಂದ ಅನು

ಒಂದು ದಿನ ಡಬ್ಬದಲ್ಲೇ ಉಳಿದ ಅನುಪಮಾ ಭಟ್ ಅವರು ಈ ಪಾಡು ಯಾರಿಗೂ ಬರಬಾರದು ಎಂದು ಹೇಳಿದರು. ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಕಳೆದದ್ದು ಒಂದೇ ಒಂದು ದಿನ ಡಬ್ಬದಲ್ಲಿ ಕಳೆದದ್ದು ಒಂದೇ ಎಂದರು. ನಿಜಕ್ಕೂ ಈ ನರಕ ಯಾರಿಗೂ ಬೇಡ ಎಂದರು.

ರೋಹಿತ್ ತಂಡಕ್ಕೆ ಗುರುಪ್ರಸಾದ್ ಸಹಾಯ

ಗುರುಪ್ರಸಾದ್ ಅವರು ಸಂತೋಷ್ ತಂಡಕ್ಕೆ ಸಹಾಯ ಮಾಡಿದಂತೆ ರೋಹಿತ್ ತಂಡಕ್ಕೂ ಸಹಾಯ ಮಾಡಿದರು. ಅವರು ಮನೆಯಲ್ಲಿರುವ ಕಸಕಡ್ಡಿ, ಕೊಳಕನ್ನೆಲ್ಲಾ ತಂದು ಡಬ್ಬದಲ್ಲಿ ಹಾಕಿದರು.

ಅಕುಲ್ ಬಾಲಾಜಿ ನಾನಾ ಕಿರಿಕಿರಿ

ಏನೇ ಮಾಡಿದರೂ ದೀಪಿಕಾ ಮಾತ್ರ ಬಿಲ್ ಕುಲ್ ಎಂದರೂ ಹೊರಗೆ ಬರಲಿಲ್ಲ. ಕಡೆಗೆ ರೋಹಿತ್ ತಂಡ ಹೊಗೆ ಹಾಕಿ ಅವರನ್ನು ಉಸಿರುಗಟ್ಟುವಂತೆ ಮಾಡಿ ಹೊರಬರುವಂತೆ ಮಾಡಿದರು. ರೋಹಿತ್ ತಂಡಕ್ಕೆ ಅಕುಲ್ ಬಾಲಾಜಿ ನಾನಾ ಕಿರಿಕಿರಿಗಳನ್ನು ಕೊಟ್ಟರು.

ಗುರುಪ್ರಸಾದ್ ಮೇಲೆ ಕೈಮಾಡಿದ ಅಕುಲ್

ಇದೆಲ್ಲವನ್ನೂ ರೋಹಿತ್ ತಂಡ ಸಹಿಸಿಕೊಂಡು ಹೋಯಿತು. ಒಂದು ಹಂತದಲ್ಲಿ ಅಕುಲ್ ಅವರ ಕಿರಿಕಿರಿಗೆ ಬೇಸತ್ತು ಗುರುಪ್ರಸಾದ್ ಅವರು ಪ್ಲೇಟ್ ಒಂದನ್ನು ಅವರ ಕಡೆ ಡಿಸ್ಕ್ ತರಹ ಜೋರಾಗಿ ಎಸೆದರು. ಇದರಿಂದ ಕೆರಳಿದ ಅಕುಲ್ ಜೋರಾಗಿ ಓಡಿ ಬಂದು ಗುರು ಅವರನ್ನು ಇನ್ನೇನು ತದಿಕಿದರು ಎಂದೇ ಎಲ್ಲರೂ ಭಾವಿಸಿದ್ದರು.

ದುಃಖ ತೋಡಿಕೊಂಡ ಗುರುಪ್ರಸಾದ್

ಆದರೆ ಅವರು ಕೈ ಎತ್ತಿದರು ಅಷ್ಟೆ, ಗುರುಪ್ರಸಾದ್ ಮೇಲೆ ಕೈ ಮಾಡಲಿಲ್ಲ. ಇದೇ ವಿಚಾರವಾಗಿ ಗುರುಪ್ರಸಾದ ಅವರು, "ಅವನಿಗೆ ತುಂಬಾ ಗೌರವ, ಪ್ರೀತಿ ಕೊಟ್ಟೆ. ಆದರೆ ಅದಕ್ಕೆ ಅವನು ಅರ್ಹ ಅಲ್ಲ ಎಂದರು ಗುರು. ನನ್ನ ಮೇಲೆ ಕೈ ಮಾಡಕ್ಕೆ ಬರ್ತಾನೆ. ಬಾಯಲ್ಲಿ ಗುರುಗಳೇ ಎಂದು ಕರೆಯುವುದು, ಕಡೆಗೆ ನನ್ನ ಮೇಲೆ ಕೈ ಮಾಡವುದು ಸರಿಯಲ್ಲ ಎಂದು ಆದಿ ಬಳಿ ದುಃಖ ತೋಡಿಕೊಂಡರು ಗುರು.

ಮನಸ್ಸು ಮನಸ್ಸುಗಳ ನಡುವೆ ಒಡಕು

ಟಾಸ್ಕ್ ನಿಂದ ಮನೆಯ ಮೇಲೆ ಭಿನ್ನ ಪರಿಣಾಮಗಳೂ ಆಗುತ್ತಿವೆ. ಮನಸ್ಸು ಮನಸ್ಸುಗಳ ನಡುವೆ ಒಡಕು, ಬಿರುಕು ಶುರುವಾಗಿದೆ. ಇನ್ನೊಂದು ಕಡೆ ಶರಂಪರ ಕಿತ್ತಾಡಿದ್ದ ನೀತೂ ಮತ್ತು ಅಕುಲ್ ಬಾಲಾಜಿ ಈಗ ಹತ್ತಿರವಾಗಿದ್ದಾರೆ. ಮುಂದೇನಾಗುತ್ತದೋ ಎಂಬ ಕುತೂಹಲ ಉಳಿದಿದೆ.

English summary
After repeated warning from the captain Neetu, that the fire is touching the box, Santhosh came up with a genius plan of getting the smoke inside the box using a tube. Bigg Boss Kannada 2 day 59 highlights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada