»   » ಬಿಗ್ ಬಾಸ್ ಮನೆಯಲ್ಲಿ ಹೊಸ ಶಾಕಿಂಗ್ ನ್ಯೂಸ್

ಬಿಗ್ ಬಾಸ್ ಮನೆಯಲ್ಲಿ ಹೊಸ ಶಾಕಿಂಗ್ ನ್ಯೂಸ್

By: ಉದಯರವಿ
Subscribe to Filmibeat Kannada

ಸತತ ಎರಡು ದಿನಗಳಿಂದ ಎಲ್ಲರೂ ಮೈಮರೆತು ಲಗ್ಜುರಿ ಬಜೆಟ್ ಟಾಸ್ಕ್ ಬಿಗ್ ಬಾಸ್ ಟಿವಿನಲ್ಲಿ ನಿರತರಾಗಿದ್ದರು. ಆದರೂ ಮನೆಯ ಸದಸ್ಯರಲ್ಲಿ ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಯಾವ ರೀತಿ ನಡೆಯಬಹುದು ಲೆಕ್ಕಾಚಾರವಂತೂ ನಡೆದೇ ಇತ್ತು.

ಅರುವತ್ತಾರನೇ ದಿನ ಬಿಗ್ ಬಾಸ್ ಮನೆಯಲ್ಲಿ ನಡೆದ ಲಗ್ಜುರಿ ಬಜೆಟ್ ಟಾಸ್ಕ್ ನಲ್ಲಿ ಭವಿಷ್ಯವಾಣಿ, ಟೆಲಿಶಾಪಿಂಗ್, ಅಡುಗೆ, ಟಾಕ್ ಶೋಗಳನ್ನು ಮನೆಯ ಸದಸ್ಯರು ಮನರಂಜನಾತ್ಮಕವಾಗಿ ನಿರ್ವಹಿಸಿ ವೀಕ್ಷಕರ ಮನಗೆಲ್ಲುವ ಜೊತೆಗೆ ಬಿಗ್ ಬಾಸ್ ಹೃದಯವನ್ನೂ ಗೆದ್ದರು.

ಚಾನಲ್ ಕ್ರಿಯೇಟಿವ್ ಹೆಡ್ ಆಗಿ ನಾನು ಕೊಟ್ಟಂತಹ ಕಾನ್ಸೆಪ್ಟನ್ನು ನೀವು ಒಪ್ಪಲ್ಲ ಅಂದ್ರೆ ಆಗಲ್ಲ ಎಂದು ಗುರುಪ್ರಸಾದ್ ಮತ್ತು ನೀತೂ ನಡುವೆ ಗರಮಾ ಗರಂ ವಾದ ವಿವಾದ ನಡೆಯಿತು. ಮಾತಿನ ನಡುವೆ ನೋಡು ಪುಟ್ಟಿ ಎಂದದ್ದಕ್ಕೆ ನೀವು ನನ್ನನ್ನು ಹಾಗೆಲ್ಲಾ ಕರೆಯಬೇಡಿ ಎಂದು ನೀತೂ ಬಿಸಿ ಮುಟ್ಟಿಸಿದರು.

ಚಿತ್ರಗುಪ್ತ ಯಮಧರ್ಮನಾಗಿ ಅಕುಲ್, ಸಂತು

ಚಿತ್ರಗುಪ್ತ ಮತ್ತು ಯಮಧರ್ಮನಾಗಿ ಸಂತೋಷ್ ಮತ್ತು ಅಕುಲ್ ನಡೆಸಿಕೊಟ್ಟ ಕಾರ್ಯಕ್ರಮ ಮಜವಾಗಿತ್ತು. ಅದು ಎಲ್ಲರನ್ನೂ ಸಖತ್ ರಂಜಿಸಿತು ಎಂಬುದರಲ್ಲಿ ಅನುಮಾನವೇ ಇಲ್ಲ. ಶ್ವೇತಾ ಚೆಂಗಪ್ಪ ನಡೆಸಿಕೊಟ್ಟ ಅಡುಗೆ ಕಾರ್ಯಕ್ರಮವೂ ಚೆನ್ನಾಗಿತ್ತು.

ಬಂಬಲೆ ಪುಲ್ಲಿಂಗ ಸ್ವಾಮಿಯಾದ ಸಂತೋಷ್

ಅಕುಲ್ ಟೆಲಿ ಶಾಪಿಂಗ್ ಕಾರ್ಯಕ್ರಮ, ಬಂಬಲೆ ಪುಲ್ಲಿಂಗ ಸ್ವಾಮಿಯಾಗಿ ಸಂತೋಷ್ ಜ್ಯೋತಿಷ್ಯ ಕಾರ್ಯಕ್ರಮವೂ ಎಲ್ಲರನ್ನೂ ನಕ್ಕು ನಲಿಸಿತು. ಸ್ತ್ರೀಲಿಂಗ ಪುಲ್ಲಿಂಗ ನಪುಂಸಕ ಲಿಂಗಕ್ಕೂ ಇವರು ಜ್ಯೋತಿಷ್ಯ ಹೇಳುತ್ತಾರೆ ಎಂದು ಸೃಜನ್ ಕೊಟ್ಟ ಪೀಠಿಕೆ ಚೆನ್ನಾಗಿತ್ತು.

ಲಗ್ಜುರಿ ಬಜೆಟ್ ಟಾಸ್ಕ್ ಬಗ್ಗೆ ಮೆಚ್ಚುಗೆ

ಕಡೆಗೆ ಮುಗಿದ ಲಗ್ಜುರಿ ಬಜೆಟ್ ಟಾಸ್ಕ್ 'ಬಿಗ್ ಬಾಸ್ ಟಿವಿ' ಇಲ್ಲಿಗೆ ಮುಕ್ತಾಯವಾಯಿತು. ಟಾಸ್ಕ್ ನಿಭಾಯಿಸಿದ್ದಕ್ಕೆ ಎಲ್ಲರ ಬಗೆಗೆಗೂ ಹರ್ಷ ವ್ಯಕ್ತಪಡಿಸಿದರು ಬಿಗ್ ಬಾಸ್. ಈ ಬಾರಿ ಲಗ್ಜುರಿ ಬಜೆಟ್ ಪಾಯಿಂಟ್ಸ್ 1,800.

ಹಾಯಾಗಿದ್ದವರಿಗೆ ಶಾಕಿಂಗ್ ನ್ಯೂಸ್

ಹಾಯಾಗಿದ್ದ ಎಲ್ಲರನ್ನೂ ಒಬ್ಬರಾಗಿ 'ಬಿಗ್ ಬಾಸ್' ಕನ್ಪೆಷನ್ ರೂಮಿಗೆ ಕರೆಸಿಕೊಂಡು ಶಾಕಿಂಗ್ ನ್ಯೂಸ್ ಕೊಟ್ಟರು. ಅವರು ಕೇಳಿದ ಪ್ರಶ್ನೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆದಿಲ್ಲ ಎಂದು ಆರಂಭಿಸಿ ನೀವೆಲ್ಲರೂ ಹಿಂದೆಂದೂ ಕಂಡು ಕೇಳರಿಯದ ಪರಿಣಾಮ ನಡೆಯಲಿದೆ ಎಂದು ತಿಳಿಸಿದರು.

ಬಿಗ್ ಬಾಸ್ ಪಟ್ಟ ಗೆಲ್ಲಲು ಯಾರು ಯೋಗ್ಯರಲ್ಲ?

ನಿಮ್ಮ ಪ್ರಕ್ರಾರ ಮನೆಯ ಯಾವ ಇಬ್ಬರು ಸದಸ್ಯರು ಬಿಗ್ ಬಾಸ್ ಪಟ್ಟ ಗೆಲ್ಲಲು ಯೋಗ್ಯರಲ್ಲ, ಅದಕ್ಕೆ ಕಾರಣಗಳೇನು? ಎಂದರು. ಮನೆಯ ಕ್ಯಾಪ್ಟನ್ ಆಗಿರುವ ಗುರುಪ್ರಸಾದ್ ಬಿಟ್ಟು ಉಳಿದ ಇಬ್ಬರ ಹೆಸರುಗಳನ್ನು ಸೂಚಿಸಬೇಕಿತ್ತು. ಇದನ್ನು ಯಾರೊಂದಿಗೂ ಚರ್ಚಿಸುವಂತಿಲ್ಲ ಎಂದರು.

ಅನುಪಮಾ, ಸಂತೋಷ್ ಮತ್ತು ರೋಹಿತ್

ಕಡೆಗೆ ಅನುಪಮಾ, ಸಂತೋಷ್ ಮತ್ತು ರೋಹಿತ್ ಅವರು ಈ ವಾರ ಸೇರಿ ಮುಂಬರುವ ಎಲ್ಲಾ ವಾರಗಳಲ್ಲಿ ನೇರವಾಗಿ ನಾಮಿನೇಟ್ ಆಗಿರುತ್ತಾರೆ ಎಂದು ತಿಳಿಸಿದರು. ಇವರೆಲ್ಲಾ ಇನ್ನು ಮುಂದೆ ಮನೆಯ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಆಗಲ್ಲ ಎಂದೂ ತಿಳಿಸಿದರು.

ಬಿಗ್ ಬಾಸ್ ಹೊಡೆತಕ್ಕೆ ದಂಗಾದ ಸದಸ್ಯರು

ವಿಶಿಷ್ಟವಾಗಿ ನಡೆದ ನಾಮಿನೇಷನ್ ಪ್ರಕ್ರಿಯೆಯಿಂದ ಎಲ್ಲರೂ ದಂಗಾಗಿ ಹೋಗಿದ್ದಾರೆ. ಹಿಂದೆಂದೂ ಕೇಳರಿಯದ ಪರಿಣಾಮ ಎಂದು ಹೇಳಿದ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸರಿಯಾದ ಶಾಕ್ ಕೊಟ್ಟಿದ್ದಾರೆ. ಮನೆಯ ಸದಸ್ಯರು ಸುಸ್ತಾಗಿ ಹೋಗಿದ್ದಾರೆ. ಸಂತೋಷ್ ಅಂತೂ ಈ ವಾರವೇ ಕೊನೆಯ ದಿನ ಎಂಬಂತಿದ್ದಾರೆ. ಉಳಿದ ಇಬ್ಬರ ಪಾಡು ಅದೇ ರೀತಿ ಇದೆ.

English summary
Bigg Boss brought a complete new twist in the nomination process. While the nominations used to happen every Monday, this week, after several rounds of questioning, Bigg Boss declared the participants who were nominated for elimination. Santhosh, Rohit and Anupama were nominated for elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada